ಬೆಚ್ಚನೆಯ ಹೊದಿಕೆಯಡಿ
ಅಡಿಗಿರುವ ಕನಸುಗಳಿಗೆ
ರೆಕ್ಕೆಮೂಡಿ..
ಹಾರುತ್ತವೆ ನೋಡಿ
ಹೃದಯದಿಂದ ಹೊರಗೆ ಓಡಿ.

ಮೂಡಿದ ಗರಿಗಳಿಗೆ
ಅರೆಗಳಿಗೆಯೂ ಶಾಂತಿ ಇಲ್ಲ
ಬೇಕಾದರೆ ನೀವೆ ಒಮ್ಮೆ
ಕೇಳಿನೋಡಿ..

ಹಗಲು ಇರುಳು ಹಾರುವ
ಕಾಯಕ,
ಪ್ರತಿ ಕನಸುಗಳಿಗೂ ಇನ್ನಷ್ಟು
ತವಕ‌.

ಆಕಾಶದಿಂದಾಚೆ ಎಲ್ಲೋ
ಇನ್ನಾವುದೋ ಬಾನು ಕಂಡ
ರೆಕ್ಕೆಗೀಗ ನೀರ ಬಣ್ಣ.

ಕಂಡದ್ದೆ ಸತ್ಯ.
ಹಾರಿದ್ದೇ ಹಾದಿ.
ಗರಿಗಳು ಉದುರದಿರಲಿ.

✍️ಸುಮಾ.ಕಂಚೀಪಾಲ್