ಅಸುರನ ಮದಿ೯ಸಿ
ಉಪಟಳ ಅಡಗಿಸಿ
ಶಿಷ್ಟರ ಸಲುಹಿದ ತಾಯೆ/ಪ/
ಪ್ರಥಮ ದಿನದಲಿ ನೀ ಹಿಮಸುತೆಯಾಗಿ ಕಂಗೊಳಿಸುವೆ ಶೈಲಪುತ್ರಿ
ನಿನ್ನಾರಾಧನೆಯಿಂದ ಸಮೃದ್ಧಿಯಲಿ ನಲಿಯಲಿ ಈ ಧಾತ್ರಿ/
ದ್ವಿತೀಯ ದಿನದಿ ನೀ ದೇವಿ ಬ್ರಹ್ಮಚಾರಿಣಿ
ಜನಮನದ ಅರಿಷಡ್ವರಿಗಳ ಸಂಹರಿಸು ತಾರಿಣಿ/
ತೃತೀಯ ದಿನದಲಿ ಚಂದ್ರಘಂಟಾ ದೇವಿ
ಭಕ್ತರ ಹರಸು,ಉದ್ಧರಿಸು ಹೇ ಶಾಂಭವಿ/
ಚತುರ್ಥಿಯ ದಿನದಂದು ನೀ ದೇವಿ ಕೂಷ್ಮಾಂಡಿನಿ
ನಲಿಯಲಿ ಈ ಭೂದೇವಿ
ತ್ರಿಲೋಕ ಪಾಲಿನಿ/
ಪಂಚಮಿಯ ದಿನದಂದು ನೀ ಸ್ಕಂದ ಮಾತೆ
ಆರಾಧಿಸುವೆವು ಕಾಪಾಡೆಮ್ಮನು
ಜಯ ಜಗನ್ಮಾತೆ/
ಷಷ್ಠಿಯ ದಿನದಲಿ ನೀ ದೇವಿ ಕಾತ್ಯಾಯಿನಿ
ಸಂರಕ್ಷಿಸು ಈ ವಿಶ್ವವ ಹೇ ಜಗಜ್ಜನನಿ/
ಸಪ್ತಮಿಯ ದಿನದಂದು ನೀ ದೇವಿ ಕಾಳರಾತ್ರಿ
ಭಕ್ತಿಯ ಸಲಿಸುವೆ ಬೆಳಗಲಿ ಈ ಧರಿತ್ರಿ/
ಅಷ್ಟಮಿಯ ದಿನದಲಿ ನೀ ದೇವಿ ಮಹಾಗೌರಿ
ಸಕಲ ಭಾಗ್ಯಗಳ ಕರುಣಿಸು ಹೇ ಶುಭಕರಿ/
ನವಮಿಯ ದಿನದಂದು ನೀ ದೇವಿ ಸಿದ್ಧಿದಾತ್ರಿ
ಸಲುಹೆಮ್ಮನು ಅಪಿ೯ಸುವೆವು ಹೂವು ಬಿಲ್ವಪತ್ರಿ/
ಅಸುರ ಸಂಹಾರದ ಸಂಭ್ರಮವೇ ವಿಜಯ ದಶಮಿ
ಮನೆ-ಮನಗಳ ದುರಿತ ಕಳೆದು ಕಾಪಾಡು ಅಪ೯ಣೆಯು ಪತ್ರವೀ ಶಮಿ
ಮಂಗಳಂ ಶೈಲಪುತ್ರಿ ಮಂಗಳಂ ಬ್ರಹ್ಮಚಾರಿಣಿ ಮಂಗಳಂ ಚಂದ್ರಘಂಟಾ
ಮಂಗಳಂ ಕೂಷ್ಮಾಂಡಿನಿ
ಮಂಗಳಂ ಸ್ಕಂದ ಮಾತಾ
ಮಂಗಳಂ ಕಾತ್ಯಾಯಿನಿ
ಮಂಗಳಂ ಕಾಲರಾತ್ರಿ
ಮಂಗಳಂ ಮಹಾಗೌರಿ
ಮಂಗಳವು ಶ್ರೀ ಸಿದ್ಧಿದಾತ್ರಿ
ಮಂಗಲವು ಹೇಳಿದಾ ಕೇಳಿದಾ ಸಕಲರಿಗೆ ಮಂಗಳವು ಜಗನ್ಮಾತೆ ಮೂಲೋ೯ಕ ವಂದಿತೆಗೆ//
✍️ಶ್ರೀಮತಿ ರೇಖಾ ನಾಡಿಗೇರ
ಹುಬ್ಬಳ್ಳಿ