ಕಾಂತಾರ ಚಲನಚಿತ್ರ ಕಣ್ಣಿಗೆ ಹಬ್ಬ
ದೇಸೀ ಸಂಸ್ಕೃತಿಯ ಪಡಿಯಚ್ಚು ಅಬ್ಬ!
ಕಂಬಳದ ಓಟವೋ ರೋಚಕವು ಮೈಯಿಗೆ
ಮರೆತದ್ದ ನೆನಪಿಸುವ ಊಟವೋ ಬುದ್ಧಿಗೆ

ಭಯಂಕರ ಆದರೂ ಸುಂದರ
ಮಲೆನಾಡ ಕಾಡ ಜೀವನದ ಹಂದರ
ಕಿವಿಗೆ ಬಿದ್ದಿತ್ತು ದೇಸಿ ಭಾಷೆಯ ಬಿರುಸು
ಈ ಮೊದಲು ಕಂಡಿಲ್ಲ ಈ ರೀತಿ ಸೊಗಸು

ನಾಯಕ ರಿಷಭ ಶೆಟ್ಟಿಯ ಅಮಾಯಕತನ
ಅವನಿಗೆ ಕಣ್ಕೊಟ್ಟ ನಾಯಕಿಯ ಮುಗ್ಧತನ
ಹೆಜ್ಜೆಹೆಜ್ಜೆಗೆ ಬಯ್ಯುವಾ ಮುದುಕಿ
ಕೊನೆಗೆ ಶೆಟ್ಟಿಯ ಗುಣಗಾನ ಮಾಡಾಕಿ

ದೈವದಲಿ ಇರಲಿಲ್ಲ ನಂಬಿಕೆಯು ಚೂರೂ
ಮರಕಡಿದು ಹುಲಿಹೊಡೆದು ಬದುಕುವ ಜೋರು
ಕೊನೆಗೊಮ್ಮೆ ತಿಳುವಳಿಕೆ ಮೂಡಿತ್ತು
ಕಾಡುಗಳ, ಪ್ರಾಣಿಗಳ ರಕ್ಷಿಸುವ ತಾಕತ್ತು

ಮನರಂಜನೆಯ ಜೊತೆಗೊಂದು ಸಂದೇಶ
ವನವ ವನಸ್ಪತಿಯ ಉಳಿಸಿ ಬೆಳೆಸುವಾದೇಶ

✍️ಡಾ.ಸತ್ಯವತಿ ಮೂರ್ತಿ
ಮ್ಯಾಂಚೆಷ್ಟರ್ ಇಂಗ್ಲೆಂಡ್