ರಂಗ ಸಂಘಟನೆ ಮತ್ತು ಕಲಾವಿದರು ಇವರಿಬ್ಬರ ಜೋಡಿ ಹೇಗಿರಬೇಕು ಅನ್ನೋದು ಈ ಸರ್ಕಾರದ ಅನುದಾನದ ಸನ್ನಿವೇಶದಲ್ಲಿ ಮಹತ್ವ ಹಲವು ಆಯಾಮಗಳಲ್ಲಿ ಚಿಂತಿಸ ಬೇಕಾಗಿದೆ. ಈ ಹಿಂದಿನ ಸಮಯದಲ್ಲಿ ನಾಟಕ ಕಂಪನಿಗಳು ಮುಂಚೂಣಿ ಯಲ್ಲಿ ಇದ್ದಾಗ, ಹವ್ಯಾಸಿಗಳು ಒಂದು ಪಾತ್ರಗಳ ಸಂಶೋಧನೆ ಯಲ್ಲಿ, ಹೊಸ ವಿಚಾರ, ಹೊಸ ರೀತಿಯ ಪ್ರಯೋಗಗಳಲ್ಲಿ ತೊಡಗಿಕೊಂಡಾಗ ಇದ್ದ ಆ ಹುರುಪು,ಆ ಹುಮ್ಮಸ್ಸುಗಳು ಮರೆಯಾಗುತ್ತಿ ವೆಯಾ ಅನ್ನೋ ಸಂಶಯ ಬರುತ್ತಿದೆ. ದುಡ್ಡು, ದುಡಿತಗಳು ಪ್ರಬಲವಾಗುತ್ತಿರುವಾಗ ಸಂಬಂಧಗಳು, ಮೌಲ್ಯ ಗಳು ಆತ್ಮೀಯ ಭಾವನೆಗಳು ಯಾವವು ಆರೋಗ್ಯಕರ ಚಟುವಟಿಕೆಗಳಿಗೆ ನಾಂದಿಯಾಗ ಬೇಕೋ ಅವೆಲ್ಲ ಇಂದು ಮಾಯವಾಗುತ್ತಿವೆ ಅಂದರೇ ಅತಿಶಯೋಕ್ತಿ ಅಲ್ಲ.

ಪ್ರತಿಭೆ, ಪ್ರಕಾರಗಳು ಪ್ರಚಾರ, ಪ್ರದರ್ಶನ, ವೈಭವೀಕರಣ ಜಾತಿ ಧರ್ಮ, ಪ್ರಾದೇಶಿಕತೆ, ಭಾಷೆ ಪಕ್ಷಮಯವಾಗಿರುವ ಸನ್ನಿವೇಶಗಳಲ್ಲಿ ಮುಳುಮುಳುಗಿ ಏಳುತ್ತಿವೆ. ಕಲಾವಿದ ಮತ್ತು ಸಂಘಟನೆ ಪರಸ್ಪರ ಪೂರಕ, ತಾರಕ, ಮಾರಕ ಗಳ ಸುಳಿಯಲ್ಲಿ ಸಿಕ್ಕು ನಲುಗುತ್ತಿವೆ. ಬೆಂಗಳೂ ರು, ಮೈಸೂರು ದಕ್ಷಿಣ ಕನ್ನಡ, ತಕ್ಕ ಮಟ್ಟಿಗೆ ಶಿವಮೊಗ್ಗ, ನಿರ್ದೇಶಕ ಅವಲಂಬಿತ ಗುಲಬರ್ಗಾ ಪ್ರದೇಶಗಳನ್ನು ಹೊರತುಪಡಿಸಿ ಉಳಿದಕಡೆಗಳ ಲ್ಲಿ ಗಂಭೀರ ಅನ್ನಬಹುದಾದ ಸ್ಥಿತಿ ನಿರ್ಮಾಣವಾ ಗುತ್ತಿದೆ.

ಮೇಲಿನ ಹಿನ್ನೆಲೆಯಲ್ಲಿ ವಿಚಾರ ಮಾಡಿದಾಗ ಹೊಳೆಯುವ ಪ್ರಶ್ನೆಗಳು:
ರಂಗಭೂಮಿ ಮತ್ತು ಪ್ರದರ್ಶಕ ಕಲೆಗಳು ಜೀವಂತವಾಗಿ, ಆರೋಗ್ಯಪೂರ್ಣವಾಗಿ ಮುಂದೆ ಸಾಗಬೇಕಂದರೆ, ಸಂಘಟನೆ / ಸಂಸ್ಥೆ ಬೇಕಾ?
ಬರೀ ಕಲಾವಿದ ಒಬ್ಬನೇ / ರೊಬ್ಬರೇ ಸಾಕಾ?
ಸಂಯುಕ್ತ ವಾಗಿ ಕಲಾವಿದರೇ ಎಲ್ಲವನ್ನು ಅಂದರೇ ತಯಾರಿಕೆಯಿಂದ ಪ್ರದರ್ಶನದ ವರೆಗೆ ನಂತರ ಲೆಕ್ಕಪತ್ರ ಹಿಡಿದು ಎಲ್ಲವನ್ನ ಮಾಡಬಹುದೇ?
ಯಾರು ಯಾರು ಎಷ್ಟು ಎಷ್ಟು ಪಾತ್ರ ನಿಭಾಯಿಸಬಹುದು?

ರಂಗಭೂಮಿಯ ನಿರಂತರತೆ, ಗುಣಮಟ್ಟ ಕಾಪಾಡಿಕೊಂಡು ಹೋಗುವ ಮಟ್ಟಿಗೆ ಉಭಯತರ ಜವಾಬುದಾರಿಗಳು ಏನಾಗಬಹುದು?
ಕಲಾವಿದ, ಪ್ರೇಕ್ಷಕ ಮತ್ತು ಸಂಘಟನೆ ಈ ಮೂರೂ ತ್ರಿಕೋನ ಸಂಬಂಧಗಳು ಯಾವ ರೀತಿಯ ಸಮಬಾಹು, ಸಮದ್ವಿಬಾಹು, ವಿಷಮ ಬಾಹು ತ್ರಿಕೋಣಗಳ ಹಾಗೆ ಇರ ಏಕಾ? ಗಣಿತ ಅಥವಾ ಟ್ರಿಗ್ನೋಮೇಟ್ರಿ ಗೊತ್ತಿರುವರಿಗೆ ಪೀರಾಮಿಡ್ ಯಾಕೆ ಇನ್ನೂ ಭದ್ರ ವಾಗಿವೆ ಅಂತಾ ತಿಳಿದುಕೊಳ್ಳ ಲು ಪ್ರಯತ್ನಿಸಿದಾಗ ಸಮ ಬಾಹುಗಳ ಅನ್ವಯಕತೆ ಗೊತ್ತಾಗುತ್ತದೆ.

ಸಮ ಬಾಹು, ಸಮ ಕೋನ ಸ್ಥಿರತೆ ಮತ್ತು ನಿರಂತರತೆಯ ಅಭಿವೃದ್ಧಿ ಹೊಂದಲು ಸಾಧ್ಯ. ಹೀಗಾಗಿ ಸಂಘಟನೆ, ಕಲಾವಿದ, ಪ್ರೇಕ್ಷಕರ ನಡುವೆ ಇರಬೇಕಾದ ಸಂಬಂಧ ನಿಷ್ಠೆ, ಬದ್ಧತೆ, ವಿಶ್ವಾಸ ಗಳ ಚೌಕಟ್ಟಿನಲ್ಲಿ ಬಂಧಿತವಾಗಿರು ವದು ಅಪೇಕ್ಷಣೀಯ.
(ಸಶೇಷ)
ಅರವಿಂದ ಕುಲಕರ್ಣಿ
ರಂಗಭೂಮಿ ಚಿಂತಕರು, ಧಾರವಾಡ