ಮನವ ಬೆಳಗಲು ಬಂದಿದೆ ದೀಪಾವಳಿ
ಹರಡಲಿ ಎಲ್ಲೆಡೆ ಸಂತಸದ ಪ್ರಭಾವಳಿ

ತರಲಿ ಸಂತಸ ರಂಗೋಲಿಯ ಬಣ್ಣಗಳು
ಸುಟ್ಟಹಾಕಲಿ ಕಷ್ಟಗಳ ಹಣತೆಗಳು

ಹಿರಿಯರ ಭಕ್ತಿಯಲಿ ಪೂಜಿಸಿ
ಕಿರಿಯರ ಕನಸ ಪೋಣಿಸುವ ದೀಪಾವಳಿ

ಮೇಲ ಕೀಳು ಬೇಧಭಾವವ ಸರಿಸಿ
ಸಾಮರಸ್ಯದ ಬೆಳಕ ಪಸರಿಸಲಿ

ತಮವ ಕಳೆಯಲು ಹಚ್ಚುವ ದೀವಿಗೆಯ
ಕನಸುಗಳಿಗೆ ಹಚ್ಚುವ ಭರವಸೆಯ ದೀಪವ

ಸಂಭ್ರಮ ಸ್ಫುರಿಸುವ ಹಬ್ಬದಲಿ
ಆಧುನಿಕ ನರಕಾಸುರರ ವಧೆಯಾಗಲಿ

ಮೌಢ್ಯವ ಅಳಿಸಲುಮೈತ್ರಿ ದೀಪ ಉರಿಯಲಿ
ಜ್ಞಾನದ ಬೆಳಕು ಮನಮನೆಯ ಬೆಳಗಲಿ

ನಮ್ಮ ಸಂಸ್ಕೃತಿಯು ಎತ್ತರಕ್ಕೆ ಬೆಳೆಯಲಿ
ನಮ್ಮೆಲ್ಲರ ಬದುಕಲಿ ಹೊಸ ಬೆಳಕು ಮೂಡಲಿ

ದೀಪದೊಂದಿಗೆ ನೆನಪಿನ ಮೆರವಣಿಗೆ
ನೆನೆಸಿಹೆ ನಮ್ಮೆಲ್ಲ ಬದುಕ ಸವಿಘಳಿಗೆ

ಬಲಿಚಕ್ರವರ್ತಿಯು ವಾಮನನ
ಪಾತಾಳಕ್ಕೆ ತಳ್ಳಿದ ದಿನವಿದು

ಅರಿವಿನ ದೀವಿಗೆಯು ಮನದಲ್ಲಿ
ಹಚ್ಚಬೇಕೆಂಬುದ ತಿಳಿಹೇಳುವ ಪಾಠವು

ದೀಪದ ಬೆಳಕು ಸದಾ ಬೆಳಗಲಿ ಜ್ಞಾನದಿ ಅಂತರಂಗವ ತೋರಲಿ

✍️ನಂದಿನಿ ರಾಜಶೇಖರ್ 
ಹಾಸನ