ಹೃದಯದ ಹಣತೆಯಲ್ಲಿ
ಭಾವದೀಪ ಬೆಳಗಲಿ
ಬದುಕಿನ ಬಾಂದಳದಲ್ಲಿ
ಜ್ಞಾನಜ್ಯೋತಿ ಬೆಳಗಲಿ
ಧ್ಯೇಯದ ದೀವಿಗೆಯಲ್ಲಿ
ಜಯದೀಪ ಬೆಳಗಲಿ
ಪರರನ್ನು ಕಾಣುವಲ್ಲಿ
ಪ್ರೀತಿಯ ನಂದಾದೀಪ ಬೆಳಗಲಿ
ಮನೆ-ಮನದ ಆಲಯದಿ
ಭಾರತವು ಬೆಳಗಲಿ
ಜಗದ ಜಂಗುಳಿಯಲ್ಲಿ
ಐಕ್ಯತೆಯ ದೀಪ ಬೆಳಗಲಿ
ಆಲೋಚನೆಯ ಆವರ್ತದಲ್ಲಿ
ನನ್ನೊಳಗೆ ನೀ ದೀಪವಾಗು ಗುರುವೇ

ಸಿಹಿಮೊಗೆ
(ವಿದೂಷಿ ನಂದಿನಿ ನಾರಾಯಣ್)
ಫ್ರ್ಯಾಂಕ್ ಫರ್ಟ್, ಜರ್ಮನಿ