ನಮ್ಮ ನಡುವಿನ ಗೋಡೆ ಬೆಳೆಯುತ್ತಲೇ ಇರುತ್ತದೆ
ಈ ಸಂಕವೋ ಮುರಿಮುರಿದು ಬೀಳುತ್ತಲೇ ಇರುತ್ತದೆ
ಎಷ್ಟೊಂದು ಸಲ ನೆಟ್ಟಿದ್ದೇನೆ ಇಲ್ಲಿ ಸಸಿಯನ್ನು ನಾನು
ಬೇರನ್ನು ಗೆದ್ದಲು ಹಿಡಿದು ಮುಕ್ಕುತ್ತಲೇ ಇರುತ್ತದೆ
ಒಮ್ಮೆ ರಾಗದ ಮಳೆ ಮತ್ತೆ ಬೆಂಕಿಯ ಹೊಳೆ
ಯಾಕೆ ಈ ಭಿತ್ತಿ ಹೀಗೆ ಬದಲುತ್ತಲೇ ಇರುತ್ತದೆ
ಕನಸಿನಲ್ಲಿ ಎಚ್ಚರದಲ್ಲಿ ಕಾಡುತ್ತಲೇ ಇದೆ, ದನಿ
ಹುಡುಕಿ ಹೋದರೆ ಸಿಗದೆ ಓಡುತ್ತಲೇ ಇರುತ್ತದೆ
ವಿವಶತೆಯಲ್ಲಿ ತೊಳಲಿ ದಣಿದಿದ್ದಾನೆ ‘ಜಂಗಮ’
ಆ ಲೋಕದಿಂದ ನಿನ್ನ ಕಣ್ಣು ಕರೆಯುತ್ತಲೇ ಇರುತ್ತದೆ
✍️ ಡಾ.ಗೋವಿಂದ ಹೆಗಡೆ
ಹುಬ್ಬಳ್ಳಿ
ಅದ್ಭುತ ಸಾಲುಗಳು ಸರ್ 🙏🙏
LikeLike
ತುಂಬಾ ಅರ್ಥಪೂರ್ಣ ಗಝಲ್
LikeLike