ಶ್ರೀಯುತ ಎನ್.ಪ್ರಕಾಶನ ಜಿಂಗಾಡೆ ಅವರು ಕಥೆ, ಕವನ, ಕಾದಂಬರಿ, ಪ್ರಬಂಧಗಳು ಸೇರಿ ದಂತೆ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಗೈದವರು. ಈಗ ಅವರ ಮತ್ತೊಂದು ಕೃತಿ ಕನ್ನಡ ಸರಸ್ವತ ಲೋಕವನ್ನು ಸೇರಿದೆ. ನಾಡಿನ ದಿಗ್ಗಜ ಸಾಹಿತಿಗಳಾದ ಪ್ರೊ. ಹೆಚ್ಚೆಸ್ಕೆ, ಅ.ರಾ ಮಿತ್ರಾ ಮತ್ತು ಮೂರ್ತಿರಾಯರ ಪ್ರಬಂಧ ಗಳಿಂದ ಪ್ರಭಾವಿತರಾಗಿ ಇವರು “ಬಿಡಿಯಾಗಿ ಬಿದ್ದ ಭಾವಗಳು” ಎಂಬ “ಲಲಿತ ಪ್ರಬಂಧ ಗಳ ಸಂಕಲನ” ವನ್ನು ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ ಹದಿಮೂರು ಪ್ರಬಂಧಗಳಿದ್ದು, ಪ್ರತಿ ಪ್ರಬಂಧವು ವಿಶಿಷ್ಟವಾದ ಕಥಾವಸ್ತುವನ್ನು ಒಳಗೊಂಡಿದ್ದು ಓದುಗರಿಗೆ ವಿಭಿನ್ನ ಅನುಭವ ವನ್ನು ಕಟ್ಟಿಕೊಡು ತ್ತದೆ.

ಲಲಿತ ಪ್ರಬಂಧ ಎಂದೊಡನೆ ಮನದೊಳಗೆ ಒಂದು ಸಂತಸದ ಹೊನಲು ಉಕ್ಕಿ ಹರಿಯು ತ್ತದೆ. ಕಾರಣ ಲಲಿತ ಪ್ರಬಂಧಗಳು ಗದ್ಯದ ರೂಪದಲ್ಲಿ ದ್ದರೂ ಓದುಗರಿಗೆ ಕಾವ್ಯದಂತಹ ಮೃದು ಮಧುರ ಭಾವವನ್ನು, ರಸಸ್ವಾದವನ್ನು ನೀಡಿ, ಮನವನ್ನು ಉಲ್ಲಾಸದಲ್ಲಿ ತೇಲಿಸುತ್ತದೆ. ಒಂದು ವಿಷಯವನ್ನು ವಿಸ್ತರಿಸುತ್ತಾ ಹೋದ ಮಾತ್ರಕ್ಕೆ ಅದು ಲಲಿತ ಪ್ರಬಂಧವಾಗದು. ಇಲ್ಲಿ ಲೇಖಕರು ನವಿರಾದ ಹಾಸ್ಯವನ್ನು ಬೆರೆಸಿ ಘಟನೆ ಅಥವಾ ವಿಷಯಗಳನ್ನು ತನ್ನ ಅನುಭವದ ಮೂಸೆಯಿಂ ದ ರಚಿಸಬೇಕು‌. ಇಲ್ಲಿ ತುಂಬಾ ಕಲಾತ್ಮಕತೆ ಮೆರೆಯಬೇಕು ಲಲಿತ ಪ್ರಬಂಧವನ್ನು ಶಬ್ದ ಭಂಡಾರವಾಗಿಸದೆ ಭಾವ ಬಂಧುರವಾಗಿಸ ಬೇಕು‌. ಆಗ ಓದುಗರಿಗೆ ಹಿತ ಅನುಭವ ನೀಡಿ ಓದಿನ ತೃಪ್ತಿ ದೊರೆಯುತ್ತದೆ. ಆನಿಟ್ಟಿನಲ್ಲಿ ಪ್ರಕಾಶ ಜಿಂಗಾಡೆ ಯವರ ಲಲಿತ ಪ್ರಬಂಧಗಳು ತುಂಬಾ ಅಪ್ಯಾಯಮಾನವಾಗಿ ಮೂಡಿಬಂದಿ ದ್ದು ನಿಲುಗಡೆಗೆ ಜಾಗ ನೀಡದಂತೆ ನಿರಂತರ ಓದಿನ ಗುಂಗು ಮೂಡಿಸಿ ಓದಿಸಿಕೊಂಡು ಸಾಗು ತ್ತವೆ. ಅಂತ ಗುಣ ಧರ್ಮಗಳು ಇವರ ರಚನೆಯ ಲ್ಲಿ ಕಂಡು ಬರುತ್ತವೆ.

ಇವರ ಲಲಿತ ಪ್ರಬಂಧಗಳಲ್ಲಿ ಎರಡು ಮುಖಗ ಳನ್ನು ನೋಡಬಹುದು. ಕೆಲವು ಪ್ರಬಂಧಗಳು ಲೇಖಕರ ನಿತ್ಯ ಜೀವನದ ಅನುಭವಗಳ ಆಗರ ವಾದರೆ, ಮಗದಷ್ಟು ಲೇಖಕರು ಕಂಡು ಕೇಳಿದ ನೋಡಿದ ವಿಷಯಗಳನ್ನು ವೈಜ್ಞಾನಿಕ ಹಾಗೂ ನಿಖರ ಮಾಹಿತಿಯೊಂದಿಗೆ ಪ್ರಸ್ತುತ ಪಡಿಸಿದ್ದಾರೆ. ಆದರೆ ಈ ರೀತಿಯ ಸಂಶೋಧ ನಾತ್ಮಕ ವಿಚಾರ ಗಳನ್ನು ತಮ್ಮ ಪ್ರಬಂಧಗಳಲ್ಲಿ ಅಳವಡಿಸಿಕೊಂಡ ರೂ ಹಾಸ್ಯ, ವ್ಯಂಗ್ಯ, ವಿಡಂಬನೆ, ಮನೋರಂಜ ನೆ, ಸಂತಸಗಳಿಗೆ ಏನು ಕೊರತೆಯಾಗದಂತೆ ಎಚ್ಚರವಹಿಸಿದ್ದಾರೆ. ಲಲಿತ ಪ್ರಬಂಧಗಳು ಓದು‌ ಗರನ್ನು ಚಿಂತನೆ‌ ಹಚ್ಚಿ ಭಾರವಾದ ಭಾವದಿಂದ ಭಾದಿಸದಂತೆ ನೋಡಿಕೊಳ್ಳುವಲ್ಲಿ ಲೇಖಕರ ಇತರ ಸಾಹಿತ್ಯ ಕೃಷಿಯ ನುರಿತ ಅನುಭವ ಕೈ ಹಿಡಿದಿದೆ ಎನ್ನಬಹುದು.

ಬರಹ ಓದುಗನನ್ನು ಮೊದಲ ಪುಟದಿಂದ ಅಂತಿಮ ಪುಟದವರೆಗೂ ಹಿಡಿದಿಟ್ಟುಕೊಂಡು ಓದಿಸಿಕೊಳ್ಳಬೇಕಾದರೆ ನೀರಸ ಭಾವದಿಂದ ಹೊರತಾಗಿ, ಕುತೂಹಲವನ್ನು ಇಮ್ಮಡಿಗೊಳಿ ಸುತ್ತಾ, ಮುಂದಿನ ವಿಚಾರವನ್ನು ಓದುಗ ಊಹೆ ಮಾಡುತ್ತಿದ್ದಾನೆ ಎನ್ನುತ್ತಿದ್ದಂತೆಯೆ ಅವನನ್ನು ಬೇರೆಯೇ ತಿರುವು ಎದುರುಗೊಳ್ಳ ಬೇಕು‌ ಅಂತಹ ಕಲೆಗಾರಿಕೆ ಮತ್ತು ವಿಷಯ ಮಂಡನೆ ಚಾಕಚಕ್ಯತೆ ಲೇಖಕನಿಗೆ ಇರಬೇಕು. ಆ ದೃಷ್ಟಿ ಯಿಂದ ನೋಡಿದಾಗ ಬಿಡಿಯಾಗಿ ಬಿದ್ದ ಭಾವ‌ ಗಳು ಇಡಿಯಾಗಿ ಓದಿಸಿಕೊಳ್ಳುತ್ತಾ ದಾಪುಗಾಲು ಹಾಕುತ್ತಾ ಸಾಗಿವೆ.

ಇವರ ಕಥಾದ್ರವ್ಯದ ಆಯ್ಕೆ ಅರ್ಥಪೂರ್ಣ ವಾಗಿದ್ದು, ಅರ್ಧ ಯಶಸ್ಸು ತಂದು ಕೊಟ್ಟಿದೆ. ಇಲ್ಲಿ ಯಾವ ಲಲಿತ ಪ್ರಬಂಧಗಳು ಓದುಗರಿಗೆ ಹೊಸದೇನಿಸದೆ ತಮ್ಮ ನಿತ್ಯ ಬದುಕಿನ ಸಹಜವಾದ, ಸರಳವಾದ ವಿಚಾರಗಳನ್ನು ಮಂಡಿಸುತ್ತಾ ಅಯ್ಯೋ ಈ ಘಟನೆಗಳು ನಮ್ಮ ಬದುಕಿನಲ್ಲಿ ನಡೆದಿದೆಯಲ್ಲ ನಮಗೆ ಯಾಕೆ ಈ ರೀತಿಯ ಬರಹದ ಆಲೋಚನೆಗಳು ಮೂಡಲಿಲ್ಲ ಎಂದು ಆಲೋಚಿಸುತ್ತ ಕೈ ಕೈ ಹಿಸುಕಿಕೊಳ್ಳುವಂತೆ ಮಾಡುತ್ತವೆ. ಜೊತೆಗೆ ಇವರ ಪ್ರಬಂಧದ ಶೀರ್ಷಿಕೆಗಳು ನಮಗೂ ತಿಳಿದಿರುವ ವಿಷಯವಾ ಗಿದ್ದು ಇದನ್ನು ಇವರ ದೃಷ್ಟಿಕೋನದಲ್ಲಿ ಓದೋಣ ಎಂಬ ಕುತೂಹಲ ಮತ್ತು ಆಸಕ್ತಿಯನ್ನು ಕೂಡ ಉಂಟುಮಾಡು ತ್ತವೆ. ಇವು ಅಮೋಘವಾಗಿ ಮೂಡಿ ಬಂದಿದ್ದು ಇವರ ಒಳಗೊಂದು ಹಾಸ್ಯ ಪ್ರಜ್ಞೆಯ ಜಾಗೃತ ಮನಸ್ಸಿದೆ ಎಂದು ಬಹುಬೇಗ ಅರ್ಥ ಮಾಡಿ ಸುತ್ತದೆ. ಇವರ ವಿಷಯ ಪ್ರಸ್ತುತಿಯನ್ನು ನೋಡಿ‌ದಾಗ ಬಲವಂತದ ಬರಹದಂತೆ ಕಾಣದೆ ಲೇಖಕರ ಮನದಾಳದ ಭಾವಗಳು ಉಕ್ಕಿ, ಬರಹವಾಗಿ ಮೂಡಿದೆ ಎಂದೆನಿಸುತ್ತದೆ.

ಇವರು ಭೂತ ವರ್ತಮಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಸಮೀಕರಿಸಿ ಪ್ರಸಕ್ತ ವಿದ್ಯ ಮಾನಗಳ ಅಡಿಯಲ್ಲಿ ಚರ್ಚಿಸುತ್ತಾ ಸಾಗಿದ್ದಾರೆ. ಎಲ್ಲರ ಬದುಕಲ್ಲು ಹಾಸ್ಯ ಹಾಸು ಹೊಕ್ಕಗಿರುವು ದರಿಂದ ಇವರು ಹಾಸ್ಯಕ್ಕೆ ಮಹತ್ವ ನೀಡಿ ಲಲಿತ ಪ್ರಬಂಧ ಗಳನ್ನು ರಚಿಸಿರುವುದು ಶ್ಲಾಘನೀಯ ವಾಗಿದೆ. ಒಮ್ಮೆ ಇವರ ಪ್ರಬಂಧಗಳಲ್ಲಿ ಬರುವ ಪಾತ್ರಗಳು ನಾವಾಗಿದ್ದೇವೆ ಎನಿಸಿದರೆ, ಮತ್ತೊಮ್ಮೆ ಆ ಪಾತ್ರಗಳೊಂದಿಗೆ ನಾವೇ ಮುಖಾಮುಖಿಯಾ ಗುವಂತಹ ಅನುಭವವಾ ಗುತ್ತದೆ. ಪ್ರತಿ ವಿಷಯ ವನ್ನು ಚಿಕ್ಕದಾಗಿ ಚೊಕ್ಕ ವಾಗಿ ಲಾಸ್ಯ ಮಿಶ್ರಿತ ಶಬ್ದಗಳಲ್ಲಿ ಓದುಗರ ಮನ ತಟ್ಟುವಂತೆ ಹೇಳಿರುವ ಪರಿ ವಿಶಿಷ್ಟವೆನಿಸಿತು.

ನಮ್ಮೊಳಗೆ ವಿಷಯಗಳಿದ್ದರೆ ಸಾಲದು, ಅದನ್ನು ಬರಹ ರೂಪದಲ್ಲಿ ವ್ಯಕ್ತಪಡಿಸುವುದು ಬರಹಗಾ ರನಿಗೆ ದೊಡ್ಡ ಸವಾಲ್ ಇದ್ದಂತೆ. ಅದರಲ್ಲೂ ಲಲಿತ ಪ್ರಬಂಧವೆಂದಾಗ ಜವಾಬ್ದಾರಿ ಹೆಚ್ಚೇ ಎನ್ನಬಹುದು. ಇಂದಿನ ದಿನಮಾನದಲ್ಲಿ ಕೆಲಸದ ಒತ್ತಡ, ಕಾರ್ಯಭಾರ ಗಳ ನಿರ್ವಹಣೆಯಲ್ಲಿ ಸದಾ ಗಂಭೀರವಾಗಿ ಯೋಚಿಸುತ್ತಾ, ಗಹನ ವಾದ ಚಿಂತನೆಯಲ್ಲಿ ಮುಳುಗಿರುವ ಜನರನ್ನು, ಆ ಗುಂಗಿನಿಂದ ಹೊರತಂದು ಅವರನ್ನು ನಗೆ- ಗಡಲಿನಲ್ಲಿ ಮುಳುಗಿಸುವಂತಹ ಸಾಹಿತ್ಯ ರಚಿಸು ವಲ್ಲಿ ಪ್ರೌಢಿಮೆ ಮೆರೆಯಬೇಕಾಗುತ್ತದೆ. ಹಾಗೆ ನೋಡಿದಾಗ ತಿಳಿ ಹಾಸ್ಯದ ಮೂಲಕ ರಂಜನೀ ಯವಾಗಿ ವಿಷಯಗಳನ್ನು ವಿವರಿಸಿರುವ ಇವರ ಬರಹ ಹೆಚ್ಚು ಆಪ್ತವಾಗುತ್ತದೆ.

ನಮ್ಮನ್ನು ಕಥೆಯೊಳಗೆ ಮುಳುಗಿಸಿ ಮರೆಯು ವಂತೆ ಮಾಡುವ ಇವರ ಬರಹಗಳು ಕಥಾನಕ ಅಂತ್ಯ ಪ್ರವೇಶಿಸಿ ಹೊರಳುತ್ತಿದ್ದಂತೆ, ನಮ್ಮನ್ನು ವಾಸ್ತವಿಕ ಜಗತ್ತಿಗೆ ಕರೆತಂದು ದಡಕನೇ ಎಚ್ಚರಿಸಿ ನೀವಿದುದ್ದು ಆ ಕಥೆಯೊ‌ಳಗೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿ, ನಮ್ಮ ತುಟಿಯ ಮೇಲೊಂದು ಹುಸಿನಗೆ ಬಿರುದು ಜಾರುತ್ತದೆ‌. ನಮ್ಮ ಬದುಕಿನ ಅನುಭವಗಳ ಹಾರವಾದ ಸಿಹಿ ಸವಿ ನೆನಪುಗಳು ಧುತ್ತೆಂದು ಈ ಕಥೆಯೊಳಗೆ ಹೆಣೆದುಕೊಳ್ಳುತ್ತವೆ. ಇಂತಹ ಅನುಭವವನ್ನು ಓದುಗ ಬಯಸುವದು. ಲೇಖಕರ ಮನದೊಳ ಗಿನ ಭಾವಗಳು ಪೊರೆ ಗಳಂತೆ ಕಳಚುತ್ತಾ ಅಕ್ಷರ ರೂಪ ಪಡೆಯುತ್ತಾ ಮಸ್ತಕದ ತುಂಬಾ ವಿಲಾಸ ಗೈದು ಪುಸ್ತಕದ ತುಂಬಾ ವಿಜೃಂಭಿಸಿ ನವನವೀನ ಚಿತ್ರಣವನ್ನು ಕಟ್ಟಿಕೊಡುತ್ತವೆ.

ಪ್ರಕಾಶ್ ಜಿಂಗಾಡಿಯವರ ಪ್ರಬಂಧಗಳು ಗಂಭೀರತೆಗೆ ಆತುಕೊಳ್ಳದೆ, ವರದಿಯ ರೂಪದಲ್ಲಿ ಜೋತಾಡದೇ, ವಾಚ್ಯವೆಂಬ ಗೋಜಿನಿಂದ ಹೊರತಾಗಿ ಜನ್ಮ ತಾಳಿದ ಬರಹಗಳಲ್ಲಿ ವಿಷಯ ಮಂಡನೆಗೆ ಹೆಚ್ಚು ಪ್ರಾಧಾನ್ಯತೆ ನೀಡದೆ ಭೂಗತವಾಗುವಂತಹ ನಮ್ಮ ಸಂಸ್ಕೃತಿಯ ಕೆಲವಾರು ಅಂಶಗಳನ್ನು, ವಿಚಾರಗಳನ್ನು ಕಳಕಳಿಯಿಂದ ಹೆಕ್ಕಿ ತೆಗೆದು ಅವನ್ನು ಬರಹದಲ್ಲಿ ಜೀವಂತವಾಗಿ ಸಿದ್ದಾರೆ.

ಪ್ರಥಮ ಪ್ರಬಂಧ “ನಮ್ಮೂರು ಚಂದವೋ” ಇಲ್ಲಿ ಎಲ್ಲ ಊರುಗಳಲ್ಲಿ ನಡೆಯುವ ಕಿತಾಪತಿ, ಮನಸುಗಳ ನಡುವೆ ಬೆಂಕಿ ಹಚ್ಚಿ ಬಿಸಿ ಕಾಯಿಸಿ ಕೊಳ್ಳುವ ಸ್ವಾರ್ಥಿಗಳ ಲಂಪಟತನ, ಊರು ಊರುಗಳ ನಡುವಿನ ಹಗ್ಗ ಜಗ್ಗಾಟ, ಸಮಾ ರಂಭಗಳನ್ನು ಏರ್ಪಡಿಸುವಲ್ಲಿನ ಗುಂಪುಗಾರಿಕೆ, ಊರು ತೊರೆದು ಹೊಟ್ಟೆಪಾಡಿ ಗಾಗಿ ರಕ್ಷಣೆಗಾಗಿ ಸಿಟಿ ಸೇರಿದವರು ಮತ್ತೆ ಈ ಹಳ್ಳಿಯ ಜನರ ಕೈಗೆ ಸಿಕ್ಕರೆ ಜನ ಮಾಡುವ ಅಪಹಾಸ್ಯ, ಜನರು ಬಹಳ ದಿನಗಳ ನಂತರ ತಮ್ಮೂರಿಗೆ ಹೋದಾಗ ಕಾಡುವ ಅಪರಿಚಿತ ಭಾವ, ಬಾಲ್ಯದ ಸವಿ ಸಿಹಿ ನೆನಪುಗಳ ಬುತ್ತಿ, ಪ್ರಕೃತಿಯ ಒಡನಾಟ, ಗೆಳೆಯರ ದಂಡು ಇವೆಲ್ಲವನ್ನು ಒಂದು ಪ್ರಬಂಧ ದಲ್ಲಿ ಹಾಸ್ಯ ಪ್ರಜ್ಞೆಯನ್ನು ಇಟ್ಟುಕೊಂಡು ಲೀಲಾ ಜಾಲವಾಗಿ ಬರಹ ಸಾಗರದಲ್ಲಿ ಪ್ರತಿಯೊಬ್ಬರಿಗು ಅವರವರ ಊರುಗಳ ನೆನಪಿನ ಕದ ತೆರೆದು ಬಹಳ ಲೋಕದಲ್ಲಿ ವಿಹರಿಸುವಂತೆ ಮಾಡಿ ಮಂತ್ರಮುಗ್ತರನ್ನಾಗಿಸುತ್ತದೆ.

“ಹೆಲ್ಮೆಟ್ ಪುರಾಣ”ದಲ್ಲಿ ಬಳಸಿರುವ ಲಡ್ಕಾಸಿ ಬೈಕು, ಪುಟ್ಗೋಸಿ ಅಂತ ಪದಗಳು ಗ್ರಾಮ್ಯ ಸೊಗಡನ್ನು ಹೊತ್ತುತಂದರೆ, ಹೆಲ್ಮೆಟ್ ಪುರಾಣ ಮನೆಮನೆಯ ಕಥೆಯಂತೆ ಕಾಣಿಸು ತ್ತದೆ. “ಮೂರುಜನ ಹೆಲ್ಮೆಟ್ ಹಾಕಿಕೊಂಡು ಬೈಕಿನಲ್ಲಿ ಕೂತ್ಕೊಂಡು ಹೊರಟರೆ ಏನ್ ಸೀನು ಅಂತೀರಾ? ದೇವಲೋಕದ ದೇವತೆಗಳು ಕಿರೀಟ ದಾರಿಗಳಾಗಿ ಬೈಕ್ ಸವಾರಿ ಮಾಡುತ್ತಿ ದ್ದಾರೋ ಎಂಬಂತೆ ಜನರೆಲ್ಲ ನಮ್ಮನ್ನೇ ನೋಡುತ್ತಿದ್ದರೆ, ಅದರಲ್ಲೊಬ್ಬ ಫೋಟೋ ಕ್ಲಿಕ್ಕಿಸಿಕೊಂಡು ಜಾಲ ತಾಣಕ್ಕೆ ಅಪ್ಲೋಡ್ ಮಾಡಲು ಅಣಿಯಾದ” ಎನ್ನುವ ಸಾಲುಗಳು ಓದುಗರ ಮನದಲಿ ಒಂದು ದೃಶ್ಯ ಕಾವ್ಯ ರೂಪದಲ್ಲಿ ಮೂಡಿ ನಗಿಸದಿರದು. ತಲೆಗೆ ಶಿರಸ್ತ್ರಾಣ ಮುಂದೆ ದೇಹಕ್ಕೆ ಕವಚ ಧರಿಸ ಬೇಕಾಗುತ್ತದೆ ಎಂಬ ಲೇಖಕರ ನುಡಿ ಸರ್ಕಾರಿ ಯೋಜನೆಗಳು ಜನರಿಗೆ ಭಾರವಾಗುತ್ತವೆ ಎಂದು ಹೇಳಿದಂತಿದೆ. ಆಧುನಿಕತೆಗೆ ಒಗ್ಗಿಹೋದ ದಂಪತಿ ಗಳ ಪಾಡು ಕೊನೆಗೆ ಪಜೀತಿಯ ಪೀಕಲಾಟದಲ್ಲಿ ಸಿಕ್ಕಿದ್ದು ಸೊಗಸು.

“ಹುರುಳಿಯ ಪುರಾಣ” ವನ್ನು ಹುರುಳಿ ಹೋಯ್ದಂತೆ ಚಟಪಟ ಅಂತ ನಗೆ ಬಾಂಬ್ ಸಿಡಿಸುವ ಮೂಲಕ ಹುರುಳಿಕಾಳು ಸಾರಿನ ಕರಾಮತ್ತನ್ನು ಐತಿಹಾಸಿಕ ಪೌರಾಣಿಕ ಮತ್ತು ಸಮಕಾಲಿನ ಸಮಾಜದ ಬಳಕೆಯ ವೈಶಿಷ್ಟ್ಯತೆ ಗಳ ನಿದರ್ಶನಗಳ ಮೂಲಕ ತುಂಬಾ ಸೊಗಸಾಗಿ ವರ್ಣಿಸಿದ್ದಾರೆ. ಇಂತಹ ಅಮೂಲ್ಯ ಪೌಷ್ಟಿಕಾಂಶ ಗಳ ಗಣಿಯನ್ನು ಆಧುನಿಕ ಕಾಲದ ಪಿಜ್ಜಾ ಬರ್ಗರ್ ಗಳು ದಾಳಿ ಮಾಡಿ ಅಪ್ಪಟ ದೇಶಿಯ ಸೊಗಡು ಮರೆಯಾಗುತ್ತಿ ರುವ ಆತಂಕವಂತೂ ಕಾಡಿದೆ. ಈ ಹುರುಳಿ ತಯಾರಿಸುವ ವಿಧಾನ ಓದುತ್ತಿದ್ದರೆ ಬಾಯಿ ಚಪ್ಪರಿಸಿದೆ ಇರಲಾಗದು.

ನನ್ನನ್ನು ಬಹುವಾಗಿ ಕಾಡಿದ ಮತ್ತೊಂದು ಲಲಿತ ಪ್ರಬಂಧ “ಬೀಗ” “ಏಯ್ ಸುಮ್ನೆ ಬಾಯಿಗೆ ಬೀಗ ಹಾಕೊಂಡ್ ಕೂತ್ಕೋ, ಜಾಸ್ತಿ ಮಾತಾಡಿದ್ರೆ ಬೀಳುತ್ತೆ ನೋಡು ಕಜ್ಜಾಯ” ಎಂಬ ನುಡಿಗಟ್ಟಿ ನಿಂದ ಹಿಡಿದು ಬೆಲೆ ಬಾಳುವ ವಸ್ತುಗಳ ರಕ್ಷಣೆ ಗಾಗಿ ಹಾಕಿರುವ ಬೀಗ, ಮನೆ ಯಲ್ಲಿ ಬೀಗ ಹಾಕಿರುವ ಕೊಠಡಿಯ ಸುತ್ತ ಹೆಣೆದುಕೊಂಡ ಕುತೂಹಲ ಮೂಡಿಸುವ ಕಥೆ, ಅತ್ತೆ ಸೊಸೆಯರು ಬೀಗದ ಕೈ ಪಡೆಯಲು ನಡೆಸುವ ಅಧಿಕಾರದ ಜಟಾಪಟಿ, ಹೆಂಡತಿ ಯರು ತಮ್ಮ ಗಂಡಂದಿರ ಬಾಯಿಗೆ ಜಡಿಯುವ ಬೀಗದವರೆಗೂ ಸಾಗಿದ್ದು, ಲೇಖಕರ ವರ್ಣನೆ ತುಂಬ ಅದ್ಭುತವಾಗಿ ಮೂಡಿ ಬಂದಿದೆ. ಇವರ ಬಾಯಿಗಂತೂ ಬೀಗ ಜೋರಾಗಿ ಬಿದ್ದಿದೆ ಅನ್ನುವ ಅನುಭವ ಕಾಣುತ್ತದೆ. ಎಲ್ಲಕ್ಕಿಂತ ವಿಶೇಷವಾಗಿ ಇಂದಿನ ಮೊಬೈಲ್ ಳಿಗೆ ಹಾಕುವ ಬೀಗ ಖಾಸಗಿತನ ಕಾಪಾಡಿಕೊ ಳ್ಳುವ ಹೋರಾಟವೇ ಸರಿ. ಅಂಗಿಯ ಗುಂಡಿ, ಪ್ಯಾಂಟಿನ ಜಿಪ್, ರವಿಕೆಯ ಹುಕ್ಸು ಒಂದು ತರಹದ ಬೀಗಗಳೆ ಎನ್ನುವ ವಿಸ್ಮಯಕಾರಿ ಬರಹದ ಮೂಲಕ ಎಲ್ಲರನ್ನು ಹುಬ್ಬೇರಿಸುವಂತೆ ಮಾಡುತ್ತದೆ ಈ ಪ್ರಬಂಧ. ಪ್ರಸಕ್ತ ಕಾಲಮಾನಕ್ಕೆ ಹಿಡಿದ ಕನ್ನಡಿಯಾಗಿದೆ. ಬೀಗ ಎಂಬ ಪದವೊಂ ದನ್ನು ಹಿಡಿದು ಹೊರಟು ವಿಭಿನ್ನ ಜಾಡುಗಳಲ್ಲಿ ಚರ್ಚಿಸುತ್ತಾ ಎಲ್ಲರ ಗಮನ ಸೆಳೆದಿದೆ.

“ಬಸ್ಸು” ಪ್ರಬಂಧ ಬಸ್ಸು ಹತ್ತಿಳಿದ ಎಲ್ಲರ ಪ್ರತಿ ಬಿಂಬವಾಗಿ ಮೂಡಿಬಂದಿದೆ. ಡಕೋಟಾ ಬಸ್ಗೆ ಇನ್ಸ್ಪೆಕ್ಟರ್ ರಂತೆ ಅಡ್ಡ ಬಂದು ನಿಲ್ಲಿಸುವ ಹಸು ಎಮ್ಮೆಗಳ ಪುರಾಣ ರೈತರ ಬೆಳೆಗಳನ್ನು ತುಂಬುವ ವೈಖರಿ, ಕಾಲೇಜು ಕನ್ಯಾಮಣಿಗಳ ಬಸ್ ಪಯಣ, ಬಸ್ಸಿನಲ್ಲಿ ಸೀಟುಗಳಿಗೆ ನಡೆ ಯುವ ಸಾಹಸಗಾಥೆ, ಪ್ರಯಾಣಿಕರ ಊರಿನ ಉಸಾಬರಿ ಮುಂತಾದ ಘಟನೆಗಳನ್ನು ನಗೆ ಬೆರೆಸಿ ತುಂಬಾ ಸುಂದರವಾಗಿ ಕಟ್ಟಿದ್ದಾರೆ. ಇಂದಿನ ನಗರೀಕರಣ, ಆಧುನೀಕರಣ ಜೊತೆ ಜೊತೆಗೆ ‌ಬೆರೆತ ಆಡಂಬರದಿಂದಾಗಿ ಜನರಿಗೆ ಬಸ್ಸು ಹತ್ತಿಳಿದ ಅನುಭವವಿಲ್ಲದಿರುವಾಗ ಇವರ ಈ ಪ್ರಯತ್ನ ಬರಹರೂಪದಲ್ಲಾದರು ಅವರಿಗೆ ಗ್ರಾಮೀಣ ಸೊಗಡನ್ನು ಉಣಬಡಿ ಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

“ಹೂಸು ನಮ್ಮ ನಿಮ್ಮೆಲ್ಲರ ಸ್ವಯಾರ್ಜಿತ ಉತ್ಪಾದನೆಯ ಮಹಾನ್ ಪ್ರೊಡಕ್ಟ್ ಆಗಿದೆ. ನಾವೇ ಉತ್ಪಾದಿಸಿಕೊಂಡಿರುವ ಈ ಅಪಾನ ವಾಯುವನ್ನು ಈ ಪಾಟಿಯಾಗಿ ತಿರಸ್ಕರಿಸಿ ಮಹಾನ್ ಸಭ್ಯರಂತೆ ಸೋಗು ಹಾಕುವುದು ಎಷ್ಟು ಸರಿ” ಎಂದೇ ಪ್ರಶ್ನಿಸುವ ಮೂಲಕ ಅಪಾನವಾಯುವಿನ ಅಪರಾವತಾರಗಳನ್ನು ಚಿತ್ರಿಸಿದ್ದಾರೆ. ಮಡಿವಂತಿಕೆ ಜನರಿಂದ ಹಿಡಿದು ಊಸು ಬಿಡುವ ಸ್ಪರ್ಧೆಗಳ ಆಯೋಜನೆಯ ವರೆಗೂ ಚರ್ಚಿಸಿ ವೈವಿಧ್ಯಮಯ ಕಲಾತ್ಮಕ ಶಬ್ದ ಗಳನ್ನು ಸಂಗೀತದ ಸ್ವರಗಳಿಗೆ ಹೋಲಿಸಿ ವರ್ಣಿ ಸಿದ್ದಾರೆ. ಈಗಂತೂ ಪರ್ಫ್ಯೂಮ್ ಗಳು ಬಂದು ನಮ್ಮ ಮೂಗನ್ನು ರಕ್ಷಿಸುತ್ತವೆ ಎಂದು ನಗೆ ಚೆಲ್ಲಿ ದ್ದಾರೆ. ಆರೋಗ್ಯ ವೈರುಧ್ಯಗಳಿಂದ ಉಂಟಾಗುವ ಹೂಸಿನ ಹಿಂದೆ ಇಷ್ಟೆಲ್ಲ ಕಥನ ಗಳು ಇರುವುದು ಓದುಗರಿಗೆ ಅಚ್ಚರಿಯುಂಟು ಮಾಡುತ್ತದೆ.

“ಮೊಗಹೊತ್ತಿಗೆ” ಅವತಾರಗಳನ್ನು ವಿಭಿನ್ನ ಆಯಾಮಗಳಲ್ಲಿ ವಿವರಿಸುತ್ತಾ ಈ ಮಾಯಾ ಲೋಕದಲ್ಲಿ ಎಲ್ಲರೂ ಮಾಯೆಗೆ ಸಿಲುಕಿ ಹೊರ ಬರಲಾರದೆ ಹೇಗೆಲ್ಲ ಪರಿತಪಿಸುತ್ತೇವೆ ಎಂದು ವಿವರಿಸಿದ್ದಾರೆ. ಇಂದಿನ ಜನರ ಬಹು ದೊಡ್ಡ ಅಗತ್ಯವಾದ ಜಾಲತಾಣಗಳ ಸಾಧಕ ಬಾಧಕ ಗಳನ್ನು ಓದುಗರಿಗೆ ಕಟ್ಟಿಕೊಡುವ ಪ್ರಯತ್ನ ಶ್ಲಾಘನೀಯ. ಮುಖಪುಸ್ತಕದಲ್ಲಿ ಪೋಸ್ಟ್ ಹರಿಬಿಟ್ಟು ಅದಕ್ಕೆ ಬರುವ ಲೈಕ್ ಕಮೆಂಟ್ ಗಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತು ಅವುಗಳಿಗೆ ಉತ್ತರಿಸುವ ಕಾಯಕ ದಲ್ಲಿ ಇಡೀ ದಿನ ವ್ಯಯಿಸುವ ವ್ಯಾಮೋಹಿ ಜನತೆಗೆ ಸಮಯ ಹಾಗೂ ಜವಾಬ್ದಾರಿಗಳ ಮೂಲಕ ಯಾವುದು ಕೂಡ ಅತಿರೇಕಕ್ಕೆ ಹೋಗದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂಡಿಬಂದ ಇವರ ಬರಹ ಅರ್ಥಪೂರ್ಣ ವಾಗಿದೆ. ಜೊತೆಗೆ ಹೇಗೆಲ್ಲಾ ಸಾಮಾಜಿಕ ಜಾಲತಾಣಗಳು ಇಂದು ಮನುಜನ ಜೀವನದ ಅವಿಭಾಜ್ಯ ಅಂಗವಾಗಿವೆ ಎಂಬುದನ್ನು ಸೊಗ ಸಾದ ನಿದರ್ಶನಗಳ ಮೂಲಕ ವಿಸ್ತರಿಸಿ‌ದ್ದಾರೆ. ಒಮ್ಮೆ ಓದಿ ಇದು ನಿಮ್ಮ ಅನುಭವವೇ ಆಗಿರ ಬಹುದು.

“ದೆವ್ವ” ಭೂತಗಳ ಬಗ್ಗೆ ಜನಸಾಮಾನ್ಯರು ಹೇಳುವ ರಂಜನಿಯ ಹಾಗೂ ಭಯಾನಕ ಕಥಾನಕಗಳನ್ನು ತೆರೆದಿಡುತ್ತಾ, ಅವುಗಳ ಇರುವಿಕೆ ಬಗ್ಗೆ ಜನರ ನಂಬಿಕೆಗಳನ್ನು ಉದಾಹ ರಣೆ ಸಹಿತ ಕಳಚುತ್ತಾ, ಮನಸಿನ ಭೀತಿಯೇ ನಿಜವಾದ ಭೂತ ಎಂಬ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಯಲ್ಲಿ ಪ್ರಬಂಧ ಮುಗಿಸಿದ್ದು ಇವರ ಸಾಮಾಜಿಕ ಜವಾಬ್ದಾರಿಯ ಪ್ರತೀಕ‌ವಾ‌ ಗಿದೆ. ಇಂತಹ ಬರಹಗಳು ಮೌಢ್ಯದಿಂದ ಜನರ‌ ನ್ನು ಹೊರತರುವಲ್ಲಿ ಯಶಸ್ಸು ಸಾಧಿಸಬೇಕು.

“ಹೇಳೋದು ಪುರಾಣ ತಿನ್ನೋದು ಬದನೆ ಕಾಯಿ” ಎಂಬ ಗಾದೆ ಮಾತನ್ನು ಪ್ರಸ್ತಾಪಿಸುತ್ತಾ ಬದನೆ ಕಾಯಿ ನಮ್ಮ ಆರೋಗ್ಯಕ್ಕೆ ಬಹಳ ಉಪಯು ಕ್ತವಾದರೂ ಅದರ ಮೇಲೆ ವೃಥಾ ಆರೋಪಿ ಸುವ ಪ್ರಸಂಗಗಳನ್ನು ಸೊಗಸಾಗಿ ವಿವರಿಸುತ್ತಾ ಬದನೆಕಾಯಿಯ ಹಿಂದಿರುವ ಕಥೆಯನ್ನು “ಬದನೆಕಾಯಿ ಪುರಾಣ” ದಲ್ಲಿ ತುಂಬಾ ನವಿರಾಗಿ ಬಿಡಿಸಿಟ್ಟಿದ್ದಾರೆ. ಬದನೆ ಕಾಯಿಯ ಹಿಂದೆ ಇಷ್ಟೆಲ್ಲ ವೈಶಿಷ್ಟ್ಯವಾದಂತಹ ವಿಸ್ಮಯ‌ ಗಳಿವೆ ಎಂದು ತಿಳಿದಿದ್ದು ಆಶ್ಚರ್ಯ ಕರವಾಗಿತ್ತು. ಬದನೆ ಅದ್ಭುತ ಪೌಷ್ಟಿಕ ಆಹಾರ ವಾದರೂ ತಿನ್ನಲು ಹಿಂದೇಟು ಹಾಕುವ ಜನರಿಗೆ ಈಪ್ರಬಂಧ ಸ್ವಲ್ಪವಾದರೂ ಅರಿವು ಮೂಡಿಸಲಿ.

“ಭಾವನವರ ‌ಭಾವಲಾಪ” ಪ್ರಬಂಧದಲ್ಲಿ ಜನಪದ ನುಡಿಯ ಜಾಡು ಹಿಡಿದು ಎಳೆದ ಭಾವನವರ ಭಾವಾಲಾಪ ನಿಜಕ್ಕೂ ಅದ್ಭುತ‌ ವಾಗಿದೆ.

ದೇವರ ಕುರಿತು ಪ್ರಬಂಧದಲ್ಲಿ ಜಗತ್ತಿನ ಎಲ್ಲ ಧರ್ಮಗಳು ಮಾನವೀಯ ಮೌಲ್ಯಗಳನ್ನೇ ಬೋಧಿಸುತ್ತವೆ. ಹಾಗಿದ್ದರೂ ಅವುಗಳಿಗೆ ಚ್ಯುತಿ ಬರುವಂತೆ ವೈಷಮ್ಯ ಬೆಳೆಸಿಕೊಂಡು, ಅಮಾನ ವೀಯವಾಗಿ ನಡೆದುಕೊಳ್ಳುವವರ ಬಗೆಗೆ ಲೇಖಕರ ಅಸಮಾಧಾನವನ್ನು ಕಾಣಬಹುದು. ಎಲ್ಲಿ ನೋಡಿದರೂ ಜಾತಿ ಧರ್ಮಗಳ ಕಲಹಗಳು ಭುಗಿಲೆದ್ದು ಸಮಾಜ ದಲ್ಲಿ ಅಶಾಂತಿ ಉಂಟು ಮಾಡುವ ಇಂತಹ ದಿನಮಾನದಲ್ಲಿ ಈ ಕುರಿತು ಲೇಖಕರು ಜನರನ್ನು ಚಿಂತನೆಗಚ್ಚಿರುವುದು ತುಂಬಾ ಅಗತ್ಯವಾಗಿದೆ.

“ಹದಿನಾರರ ವಯಸ್ಸು ಅದು ಹುಚ್ಚುಕ್ಕೋಡಿ ಮನಸು” ಎಂಬ ಕವಿ ವಾಣಿ ಸಾಲದೆ ಹದಿಹರೆ ಯದವರ ಕನಸುಗಳನ್ನು, ಮನಸ್ಥಿತಿಯನ್ನು ಅರಿಯಲು. ಸಾಗರದಂತೆ ಉಕ್ಕಿ ಹರಿವ ಹದಿ ಹರೆಯದವರ ಕನಸುಗಳನ್ನು ಸಕಾರಾತ್ಮಕ ವಾಗಿ ಪರಿವರ್ತಿಸಿ ಧನಾತ್ಮಕ ಕಾರ್ಯಗಳಲ್ಲಿ ಮಗ್ನರಾ‌ ಗಿಸುವ ಮೂಲಕ ಅದರಿಂದಾಗುವ ಅನಾಹುತ ಗಳಿಗೆ ಗೋಡೆ ಕಟ್ಟಬೇಕೆಂದು ತುಸು ಗಂಭೀರ ವಾಗಿಯೇ ಲೇಖಕರು ಚರ್ಚಿಸಿ ದ್ದಾರೆ. ಹೌದು, ವಯಸ್ಸಿನ ಹುಮ್ಮಸ್ಸಿನಲ್ಲಿ ಆತುರಗೇಡಿ ನಿರ್ಧಾರಗಳನ್ನು ತೆಗೆದುಕೊಂಡು ಎಡವಟ್ಟು ಮಾಡಿ ಕೊಳ್ಳುವ ಯುವ ಜನಾಂಗ ಕ್ಕೆ ಇಂತಹ ಅರಿವಿನ ಬರಹಗಳು ಬೇಕೆ ಬೇಕು.

ಸಂದರ್ಭೋಚಿತವಾಗಿ ಲೇಖಕರು ಗಾದೆ ನುಡಿ ಗಟ್ಟುಗಳು ಲೋಕೋಕ್ತಿಗಳು ಜನಪದ ವಾಣಿ ಗಳು ವೈಜ್ಞಾನಿಕ ವಿಚಾರಗಳನ್ನು ಬಳಸುವ ಮೂಲಕ ವಿಷಯಕ್ಕೆ ಗಟ್ಟಿತನ ತುಂಬಿದ್ದಾರೆ. ಒಟ್ಟಾರೆ ಹಾಸ್ಯದ ತಳಕು, ತಮಾಷೆಯ ಮಾತು ಗಳ ಮೂಲಕ ನಮ್ಮ ಜೀವನದ ಅವಿಭಾಜ್ಯ ಅಂಗಗಳೆನಿಸಿದ ವಿಷಯಗಳ ಸುತ್ತಲು ಹೆಣೆದ ಲಲಿತ ಪ್ರಬಂಧಗಳು ತುಂಬಾ ಮನೋಜ್ಞವಾಗಿ ಮೂಡಿಬಂದಿದ್ದು ಓದುಗರಿಗೆ ಆಪ್ತವಾಗುವ ಸದಾಶಯ ನನ್ನದು.ಲೇಖಕರಿಗೆ ಅಭಿನಂದಿಸಿ ಅವರ ಸಾಹಿತ್ಯ ಪಯಣಕ್ಕೆ ಶುಭ ಕೋರುವೆ.,

✍️ಅನುಸೂಯ ಯತೀಶ್
ಮಾಗಡಿ, ಬೆಂಗಳೂರು