ಬೇಂದ್ರೆಯವರು ಒಂದೆಡೆ ಹೇಳುತ್ತಾರೆ:
ನನ್ನ ಪಾಡೆನಗಿರಲಿ ಅದರ ಹಾಡನಷ್ಟೇ
ನೀಡುವೆನು ರಸಿಕ! ನಿನಗೆ
ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ
ನನ್ನ ಕಷ್ಟಗಳೆಲ್ಲ ನನಗೆ ಮಾತ್ರ ಇರಲಿ, ಬರೀ ಸುಖವನ್ನೇ, ಸುಖಸಂತೋಷದ ಸಾಲುಗಳನ್ನೇ, ಅದರ ಹಾಡನ್ನೇ ನಿನಗೆ ಕೊಡುವೆ. ಆ ರಸ ಸ್ವಾದದಿಂದ ಕಲ್ಲುಸಕ್ಕರೆ ಯಂಥ ನಿನ್ನೆದೆಯು ಕರಗಿದರೆ ಆ ಸಕ್ಕರೆಯ ಸವಿಯನ್ನು ನನಗೆ ಹಣಿಸು ಎಂದು.

ಮಲ್ಲಿಗೆಯ ಕವಿ ಎಂದೇ ಪ್ರಖ್ಯಾತರಾದ ಸೊಗ ಸಾದ ಮಲ್ಲಿಗೆಯ ಕಂಪಿನಂತೆ ಕವನಗಳನ್ನು ನೀಡಿದ ಕವಿ ಕೆ.ಎಸ್.ನರಸಿಂಹಸ್ವಾಮಿ. ಸರಳ ಕೋಮಲ ಭಾವಗಳ ನವಿರನ್ನು ಮಲ್ಲಿಗೆಯ ನರುಗಂಪಿನಂತೆ ಕನ್ನಡ ಸಾಹಿತ್ಯ ರಸಿಕರಿಗೆ ಪಸರಿ ಸಿದ ಕೀರ್ತಿ ಅವರದು. ಅಷ್ಟೆಲ್ಲಾ ಸೊಗಸಾದ ಭಾವಗೀತೆಗಳನ್ನು ಕವನಗಳನ್ನು ಬರೆದ ಕವಿಯ ದೃಷ್ಟಿಯಲ್ಲಿ ಕವಿಯೆಂದರೆ ಏನು? ಕವಿತೆ ಎಂದರೆ ಏನು? ಎಂಬುದನ್ನು ಅವರ ಕವನಗಳ ಮೂಲಕ ವೇ ಅರ್ಥಮಾಡಿ ಕೊಳ್ಳುವ ಪ್ರಯತ್ನ ಈ ಲೇಖನದಲ್ಲಿ.

ಕವಿ ತಮ್ಮ ಶಿಲಾಲತೆ ಕವನಸಂಕಲನದ ಶರದ್ ಶಾರದೆ ಕವನದಲ್ಲಿ ತಮ್ಮ ಕವಿತೆಯ ಬಗ್ಗೆ ಹೀಗೆ ಹೇಳುತ್ತಾರೆ:
ಋತುಗತಿಯಲ್ಲ ಶೈಲಿಮತಿಯಲ್ಲ ಶಬ್ದ ರತಿಯಲ್ಲ ನನ್ನ ಕವಿತೆ
ಪದ ಪದಕವಿಲ್ಲ ತಲೆ ಭಾರವಿಲ್ಲ ನಿಮ್ಮುಸಿರು ನನ್ನ ಕವಿತೆ
ಅಹಂಕಾರವಿಲ್ಲ ಅಲಂಕಾರವಿಲ್ಲ ನಿಜಾಕಾರ ನನ್ನ ಕವಿತೆ
ನನ್ನಾಸೆ ಕಣ್ಣ ಬಂದರಿಗೆ ಬಂದ ಶರನ್ನೌಕೆ ಈ ಕವಿತೆ

ಎಂತಹ ಸೊಗಸಾದ ಭಾವಲಹರಿ ಪದಪುಂಜ ಗಳ ಮೋಡಿ ನೋಡಿ. ಓದುಗರ ಉಸಿರು ನನ್ನ ಕವಿತೆ ಎನ್ನುವಲ್ಲಿ ಕವಿಯ ವಿನೀತ ಭಾವ ವ್ಯಕ್ತ ವಾಗಿದೆ. ಬಹುಮಾನ ಪದಕಗಳ ತಲೆ ಭಾರ ವಿಲ್ಲ ಎನ್ನುವಲ್ಲಿ ನಿರಪೇಕ್ಷ ಭಾವ ತುಂಬಿ ತುಳುಕುತ್ತಿದೆ. ಋತು ಗತಿ ಶೈಲಿ ಮತಿ ಅಥವಾ ಶಬ್ದರತಿಗಳ ಆಡಂಬರ ಇಲ್ಲ, ಅಹಂಕಾರವೂ ಇಲ್ಲ, ಅಲಂಕಾ ರವಿಲ್ಲ. ಆದರೆ ನಿಜಕಾರವಾಗಿ ನನ್ನ ಬಯಕೆಯ ಕಣ್ಣ ಮುಂದೆ ಬಂದು ನಿಂತಿರುವ ನೌಕೆ ಎನ್ನು ವಾಗ ಕವಿಯ ಕಲ್ಪನೆ ಯ ಸಾಕಾರ ಭರವಸೆಯ ಆಧಾರವಾಗಿ ಕವಿತೆ ಕಣ್ಣಿಗೆ ಕಟ್ಟುತ್ತದೆ. ಅವರ ಸಮಗ್ರ ಕವನ ಸಂಗ್ರಹಗಳ ಸಂಕಲನ “ಮಲ್ಲಿಗೆ ಯ ಮಾಲೆ“ಯ ಮುನ್ನುಡಿಯಲ್ಲಿ ಕವಿವರ್ಯರೆ ನುಡಿದಿರುವಂತೆ, “ಕವಿತೆ ಎಂದರೇನು ನನಗೆ ತಿಳಿಯದು, ಕಣ್ಣುಕಪ್ಪೆಯ ಚಿಪ್ಪಿನಗಲದ ದೋಣಿ ನೋಟ ಸಮುದ್ರದಂಥ ಪ್ರಾಣಿ ಬರೆಯುತ್ತ ಬರೆಯುತ್ತ ಉತ್ತರ ಹುಡುಕಬೇಕಾ ಗಿದೆ”.
ಕವಿತೆ ಎಂದರೇನು ಎಂಬುದಕ್ಕೆ ಕವಿಗಳು ಕಾಲ ಕಾಲಕ್ಕೆ ಕೊಟ್ಟ ಉತ್ತರಗಳೇ ಅವರ ಕಾವ್ಯದ ವಿಕಸನದ ಮೀಟುಗೋಲುಗಳಾದಂತೆ ತೋರು ತ್ತದೆ ಹಾಗೆಯೇ ಜೀವನಾನುಭವವು ವಿಸ್ತಾರ ವಾದಂತೆ ಹೊಸ ಹೊಸ ಅನುಭಾವದ ಹೊಳಹು ಗಳು ಕವಿತೆ ಎಂಬುದರ ವ್ಯಾಖ್ಯಾನ ದ ರೂಪಗ ಳಾಗಿ ಹೊಸ ಆಯಾಮಗಳಲ್ಲಿ ತೋರಲ್ಪಡುತ್ತವೆ.

ಮುಂದೆ ತಮ್ಮ “ದೀಪದ ಮಲ್ಲಿ” ಕವನ ಸಂಕಲ ನದ “ಕವಿ ಮತ್ತು ಕಾವ್ಯ” ಕವನದಲ್ಲಿ ಕವಿತೆಯ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ಹೀಗೆ ಸೂಚಿ ಸುತ್ತಾ ಹೋಗುತ್ತಾರೆ.
ಬದುಕಿನ ಅಲಕ್ಷ್ಮೀಯನು ಕಾವ್ಯದಲಿ ಎಳೆತಂದು
ತೊಡೆದು ತೊಲಗಿಸಲೊಬ್ಬ ಕಬ್ಬಿಗನೆ ಬೇಕು ಸುಖಶಾಂತಿ ಲಕ್ಷ್ಮಿಯನು ಕಾವ್ಯದಲಿ ಕರೆತಂದು
ಹಾಡಿ ಹಾಡಿಸಲೊಬ್ಬ ಕಬ್ಬಿಗನೆ ಬೇಕು.
ಬದುಕಿಗೆ ಕವಿ ಏಕೆ ಬೇಕು ಎನ್ನುವುದಕ್ಕೆ ಸ್ಪಷ್ಟ ಉತ್ತರ. ಬದುಕೆಂದರೆ ಚಿಂತೆ ಕಷ್ಟ ನಷ್ಟ ನೋವು ಗಳು ಇದ್ದೇ ಇದ್ದದ್ದೇ. ಅದು ದಾರಿದ್ರ್ಯ ದ ಅಲಕ್ಷ್ಮೀ ಅಥವಾ ಜೇಷ್ಠಾ ಲಕ್ಷ್ಮೀಯ ಪ್ರತಿರೂಪ. ಜೀವನದಲ್ಲಿ ಅದು ಇದ್ದದ್ದೇ ಕಾವ್ಯದಲ್ಲೂ ಬೇಕಾ? ಎನ್ನುವುದಕ್ಕೆ ಹೀಗೆ ಹೇಳುತ್ತಾರೆ ಅದನ್ನು ಕಾವ್ಯ ದಲ್ಲಿ ಕರೆತಂದು ಕಾವ್ಯದಿಂದ ಹೊಡೆದೋ ಡಿಸಿದರೆ ಪ್ರತಿಮಾ ತ್ಮಕವಾಗಿ ಜೀವನದಿಂದಲೂ ಕಷ್ಟನಷ್ಟಗಳು ತೊಲಗಬಹುದು. ಹಾಗೆಯೇ ಶಾಂತಿ ಸುಖದ ಲಕ್ಷ್ಮಿಯನ್ನು ಕಾವ್ಯದಲ್ಲಿ ಗೌರವ ದಿಂದ ಕರೆ ತಂದು ಅವಳ ಬಗ್ಗೆ ಹಾಡಿ ಹೊಗಳಿ ಅವಳಿಂದ ಹಾಡಿಸಲು ಸಹಾ ಕಬ್ಬಿಗನೇ ಬೇಕು. ಅಂದರೆ ದುಃಖ ಸಂಕಷ್ಟ ಗಳನ್ನು ನಿವಾರಿಸಲು ನಲಿವು ಸಂತಸಗಳನ್ನು ತುಂಬಿಕೊಡಲು ಕಾವ್ಯ ವೇ ಸೂಕ್ತ ಸಶಕ್ತ ಸಮರ್ಥ ಮಾಧ್ಯಮ ಎಂದು ತೋರಿಸಿದ್ದಾರೆ.

ಹಾಗಾದರೆ ಎಂಥ ಹಾಡು ಹಾಡಬೇಕು?
ಚೆಲುವು ಒಲವು ನಿಲುವು ಗೆಲುವು ಶಕ್ತಿ ಎಲ್ಲವೂ ಇರುವಂತಹ ಹಾಡು. ಆದರೆ ಅದು ತಾನಾಗಿ ಹೊರಹೊಮ್ಮಬೇಕು. ಇಂತಹುದೇ ಬೇಕು ಹೀಗೆ ಬೇಕು ಎನ್ನುವ ಜನತೆಯ ಆದೇಶ ಕ್ಕೆ ಅನುಗುಣ ವಾಗಿ ಅದು ಬರದು. ಸ್ವಾತಂತ್ರ್ಯ ಪ್ರೇಮಿಯಾದ ಕವಿ ತನ್ನ ಮನದ ಮಾತುಗಳ ನ್ನು ಗಟ್ಟಿಯಾಗಿ ಸ್ಪಷ್ಟವಾಗಿ ನಿರೂಪಿಸು ವುದು ಹೀಗೆ.
ಅದನಿದನು ಹಾಡೆಂಬ ಕಡ್ಡಾಯವೇಕೆ?
ವೇದಿಕೆಯ ಮೇಲಿನಿಂದುಪದೇಶವೇಕೆ?
ಕಬ್ಬಿಗನು ಬೆದರುವನೆ ಸ್ವಾತಂತ್ರ್ಯಪ್ರೇಮಿ? ತಾರೆಗಳನಾಳುವನು, ಸಾಲದೀ ಭೂಮಿ.
ವಿಮರ್ಶಕರು ಇದನ್ನೇ ಮಾಡು, ಅದನ್ನೇ ಹಾಡು ಎಂಬ ಕಡ್ಡಾಯ ಮಾಡಬಾರದು. ಇಂತಹ ರೀತಿ ಯ ಕವಿತೆಗಳನ್ನೇ ಬರೆಯಬೇಕು ಎಂದು ನಿರ್ದಿ ಷ್ಟಪಡಿಸಬಾರದು. ಒಂದು ವೇಳೆ ಹಾಗೆ ಮಾಡಿದ ರೂ ಕಬ್ಬಿಗನು ಹೆದರಿ ಅವರು ಹೇಳಿದಂತೆ ಕೇಳು ವುದಿಲ್ಲ. ಅವನು ಈಭೂಮಿ ಸಾಲದೆಂದು ತಾರಾ ಲೋಕವನ್ನೇ ಆಳ ಹೊರಟ ಸಾರ್ವಭೌಮ.

ಕವಿತೆ ಹೀಗಿರಬೇಕು ಎಂದು ಯಾರೂ ಹೇಳುವ ದಿಲ್ಲ.ಅದು ಕವಿಯ ಕಲ್ಪನೆಗೆ ಸ್ವೇಚ್ಛೆಗೆ ಬಿಟ್ಟಿದ್ದು ಎಂದು ಹೇಳುವ ಈಸಾಲು ಗಳು ಅರ್ಥಪೂರ್ಣ. ಕವಿಯ ಸ್ವಾಯತ್ತತೆಯನ್ನು ಸಂಪೂರ್ಣ ಸ್ವಂತಿಕೆ ಯಿಂದ ವರ್ತಿಸುವ ವ್ಯಕ್ತಿತ್ವದ ಘೋಷಣೆಯಂತೆ ಕಾಣುತ್ತದೆ.
ಸತ್ಯವೇ ಬೇಡೆಂದು ಕಲ್ಪನೆಯೇ ಬೇಕೆಂದು ಹೇಳಿಲ್ಲ ನಾವು ಹೇಳಿಲ್ಲ
ಕಬ್ಬಿಗನು ಅದುನಿದನು ಹಾಡಬೇಕೆಂದವರು ನಾವಲ್ಲ ಅಲ್ಲ ನಾವಲ್ಲ
ಹಾಗಾದರೆ ಕವಿ ಏನು ಮಾಡಬಹುದು?
ಏನೋ ದೇವರ ಸೃಷ್ಟಿ ಇರುವಷ್ಟು ಇಲ್ಲಿಹುದು;
ಇಲ್ಲದುದು ನಿನ್ನಲ್ಲಿಹುದು
ನಿನ್ನ ಮನಬಂದಂತೆ ಹಾಡಿ ಬರೆದಿಡಬಹುದು
ಕವಿಯೆ, ಅದು ನಿನ್ನ ಪಾಡು.
ಪ್ರಶಸ್ತಿ ಪುರಸ್ಕಾರ ಮನ್ನಣೆಗಳ ಬಯಕೆಯಿಲ್ಲ ದೆ ರಸಿಕನ ಎದೆಯ ಹಾಡಾಗುವ ಬಯಕೆ ಯೊಂದೇ ಕವಿಗೆ. ಹಾಗಾಗಿಯೇ ಜನಮನ ಬಯಸುವ ಕವಿತೆ ಕಟ್ಟಬಲ್ಲ ಮನಸ್ಸು ಜನತೆಗೆ ಹತ್ತಿರವಾಗು ವ ಕನಸು ಎರಡೂ ಹೊಂದಿದ್ದ ತನ್ನ ತಾತ್ವಿಕ ನಿಲುವಿನ ಸಮರ್ಥನೆಯೂ ಇಲ್ಲಿದೆ. ಹಾಗಾಗಿ ಯೇ ಈ ಕವಿ ನಮ್ಮೆಲ್ಲರ ಬದುಕಿಗೆ ಭರವಸೆಯ ಬೆಳಕು ತುಂಬಿದವರು ಚೆಲುವನ್ನು ಬಯಸುವ ವರಿಗೆ ಚೆಲುವಿನ ಕವಿತೆಯಾಗಿ ಒಲವನ್ನು ಬಲ್ಲವ ರಿಗೆ ಒಲ್ಮೆಯ ಪಾಡುಗಳಾಗಿ ಬದುಕ ಬವಣೆಯ ನಡುವಿನ ಚೆಲು-ಮೆಲು ತಂಗಾಳಿಗಳಾಗಿ ಬೀಸು ವಂತಹ ಸೊಗಸಾದ ಭಾವಗೀತೆಗಳನ್ನು ಕೊಟ್ಟ ವರು.
(ಸಶೇಷ)
✍️ಸುಜಾತಾ ರವೀಶ್
ಮೈಸೂರು
ಜಾನಪದ ವಿಚಾರಗಳ ಸಂಗಮ ಎಂಬ ಪುಸ್ತಕದ ಬಗೆಗೆ ಮೈಸೂರಿನ ಶ್ರೀಮತಿ ಸುಜಾತ ರವೀಶ್ ಅವರು ಚೆನ್ನಾಗಿ ಬರೆದಿದ್ದಾರೆ. ಈ ಪುಸ್ತಕದ ಒಳ ಹೂರಣವನ್ನು ಅಚ್ಚುಕಟ್ಟಾಗಿ ಅನಾವರಣಗೊಳಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ಅವರ ಬರವಣಿಗೆಯ ಶೈಲಿ ಅತ್ಯಂತ ಆಕರ್ಷಕವಾಗಿದೆ. ಅವರು ಒಂದು ಪುಸ್ತಕವನ್ನು ಸುಧೀರ್ಘವಾಗಿ ಅಧ್ಯಯನ ಮಾಡಿ ವಿವರವಾಗಿ ಬರೆಯುತ್ತಾರೆ. ಅವರಿಂದ ಈ ರೀತಿಯ ಉತ್ತಮ ಪುಸ್ತಕಗಳ ಪರಿಚಯ ಹೊರಬರಲಿ ಎಂದು ಹಾರೈಸುತ್ತೇನೆ.
LikeLiked by 1 person
ತುಂಬಾ ಚೆನ್ನಾಗಿದೆ ನಿಮ್ಮ ಪ್ರಯತ್ನ ಮೇಡಂ
LikeLike
ಶುಭ ಹಾರೈಕೆಗಳು ಸುಜಾತಾ ಅವರೆ. ಒಳ್ಳೆ ವಿವರಣೆ ಚೆಂದದ ಕವನಗಳಿಗೆ ಮಲ್ಲಿಗೆ ಕವಿಗೆ ಸಲ್ಲುವ ಸನ್ಮಾನ. ನಿಮ್ಮ ಪ್ರಯತ್ನ ಮುಂದುವರೆಯಲಿ. ನಿಮಗೂ ಕವಿಗೂಅಭಿನಂದನೆಗಳು
LikeLike
ತುಂಬು ಹೃದಯದ ಧನ್ಯವಾದಗಳು ಮಂಗಳ ಅವರೇ ನಿಮ್ಮ ಸವಿ ಸ್ಪಂದನೆಗೆ ಶರಣು
ಸುಜಾತಾ
LikeLike
ಒಳ್ಳೆಯ ಪ್ರಯತ್ನ ಸುಜಾತಾ. ಬಹಳ ಸುಂದರವಾದ ವಿನರಣೆ. ಕೆ ಎಸ್ ನ ಅವರ ಕವಿತೆಗಳು ಅಷ್ಟೇ ಸುಂದರವಾದದ್ದು. ಹೀಗೇ ಮುಂದುವರೆಯಲಿ ನಿಮ್ಮ ಬರವಣಿಗೆ ಯಾವಾಗಲೂ.
LikeLike
ಧನ್ಯವಾದಗಳು
LikeLike
ತುಂಬ ಸೊಗಸಾದ ವಿನ್ಯಾಸ ಮಾಡಿ ಸೂಕ್ತ ಸಮಂಜಸ ಚಿತ್ರಗಳನ್ನು ಅಳವಡಿಸಿ ಅಂಕಣವನ್ನು ರೂಪಿಸಿರುವ ಸಂಪಾದಕ ಶ್ರೀ ರವಿಶಂಕರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಮತ್ತು ವಂದನೆಗಳು .
ಸುಜಾತಾ ರವೀಶ್
LikeLike