ಗೀಯಗಾ ಗಾ ಗೀಯಗಾ ಗೀಯ ಗೀಯ ಗಾ
ಭಾರತ ದೇಶದ ಗುಜರಾತ ರಾಜ್ಯದ
ಪೋರ ಬಂದರಿನಲ್ಲಿ ಜನಿಸ್ಯಾರೋ
ಪೋರ ಬಂದರಿನಲ್ಲಿ ಜನಿಸ್ಯಾರೋ
ವಿಶ್ವದ ಮಗನಾಗಿ ಬೆಳೆದಾರೋ.(ಪ)
ತಂದೆ ಕರಮಚಂದ ತಾಯಿ ಪುತಲೀಬಾಯಿ
ಇವರ ಉದರದಿ ಜನಿಸ್ಯಾರೋ
ಇವರ ಉದರದಿ ಜನಿಸ್ಯಾರೋ
ದೇಶಕ್ಕೆ ಮಹಾತ್ಮ ಎನಿಸ್ಯಾರೋ.
ಉಪವಾಸ ಧರಣಿ ನಡಿಸ್ಯಾರೋ
ಜನಗಳ ಪ್ರೀತಿ ಗಳಿಸ್ಯಾರೋ
ಜನಗಳ ಪ್ರೀತಿ ಗಳಿಸ್ಯಾರೋ
ಆಂಗ್ಲರು ಗಡಗಡ ನಡುಗ್ಯಾರೋ.
ದೇಶದ ತುಂಬೆಲ್ಲ ಸಂಚರಿಸ್ಯಾರೋ
ಜನರಲ್ಲಿ ಜಾಗೃತಿ ಮೂಡಿಸ್ಯಾರೋ
ಜನರಲ್ಲಿ ಜಾಗೃತಿ ಮೂಡಿಸ್ಯಾರೋ
ಆಂಗ್ಲರನ್ನು ದೇಶದಿ ಓಡೋಸ್ಯಾರೋ.
ಭಾರತ ದೇಶದ ಬಡತನ ಕಂಡು
ಮರ ಮರ ಮರುಗ್ಯಾರೋ ಗಾಂಧೀಜಿ
ಮರ ಮರ ಮರುಗ್ಯಾರೋ ಗಾಂಧೀಜಿ
ತೊಟ್ಟ ಬಟ್ಟೆಯ ತೊರೆದರು ಗಾಂಧೀಜಿ.
ಚರಕವ ಹಿಡಿದು ನೂಲನು ತೆಗೆದು
ಜನರಿಗೆ ತೋರಿಸ್ಯಾರೋ ಗಾಂಧೀಜಿ
ಜನರಿಗೆ ತೋರಿಸ್ಯಾರೋ ಗಾಂಧೀಜಿ
ಜನ ಇವರನ್ನು ಕರೆದರು ಬಾಪೂಜಿ.
ಹತ್ತೊಂಬತ್ತ ನೂರ ನಲವತ್ತೇಳು
ಆಗಸ್ಟ್ ತಿಂಗಳು ಹದಿನೈದು
ಆಗಸ್ಟ್ ತಿಂಗಳು ಹದಿನೈದು
ಸ್ವಾತಂತ್ರ್ಯ ಕೊಡಿಸಿದರು ಗಾಂಧೀಜಿ.
ಹತ್ತೊಂಬತ್ತ ನೂರ ನಲವತ್ತೆಂಟು
ಜನೇವರಿ ತಿಂಗಳು ಮೂವತ್ತು
ಜನೇವರಿ ತಿಂಗಳು ಮೂವತ್ತು
ಪ್ರಾರ್ಥನೆಗೆ ಹೊರಟರು ಗಾಂಧೀಜಿ.
ಪ್ರಾರ್ಥನೆಗೆ ಹೊರಟರು ಗಾಂಧೀಜಿ
ಗೋಡ್ಸೆ ಗುಂಡಿಗೆ ಬಲಿಯಾದರು ಗಾಂಧೀಜಿ
ಗೋಡ್ಸೆ ಗುಂಡಿಗೆ ಬಲಿಯಾದರು ಬಾಪೂಜಿ
ಹುತಾತ್ಮರಾದರು ಬಾಪೂಜಿ.
✍️ ಶ್ರೀ ಶಿವು ಎಂ ಖನ್ನೂರ
ಶಿಕ್ಷಕ ಸಾಹಿತಿಗಳು ಧಾರವಾಡ