ಕಲ್ಪನೆ-ಕಲಂ-ನಂದು
ಪ್ರೇರಣೆ-‘ಅವನದು’
‘ಅವನು ಕಾಣನಲ್ವೆ’
ಆಯಿತು-ನೀವಿಲ್ಲವೆ !


ಅನಿಸಿದ್ದು ಹೇಳಿಹೆ-
ಇರಬಹುದು-ಊಹೆ
ಭಾವಕ್ಕೆಲ್ಲಿ ಕನ್ನಡಿ-
ಸದ್ಭಾವನೆ ಮುನ್ನುಡಿ


ಗೆದ್ದೆನೆ ?-ಹೇಳಲಾರೆ
ಸೋತ್ರೂ ಪ್ರಯತ್ನವೆ
ಅದುವೆ ನಮದೆಲ್ಲ
ಫಲಿತಾಂಶ : ಪ್ರಯತ್ನ !!


ನೀವೊಪ್ಪಿದ್ರಿ-ಸಾಕದು
ಇನಷ್ಟು ಬರೆವೆನು
ನಿರೀಕ್ಷೆ-ನಾನರಿಯೆ
ಇದಕ್ಷರದ ಮಾಯೆ !!!


ಈಗಿವ್ಳು ನಂಬಿರ್ತಾಳೆ :
ಅಪ್ಪ ಅಮ್ಮ ಇದಾರೆ-
ನಾಳೆ ಹೊರ್ಟುಬಿಡ್ತಾರೆ
ನಂಗೆ ಹಬ್ಬ ಆಮೇಲೆ !!!


“ಬಹುತೇಕ ಒಲವೇ !
ಮದುವೆಯೇ ಏನೇ ” !!?
“ಸ್ವಲ್ಪವೇ ಒಪ್ಪಿದಾನೆ-
ಕಲ್ಯಾಣ-ಸಂಕೋಚಾನೇ” !!!


ಗ್ರಹಾಮ್ ಬೆಲ್-ಕರೆ-
ಮಾಡ್ಲಿಲ್ಲ ಹೆಂಡತಿಗೆ !!
ಛೇ-ಎಂಥ ಸೋಜಿಗಾರಿ !!!
ಆಕೆಗೆ ಕಿವುಡೂರಿ !!!!


ಕದ ತಟ್ಟಿದರೇನು !
ಇಲ್ಲ ! ನೋಡಿ ಬಂದೆನು !!
ಆಮೇಲೆ ಬಂದ್ಬಿಟ್ಟರೆ ;
ಹೀಗೆ ಕಾದೆ ವರ್ಷಗ್ಳೆ !!!


ಹೊ ! ಮೈಯಿಡೀ ಯಾತನೆ
ಏನಾತಂಕ-ಯೋಚನೆ
ಕಾರಣವೀಗ ತಿಳಿದೆ !
ಮೃದು-ದಪ್ಪ-ಹಾಸಿಗೆ !!!

✍️ಶ್ರೇಯಸ್ ಪರಿಚರಣ್