ಕಳ್ಳ ಹೆಜ್ಜಿ ಇಟ್ಟು ಬಂದೆಯಾ
ತುಂಬಿದ ಹಾಲಿನ ಗಡಿಗೆಯಾ
ಮಳ್ಳನಾಗಿ ತೊಳೆಯದ ವಾಸನೆ
ತೀರದಾಸೆಗೆ ಬಿದ್ದೀ ಮಿಯಾಮೆನೆ

ಅಂಜಿದೆದೆ ಬಾಲ‌ಮುದುಡದೆ
ಹೊರಬರದ ಗಡಿಗೆಲಿ ಬಂಧಿ
ಹೊಟ್ಟೆ ಪಾಡು ಕೊಡುವರಿಲ್ಲದೆ
ಬದುಕ ಭಾರ ದಿಟ್ಟಿಯೇಕ ಕಾಣೆನಂದಿ

ಪ್ರಾಣಿಪ್ರಿಯರ ಮನೆ ಸಿಗಲಿಲ್ಲ
ಕಳ್ಳಿ ಮಾರ್ಜಾಲ ಬಿರುದು ಸುಳ್ಳಲ್ಲ
ಅವರ ಸುಗ್ರಾಸ ಹಾಲಮೊಸರುಂಡವ ನಾ
ಮನೆ ಹೊಕ್ಕರೆ ಇಲಿ ಬಿಲ ಕಾಣೆ ನಾ

ಕಾಂಕ್ರೀಟ ಮನೇಲಿ ಉಪವಾಸ
ಮನೆಯವರ ಬಡಿಗೆ‌ಯ ಸಹವಾಸ
ಅವರ ಆಹಾರ ಬಟ್ಟೆ ಕಡಿವಾಸೆ
ಸಂಕಟ ನೀರಿಡದೆ ವಿಷವುಣಿಸೆ

ವಂಚಿಸೆನ್ನ ಹೊಟ್ಟೆಯುರಿಸಿ
ಕೊಲ್ಲುವರು
ಯಾರಿಗಾಗಿ ನನ್ನ ಉಸಿರು
ನಮಗೂ ಮಕ್ಕಳಿರುವ ರು
ಮನುಜ ವಾಸ ಪ್ರೀತಿ ಸಂತಸ
ಬಾಳೆಲೆಮಗೆ ನಂಬಿಕೆಗೆ ವಾಸ
ಸಹಕುಟುಬಕ್ಕಾಶ್ರಯ
ಬಿದ್ದವನೆಮ್ಮನೂ ದಯದಿ
ಎತ್ತಬೇಕಯ್ಯಾ…

✍️ಶ್ರೀಧರ ಭ ಸತ್ತಿಗೇರಿ
ಹುಬ್ಬಳ್ಳಿ