ಆಸೆಯ ಬುತ್ತಿಯನ್ನಿಟ್ಟುಕೊಂಡ ಕಂಗಳಲ್ಲಿ ಹುಡುಕಿದೆ ದೀಪಾವಳಿ
ದ್ವಂದ್ವಗಳ ಸಾಗರವಾದ
ಹೃದಯದೊಳಗೆ ಶೋಧಿಸಿದೆ ದೀಪಾವಳಿ
ಬಹಿರಂಗದ ವೇಷಭೂಷದಲ್ಲಿರುವಷ್ಟು
ಸಂಭ್ರಮವಿಲ್ಲ ಅಂತರಂಗದಲ್ಲಿ
ಹೊರಗೊಂದು ಒಳಗೊಂದು
ಅಭ್ಯಾಸವಾಗಿದೆ ಹರಿದಾಡಿ ಮಲಿನವಾಗಿ
ಕಳೆಯಲಿ ಇಂದಾದರೂ ಸಿಲುಕಿರುವ ಕತ್ತಲೆ
ತೆರೆಯಲೊಂದು ಅಮಲಿನ ದಾರಿ
ಮನದ ಕೊರಳನ್ನಲಂಕರಿಸಲಿ
ಪ್ರೀತಿ ಸ್ನೇಹಗಳೊಡವೆ.

✍️ಶ್ರೀ ಚಂದ್ರಶೇಖರ ಹೆಗಡೆ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು,ಬೀಳಗಿ ಜಿ:ಬಾಗಲಕೋಟ