ದೀಪಾವಳಿ ಹಬ್ಬವು ಬಂದಿದೆ
ಸಂತಸದ ಸಡಗರವು ತಂದಿದೆ
ಬಂಧುಗಳು, ಬೀಗರು ಬಂದಾಗಿದೆ
ಸಿಹಿತಿಂಡಿಯ ಔತಣವಾ ನೀಡಿದೆ..

ತೋರಣದ ಸಾಲುಗಳು ಶೃಂಗರಿಸಿದೆ
ದೀಪಾದ ಬೆಳಕು ಮನೆಮನ ತುಂಬಿದೆ
ಮಮತೆಯ ಪ್ರೀತಿಯೂ ಅರೆಯುತ್ತಿದೆ
ಜಗತ್ತಿನ ನಗುವೆಲ್ಲ ನಮ್ಮನೆಯಲ್ಲಿದೆ..

ಆಕಾಶದಲಿ ಬಾಣಗಳು ರಂಗೇರಿದೆ
ಮನದಲ್ಲಿ ಮಂದಹಾಸ ಮೂಡಿದೆ
ಮಕ್ಕಳ ಸಂಭ್ರಮ ಮುಗಿಲು ಮುಟ್ಟಿದೆ
ಹಿರಿಯರ ಕಣ್ಣಲಿ ಸಂತಸ ಜಿನುಗಿದೆ..

ಜಾತ್ರೆಗೆ ತೆರಳುವ ಕುತೂಹಲವಿದೆ
ರಂಗುರಂಗಿನ ತೊಟ್ಟಿಲು ನೆವರೆಳಿಸಿದೆ
ಪೀ ಪೀ ಶಬ್ದಗಳು ತಲೆ ಗುಂಗೆರಿಸಿದೆ
ಪಳಾರದ ಖರೀದಿಯೂ ಜೋರಾಗಿದೆ.

✍️ಚಂದ್ರಶೇಖರ ಮದ್ಲಾಪೂರ
ರಾಯಚೂರ