ಬಣ್ಣದ ರಂಗೋಲಿ ಸಾಲು ಹಣತೆಗಳ ದೀಪಾವಳಿ
ಹೊಸ ಪೋಷಾಕು ವಿವಿಧ ಭಕ್ಷ್ಯಗಳ ದೀಪಾವಳಿ

ನವ ಉಲ್ಲಾಸ ಉತ್ಸಾಹ ಮೂಡಿಸುತಿದೆ ಮನೆಯಲಿ
ದೂರಾದ ಬಾಂಧವ್ಯ ಬೆಸೆವ ಸಂಬಂಧಗಳ ದೀಪಾವಳಿ

ಸಂಸ್ಕೃತಿಯ ಅರಿವು ಮೂಡಿಸುತ ವಿಜೃಂಭಿಸಲಿ ಹಬ್ಬ
ಹಿರಿಯ ಕಿರಿಯರವರೆಗೂ ಸಂಭ್ರಮಗಳ ದೀಪಾವಳಿ

ಸಂತಸ ಸಡಗರದಿ ಸಂಜೆ ಪೂಜೆಯನು ಮುಗಿಸಿ
ಪುಟಾಣಿಗಳು ಪಟಾಕಿ ಹರಿಸುವ ಕ್ಷಣಗಳ ದೀಪಾವಳಿ

ಜ್ಞಾನದ ಜ್ಯೋತಿ ಪಸರಿಸಲಿ ದಿವಾಲಿಯ ಬೆಳಕು ಕವಿತೆ
ಕತ್ತಲೆಯನ್ನ ಹೊಡೆದೋಡಿಸುವ ದೀಪಗಳ ದೀಪಾವಳಿ

✍️ಕವಿತಾ ಸಾಲಿಮಠ
ಬಾಗಲಕೋಟೆ