ಬಂದೇ ಬಂತು ಬೆಳಕಿನ ಹಬ್ಬ ದೀಪಾವಳಿ
ಎಲ್ಲೆಲ್ಲೂ ಬೆಳಗೊ ದೀಪಗಳ ಚಿತ್ರಾವಳಿ
ಮನೆಯಂಗಳದಿ ಬಣ್ಣ ಬಣ್ಣದ ರಂಗೋಲಿ ಚುಕ್ಕಿˌ
ಭುವಿಯ ದೀಪಗಳ ಬೆಳಕಿಗೆ ಬೆರಗು ಮುಗಿಲ ಚುಕ್ಕಿˌ
ಹೆಂಗಳೆಯರಿಗೆ ನೀರು ತುಂಬುವ ಹಬ್ಬವಿದು
ಮನೆಮಂದಿಗೆಲ್ಲ ನವೋಲ್ಲಾಸದ ಜಳಕವಿದು
ನರಕಾಸುರನ ವಧೆಯಾದುದೆ ನರಕಚತುರ್ದಶಿಯು
ರಕ್ಕಸನ ಉಪಟಳದಿಂದ ಭುವಿಗೆ ಬಿಡುಗಡೆಯು
ಧನಲಕ್ಷ್ಮಿ ಬರುವಳು ಮನೆಮನೆಗೆ ಸಂತಸ ಹರಿಸುತಾˌˌˌˌ
ಇರಲಿ ಧನಕನಕ ನಿಮಗೆಂದು ಹರಸುತ
ಬಲಿಚಕ್ರವರ್ತಿಯ ಅಂತ್ಯವದು ಬಲಿಪಾಡ್ಯಮಿಯಂದು
ದೀಪಗಳ ಬೆಳಗಿ ವರ್ಷಕ್ಕೊಮ್ಮೆ ಬಲಿಯ ಆಮಂತ್ರಿಸುವೆವಂದು
ಪಟಾಕಿಯ ಬದಲು ಮಣ್ಣಿನ ಹಣತೆಗಳು ಬೆಳಗೋಣ
ಪರಿಸರ ಕಾಳಜಿಯ ಇಂದಿನ ಮಕ್ಕಳಲ್ಲಿ ಬೆಳೆಸೋಣ
ದೀಪದಿಂದ ದೀಪವ ಬೆಳಗಬೇಕು ಮಾನವ
ಮನಸಿನಿಂದ ಮನಸನು ಬೆಸೆಯಬೇಕು ಎಲ್ಲವ
ಸ್ವಚ್ಛ ಶುಭ್ರ ಪರಿಸರವಿರಲಿ ಮುಂದಿನ ಪೀಳಿಗೆಗೂ
ಪುಟ್ಟ ಹಣತೆಯೊಂದು ಸಮವಿಹುದು ಜ್ಞಾನಜ್ಯೋತಿಗೂ
ದೀಪಗಳ ಹಬ್ಬ ತರಲಿ ಸಂತಸ ಎಲ್ಲರಿಗೂ

✍️ಮಧುಮಾಲತಿ ರುದ್ರೇಶ್
ಬೇಲೂರ ಜಿ: ಹಾಸನ