ನಿನ್ನ ಹೃದಯಕೂ ಇರಲಿ ಸಖಿ
ಸದಾ ಬೆಳಕಿನ ಪಾಲು!

ಬದುಕು-ಪಯಣದ ಪಥಕೆ
ಇರಲಿ ಸಂತಸದ ಬೆಳಕು
ನನ್ನೆದೆಯ ಕದ ನೂಕಿ ಬಂದೆ
ಹಿಡಿ ಪ್ರೇಮ ನೀನ್ಹೀಗೆ ಪಿಡಿದು!

ಚಣ-ಚಣದ ಮಧುರ ಕಣಕೆ
ನಿನ್ನೊಲುಮೆ ಹಣತೆ ಬೆಳಕು
ಬದುಕಿರುವ ನನ್ನ ಅಸ್ಮಿತೆಗೆ
ಸ್ಮಿತೆ ನಿನ್ನ ಪ್ರೀತಿ ಹೊಳಪು!

ಬಿಂದು ಭಾವದ ಈ ಭುವಿಗೆ
ಬಾನ ಭಾಷೆಯ ಬೆಳ್ಳಿ-ಬೆಳಗು
ಮಿಳಿದು ಮಿನುಗಲೀಗ ನಮಗೆ
ಬೇಕು ಬೆಳಗಿನ ದಿವ್ಯ ಸಾಲು!   

  

 ✍️ವೈಭವ ಪೂಜಾರ
ಹುಬ್ಬಳ್ಳಿ