ಹೆಡತೆಲೆ ಇತಿಹಾಸದ ಪುಟದಲ್ಲಿ ಹೊಯ್ಸಳರ ಕಾಲದಲ್ಲಿ ಪ್ರಮುಖವಾದ ಅಗ್ರಹಾರವಾಗಿತ್ತು. 1292ರಲ್ಲಿ ಹೊಯ್ಸಳ ದೊರೆ ಮೂರನೇ ವೀರಬಲ್ಲಾಳನ ಕಾಲದಲ್ಲಿ ಆಳ್ವಿಕೆ ನಡೆಸುತ್ತಿದ್ದ ಭೀಮಣ್ಣ ದಂಡ ನಾಯಕ ಇಲ್ಲಿ ದೇವಾಲ ಯ ನಿರ್ಮಿಸಿ, ದತ್ತಿ ನೀಡಿದ ಉಲ್ಲೇಖವನ್ನು ನೋಡ ಬಹುದು. ಶಾಸನಗಳಲ್ಲಿ ಈ ಗ್ರಾಮ ವನ್ನು ಎಡತಲೆ ಎಂದೇ ಬಣ್ಣಿಸಲಾಗಿದೆ.

ದೇವಾಲಯಗಳ ನಿರ್ಮಾಣದಲ್ಲಿ ಹೊಸ ಸ್ವರೂಪವನ್ನು ತಂದುಕೊಟ್ಟವರೆಂದರೆ‌ ಅದು ಹೊಯ್ಸಳರು. ಅವರ ಕಾಲದಲ್ಲಿ ಹಲವು ಕಲಾತ್ಮಕ ದೇವಾಲಯಗಳು ನಿರ್ಮಾಣವಾ ಗಿದ್ದು ಅವುಗಳಲ್ಲಿ ಮೈಸೂರು ಜಿಲ್ಲೆಯಲ್ಲೂ ಹಲವು ದೇವಾಲಯಗಳಿವೆ. ಅಂತಹ ಸುಂದರ ದೇವಾಲ ಯಗಳಲ್ಲಿ ಮೈಸೂರು ಜಿಲ್ಲೆಯ ನಂಜನಗೂಡಿನ ಹೆಡತಲೆಯ ಶ್ರೀಲಕ್ಷ್ಮೀಕಾಂತ ದೇವಾಲಯ ಪ್ರಮುಖವಾದದ್ದು.

13 ನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ಮೂಲತ: ತ್ರಿಕುಟಾಚಲ ದೇವಾಲಯ. 03 ಗರ್ಭಗುಡಿ ಗಳು, ನವರಂಗ ಹಾಗೂ ಮುಖಮಂಟಪ ಹೊಂದಿದೆ. ಪ್ರಧಾನ ಗರ್ಭಗುಡಿಯಲ್ಲಿ ಶ್ರೀಲಕ್ಷ್ಮೀ ಕಾಂತಸ್ವಾಮಿಯ ಶಿಲ್ಪವಿದ್ದು,ಉತ್ತರ ದ ಗರ್ಭ ಗುಡಿಯಲ್ಲಿ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ದಕ್ಷಿಣದ ಗರ್ಭಗುಡಿಯಲ್ಲಿ ವೇಣುಗೋಪಾಲನ ಶಿಲ್ಪವಿದೆ.

ಶ್ರೀ ಲಕ್ಷ್ಮೀಕಾಂತಸ್ವಾಮಿ ಸುಮಾರು ಐದು ಅಡಿ ಎತ್ತರವಿದ್ದು ಗದಾ, ಕಮಲ, ಚಕ್ರಾ ಹಾಗು ಶಂಖ ಧಾರಿಯಾಗಿದ್ದು ಸ್ಥಾನಿಕ ಭಂಗಿಯಲ್ಲಿದೆ. ಪ್ರಭಾ ವಳಿ ಕಲಾತ್ಮಕವಾಗಿದೆ. ಶ್ರೀಲಕ್ಷ್ಮೀನರ ಸಿಂಹನ ಶಿಲ್ಪ ಸಹ ಲಕ್ಷ್ಮೀಯನ್ನು ತೊಡೆಯ ಮೇಲೆ ಕುಳಿ ತಿರುವ ಭಂಗಿಯಲ್ಲಿದ್ದು ಇಲ್ಲೂ ಸಹ ಪ್ರಭಾವಳಿ ಯ ಕೆತ್ತನೆ ನೋಡಲೇಬೇಕಾ ದದ್ದು. ವೇಣು ಗೋಪಾಲನ ಶಿಲ್ಪವು ಕೊಳಲು ನುಡಿಸುವಂತಿದ್ದು ಕಾಲು ಅಡಕತ್ತರಿ ಸ್ವರೂಪ ದಲ್ಲಿದೆ. ಪ್ರಭಾವಳಿ ಯ ಕೆತ್ತನೆ ಸುಂದರವಾ ಗಿದೆ.

ನವರಂಗದಲ್ಲಿ ಕಲಾತ್ಮಕ ಹೊಯ್ಸಳ ಶೈಲಿಯ ನಾಲ್ಕು ಕಂಭಗಳಿದ್ದು ಮಧ್ಯದ ವಿತಾನದಲ್ಲಿನ ಕಮಲದ ಕೆತ್ತನೆ ಸಹ ಕಲಾತ್ಮಕತೆಯಿಂದ ಕೂಡಿದೆ. ಮುಖಮಂಟಪಕ್ಕೆ ನಾಲ್ಕೂ ದಿಕ್ಕಿ ನಿಂದ ಪ್ರವೇಶ ದ್ವಾರವಿದೆ. ಇಲ್ಲಿ ಪ್ರತ್ಯೇಕವಾದ ಮುಖ ಮಂಟಪವಿದ್ದು ಸುಮಾರು 24 ಕಂಭ ಗಳಿವೆ. ಸುಮಾರು 16 ವಿತಾನಗಳಿದ್ದು, 16 ಜಗಲಿಯನ್ನು ಹೊಂದಿದೆ. ಇಲ್ಲಿನ ಜಗಲಿಯ ವಿಶೇಷವೆಂದರೆ ಭೀಮಣ್ಣ ದಂಡನಾಯಕನಿಗೆ 16 ಪುತ್ರಿಯರಿದ್ದು ಇಲ್ಲಿನ ಮಂಟಪದಲ್ಲಿ ಅವನ ಪುತ್ರಿಯರು ಹಾಗೂ ಅಳಿಯಂದರ ಜೊತೆಯಲ್ಲಿ ಸೇರಿದಾಗ ಇಲ್ಲಿನ 16 ಜಗಲಿಯ ಲ್ಲಿ ಅವರು ಪತ್ನಿಸಮೇತ ಆಸೀನರಾಗುತ್ತಿದ್ದರು. ರಾಜ ಮತ್ತು ರಾಣಿಯರು ಕುಳಿತಾಗ ರಾಜನ 16 ಪುತ್ರಿಯರು ಹಾಗೂ ಅಳಿಯಂದಿರು ಹಾಗೂ ರಾಣಿಗೆ ಕೇವಲ ತನ್ನ ಮಕ್ಕಳು ಮಾತ್ರ ಕಾಣುವಂತೆ ಅಂದರೆ ರಾಣಿಗೆ ಅಳಿಯಂದಿರು ಕಾಣದಂತೆ ಕಂಭ ಬರುವಂತೆ ವಿನ್ಯಾಸ ಮಾಡಲಾಗಿದೆ. ಅಂದಿನ ಕಲಾತ್ಮಕ ಕೆತ್ತನೆಗೆ ಉತ್ತಮ ಉದಾಹರಣೆ.

ಹೊರ ಭಿತ್ತಿಯಲ್ಲಿ ಕೆತ್ತನಗಳು ಕಾಣ ಸಿಗದಿದ್ದ ರೂ ಅಲಲ್ಲಿ ಶಿಖರದ ಮಾದರಿ ಕಾಣಬಹುದು. ದೇವಾಲಯದ ಪ್ರಧಾನ ಗರ್ಭಗುಡಿಗೆ ಮಾತ್ರ ಶಿಖರವಿದೆ. ದೇವಾಲಯದ ಆವರಣದಲ್ಲಿ ಸುಂದರವಾದ ತುಳಸಿ ಕಟ್ಟೆ ಸಹ ಗಮನ ಸೆಳೆ ಯುತ್ತದೆ.

ಸಂಪೂರ್ಣವಾಗಿ ಅವನತಿಯತ್ತ ಸಾಗಿದ್ದ ಈ ದೇವಾಲಯವನ್ನು ಧರ್ಮಸ್ಥಳದ ಶ್ರೀ ಮಂಜು ನಾಥ ಟ್ರಸ್ಟ್ ಹಾಗೂ ಟಿ.ವಿ.ಎಸ್ ಸಹಯೋಗ ದಲ್ಲಿ ಜೀರ್ಣೋದ್ದಾರ ಮಾಡಿದ್ದು ಇಲ್ಲಿನ ಅಷ್ಟಾಂಗ ಯೋಗ ವಿಜ್ಞಾನ ಕೇಂದ್ರದವರು ಈ ದೇವಾಲಯಕ್ಕೆ ಅಂಡಾಳ ಶಿಲ್ಪವನ್ನು ಸ್ಥಾಪಿಸಿದ್ದು ದ್ವಜ ಸ್ಥಂಭವನ್ನು ನಿರ್ಮಿಸಿದ್ದಾರೆ.

ತಲುಪವ ಬಗ್ಗೆ : ಹೆಡತಲೆ ನಂಜನಗೂಡಿನಿಂದ ಸುಮಾರು 14 ಕಿ.ಮೀ ದೂರದಲ್ಲಿದ್ದು, ಮೈಸೂ ರಿನಿಂದ ಸುಮಾರು 35 ಕಿ.ಮೀ ದೂರದಲ್ಲಿದೆ. ಇಲ್ಲಿ ಸನಿಹದ ಹೆಮ್ಮರಗಾಲದಲ್ಲಿ ಹೊಯ್ಸಳ ನಿರ್ಮಿತ ಸುಂದರವಾದ ಸಂತಾನ ವೇಣು – ಗೋ‌ಪಾಲಕೃಷ್ಣ ದೇವಾಲಯವನ್ನು ನೋಡಿ ಬರಬಹುದು.

✍️ಶ್ರೀನಿವಾಸಮೂರ್ತಿ ಎನ್.ಎಸ್.
ಬೆಂಗಳೂರು