ಅಮ್ಮಾ ನೀನು ಕಾಣದೇ
ನಾನೇನು ಕಾಣುವೆ
ಅಂಬೆ ಬೆಳಕು ಚೆಲ್ಲದೇ
ನಾನೇನು ಬೆಳಗುವೆ
ದೈವ ನೀನು ನಡೆಸದೇ
ನಾನೆಲ್ಲಿಗೆ ನಡೆಯುವೆ
ಭಾವ ನೀನು ನುಡಿಸದೇ
ನಾನೇನು ನುಡಿಯುವೆ
ಜಗದಂಬೆ ನೀನು ಬಾರದೇ
ಆತ್ಮನು ನಾನೆಲ್ಲಿಗೆ ಸಾಗಲಿ
ಜ್ಞಾನ ಭಕುತಿ ಅನ್ನ ಕೊಡದೇ
ಸುತನು ನಾನೇನು ಬೇಡಲಿ
ಕಿರು ಕರುಳ ಧನಿಯಲಿ
ಅಮ್ಮಾ ನಿನ್ನ ಕರೆಯುವೆ
ಹೆಸರಿನ ಉಸಿರ ಕಾಯದೇ
ಅಂಬೆ ದರ್ಶನಕೆ ಕಾದಿರುವೆ
ಅಮ್ಮಗಾಗಿ ಹಿಡಿದೆ ಉಸಿರನೆ
ಅಮ್ಮ ಬದುಕು ನಿನ್ನ ಆಜ್ಞೆನೇ
ಅಮ್ಮನ ನೋಡಲು ಪ್ರಾರ್ಥನೆ
ಅಮ್ಮನ ಶ್ರೀ ಪಾದಕೆ ವಂದನೆ
ಅಂಬೆ ನೀನೇ ಜಗದ ದೈವ ಗೊಂಬೆ
ಅಂಬೆ ಮನದ ಜೀವ ನೀನೇ ಎಂಬೆ
ಅಂಬೆ ಪ್ರತಿ ಜನುಮಕೆ ಕರುಣಿಸು
ಅಂಬೆ ಅಳಿಲು ಸೇವೆ ನೀ ಸ್ವೀಕರಿಸು
✍️ಕಾವ್ಯಸುತ
ಷಣ್ಮುಖಂ ವಿವೇಕಾನಂದ
ಧಾರವಾಡ