ಎದೆಯಾಳದೊಳು ಎದುರಿಸಲಾಗದ ಅವ್ಯಕ್ತ
ತಮಂದವು ಬಟ್ಟಬಯಲಾಗಲಿ ಬೆಳಕಾಗಲಿ
ಬೆಳಗಲಿ ಸಂಜ್ಯೋತಿಯು ಮತ್ತೆ ಪ್ರೀತಿಯು
ಬಾ ಬೆಳಕೆ ಬೆಳಗಿಸೆಮ್ಮಯ ಮನದ ಮನೆಯ
ವಿಕಾರತೆಯ ಇಲ್ಲವಾಗಿಸಿ ಸಹಜತೆ ಆಲಂಗಿಸಿ
ಸ್ನೇಹ ಪ್ರೀತಿ ಸೌಹಾರ್ದತೆಯ ಸಾಕಾರವಾಗಿಸಿ
ನಗುವಿನ ದೀಪವು ದಿವ್ಯವಾಗಲಿ ಭವ್ಯವಾಗಲಿ
ಬೆಳಕಿಲ್ಲದ ನರಕಯಾತನೆ ಬೇಗ ಮುಗಿಯಲಿ
ತಾಮಸತತೆಯ ಬಲಿಕೊಟ್ಟು ಒಲವು ಹಂಚಲಿ
ಭೂರಮೆ ಬರಡಾಗದಿರಲಿ ಎಲ್ಲೆಡೆ ಹಸಿರಾಗಲಿ
ಕಾಂಚಾಣದ ಝಣಝಣವು ಕೇಕೆ ಹಾಕದಿರಲಿ
ದೀಪಾವಳಿ ಪಟಾಕಿ ಜಗದಲಿ ಜೀವಹಿಂಡದಿರಲಿ
ಎಣ್ಣೆ ಬತ್ತಿಯಿರಲಿ ಅಲ್ಲಿ ಪ್ರೀತಿಯ ದೇವನಿರಲಿ
ದ್ವೇಷವಿಲ್ಲದೇ ಕೋರ್ಟು ಕಛೇರಿ ಕದ ಮುಚ್ಚಲಿ
ದೀಪ ಹಚ್ಚಿರಿ ಬತ್ತಿಗಲ್ಲ ಜಿಡ್ಡುಮತಿಯ ಮನದಲಿ
ದೀಪದಿಂದ ದೀಪ ಬೆಳಗಿ ಪ್ರೀತಿಯು ಪ್ರಜ್ವಲಿಸಲಿ.

✍️ಶಿವಾನಂದ ನಾಗೂರ
ಧಾರವಾಡ