ಕತ್ತಲೆಯ ಕಳೆಯಲು ಬಂದಿಹುದು
ದೀಪಾವಳಿ, ಮನೆಗಳ, ಮನಗಳ
ಬೆಸೆದು ಬೆಳಗುವ ದೀಪಾವಳಿ..
ಕಗ್ಗತ್ತಲೆಯ ಕಂಡರೆ ಭಯ ಪಡುವ
ಮನುಷ್ಯನ ಮನಸ್ಸಿನ ಭಯವ
ಕಳೆವ ದೀಪವೇ…
ಎಲ್ಲರ ಮನೆಗಳ ನೀ ಬೆಳಗುವೆ…
ಅಚ್ಚುಗಳನೊತ್ತಿ ವಿಭಿನ್ನ ರೀತಿಯ
ದೀಪಗಳು ಒಂದಕಿಂತ ಒಂದು
ನಾ ಮುಂದು, ತಾ ಮುಂದು ಎನ್ನುತ
ನೋಡುಗರ ಕಣ್ ಮನ ಸೆಳೆಯುವ
ಶಕ್ತಿ ದೀಪಗಳಲ್ಲಿ ಅಡಗಿದೆ…
ಸ್ವಾಭಿಮಾನದ ಬದುಕಿಗೆ ಸಾಕ್ಷಿಯಾದ
ದೀಪಗಳು….
ಪುಟ್ಟ ಹೃದಯಕೆ ಹುರುಪು ನೀಡುವ
ದೀಪಗಳು, ಜ್ಯೋತಿ ಸ್ವರೂಪಗಳು.
ಚಿಕ್ಕ ಚಿಕ್ಕ ವಸ್ತುಗಳಲಿ ಸಂತಸವ
ಹೊತ್ತು ತರುವ ದೀಪಕೆ ಹತ್ತಿಯಿಂದಾದ
ಬತ್ತಿ,ಎಣ್ಣೆ, ಒಂದು ಬೆಂಕಿ ಕಡ್ಡಿ ಸಾಕು.
ಒಂದು ದೀಪದಿಂದ ಲಕ್ಷ ದೀಪಗಳ
ಬೆಳಗುವ ಅತ್ಯದ್ಭುತ ಶಕ್ತಿ ಈ
ದೀಪಗಳಿಗಿದೆ….!!!
ದೀಪ ಮಾರುವ ನಿಮ್ಮ ಮನೆಯ
ಜೊತೆಗೆ, ನಿಮ್ಮ ಮನಗಳೂ ಬೆಳಗಲಿ
ಬಂದ ಕಷ್ಟಗಳು ಬೆಳಕಿನಲಿ ಕರಗಲಿ.
ಸರ್ವರ ಒಳಿತಿಗಾಗಿ ಪ್ರಾರ್ಥಿಸೋಣ
ಸಾಧ್ಯವಾದಷ್ಟು ನೆರವಾಗೋಣ…!!
ಸಾಲು ಸಾಲು ದೀಪಗಳು ಬೆಳಗಲಿ..!!

✍️ಕಲ್ಪನಾ ಎಸ್ ಪಾಟೀಲ್
ಬಾದಾಮಿ