ಕರೋನಾದ ಕಾಲಲೀಲೆ
ಮಾಸ್ಕ್ ಶೀಳ್ಡ್ ಗಳ ಅವಾಂತರ
ಒಬ್ಬರಿಗೊಬ್ಬರು ಅಂತರವಿಡುವ ದುಸ್ಥಿತಿ
ಪ್ರೀತಿಯನ್ನು ವ್ಯಕ್ತಪಡಿಸಲೂ ಆಗದ ಜಿಪುಣತನ
ಸಂಕೋಚದ ಪೊರ ಕಳಚಿದ ಜನ
ರಕ್ಷಣೆಯ ಸೋಗಿನಲಿ ನಿರ್ದಾಕ್ಷಿಣ್ಯದ ಮಾತು
ಇವಾವುದನ್ನೂ ಲೆಕ್ಕಿಸದೆ
ಬಂದೇ ಬಂದಿತು ಮತ್ತೆ ಮರಳಿ ದೀಪಾವಳಿ
ಸುರುಸುರು ಬತ್ತಿಗಳ ಝಗಝಗಿಸುವ ಬೆಳಕು
ಮತಾಪಿನ ಬೆಳ್ಳಂಬೆಳಕು
ಪಟಕಿಯ ಢಮಾರ್, ರಾಕೆಟ್ಟಿನ ಸುಂಯ್
ಬಣ್ಣಬಣ್ಣದ ಹೊಸಬಟ್ಟೆಗಳ ಸಂಭ್ರಮದಲ್ಲಿ
ಮೈಮರೆತ ಶ್ರೀಮಂತಜನ
ಗೇಣುದ್ದ ಜರತಾರಿ ಅಂಚಿನ ಲಂಗದ ಹುಡುಗಿ
ಕೈಯಲ್ಲಿ ಸುರುಸುರುಬತ್ತಿಯ ಬೆಳಕು
ಕಣ್ಣಲ್ಲಿ ದೀಪಾವಳಿಯ ಸಂಭ್ರಮದ ಥಳುಕು
ಮೈಮರೆತು ನೋಡುತ್ತ ನಿಂತ
ಅಂಡು ಹರಕಲು ಚಡ್ಡಿ, ತೋಳೇ ಇಲ್ಲದ ಅಂಗಿ
ಜಿಡ್ದು ಗಟ್ಟಿದ ತಲೆಯ
ರಾಮ
ಆಸೆಯಿಂದ ಭರವಸೆಯಿಂದ
ಕೈನೀಡಿದಾಗ
ದೊರೆತದ್ದು ಬತ್ತಿಯಿಲ್ಲದ್ದೊಂದು ಪಟಾಕಿ
ಅರ್ಧ ಉರಿದು ಕರಿಕಾದ ಸುರುಸುರುಬತ್ತಿ!

✍️ಡಾ.ಸತ್ಯವತಿ ಮೂರ್ತಿ
ಮ್ಯಾಂಚೆಸ್ಟರ್, ಇಂಗ್ಲೆಂಡ್
Tumba chennagide
LikeLike