ಸ್ರಜನಶೀಲ ರಂಗಭೂಮಿ ಸಂಘಟನೆ ಕುರಿತಾಗಿ ಕಳೆದ ಸಂಚಿಕೆಯಲ್ಲಿ ಸಂಘಟನೆ, ಕಲಾವಿದ, ಪ್ರೇಕ್ಷಕರೆಲ್ಲರ ತ್ರಿಕೋನ ಪ್ರೇಮ ದ್ವೇಷಗಳ ಬಗ್ಗೆ ಪ್ರಸ್ತಾಪಿಸಲಾಗಿತ್ತು.

ಸಮಬಾಹು ತ್ರಿಕೋನದ ಉದಾಹರಣೆ ಯಾವ ದರಲ್ಲಿ ಮೂರೂ ಆಂತರಿಕ ಕೋನ ಗಳು ಸಮ ವಾಗಿ 60 ಡಿಗ್ರಿ ಇದ್ದೂ ಅಂತವು ಗಳು ಮಾತ್ರ ಸಮಸ್ಥಿತಿ ಬಾಳಿಕೆಯ ತಟಸ್ಥತೆ ನೀಡಬಲ್ಲವು. ಆದರೆ ಇಂದು ಹಾಗೆ ಇದೆಯೇ ಅನ್ನುವ ಪ್ರಶ್ನೆ ಸಹಜ. ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರುತ್ತ ದೆ. ಅಷ್ಟೇ ಅಲ್ಲ, ಪ್ರತಿ ರಾಜ್ಯದಲ್ಲಿಯೂ ಪ್ರಾದೇಶಿ ಕವಾಗಿಯೂ ಭಿನ್ನವಾಗಿರುತ್ತವೆ. ಕರ್ನಾಟಕದ ಲ್ಲಿಯೇ ಬೆಂಗಳೂರು ಮೈಸೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಬೆಳಗಾವಿಗಳಲ್ಲಿ ಕಣ್ಣಿಗೆ ಢಾಳವಾಗಿ ಕಾಣುವಷ್ಟು ಭಿನ್ನತೆ ಇದೆ. ಹೀಗಿದ್ದರೂ ಸಹ ಕೆಲವು ಅಂಶಗಳು ಸಾಮಾನ್ಯ ವಾಗಿರುತ್ತವೆ.

ರಂಗಭೂಮಿ ಕಲಾವಿದರು

1.ಅರ್ಹತೆ, ಅನುಭವ, ಪಾಂಡಿತ್ಯ, ಕೀರ್ತಿಗಳ ಅಳತೆಗೊಲುಗಳಲ್ಲಿ ಸಮಾನತೆ ಇರುವದಿಲ್ಲ. ಹೀಗಾಗಿ ಕಲಾವಿದರು ಬಯಸುವ ಗೌರವ ಧನ ಮನ್ನಣೆಗಳಲ್ಲಿ ಸಹ ಭಿನ್ನತೆ ಸಹಜ.

2.ಹೆಚ್ಚಿನವರಿಗೆ ಅವರ ಅವರ ಭವಿಷ್ಯದ ಬಗ್ಗೆ ಖಚಿತತೆ ಇಲ್ಲ ಅದಕ್ಕೆ ಸಂಗಾತಿಯಾಗಿ ಆಗೀಗ ಸಿಗುವ ಯಶಸ್ಸುಗಳು ಹುಟ್ಟಿಸುವ ಭ್ರಮೆಗಳು ಆ ಕನಸಿನಲೋಕದಲ್ಲಿ ಇರಲು ಪ್ರೆರೇಪಿಸು ವದು.

3.ರಂಗಭೂಮಿ, ಟೆಲಿವಿಷನ್ ಸಿನಿಮಾ ಮತ್ತು ವೇದಿಕೆಯ ಯಶಸ್ಸುಗಳು ಟಿ.ಆರ್.ಪಿ ಹೆಚ್ಚಿಸುವ ಪ್ರಯತ್ನಗಳ ತಾತ್ಕಾಲಿಕತೆ, ಬದಲಾವಣೆಯ ವೇಗ, ಬೇರೆ ಬೇರೆ ತಾಳಕ್ಕೆ ಕುಣಿಯುವ ಅನಿವಾ ರ್ಯತೆಗಳು ಕ್ರಮೇಣ ಖಿನ್ನತೆಗೆ ಒತ್ತುವವು.

4.ಯಶಸ್ಸಿನ ಏಕತಾನತೆ, ವಿಫಲತೆಯ ಏಕಾಂಗೀತನ, ವೃತ್ತಿ ಸ್ಪರ್ಧೆ, ಕೆಲವು ಕಡೆ ಖಿನ್ನತೆ ಬಂದು ಚಟಗಳು ಪ್ರಬಲವಾಗುವವು.

5.ದುಡ್ಡು, ಸಂಬಂಧ ಮಾತುಗಳು (ವಚನ, ಆಶ್ವಾಸನೆ) ಇವುಗಳ ಮೌಲ್ಯವೇ ಕಡಿಮೆಯಾ ಗುವದು.

ರಂಗ ಸಂಘಟನೆ

ಸಂಘಟನೆಗಳಲ್ಲಿ ಹೆಚ್ಚಿನವು ಸರ್ಕಾರಿ ಅನು- ದಾನಗಳ ಮೇಲೆಯೇ ಅವಲಂಬಿತವಾಗಿವೆ. ಅಲ್ಲಿ ನಿರಂತರತೆ ಕಡಿಮೆ ಮತ್ತು ಕೆಲವು 30, 40, 50 ಪ್ರತೀಶತ ಮುದ್ರೆ ಹೊತ್ತಿರುವ ಕಾರಣ ಗುಣ ಮಟ್ಟವು ಹಾಗೆಯೇ.

1.ಸಂಘಟನೆಗಳಿಗೆ ದುಬಾರಿ ರಂಗಮಂದಿರ ಬಾಡಿಗೆ, ಕಲಾವಿದರು ಬಯಸುವ ಗೌರವ ಧನ, ತಯಾರಿಕಾ ವೆಚ್ಚ ರಿಹರ್ಸಲ್ ಸ್ಥಳದ‌ ಅಭಾವ, ಪತ್ರಿಕಾ ಪ್ರಚಾರ ತುಟ್ಟಿ, ಬಯಸುವ ಪಾರ್ಟಿಗಳ ವೆಚ್ಚ ಇತ್ಯಾದಿಗಳಿಂದ ನಾಟಕ ತೆಗೆದುಕೊಳ್ಳುವ ದೇ ಕಠಿಣವಾಗಿದೆ.

2.ಸಂಘಟನೆಗಳಲ್ಲಿಯೂ ಸ್ಪರ್ಧೆ ಇದ್ದು ಅದು ಕೆಲವೊಮ್ಮೆ ಭಾಷೆ, ಜಾತಿ, ಅದರ ಮೂಲಕ ಕಲಾವಿದರಲ್ಲಿ ಕೂಡಾ ಬರುತ್ತದೆ.

3.ಸಂಘಟನೆಯ ಲೆಕ್ಕ ಪತ್ರಗಳು ಪಾರದರ್ಶಿಕ ವಾಗಿರುವದಿಲ್ಲ(30, 40,50% ಗಳು ಹುದುಗಿ ಕೊಂಡಿರುತ್ತವೆ)

4.ಸಂಘಟನೆಯ ರಾಜಕೀಯ ನಿಲುವುಗಳು ಮತ್ತು ಸಂಭಂದಪಟ್ಟ ವ್ಯಕ್ತಿಗಳ ಧರ್ಮ, ಜಾತಿ ಎಲ್ಲವೂ ಸಮ್ಮಿಲಿತಗೊಳ್ಳುತ್ತವೆ.

5.ಸಂಘಟನೆ ಗಳಲ್ಲಿ ಧುರೀಣತೆ ಹೆಚ್ಚು ಬಾರಿ ಏಕವ್ಯಕ್ತಿ ಪ್ರಧಾನವಾಗಿರುತ್ತದೆ.

6. ಸಂಘಟನೆ ಕಾರ್ಯಗಳಿಗೆ ನಟ ನಟಿಯರು ಬರುವದು ಕಡಿಮೆ ಏಕೆಂದರೆ ನಾಲ್ಕು ಜನರ ಮರ್ಜಿ ಅಥವಾ ಪ್ರಾಯೋಜತ್ವ, ಹುಟ್ಟಿಸುವಲ್ಲಿ ಅವರು ನಿಜವಾದ ಅಭಿನಯ ಸಾಮರ್ಥ್ಯ ಅಡ ಗಿರುತ್ತದೆ ಅನ್ನುವ ವಿಷಯದ ಅರಿವು ಅವರಿಗೆ ಇದ್ದು ಪರೀಕ್ಷೆಗೆ ಒಳಗಾಗುವದಿಲ್ಲ.

7. ಸಂಘಟನೆ ಒಂದು ಟೀಮ್ ವರ್ಕ್ ಆಗಿದ್ದು, ಒಬ್ಬರು ಮಾಡಿದರೂ ಸಹ ಎಲ್ಲರೂ ಮಾಡಿದ್ದು ಅಂತ ಹೇಳುವದು ಕಲಾವಿದರಿಗೆ ಕಠಿಣ.

8. ಸಂಘಟನೆಯ ಕ್ರಿಯಾತ್ಮಕ ಚಟುವಟಿಕೆ ಗಳಿಗೆ ಮಹಿಳೆಯರ, ಯುವತಿಯರ ಪಾತ್ರ ಮುಖ್ಯ ಅದಕ್ಕೆ ಸರಿ ಧುರಿನತ್ವಬೇಕು.

9.ಸಂಘಟನೆ ಅನ್ನೋ ವಿಷಯವೆ ಮತ್ತೊಬ್ಬರು ಬೆಳೆಯುವದಕ್ಕೆ ಸಹಕಾರ ತತ್ವಗಳ ಮೇಲೆ ಪ್ರಯತ್ನ ಮಾಡುವದು. ಆದ್ದರಿಂದ ಅದರ ಅರ್ಥ ವ್ಯಾಪ್ತಿ ಮತ್ತು ವೈಶಾಲ್ಯ ಹೆಚ್ಚಿಗೆ ಇರಬೇಕು ಮತ್ತು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವಂತೆ ಇರಬೇಕು.

10. ಶಿಸ್ತು, ಬದ್ಧತೆ, ನಿಷ್ಠೆ, ಪ್ರಾಮಾಣಿಕತೆ ಯಾವ ದೇ ಸಂಘಟನೆ ಬಯಸುತ್ತದೆ ಎಲ್ಲಿ ಇದೆಯೋ ಅಲ್ಲಿ ಬೆಲೆಯಿರುತ್ತದೆ.

ಪ್ರೇಕ್ಷಕರು

ಪ್ರೇಕ್ಷಕ ಮಹಾಪ್ರಭು ಈ ರಂಗಭೂಮಿ ಪ್ರೇಮ ತ್ರಿಕೋನದ ಮೂರನೇ ಮೂಲೆ. ಎರಡು ಸಮ ಬಾಹುಗಳ ನಡುವೆ 60 ಡಿಗ್ರಿ ಕೋನದ ಅಂತರ ಇಟ್ಟುಕೊಂಡು ತನ್ನದೇ ಆದ ಆಶೆ, ಬಯಕೆಗಳ ನ್ನು ಕೊಟ್ಟ ದುಡ್ಡಿನಲ್ಲಿ ಎಲ್ಲವನ್ನೂ ಪೂರೈಸಿ ಕೊಳ್ಳುವ ಇಂಗಿತ ಇಟ್ಟುಕೊಂಡು ಟಿಕೇಟು ಕೊಂಡೋ ಅಥವಾ ಹಾಗೆ ಗೌರವ ಪ್ರವೇಶ ಗಿಟ್ಟಿಸಿಕೊಂಡು ರಂಗ ಮಂದಿರಕ್ಕೆ ಪ್ರವೇಶಿಸಿದ ವನು. ಇವರು ಏನು ಬಯಸುತ್ತಾರೆ ಅಂತ ಪೂರ್ತಿ ತಿಳಿದುಕೊಳ್ಳುವದೇ ಕಠಿಣ. ಏಕೆಂದರೆ ಅವನಿಗೆ ತನಗೆನು ಬೇಕು, ಯಾಕೆ ನಾಟಕ ಅಥವಾ ಸಂಗೀತ, ನೃತ್ಯ ಪ್ರದರ್ಶನಕ್ಕೆ ಬಂದಿ ದ್ದೇನೆ ಅನ್ನುವದು ಗೊತ್ತಿರುತ್ತದೆ ಅಥವಾ ಇಲ್ಲ ವೋ ಅನ್ನುವದೇ ತಿಳಿದಿರುವದಿಲ್ಲ. ಕಂಪನಿ ನಾಟಕಗಳಿಗೆ ಇದು ಅನ್ವಯಿಸುವದಿಲ್ಲ, ಅಲ್ಲಿ ಶುದ್ಧ ಮನೋರಂಜನೆಯೇ ಮುಖ್ಯವಾಗಿರು‌ ತ್ತದೆ.

1. ಸೃಜನಶೀಲ ರಂಗಭೂಮಿ ಮುಖ್ಯ ಕಾರ್ಯ ಯಾವದು ಎಂದರೆ ಸದಭಿರುಚಿಯ ಪ್ರೇಕ್ಷಕರ ಸೃಷ್ಟಿ, ಅವರು ನಿರಂತರವಾಗಿ ರಂಗಮಂದಿರಕ್ಕೆ ಬರುವಂತೆ, ಮತ್ತು ಅವರ ಟೀಕೆ ಟಿಪ್ಪಣಿಗಳಿಗೆ ಮಾನ್ಯತೆ ನೀಡುತ್ತಾ ತಮ್ಮ ಪ್ರಯೋಗಶೀಲತೆ ಮುಂದುವರೆಸುವದು.

2. ಸೃಷ್ಟಿ, ಕಾಪಾಡಿಕೊಳ್ಳಲುವಿಕೆ, ಹೆಚ್ಚಿಸಿ ಕೊಳ್ಳುವಿಕೆ, ಮತ್ತು ಹೊಸ ಕಥಾವಸ್ತು, ದೃಷ್ಟಿ ಕೋನ ಪರಿಚಯ ಪ್ರೇಕ್ಷಕರಿಗೆ ಮಾಡುವದು.

3. ಬಹುಭಾಷ ಅಭಿವೃದ್ಧಿ, ಬೇರೆ ಬೇರೆ ತಂಡಗಳ ಪರಿಚಯ ಪ್ರೇಕ್ಷಕರ ಹುಟ್ಟಿಗೆ ಕಾರಣವಾಗುತ್ತದೆ.

4. ಪ್ರೇಕ್ಷಕರಲ್ಲಿ ಆರ್ಥಿಕ ಮಟ್ಟಗಳನ್ನು ವಿಶ್ಲೇಷಣೆ ಮಾಡುತ್ತಾ, ಪ್ರಾಯೋಜಕತ್ವದ ಅವಕಾಶ ಹುಡು ಕಿಕೊಳ್ಳುವದು ಅದರ ಮೂಲಕ ರಂಗಭೂಮಿ ಯ ಸುಸ್ಥಿರತೆ ಕಡೆ ಒಯ್ಯವದು ಸಂಘಟನೆಯ ಜವಾಬುದಾರಿ.

5. ಪ್ರೇಕ್ಷಕರಿಗೆ ಏನು ಬೇಕು ಅನ್ನುವದರ ಬಗೆಗೆ ಸಂಶೋಧನೆ ನಡೆಸುವದು ಅಗತ್ಯವಿದೆಯೋ ಇಲ್ಲವೋ ಪುರಾವೆಗಳ ದಾಖಲೆ ಪ್ರಾಯೋಜಕತ್ವ ಪಡೆಯಲು ಅನುಕೂಲ.

6. ಪ್ರೇಕ್ಷಕರಲ್ಲಿ ಚಿಂತನೆ, ಓದುವ ಹವ್ಯಾಸ ಗಳನ್ನ ಹುಟ್ಟಿಸುತ್ತ ಉತ್ತಮ ರಂಗಸಮಾಜ ನಿರ್ಮಿಸಲು ಪ್ರಯತ್ನಿಸುವದು.

7. ಬೀದಿ ನಾಟಕ, ಪ್ರೊಸೋನಿಯಂ ನಾಟಕ, ವಿಚಾರ ಸಂಕಿರಣ ಸಂಘಟನೆ ಮೂಲಕ ರಂಗ ಭೂಮಿ ಜೀವಂತವಾಗಿ ಇಡುವದು.

8. ಪ್ರೇಕ್ಷಕಗೆ ಏನು ಬೇಕು ಅನ್ನುವದೇ ಒಂದು ಎಟರ್ನಲ್ ಪ್ರಶ್ನೆ. ಅವನ ಬೇಕುಗಳು, ಬೇಡ ಗಳು, ಆಶೆಗಳು ಯಾವಾಗಲೂ ಬದಲಾವಣೆ ಹೊಂದುವಂತಹವು. ಅವನ ಸುತ್ತಲಿನ ಜಗತ್ತು ಬದಲಾಗುತ್ತಿದ್ದಂತೆ ಅವನವೂ ಸಹ ಬದಲಾ ಗುತ್ತವೆ.

9. ಹೊರ ಜಗತ್ತಿನ ಫ್ಯಾಷನ್, ಸಮಯ ಬದಲಾ ಗುತ್ತಿದ್ದಂತೆ ಎಲ್ಲ ಬದಲಾಗುವಿಕೆ.

10. ವಿಜ್ಞಾನ,ತಂತ್ರಜ್ಞಾನ ಸಾಧನಗಳ ಪೂರೈಕೆ, ಲಭ್ಯತೆ ಹೆಚ್ಚಾಗುವದು, ತನ್ಮೂಲಕ ಜೀವನ ಶೈಲಿ, ದೃಷ್ಟಿ ಶೈಲಿ ಸಹ ಬದಲಾಗುವದು.

ಇವೆಲ್ಲ ಸಂಕಿರ್ಣ ಸನ್ನಿವೇಶದಲ್ಲಿ ನಿಖರವಾದ ಒಂದೇ ಮಾರ್ಗ ಅಥವಾ ಹಲವು ಮಾರ್ಗ ಹುಡುಕಲು ಕಠಿಣ. ಒಂದು ಪ್ರದೇಶದಲ್ಲಿ ಸರಿ ಆದದ್ದು ಇನ್ನೊಂದರಲ್ಲಿ ಸರಿ ಆಗುತ್ತದೆ ಅಂತಾ ಹೇಳುವದು ಸಹ ಕಠಿಣವೇ. ರಂಗಭೂಮಿಗೆ ಈ ಪ್ರೇಮ ತ್ರಿಕೋನ ಹೆಚ್ಚಿನ ಮಟ್ಟಿಗೆ ಯಾವಾಗಲೂ ವಿಧ ವಿಧ ಸವಾಲುಗಳನ್ನು ಒಡ್ದುವದು ವಿಧಿ ನಿಯಮ.


(ಅಂಕಣ ಮುಕ್ತಾಯ)

✍️ಅರವಿಂದ ಕುಲಕರ್ಣಿ
ರಂಗಭೂಮಿ ಚಿಂತಕರು ಧಾರವಾಡ