ಹಾಡೋಣ ಬಾ ಗೆಳೆಯ ಪ್ರೇಮಾನುರಾಗ
ನೀಡುವೆ ನಿನಗೆ ಹೃದಯದಲಿ ಜಾಗ
ಕೇಳುತಿರು ಹೃದಯದಲಿ ಒಲವ ಮಿಡಿತ
ನಿನ್ನಾಗಮನಕಾಗಿ ನನ್ನೆದೆಯ ತುಡಿತ

ಸಾರಥಿಯಾಗುವೆಯಾ ನನ್ನ ಪ್ರೇಮರಥಕೆ
ಎಚ್ಚರದಿ ಕರೆದೊಯ್ಯುವೆಯಾ ಬಾಳ ದಡಕೆ
ಬೇಗ ಕೂಡಿ ಬರಲಿ ಒಂದಾಗುವ ಸುಯೋಗ
ಆಸುಂದರ ಕ್ಷಣಕ್ಕಾಗಿ ಮಾಡುತಿರುವೆ ನಾ ಯಾಗ

ನಮ್ಮಿಬ್ಬರ ಸಾಂಗತ್ಯ ಸಿಹಿಯಾದ ಸಕ್ಕರೆ
ಕಡಿಮೆಯಾಗದಿರಲೆಂದು ಅದರೊಳಗಣ ಅಕ್ಕರೆ
ಕಾರಂಜಿಯಾಗಿರಲಿ ನಮ್ಮಿಬ್ಬರ ಪ್ರೀತಿಯ ಒರತೆ
ಮೂಡಗೊಡದಿರು ಗೆಳೆಯ ಯಾವುದೇ ಕೊರತೆ

ಜಿನಗುತಿಹ ಅಧರಾಮೃತವ ಸವಿಯಲು ಬರುವೆಯಾ
ಹಾಲ್ನೊರೆಯ ಬೆಳದಿಂಗಳಲಿ ಶೃಂಗಾರ ಕಾವ್ಯ ಬರೆಯುವೆಯಾ
ಗರಿಬಿಚ್ಚಿ ಕುಣಿವ ಮನದಾಸೆಗಳ ನನಸಾಗಿಸುವೆಯಾ
ನೀಳವಾದ ಬಾಹುಗಳ ತೆಕ್ಕೆಯಲಿ ಬಂದಿಸುವೆಯಾ

✍️ಅನುಸೂಯ ಯತೀಶ್
ಮಾಗಡಿ, ಬೆಂಗಳೂರು