ಇಂದು ಮಕ್ಕಳ ಬಾಲ್ಯದ ಪ್ರತಿಭೆ, ಶಿಸ್ತು, ಆರೋಗ್ಯ ಮೊಬೈಲ್ ಗೇಮ್ಸ್ ಗಳಲ್ಲಿ ಬಂಧಿಯಾಗಿವೆ.
ಆಡಿ ಬಾ ನನಕಂದ ಅಂಗಾಲ ತೊಳೆದೇನ
ತೆಂಗಿನ ಕಾಯಿ ತಿಳಿನೀರ ತೊಗೊಂಡು
ಬಂಗಾರ ಮಾರಿ ತೊಳದೇನ
ಈ ಉಕ್ತ ಜನಮಾನಸದ ಜನಪದ ತ್ರಿಪದಿ ಎಳೆಯ ಮಕ್ಕಳಿಗೆ ಸಮಾನ ವಯಸ್ಸಿನ ನೆರೆ ಹೊರೆಯ ಮಕ್ಕಳೊಂದಿಗೆ ಮನೆಯ ಅಂಗಳ ದಲ್ಲಿ ಆಟವಾಡಲು ಬಿಟ್ಟು ಅವರ ಸ್ನಾಯು, ದೇಹಬಲ ಮತ್ತು ಪರಸ್ಪರ ಸ್ನೇಹ ಬಾಂಧವ್ಯ ದ್ವಿಗುಣಗೊಳಿಸಲು ಅನುಭಾವದಿಂದ ಹುಟ್ಟಿದ ಆಳಾರ್ಥದ ದೀಪ್ತಿಯಾಗಿದೆ.

ಅಂದು ನಾವೆಲ್ಲರೂ ಜಾತಿ ಮತ ಲಿಂಗದ ಭೇದವಿರದೆ ಲಗೋರಿ, ಕುಂಟಾ-ಬಿಲ್ಲೇ, ಮರಕೋತಿ, ಚಿನ್ನಿ ದಾಂಡು, ಚೌಕಾಮಣಿ, ಹಾವು-ಏಣಿ, ಲಡ್ಡುಲಡ್ಡು ತಿಮ್ಮಯ್ಯ ಹೀಗೆ ಬಿಡುವಿಲ್ಲದ ಆಟ, ಮನತಣಿಯುವ ಪ್ರಕೃತಿ ಯೆಡೆಗಿನ ನೋಟ, ವಾರಿಗೆಯವರೊಡನೆ ಓದು ಬರಹ ತಮಾಷೆ ಚರ್ಚಾಕೂಟ, ದಣಿವರಿಯದ ಹೊಲ ಗದ್ದೆಗಳಲ್ಲಿ ತಿರುಗಾಟ, ಸಜ್ಜಿ, ಜೋಳದ ರೊಟ್ಟಿಯ ಸಹಭೋಜನ,ಕೆರೆ ಹಳ್ಳ ಕೊಳ್ಳಗಳಲ್ಲಿ ಈಜಾಟ, ಸೈಕಲ್ ಸವಾರಿ ಹೇಳುತ್ತ ಹೋದರೆ ಪಟ್ಟಿಯೆ ಮಾಡಲಾಗದು. ಆಬಾಲ್ಯದ ಹುರುಪು- ಹುಮಸ್ಸು ಈಗ ಕಾಣದಾಗಿರುವುದು ವಿಪರ್ಯಾಸ.

ಪ್ರಸ್ತುತ ಅಂತರ್ಜಾಲದ ಯುಗದಲ್ಲಿ ಈ ಮೇಲೆ ಕಾಣಿಸುದ ಮೈಮನ ನೂರಿಸುವ ಆಟ-ಪಾಠದ ರೀತಿ ರಿವಾಜು ಬದಲಾಗಿ ಅವುಗಳ ಸ್ಥಾನದಲ್ಲಿ ಪಬ್ಜಿ, Asphalt 9:ಲೆಜೆಂಡ್ಸ್, ಫೋರ್ಟ್ ನೈಟ್, FIFA ಮೊಬೈಲ್, ಪೋಕ್ಮನ್ ಗೋ, ಮೈಂಡ್ ಗೇಮ್ಸ್ – ಬ್ರೈನ್ ಟ್ರೈನಿಂಗ್ ಗೇಮ್ಸ್, ಪೀಕ್, ಎಲಿವೇಟ್,ಲುಮೋಸಿಟಿ, ಫಿಟ್ ಬ್ರೈನ್ಸ್ ಟ್ರೈನರ್, ಆಟಾಡೋ ಗೇಮ್, ಯಾಕ್ರಿ ಗೇಮ್, ಪ್ರೀ ಫಾಯರ್ ಗೇಮ್ ಎನ್ನುವ ಮೊಬೈಲ್ ಗೇಮ್ ಗಳು ಮನೆಮಾಡಿ ಕೊಂಡು ಮಕ್ಕಳ ಬಾಲ್ಯದ ಸೊಗಸಿನಲ್ಲಿ ವಿಷಾದದ ಛಾಯೆ ಮೂಡಿಸಿವೆ. ಮನೆ ಮನ ಸಂಬಂಧಗಳಲ್ಲಿ ಕಲಹ, ಗಲಭೆ, ಕೊಲಾಹಲ ಎಬ್ಬಿಸಿವೆ. ಮಗುವನ್ನು ಸಮಾಜ ದಿಂದ ವಿಮುಖವಾಗಿಸಿ ನಿಷ್ಕ್ರಿಯಗೊಳಿಸು ತ್ತಿವೆ. ಈಗ ಕಾಲಮಾನ ಬದಲಾವಣೆಗೆ ಮಣೆ ಹಾಕು ವುದು ಅನಿವಾರ್ಯ. ಹಾಗಂತ ಹಗಲು ರಾತ್ರಿ ಡಿಜಿಟಲ್ ಪ್ಲಾಟ್ಫಾರ್ಮನಲ್ಲಿ ಕುಳಿತು ಅನಾರೋಗ್ಯಕ್ಕೆ ತುತ್ತಾಗದೆ, ಸಂಬಂಧಗಳಿಗೆ ಸಂಕೋಲೆಯಾಗದೆ, ಸಂಸ್ಕೃತಿ – ಸಂಸ್ಕಾರಕ್ಕೆ ಸಂಚಕಾರ ತರದಂತೆ ಪಾಲಕರು ಮಕ್ಕಳ ಬಾಳನ್ನು ಹದುಳವಾಗಿ ನಿರ್ವಹಿಸುವಲ್ಲಿ ಇರುವ ಅಡೆ – ತಡೆ ಮತ್ತು ಪರಿಹಾರೋಪಾ ಯಗಳನ್ನು ವಿಶ್ಲೇಷಣೆಯ ಮೂಲಕ ತಿಳಿಯೋಣ.

ಪಬ್‌ಜಿ ಗೇಮ್, ಟಿಕ್‌ಟಾಕ್, ಸಾಮಾಜಿಕ ಜಾಲತಾಣ, ಆತಂಕಕಾರಿ ಸಾಪ್ಟವೇರ್‌ಗಳು ಹಾಗೂ ಇನ್ನಿತರ ಅಶ್ಲೀಲ ಸಂಗತಿಗಳು ಮಕ್ಕಳ ಕೋಮಲವಾದ ಮನಸ್ಸನ್ನು ಕೆರಳಿಸಿ, ಪ್ರಚೋ ದಿಸಿ ಅವರನ್ನು ಗಮನ ಕೇಂದ್ರಿಸಿಕೊಂಡು ಕೊನೆಗೆ ಆತ್ಮಹತ್ಯೆ, ಜೀವ ಹಾನಿಯಂತಹ ಘಟನೆಳು ಸಂಭವಿಸುತ್ತಿ ರುವದು ಇತ್ತೀಚಿಗೆ ಕಂಡುಬರುತ್ತಿದೆ. ಅಷ್ಟೇ ಅಲ್ಲದೇ ತಮ್ಮ ಮೃದು ಮನಸ್ಸಿನ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಅರಿವೇ ಇಲ್ಲದ ಮುಗ್ಧ ಕಂದಮ್ಮಗಳು, ಮಕ್ಕಳು, ಹದಿಹರೆಯದ ವರನ್ನು ತನ್ನತ್ತ ಆಕರ್ಷಿತಗೊಳಿ ಸುತ್ತಿರೋ ಈ ಮೊಬೈಲ್ ಸೌಲಭ್ಯಗಳಿಗಿಂತಲೂ ತೀವ್ರತರವಾದ ದುಷ್ಪರಿಣಾಮಗಳನ್ನೇ ಬೀರುತ್ತಿದೆ. ಮೊಬೈಲ್ ಎಂಬ ಮಯಾಜಾಲ ಮಕ್ಕಳ ಭವಿಷ್ಯದ ದಾರಿಯನ್ನು ತಪ್ಪಿಸುತ್ತಿರುವ ಮಾರಿಯಾಗಿ ಪರಿಣಮಿಸುತಿದೆ. ಮಕ್ಕಳ ದೈಹಿಕ, ಮಾನಸಿಕ, ಭಾವನಾತ್ಮಕ, ಪ್ರಾಯೋಗಿಕ ಮತ್ತು ಅರಿವಿನ ಬೆಳವಣಿಗೆಯ ಮೇಲೆ ಮೊಬೈಲ್ ಅಥವಾ ಕಂಪ್ಯೂಟರ್ ಹೇಗೆ ಪರಿಣಾಮ ಬೀರು ತ್ತಿದೆ. ಇದರಿಂದ ಉಂಟಾಗುವ ತೊಂದರೆಗಳೇನು ಎಂಬುದರ ಮೇಲೆ ವಿಶೇಷ ಸಂಶೋಧನೆ ನಡೆದಿದೆ. ಸಾಮಾನ್ಯವಾಗಿ ಮಕ್ಕಳು ತಮ್ಮ ಸುತ್ತಲಿನ ಪರಿಸರದಿಂದ ಮತ್ತು ಹಿರಿಯರ, ವಿಶೇಷವಾಗಿ ಪೋಷಕರ ವರ್ತನೆಯಿಂದ ಹಲವು ವಿಷಯಗಳನ್ನು ಕಲಿಯುತ್ತಾರೆ. ಆದರೆ ಮೊಬೈಲ್ ಅಥವಾ ಕಂಪ್ಯೂಟರ್ ಬಳಕೆ ಮಕ್ಕಳನ್ನು ಸುತ್ತಮುತ್ತಲಿನ ಪರಿಸರ ದಿಂದ ದೂರವಿರಿಸುತ್ತಿದೆ. ಅದರ ಜೊತೆ ಅವರ ಚಟುವಟಿಕೆಗಳು ಮತ್ತು ನಡವಳಿಕೆಯು ತಾವೇನು ನೋಡಿದ್ದೇವೆ ಎಂಬುದರಿಂದ ಪ್ರೇರಿತ ವಾಗಲು ಪ್ರಾರಂಭವಾಗುತ್ತಿದೆ ಎಂಬ ವಿಷಯವು ಅಧ್ಯಯನದಿಂದ ತಿಳಿದು ಬಂದಿದೆ.

ಸಾಮಾನ್ಯವಾಗಿ ಹೇಳುವುದಾದರೆ, ಒಂದು ಮಗು ವರ್ಚುವಲ್ ವರ್ಲ್ಡ್ ಸ್ಕ್ರೀನ್ ಮುಂದೆ ಹೆಚ್ಚು ಸಮಯವನ್ನು ಕಳೆಯುತ್ತಿದ್ದರೆ, ಅವನ ಕ್ರೀಡೆ, ವ್ಯಾಯಾಮ, ಜನರನ್ನು ಭೇಟಿಯಾಗು ವುದು, ಜೀವನದಲ್ಲಿ ಮಾತನಾಡುವ ಮತ್ತು ಕಲಿಯುವ ಕೌಶಲ್ಯಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ಅವನ ಒಟ್ಟಾರೆ ಬೆಳವಣಿಗೆ ಪ್ರಭಾವಿ ತವಾಗಿದೆ. ಅತಿಯಾದ ಮೊಬೈಲ್ ಬಳಕೆ ಮಕ್ಕಳ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎನ್ನುವುದನ್ನು ತಿಳಿಯುವುದರ ಸಲುವಾಗಿ 10,000 ಕ್ಕೂ ಹೆಚ್ಚು ಮಕ್ಕಳ ಮೇಲೆ ನಿಗಾವಹಿಸಿ ಅಧ್ಯಯನ ವರದಿ ಸಿದ್ದಪಡಿಸಲಾ ಗಿದೆ. ವರದಿಯಲ್ಲಿ ಮೊಬೈಲ್‌ನಿಂದ ಮಕ್ಕಳ ಮಾನಸಿಕ ಮತ್ತು ದೇಹಾರೋಗ್ಯ ಎರಡೂ ಹಾಳಾಗುತ್ತದೆ ಎಂದು ತಿಳಿಸಲಾಗಿದೆ.!!
ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳು

ಮೊಬೈಲ್ ನಿಂದ ಹೊರಸೂಸುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಗಳು ಮಾನವನ ಮೆದುಳಿನ ಮೇಲೆ ತೀವ್ರ ರೀತಿಯ ಪರಿಣಾಮ ವನ್ನು ಬೀರುತ್ತದೆ. ಮಕ್ಕಳು ಸದಾ ಮೊಬೈಲ್ ಪೋನ್ ಗೆ ಅಂಟಿಕೊಂಡಿರುವುದರಿಂದ ಒಳಿತಿ ಗಿಂತ ಕೆಡುಕೇ ಹೆಚ್ಚು. ಮೊಬೈಲ್ ಜಾಸ್ತಿ ಬಳಕೆ ಮಾಡು ವುದರಿಂದ ಜ್ಞಾಪಕ ಶಕ್ತಿ ನಷ್ಟ, ಏಕಾಗ್ರತೆ ಕುಸಿತ, ಅಜೀರ್ಣ, ನಿದ್ರಾಹೀನತೆ, ತಲೆನೋವು, ತಲೆ ಸುತ್ತು, ಮಧುಮೇಹ, ಹೃದಯದ ಬಡಿತ ದಲ್ಲಿ ಏರುಪೇರು ಸೇರಿದಂತೆ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಉಂಟಾಗುತ್ತದೆ.

- ಹದಿಹರೆಯದ ಮತ್ತು ಯೌವ್ವನಾವಸ್ಥೆಯ ಲ್ಲಿರುವ ಮಕ್ಕಳು, ಹುಡುಗರು,ಯುವಕರಲ್ಲಿ ರುವ ಆಲೋಚನಾ ಶಕ್ತಿ ಕುಗ್ಗಲು ಹಾಗೂ ಕ್ಷೀಣಿಸಲು ಮೊಬೈಲ್ ಕಾರಣ.
- ಪಬ್‌ಜಿ ಗೇಮ್ ನಂತಹ ಯಾಂತ್ರಿಕ ಶಕ್ತಿಯ ನಿಯಂತ್ರಣಕ್ಕೆ ಒಳಪಟ್ಟು ಕೊನೆಗೆ ಸೋತು ಮಕ್ಕಳ ತಮ್ಮ ಪ್ರಾಾಣವನ್ನೇ ಕಳೆದುಕೊಳ್ಳು ವ ಭೀತಿ ಕೆಲವೊಂದು ಕಡೆ ನಡೆದಿರುವುದು ಖೇದಕರ.
- ಅತಿ ಮೊಬೈಲ್ ಬಳಕೆಯಿಂದ ಮಕ್ಕಳು ಕಣ್ಣು, ಮೆದುಳು ಮತ್ತು ವಿವಿಧ ಶಾರಿರೀಕ ಬೆಳವಣಿಗೆಯ ಮೇಲೆ ಆರೋಗ್ಯದ ಅಡ್ಡ ಪರಿಣಾಮಗಳು ಆಗುತ್ತಿವೆ.
- ನಿರಂತರ ಮೊಬೈಲ್ ಬಳಕೆಯಿಂದ ಬಿಪಿ ಮತ್ತು ನರರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ.
- ಮಕ್ಕಳಲ್ಲಿ ಕಿರಿಕಿರಿ, ಹತಾಶೆ, ಆತಂಕ ಮತ್ತು ಹಠಾತ್ ಅಸ್ವಸ್ಥತೆಗಳು ಕಾಣಿಸಿಕೊಳ್ಳುತ್ತವೆ.
- ಪಠ್ಯದ ವಿದ್ಯಾಭ್ಯಾಸ, ಗೃಹ ಕಾರ್ಯ, ವ್ಯವಹಾರಿಕ ಕುಶಲತೆ ಮತ್ತು ಪಠ್ಯತೇರ ಸಾಂಸ್ಕೃತಿಕ ಚಟುವಟಿಕೆಗಳಿಂದ ವಿಮುಖ ರಾಗಿ ಭವಿಷತ್ತನ್ನು ಕಗ್ಗತ್ತಲೆ ಮಾಡಿಕೊಳ್ಳು ತ್ತಾರೆ.
ಮಕ್ಕಳ ಮೊಬೈಲ್ ಬಳಕೆಯಲ್ಲಿ ಪಾಲಕರು ಕೈಗೊಳ್ಳಬೇಕಾದ ಜಾಗೃತಿ ಕ್ರಮಗಳು
ಒಂದು ದಿನದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಮೊಬೈಲ್ ಅಥವಾ ಕಂಪ್ಯೂಟರ್ ಡಿಸ್ಪ್ಲೇ ನೋಡುವ ಮಕ್ಕಳು ಭಾಷೆ ಮತ್ತು ಆಲೋಚನೆಯ ಬಗ್ಗೆ ಸಂಶೋಧಕರು ನೀಡಿದ ಪರೀಕ್ಷೆಗಳಲ್ಲಿ ಅತ್ಯಂತ ಕಡಿಮೆ ಅಂಕಗಳನ್ನು ಗಳಿಸಿದರು. ಹೀಗಾಗಿ ಬೆಳೆಯುತ್ತಿರುವ ಮಕ್ಕಳಿಗೆ ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ಗೆಜೆಟ್ ಬಳಕೆಗೆ ನಿಗದಿತ ಸಮಯವನ್ನು ಸಂಯೋಜಿಸ ಬೇಕೆಂದು ತಜ್ಞರು ಹೇಳುತ್ತಾರೆ.

ಆನ್‌ಲೈನ್ ಸೃಜನಾತ್ಮಕತೆಗೆ ಉತ್ತಮ ವೇದಿಕೆ ಯಾಗಿದ್ದರೂ ಮಕ್ಕಳಿಗೆ ಹೋಮ್ ವರ್ಕ್ ಮಾಡಲು ತೊಂದರೆ ನೀಡುತ್ತದೆ ಹಾಗೂ ಕುಟುಂಬದೊಂದಿಗಿನ ಸಮಯವನ್ನು ಹಾಳು ಮಾಡುತ್ತದೆ. ಮೊಬೈಲ್ ಫೋನ್ ಎಂಬ ಮಾಯಾಜಾಲದಲ್ಲಿ ಬಿದ್ದವರನ್ನು ಗುಣಪಡಿ ಸುವುದು ಕಷ್ಟಸಾಧ್ಯ. ಹಾಗಾಗಿ ಮಕ್ಕಳು ಆನ್‌ಲೈನ್ ನಲ್ಲಿ ಏನನ್ನು ನೋಡುತ್ತಾರೆ ಮತ್ತು ಏನನ್ನು ಕಲಿಯುತ್ತಾರೆ ಎನ್ನುವ ಬಗ್ಗೆ ಗೌಪ್ಯತೆ ಸೆಟ್ಟಿಂಗ್ ಗಳ ಮೂಲಕ ತಿಳಿಯಿರಿ. ಜೊತೆಗೆ ಅವರು ಏನನ್ನು ಹಂಚಿಕೊಳ್ಳುತ್ತಾರೆ ಎಂಬುದರ ಮೇಲೂ ನೀವೂ ನಿಗಾವಹಿಸ ಬೇಕು.

ಸ್ಮಾರ್ಟ್‌ಫೋನ್‌ಗಳಲ್ಲಿ ಎಲ್ಲ ಬಗೆಯ ಅಪ್ಲಿಕೇಶನ್, ವಿಡಿಯೊಗಳು ಲಭ್ಯವಿರುವುದ ರಿಂದ ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳ ಬೇಕಾದ ವಿದ್ಯಾರ್ಥಿಗಳು ಇಂದು ಅಡ್ಡದಾರಿ ಹಿಡಿಯುವಂತಾಗಿದೆ. ಮಕ್ಕಳು ಅತಿಯಾದ ಮೊಬೈಲ್ ಫೋನ್ ಬಳಕೆಗೆ ಪೋಷಕರು ಕಡಿವಾಣ ಹಾಕಿ, ಅವರನ್ನು ಮೊಬೈಲ್ ಗೀಳಿ ನಿಂದ ಹೊರಬರುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.

ಬುದ್ದಿಹೀನ ಸ್ಕ್ರೋಲಿಂಗ್ ತಪ್ಪಿಸಲು ಮತ್ತು ನಕಲಿ ಜಾಹೀರಾತುಗಳಿಗೆ ಬಲಿಯಾಗುವು ದನ್ನು ತಪ್ಪಿಸಲು ಅವರು ಬಳಸುವ ಮಾಧ್ಯಮ ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಟೀಕಿಸಲು ಅವರಿಗೆ ಸಹಾಯ ಮಾಡಿ. ನೈಜ ಜಗತ್ತಿನಲ್ಲಿ ಅವರು ಇಷ್ಟಪಡುವದನ್ನು ಅಭಿನಂದಿಸುವ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಚಟುವಟಿಕೆ ಗಳನ್ನು ಪ್ರೋತ್ಸಾಹಿಸಿ. ಮಕ್ಕಳ ಮೇಲೆ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳು ಬೀರುತ್ತಿ ರುವ ಕೆಟ್ಟ ಪ್ರಬಾವ ವನ್ನು ತಡೆಯಲು ಪ್ರೀತಿ ಗಿಂತ ಬೇರೊಂದು ಲಸಿಕೆ ಇಲ್ಲ ಎಂದು ಎಲ್ಲಾ ವರದಿ ಗಳು ಹೇಳುತ್ತವೆ. ಮಕ್ಕಳಿಗೆ ಪ್ರೀತಿಯ ಜೊತೆಗೆ ವಾಸ್ತವ ಪ್ರಪಂಚದ ಬಗ್ಗೆ ಅರಿವು ಮೂಡಿಸುವ ಕಾರ್ಯ ಶಿಕ್ಷಕರಿಂದ ಭರದಿಂದ ಸಾಗುತ್ತಿರುವ ಈ ಕಾರ್ಯ ಪೋಷಕರಿಂದಲೂ ತುರ್ತಾಗಿ ಆದಾಗ ಚಿಣ್ಣರ ಬಾಳು ಪರಿಮಳಿಸು ವುದು.
ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದೊ ಸುಂದರ
ನಮ್ಮ ಸುತ್ತಲು ಹೆಣೆದು ಕೊಳ್ಳಲಿ
ಸ್ನೇಹ ಪಾಶದ ಬಂಧನ
ಬೆಳಕು ಬೀರಲಿ ಗಂಧ ಹರಡಲಿ
ಉರಿದು ಪ್ರೇಮದ ಚಂದನ
ಮಕ್ಕಳ ಕವಿ ಶಂ.ಗು. ಬಿರಾದಾರ ಬರೆದಿರುವ ಮಕ್ಕಳ ಕವನಕ್ಕೆ ಜೀವ ಚೈತನ್ಯ ಇಮ್ಮುಡಿಸು ವುದು.
(ನವೆಂಬರ್ ೧೪ ರಂದು ಮಕ್ಕಳ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯ ಮತ್ತು ಕೌಶಲಗಳನ್ನು ಜಾಗೃತಿಗೊಳಿಸುವ ಪಾಲಕರಿ ಗೊಂದು ವಿಮರ್ಶಾತ್ಮಕ ಚಿಂತನ ಬರಹ)

ಶ್ರೀ ಸುಭಾಷ್ ಹೇಮಣ್ಣಾ ಚವ್ಹಾಣ,
ಶಿಕ್ಷಕ ಸಾಹಿತಿಗಳು,
ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ,ಮಂಜುನಾಥ ನಗರ, ಹುಬ್ಬಳ್ಳಿ ಶಹರ.