೨೪ ವರ್ಷಗಳಿಂದ ಕನ್ನಡ ಸಾರಸ್ವತ ಲೋಕದಲ್ಲಿ ಸಾಮರಸ್ಯ ಸಂದೇಶವುಳ್ಳ ಕಥೆ, ಕವನ, ವೈಚಾರಿಕ ಲೇಖನ ಬರಹ ಮತ್ತು ಪ್ರಗತಿಪರ ವಿಚಾರಧಾರೆ ಚಿಂತನೆ ಮೂಲಕ ಭಾವೈಕ್ಯ ಸಮಾಜ ನಿರ್ಮಾಣದಲ್ಲಿ ನಿರತರಾಗಿರುವ ‘ಸುಹೇಚ‘ ಕಾವ್ಯನಾಮದ ಶಿಕ್ಷಕ ಸಾಹಿತಿಗಳಾದ ಸುಭಾಷ್ ಹೇಮಣ್ಣಾ ಚವ್ಹಾಣ ಇವರ ಅಮೂಲಾಗ್ರ ಸಾಹಿತ್ಯ ಸೇವೆಯನ್ನು ಗುರುತಿಸಿ ‘ವಿಶ್ವ ದರ್ಶನ’ ದಿನಪತ್ರಿಕೆಯು ೨೦೨೨ ನೇ ಸಾಲಿನ ‘ಕರ್ನಾಟಕ ಸಾಹಿತ್ಯ ಭೂಷಣ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಧಾರವಾಡ ಬಾನುಲಿಯ ಯುವವಾಣಿಯಲ್ಲಿ ಕಾವ್ಯ ವಾಚನ, ಭಾಷಣ, ಗಿಳಿವಿಂಡು ಮಕ್ಕಳ ವೈವಿಧ್ಯಮಯ ಕಾರ್ಯಕ್ರಮ ಸಂಯೋಜನೆ ಮತ್ತು ನಿರೂಪಣೆ ಮಾಡಿದ್ದಾರೆ. ಕರುನಾಡಿನ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕ್ರಾಂತಿ ಧ್ವನಿ, ಜನಮಿಡಿತ, ಸಂಜೆ ಮಿತ್ರ, ಕೋಲಾರ, ಶೊಧವಾಣಿ, ಸ್ನೇಹಜೀವಿ, ಗುಬ್ಬಚ್ಚಿ ಗೂಡು, ಜೀವನ ಶಿಕ್ಷಣ ಹಲವಾರು ಪತ್ರಿಕೆಗಳಲ್ಲಿ ಅಲ್ಲದೆ ರಾಜ್ಯ ಮಟ್ಟದ ಸಂಪಾದಿತ ಕವನ ಸಂಕಲನಗ ಳಲ್ಲಿ ನೂರಾರು ಸ್ವರಚಿತ ಕವನಗಳು, ಲೇಖನ ಗಳು ಪ್ರಕಟಗೊಂಡಿವೆ. ೨೦೧೫ರಲ್ಲಿ ‘ಜಗವೆಲ್ಲ ನಗುತಿರಲಿ’ ಎಂಬ ಚೊಚ್ಚಲ ಕವನ ಸಂಕಲನ ಪ್ರಕಟಿಸಿ ವಿಮರ್ಶಕರ ಹಾಗೂ ಓದುಗರ ಅಪಾರ ಮನ್ನಣೆ ಗಳಿಸಿರುವ ಸುಹೇಚರವರ ‘ಸೌಹಾರ್ದ ಸೇತು’ ಮತ್ತು ‘ಮಧುರ ಮೈತ್ರಿ’ ಎಂಬ ಎರಡು ಕವನ ಸಂಕಲನಗಳು ಮುದ್ರಣಕ್ಕೆ ಸಿದ್ದಗೊಂಡಿವೆ.

ಗಾಯನ, ಪರಿಸರ ರಕ್ಷಣೆ, ಶಿಕ್ಷಣ, ಶರಣ ಸಂಸ್ಕೃತಿ ಯ ಪ್ರಸಾರ ವ ಸಮಾಜ ಸೇವಾ ಕಾರ್ಯದಲ್ಲಿ ಆಸಕ್ತರಾಗಿರುವ ಬಹುಮುಖ ಪ್ರತಿಭಾವಂತ ಸುಹೇಚರವರು ಗಜಲ್, ಮಕ್ಕಳ ಪದ್ಯ, ಆಧುನಿಕ ವಚನ, ಟಂಕಾ, ರುಬಾಯಿ, ಹೈಕು, ರಗಳೆ, ಷಟ್ಪದಿ ಕಾವ್ಯದ ಹಲವಾರು ಮಜಲುಗಳಲ್ಲಿ ಕೃಷಿ ಮಾಡುತ್ತಿರುವ ಇವರು ‘ಸಾಹಿತ್ಯ ಚಿಗುರು ಮಂಗಳೂರು’ ಸಂಸ್ಥೆ ಆಯೋಜಿಸಿದ್ದ ಅಂತರ್ಜಾಲಾಧಾರಿತ ರಾಜ್ಯ ಮಟ್ಟದ ಸ್ವರಚಿತ ಕವನ ಸ್ಪರ್ಧೆಯಲ್ಲಿ ಸತತವಾಗಿ ಮೂರುಸಲ ವಿಜೇತ ವೀರಾಗ್ರಣಿ ಕವಿಗಳಾಗಿ ‘ಚಿನ್ನದ ನಾಣ್ಯ’ ಹಾಗೂ ‘ಬೆಳ್ಳಿ ಪದಕ’ ಗಳನ್ನು ಕೊರಳಿ ಗೇರಿಸಿಕೊಂಡು ‘ಸ್ವರ್ಣ ರಜತ ಕವಿ’ ಎಂದು ಆಪ್ತ ವಲಯದಲ್ಲಿ ಕರೆಸಿಕೊಂಡಿದ್ದಾರೆ.

ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಕುದುರಿಸುವುದಕ್ಕಾಗಿ ಸಾಹಿತ್ಯ ರಚನಾ ಕಮ್ಮಟ ಆಯೋಜನೆ, ಧಾರವಾಡ ಬಾಲವಿಕಾಸ ಅಕಾಡೆಮಿಯ ಮಕ್ಕಳ ಸಾಹಿತ್ಯ ರಚನಾ ಕಮ್ಮಟದಲ್ಲಿ ಶಿಬಿರಾರ್ಥಿ ಮತ್ತು ಮಕ್ಕಳೊಂದಿ ಗೆ ಹಾಡು-ಮಾತು-ಕಥೆ ಸಂವಾದ ಅಭಿರುಚಿ ಮೂಡಿಸುತ್ತ ಧಾರವಾಡದ ಕವಿಸಂಘ ವ ಜಿಲ್ಲಾ ತಾಲ್ಲೂಕ ಕಸಾಪ ಘಟಕಗಳೊಂದಿಗೆ ನಿರಂತರ ಕ್ರಿಯಾತ್ಮಕ ಸಂಪರ್ಕ ಕೊಂಡಿಯಾಗಿ ಕಲಘಟಗಿಯ ಬೇಗೂರಿನಲ್ಲಿ ೧೩ವರ್ಷ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ೦೩ ವರ್ಷಗ ಳಿಂದ ಹುಬ್ಬಳ್ಳಿ ಶಹರದ ಮಂಜುನಾಥ ನಗರ ಸ.ಹಿ. ಪ್ರಾ. ಶಾಲೆಯಲ್ಲಿ ಕರ್ತವ್ಯ ನಿರತರಾಗಿ ರುವ ಇವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ನಿಯೋಜನೆ ಮೇರೆಗೆ ಹಳೇ ಹುಬ್ಬಳ್ಳಿ ಯ ಸ.ಮಾ.ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ನಂ.೦೧ ರಲ್ಲಿ ನಲಿಕಲಿ ವಿದ್ಯಾರ್ಥಿಗಳಿಗೆ ‘ವಿದ್ಯಾಗಮ’ ಹಾಗೂ ‘ಕಲಿಕಾ ಚೇತರಿಕೆ’ ಉಪಕ್ರಮ ಚಟುವಟಿಕೆಗ ಳಲ್ಲಿ ಕಾರ್ಯನಿರತ‌ ರಾಗಿದ್ದಾರೆ.

ಕವಿ ಸುಹೇಚರವರ ವೈಚಾರಿಕ ಸಾಹಿತ್ಯ ಕೃಷಿ, ಪ್ರಗತಿಪರ ಶೈಕ್ಷಣಿಕ ಚಿಂತನೆ, ಪರಿಸರ ಸಂರಕ್ಷಣೆ ಜಾಗೃತಿ, ಸಮಾಜ ಅಭಿವೃದ್ಧಿ ಸೇವಾ ಕಾರ್ಯ ವನ್ನು ಪರಿಗಣಿಸಿ ‘ಕರ್ನಾಟಕ ಸಾಹಿತ್ಯ ಭೂಷಣ’ ರಾಜ್ಯ ಪ್ರಶಸ್ತಿಯನ್ನು ೨೨/೦೯/೨೦೨೨ರ ಗುರುವಾರ ಧಾರವಾಡ ದ ರಂಗಾಯಣದಲ್ಲಿ ಆಯೋಜಿಸಿದ್ದ ವಿಶ್ವ ದರ್ಶನ ಪತ್ರಿಕೆಯ ಪ್ರಥಮ ವರ್ಷದ ಸಮ್ಮೇಳ ನದಲ್ಲಿ ಗಣ್ಯಮಾನ್ಯರ ಸಮ್ಮುಖದಲ್ಲಿ ಸಮ್ಮೇಳನದ ಉದ್ಘಾಟಕರಾದ ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಅರಳಿ ನಾಗರಾಜರು, ದಿವ್ಯ ಸಾನಿಧ್ಯ ವಹಿಸಿದ್ದ ಕಾಲಜ್ಞಾನ ಬ್ರಹ್ಮ ಸದ್ಗುರು ಶರಣಬಸವ ಮಹಾಸ್ವಾಮಿಗಳು ಹಾಗೂ ಸಮ್ಮೇಳನದ ಅಧ್ಯಕ್ಷರಾಗಿದ್ದ ಹಿರಿಯ ಪತ್ರಕರ್ತ ಎಲ್.ಎಸ್.ಶಾಸ್ತ್ರಿಗಳು ಪ್ರಶಸ್ತಿ ಪ್ರದಾನಮಾಡಿ ಅಭಿನಂದಿಸಿದರು. ಶ್ರೀವೀರಯ್ಯ ಮಹಾಸ್ವಾಮಿಗಳು, ಶ್ರೀಗುರು ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಪಾವನ ನೇತೃತ್ವ ವಹಿಸಿದ್ದರು. ಸಮ್ಮೇಳನದ ಕಾರ್ಯಾಧ್ಯ ಕ್ಷರು ಹಾಗೂ ವಿಶ್ವ ದರ್ಶನ ಪತ್ರಿಕಾ ಸಂಪಾದಕ‌ ರಾದ ಡಾ.ಎಸ್.ಎಸ್. ಪಾಟೀಲ್, ಹುಬ್ಬಳ್ಳಿ ಕಿಮ್ಸ್ ನಿರ್ದೇಶಕರಾದ ರಾಮಲಿಂಗಪ್ಪಾ ಅಂಟರಾನಿ, ರಮೇಶ ಪರವಿನಾಯ್ಕರ, ಸೋಮ ನಾಥ ಮರಡೂರ, ಸುರೇಶ ಕಮ್ಮಾರ, ಡಾ.ಎ. ಡಿ. ಕೊಟ್ನಾಳ ಮುಂತಾದ ಗಣ್ಯಮಾನ್ಯರು ಹಾಜರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಮಾರು ೭೦ ಜನ ಸಾಧಕರಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಪುರಸ್ಕೃತ, ಶಿಕ್ಷಕ ಸಾಹಿತಿ ‘ಸುಹೇಚ’ ಕಾವ್ಯನಾಮದ ಸುಭಾಷ್ ಚವ್ಹಾಣರವರಿಗೆ ಹುಬ್ಬಳ್ಳಿ ಶಹರ ಹಾಗೂ ಗ್ರಾಮಿಣ ಘಟಕದ ಅಧ್ಯಕ್ಷರಾದ ಗುರುಸಿದ್ದಪ್ಪ ಬಡಗೇರ, ರಂಜಾನ ಕಿಲ್ಲೇದಾರ ಮತ್ತು ಪದಾಧಿಕಾರಿಗಳು, ಅವಳಿ ಶಾಲೆಯ ಪ್ರಧಾನ ಗುರುಗಳಾದ ಡಾ. ಹೆಚ್. ಬಿ. ಕೊರವರ, ಹೆಚ್. ಎಮ್. ಕುಂದರಗಿ ಹಾಗೂ ಶಾಲಾ ಗುರುಬಳಗದವರು ಅಭಿನಂದಿಸಿದ್ದಾರೆ.