ಎನ್.ಎಸ್.ಹಾರ್ಡಿಕರ್: ಇವರ ಪೂರ್ಣ ಹೆಸರು ನಾರಯಣ್ ಸುಬ್ಬರಾವ್ ಹಾರ್ಡಿಕರ್. ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಇವರ ಕೊಡುಗೆ ಗಮನೀಯವಾದುದು, ಸ್ಮರಣೀಯ ವಾದುದು.

1889ರಲ್ಲಿ ಸುಬ್ಬರಾವ್ ಹಾಗೂ ಯಾಮುನಾ ಬಾಯಿ ದಂಪತಿಗಳ ಉದರದಲ್ಲಿ ಧಾರವಾಡ ದಲ್ಲಿ ಜನಿಸಿದರು. ತಂದೆಯವರ ಆದಾಯ ಅಷ್ಟೇನೂ ಇರದಿದ್ದ ಕಾರಣ ವಿದ್ಯಾಭ್ಯಾಸಕ್ಕೆ ಇವರ‌ ಚಿಕ್ಕಪ್ಪನವರಿಂದ ನೆರವು ದೊರಕಿತು. ಹಾರ್ಡಿಕರ್ ಅವರ ಚುರುಕು ಬುದ್ಧಿಮತ್ತೆಯ ನ್ನು ಗಮನಿಸಿದ್ದ ಚಿಕ್ಕಪ್ಪ ಇವನ ಶಿಕ್ಷಣದ ಜವಾಬ್ದಾರಿ ಯನ್ನು ವಹಿಸಲು ಮುಂದಾದರು. ಬಾಲ್ಯದಿಂದ ಲೇ ಪುಸ್ತಕಗಳ ಬಗೆಗೆ ಹೆಚ್ಚು ಒಲವಿದ್ದ ಹಾರ್ಡಿಕರ್ ಲೋಕಮಾನ್ಯ ತಿಲಕರ ಬೋಧನೆ ಗಳಿಂದ ಪ್ರಭಾವಿತರಾದರು. ಪರಿಣಾಮ ಎಳೆಯ ವಯಸ್ಸಿನಲ್ಲಿಯೇ ರಾಜಕೀಯಕ್ಕೆ ಧುಮುಕಿದರು. ಆ ಸಮಯ ದಲ್ಲಿ ಇವರಿಗೆ ಅನೇಕ ಸುವರ್ಣ ಅವಕಾಶ ಗಳು ಅರಸಿಬಂದವು.

ಸಮಾಜ ಸುಧಾರಣೆಯ ಕೆಲಸಗಳಲ್ಲಿ ಕೈ ಹಾಕಿದ ಇವರು ‘ಭಗಿನಿ ಸಮಾಜ’, ‘ಕನ್ಯಾ ಶಾಲ’, ‘ಆರ್ಯಬಾಲ ಸಭಾ’ ಇವುಗಳನ್ನು ಸ್ಥಾಪಿಸಿ ದರು. ಆಗಿನ ಕಾಲಕ್ಕೆ ಸಾಹಿತ್ಯಿಕ ಹಾಗೂ ರಾಜಕೀಯ ಕೇಂದ್ರ ಬಿಂದುವೆನಿಸಿ ದರು. ೧೯೦೮ ರಲ್ಲಿ ಕನ್ನಡ ಕೇಸರಿ ಪತ್ರಿಕೆ ಯನ್ನು ಸೇರಿದರು. ಇಲ್ಲಿ ಕೆಲಕಾಲ ಸೇವೆ ಸಲ್ಲಿಸಿದ ನಂತರ ಕಲ್ಕತ್ತಾ ವನ್ನು ಸೇರಿ ತಮ್ಮ ಎಮ್.ಆರ್. ಸಿ.ಎಸ್ ಪದವಿ ಪಡೆದರು. ಅಲ್ಲಿಂದ ಮುಂದೆ ಕರ್ನಾಟಕದ ಕೆಲವು ಉದಾರ ಹೃದಯಿಗಳ ನೆರವಿನಿಂದ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಗೆ ತೆರಳಿದರು.

ಮಿಷಿಗನ್ ವಿಶ್ವವಿದ್ಯಾನಿಲಯದಿಂದ ತಮ್ಮ ಎಂ.ಎಸ್ಸಿ. ಪದವಿಯನ್ನು ೧೯೧೬ರಲ್ಲಿ ಪಡೆದು ಕೊಂಡರು. ವಿದ್ಯಾಭ್ಯಾಸವನ್ನು ಮುಂದುವರಿಸಿ ಪಿ.ಎಚ್.ಡಿ ಪದವಿಗಾಗಿ ಅಭ್ಯಸಿಸುತ್ತಿರುವ ಸಂದರ್ಭದಲ್ಲಿ ಇವರಿಗೆ ಲಾಲಾ ಲಜಪತ್ ರೈ ರವರ ಸಂಗವಾಯಿತು. ಅವರ ಪ್ರಭಾವಕ್ಕೆ ಒಳಗಾದ ಹಾರ್ಡಿಕರ್ ಅಮೆರಿಕದಲ್ಲಿದ್ದಾಗಲೇ ಅವರ ಕೋರಿಕೆಯ ಮೇರೆಗೆ ಅವರಿಗೆ ನೆರವಾ ದರು. ಅನೇಕ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ವಿದ್ಯಾಭ್ಯಾಸ ವನ್ನು ಅರ್ಧದಲ್ಲೇ ತೊರೆದು ‘ಹೋಮ್ ರೂಲ್ ಲೀಗ್’ ಹಾಗೂ ‘ಇಂಡಿಯನ್ ಲೇಬರ್ ಯೂನಿಯನ್’ ಗಳ ಸಂಸ್ಥಾಪನೆ ಯಲ್ಲಿ ನೆರವಾದರು.

ಕಾರ್ಯದರ್ಶಿಯಾಗಿ ಅವರು ಅಲ್ಲಿಯ ಉದ್ಯೊಗಸ್ಥ ಭಾರತೀಯರೆಲ್ಲರನ್ನೂ ಸಂಘಟಿ ಸುವ ಕಾರ್ಯವನ್ನು ಮಾಡಿದರು. ಹೋಂ ರೂಲ್ ಲೀಗ್ ಪರವಾಗಿ ಲಾಲ ಲಜಪತ ರೈ ಹಾಗೂ ಹಾರ್ಡಿಕರ್ ಅವರು ಅಮೆರಿಕಾದ ವಿದೇಶದ ಕಾರುಬಾರು ಗಳನ್ನು ನೋಡಿಕೊಳ್ಳು ವ ಸಭೆಯಲ್ಲಿ ಮಾತನಾಡಿದರು.

ಅಮೆರಿಕಾದ ಹಿಂದೂ ಅಸೋಸಿಯೇಶನ್ ಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಅಮೆರಿಕಾ ದಲ್ಲಿರುವ ಭಾರತೀಯರನ್ನು ಒಟ್ಟುಗೂಡಿಸುವಲ್ಲಿ ಯ ಅವರ ಪಾತ್ರವನ್ನು ಕುರಿತು ಅಲ್ಲಿಯ ಪತ್ರಿಕೆ ಗಳೂ ಕೂಡ ಹೊಗಳಿದವು. ೧೯೨೧ರಲ್ಲಿ ಭಾರತಕ್ಕೆ ಮರಳಿದರು. ಹಾದಿಯಲ್ಲಿ ಜರ್ಮನಿ ಹಾಗೂ ಇಟಲಿ ದೇಶಗಳನ್ನು ಸಂದರ್ಶಿಸಿ ಬರಬೇಕೆಂದು ಪ್ರಯತ್ನಿಸಿದರೂ ಬ್ರಿಟಿಷ್ ಸರ್ಕಾರ ಇವರಿಗೆ ಪರವಾನಿಗೆ ನೀಡದ ಕಾರಣ ಅದು ಸಾಧ್ಯವಾಗದೆ ಹೋಯಿತು.

ಭಾರತಕ್ಕೆ ಮರಳಿದ ನಂತರ ಇವರು ಪ್ರಾದೇಶಿಕ ಕರ್ನಾಟಕ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಯಾಗಿ ನಿಯುಕ್ತರಾದರು. ಅದಾದ ಕೂಡಲೆ “ಅಂತರಾಷ್ಟ್ರೀಯ ಸ್ವಯಂಸೇವಕರ ಸಂಘ” ಕ್ಕೆ ಅಡಿಪಾಯ ಹಾಕಿದರು. ಮಂದಹಾಸದ ಮುಖದ ಹಿಂದೆ ದೃಢ ನಿರ್ಧಾರದ ಗತ್ತಿನೊಡನೆ ಕೂಡಿದ್ದ ವ್ಯಕ್ತಿತ್ವ ಹಾರ್ಡಿಕರ್ ಅವರದು. ಅನಪೇಕ್ಷಿತ, ಅಕಾರಣ ಮಾತುಗಳಿಗೆ ಅವರಲ್ಲಿ ಅವಕಾಶವೇ ಇರಲಿಲ್ಲ. ೧೯೨೩ರಲ್ಲಿ ನಾಗಪುರ ದಲ್ಲಿ ನಡೆದ ಧ್ವಜ ಸತ್ಯಾಗ್ರಹದಲ್ಲಿ ಬಂಧಿಸಲ್ಪಟ್ಟ ಹಾರ್ಡಿಕರ್ ಹಾಗೂ ಅವರ ಸಂಗಡಿಗರು ಬ್ರಿಟಿಷರ ಪ್ರಚೋದನೆಯಂತೆ ಕ್ಷಮಾಪಣೆಯನ್ನು ಬೇಡದೆ ಹೋಗಿ, ಜೇಲಿನಲ್ಲಿ ಅವರಿಗೆ ಒದಗು ತ್ತಿದ್ದ ಅನೇಕ ಸವಲತ್ತುಗಳನ್ನು ಕಳೆದುಕೊಂಡ‌‌ ರು. ನಾಲ್ಕು ಬಾರಿ ಸತತವಾಗಿ ಜೈಲು ಶಿಕ್ಷೆಗೆ ಒಳಗಾದ ಹಾರ್ಡಿಕರ್ ರವರು ಮೂರು ವರ್ಷ ಜೈಲು ವಾಸವನ್ನು ಅನುಭವಿಸಿದರು. ಇವರ ಈ ಪ್ರತಿಕ್ರಿಯೆ ರಾಷ್ಟ್ರೀಯ ಮಟ್ಟದಲ್ಲಿ ಇವರ ಪ್ರಾಮುಖ್ಯತೆಯ ನ್ನು ಹೆಚ್ಚಿಸಿತು.

ಈ ಪ್ರಸಂಗ ದಿಂದ ಉತ್ತೇಜಿತ ವಾದ ಪ್ರಾದೇಶಿಕ ಕಾಂಗ್ರೆಸ್ಸು ೧೩ ಸದಸ್ಯರನ್ನೊಳ ಗೊಂಡ ಸ್ವಯಂ ಸೇವಕರ ಸಂಘ “ಹಿಂದೂಸ್ತಾನಿ ಸೇವಾ ಮಂಡಲ” ವನ್ನು ೧೯೨೩ರಲ್ಲಿ ಕಾಕಿನಾಡ ಅಧಿವೇಶನ ದಲ್ಲಿ ಹಾರ್ಡಿಕರ್ ಅವರ ನೇತೃತ್ವ ದಲ್ಲಿ ಸ್ಥಾಪಿಸಿತು. ನಂತರ ಅದು ಮರುನಾಮ ಕರಣಗೊಂಡು ‘ಸೇವಾದಳ’ ಎಂಬ ಹೆಸರಿನಿಂದ ಪ್ರಚಲಿತ ವಾಯಿತು.

ಈ ಹಿಂದೆಯೂ ಅನೇಕ ದಳಗಳು ಸಂಘಟಿತ ವಾಗಿದ್ದರೂ ಅವುಗಳಲ್ಲಿ ಶಿಸ್ತಿನ ಅಥವಾ ತಮ್ಮ ಧ್ಯೇಯದ ಕೊರತೆಯಿದ್ದಿತು. ಸೇವಾದಳ ಹಾರ್ಡಿಕರ್ ಅವರ ನೇತೃತ್ವದಲ್ಲಿ ಸಂಪೂರ್ಣ ಶಿಸ್ತಿನಿಂದ, ನಿರ್ದಿಷ್ಟ ಧ್ಯೇಯವನ್ನು ಹೊಂದಿದ ದಳವಾಗಿದ್ದಿತು. ಜವಾಹರಲಾಲ್ ನೆಹರು ತಮ್ಮ ಆತ್ಮಚರಿತ್ರೆಯಲ್ಲಿ ಹಾರ್ಡಿಕರ್ ಅವರು ಎದುರಿಸ ಬೇಕಾಗಿ ಬಂದ ತೊಂದರೆ ಗಳನ್ನು ವಿವರಿಸಿದ್ದಾರೆ. ಅವರಿಗೆ ಈ ಸೇವಾದಳ ಬಹಳ ಮೆಚ್ಚುಗೆಯಾ ಯಿತು. “ನಾನು ಅವನನ್ನು ಹಾಗೂ ಅವನ ದಳವನ್ನೂ ಅನುಮೋದಿಸು ವಂತೆ ಅವನ ವರ್ತನೆಯಿದ್ದಿತಾದ್ದರಿಂದ ಸಂತೋಷವಾಗಿ ನಾನು ಅವನಿಗೆ ಸಮರ್ಥನೆ ಯನ್ನು ನೀಡಿದೆ” ಎಂದು ಹೇಳಿಕೊಂಡಿದ್ದಾರೆ.

ಈ ಸೇವಾದಳಕ್ಕೆ ಜವಾಹರ ಲಾಲ್ ನೆಹರೂ ಅವರ ಒತ್ತಾಸೆ ಸಿಕ್ಕಿದರೂ, ಕೆಲವು ಪ್ರಾದೇಶಿಕ ಕಾಂಗ್ರೆಸ್ಸಿ ಗರಿಂದ ವಿರೋಧವನ್ನು ಅನುಭವಿ ಸಿತು. ಅವರ ದೃಷ್ಟಿ ಯಲ್ಲಿ ಇದೊಂದು ಕ್ರಾಂತಿಕಾರಕ ದಳವಾಗಿದ್ದು, ಅಹಿಂಸಾ ತತ್ವದ ಮೂಲಕ್ಕೇ ಕೊಡಲಿ ಹಾಕುವಂತಿತ್ತು. ಆದರೆ ಹಾರ್ಡಿಕರ್ ಅವರ ಸತತ ಪ್ರಯತ್ನದಿಂದ ಸ್ವಯಂಸೇವಕ ಸಂಘ ಎಷ್ಟು ಶಿಸ್ತಿನಿಂದ ಇರಬಹುದು, ಅಹಿಂಸಯುತವಾಗಿರಬಹುದು ಹಾಗೂ ನಿರ್ದಿಷ್ಟವಾದ ಧ್ಯೇಯಗಳಿಗಾಗಿ ಹೋರಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದರು.

೧೯೫೮ರಲ್ಲಿ ‘ಪದ್ಮಭೂಷಣ’ ವನ್ನು ಪಡೆದ ಇವರು ಎರಡುಬಾರಿ ರಾಜ್ಯಸಭೆಯ ‘ಮೆಂಬರ್ ಆಫ಼್ ಪಾರ್ಲಿಮೆಂಟ್’(೧೯೫೨ ರಿಂದ ೧೯೬೨) ಆಗಿ ನೇಮಕಗೊಂಡಿದ್ದರು. ೧೯೭೫ರಲ್ಲಿ ತಮ್ಮ ಕೊನೆಯುಸಿರೆಳೆದರು. ಹಾರ್ಡಿಕರ್ ಅವರು ಕೊನೆಯುಸಿರೆಳೆದರೂ ಅವರು ರಾಷ್ಟ್ರಕ್ಕಾಗಿ ಮಾಡಿದ ಸೇವೆ ದೀರ್ಘ ಕಾಲದ ಪರಿಣಾಮವು ಳ್ಳದ್ದಾಗಿದೆ. ಸ್ವಾತಂತ್ರ ಯೋಧರನ್ನು ನೆನಪಿಸಿಕೊ ಳ್ಳುವ ಈ ಸರಣಿ ಯಲ್ಲಿ ಇವರ ಹೆಸರನ್ನು ಸ್ಮರಿಸುವುದು ಹೆಮ್ಮೆಯ ವಿಷಯ.

ಇವರು ನೆಪೋಲಿಯನ್ನನಂತೆ ಮಹೋದ್ದೇಶ ವನ್ನು ಹೊಂದಿದ್ದರೂ ಸ್ವಾರ್ಥಿಯಾಗಿರಲಿಲ್ಲ. ನೆಪೋಲಿಯನ್ ರಾತ್ರೋರಾತ್ರಿ ತನ್ನ ರಾಜ್ಯವನ್ನು ವಿಸ್ತರಿಸುವ ದುಡುಕು ಸ್ವಭಾವ ದವನಾಗಿದ್ದರೆ, ಹಾರ್ಡಿಕರ್ ಶಿಸ್ತಿನಿಂದ ಕೂಡಿದ ರಾಷ್ಟ್ರಪ್ರೇಮಿ ಯಾಗಿದ್ದರು. ಇವರಿಬ್ಬರ ವ್ಯಕ್ತಿತ್ವದ ಪರಿಣಾಮ ವನ್ನು ಅವರ ಅಂತಿಮ ಫಲದಲ್ಲಿ ಕಾಣಬಹುದು. ನೆಪೋಲಿಯನ್ ಎಲ್ಲಿಯೋ ತಲೆಮರೆಸಿಕೊಂಡು ಪ್ರಪಂಚದ ಯಾವುದೋ ಮೂಲೆಯಲ್ಲಿ ತನ್ನ ಅಂತ್ಯ ದಿನಗಳನ್ನು ಕಳೆಯಬೇಕಾಗಿ ಬಂದರೆ, ಹಾರ್ಡಿಕರ್ ಅವರು ಸ್ವತಂತ್ರಭಾರತದ ಚಿತ್ರವನ್ನ ಕಂಡರು.

ಈ ಸೇವಾದಳ ಅಸಹಕಾರ ಚಳುವಳಿ (Civil Disobedient Movement) ಸಮಯದಲ್ಲಿ ಮಾಸ್ ಪಿಕೆಟಿಂಗ್ ಏರ್ಪಡಿಸು ವಲ್ಲಿ, ಹೊಸ ಹೊಸ ಸದಸ್ಯರನ್ನು ಕಾಂಗ್ರೆಸ್ಸಿಗೆ ಸೇರಿಸುವುದ ರಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು. ಚಳುವಳಿ ಮುಗಿದಮೇಲೂ, ಬ್ರಿಟಿಷ್ ಆಡಳಿತ ಕಾಂಗ್ರೆಸ್ ಸದಸ್ಯರನ್ನು ಬಿಡುಗಡೆ ಮಾಡಿದ ರೂ ಸೇವಾದಳದ ಸ್ವಯಂ ಸೇವಕರನ್ನು ತಡೆಹಿಡಿ ದಿತ್ತು ಎಂದರೆ ಆಡಳಿತವರ್ಗ ಇವರನ್ನು ಎಷ್ಟು ಗಂಭೀರವಾಗಿ ಪರಿಗಣಿಸಿತ್ತು ಎಂಬುದರ ಅರಿವಾಗುತ್ತದೆ. ಬರಬರುತ್ತ ಸೇವಾದಳ ಕಾಂಗ್ರೆಸ್ಸಿನ ಪ್ರಮುಖ ಸ್ವಯಂ ಸೇವಾದಳವಾಗಿ ಕೆಲಸ ಮಾಡಿ ಸ್ವಯಂ- ಸೇವಕರಿಗೆ ಅಗತ್ಯವಾದ ತರಬೇತಿಯನ್ನು ಒದಗಿಸಿಕೊಡುತ್ತಿತ್ತು. ಕರ್ನಾಟಕ ಆರೋಗ್ಯ ಕೇಂದ್ರವನ್ನು ಘಟಪ್ರಭಾ ದಲ್ಲಿ ಅಸ್ತಿತ್ವಕ್ಕೆ ತರುವಲ್ಲಿ ಹಾರ್ಡಿಕರ್ ಅವರ ಸಹಯೋಗವೂ ಬಹಳವಾಗಿದ್ದಿತು.

✍️ಡಾ.ಸತ್ಯವತಿ ಮೂರ್ತಿ
ಮ್ಯಾಂಚೆಸ್ಟರ್, ಇಂಗ್ಲೆಂಡ್