೭೪ವರ್ಷಗಳ ಸ್ವಾತಂತ್ರವನ್ನು ಅನುಭವಿಸಿ ೭೫ನೇ ವರ್ಷಕ್ಕೆ ಕಾಲಿಟ್ಟಿರುವ ನಾವು ಸ್ವಾತಂತ್ರ ದ ಸವಿಯಜೊತೆಗೇ ಹಲವಾರು ಸಂಕಟಗಳನ್ನೂ ಅನುಭವಿಸಿದ್ದೇವೆ. ಆದರೂ ಜೋಪಡಿಯಾದ ರೂ ಸರಿ ಯಾರ ಹಂಗೂ ಇಲ್ಲದ, ನಮ್ಮದೇ ಮನೆಯಲ್ಲಿ ನಮಗೆ ಬೇಕಾದಂತೆ ರೂಪರೇಷೆ ಗಳನ್ನು ನಿರ್ಮಿಸಿ ಕೊಂಡು ಬದುಕುತ್ತಲಿದ್ದೇವೆ. ನಮ್ಮ ಸಂಸ್ಕೃತಿ ಯನ್ನು, ಭಾಷೆಯನ್ನು, ಆಚಾರ ವಿಚಾರಗಳನ್ನು ಉಳಿಸಿಕೊಂಡು ಬಂದಿದ್ದೇವೆ ಎನ್ನುವುದು ಹೆಮ್ಮೆಯ ವಿಷಯ. ಇಂತಹ ಸಂದರ್ಭದಲ್ಲಿ ನಮ್ಮನ್ನು ೨೦೦ ವರ್ಷದ ದಾಸ್ಯದಲ್ಲಿ ದೂಡಿ ರಾಜಭೋಗವನ್ನು ಅನುಭ ವಿಸಿದ ಬ್ರಿಟಿಷ ರನ್ನು ನೆನಪಿಸಿಕೊಳ್ಳುವಂತೆಯೇ, ನಮ್ಮ ಇಂದಿನ ವಾಕ್, ಕ್ರಿಯಾ, ಮನೋ ಸ್ವಾತಂತ್ರ ಕ್ಕಾಗಿ ಹೋರಾಡಿದ ಮಹನೀಯರೆಲ್ಲ ರನ್ನೂ ಅನಾಯಾಸವಾಗಿ ನೆನಪಿಸಿಕೊಳ್ಳು ತ್ತೇವೆ. ಹತ್ತು ಹಲವು ಹಿರಿಯ ನೇಕಾರರ ಹೆಸರುಗಳು ಮನೆಮನೆಯ, ಮನಮನದ ಮಾತಾಗಿದ್ದರೂ ಆ ನೇಕಾರರನ್ನು ಮುಂಚೂಣಿ ಗಿರಿಸಿದ ಕೋಟಿಗ ಟ್ಟಲೆ ಸಾಹಸಿಗರೂ ನಮ್ಮ ಸ್ಮೃತಿಯಲ್ಲಿ ಉಳಿದೇ ಇರುತ್ತಾರೆ ಎಂಬುದು ಸತ್ಯ. ಅಂತಹ ಕೆಲವರ ಪರಿಚಯವನ್ನು ಮಾಡಿಕೊಡುವ ಸಾಹಸ ಈ ಲೇಖನ ಸರಣಿಯ ಉದ್ದೇಶ.

ಕಾರ್ನಾಡ್ ಸದಾಶಿವರಾಯರು

ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಶಾಶ್ವತ ವಾಗಿ ನೆಲೆಯೂರಿಸಿದ, ತಮ್ಮ ಕಾರ್ಯಶೀಲತೆ ಯಿಂದ, ಕಾಂಗ್ರೆಸ್ ಮೂಲಕ ಭಾರತದ ಸ್ವಾತಂತ್ರ ಕ್ಕಾಗಿ ಅವಿರತವಾಗಿ ದುಡಿದು “ದಕ್ಷಿಣದ ಗಾಂಧಿ” ಎಂದೇ ಪ್ರಸಿದ್ಧ ರಾದ ಸದಾಶಿವ ಕಾರ್ನಾಡರು ೧೮೮೧ ರಲ್ಲಿ ಮಂಗಳೂರಿನಲ್ಲಿ ಹುಟ್ಟಿದರು. ನ್ಯಾಯವಾದಿ ಹಾಗೂ ಸಮಾಜ ಸೇವಕ ರಾಗಿದ್ದ ಇವರು ಪ್ರಸಿದ್ಧ ಸ್ವಾತಂತ್ರ ಹೋರಾಟಗಾರರೂ ಆಗಿದ್ದರು. ಸತ್ಯವಂತರೂ, ಸ್ವತಂತ್ರ ಧೋರಣೆ ಯುಳ್ಳವರೂ ಆದ ಮಂಗಳೂರಿನಲ್ಲಿ ವಕೀಲರಾಗಿದ್ದ ಕಾರ್ನಾಡ್ ರಾಮಚಂದ್ರ ರಾವ್ ಇವರ ತಂದೆ, ರಾಧಾ ಬಾಯಿ ಇವರ ತಾಯಿಯ ಹೆಸರು. ಸದಾಶಿವ ರಾಯರ ಪ್ರಾಥಮಿಕ ವಿದ್ಯಾಭ್ಯಾಸ ಮಂಗಳೂರಿ ನಲ್ಲಿ ನಡೆಯಿತು. ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿ ನಿಂದ ಡಿಗ್ರಿಯನ್ನು ಪಡೆದ ಇವರು ಬಾಂಬೆ ವಿಶ್ವವಿದ್ಯಾನಿಲಯ (ಈಗಿನ ಮುಂಬೈ) ದಿಂದ ನ್ಯಾಯಶಾಸ್ತ್ರದಲ್ಲಿ ಪದವಿ ಪಡೆದು, ೧೯೦೯ ರಲ್ಲಿ ಮಂಗಳೂರಿಗೆ ಹಿಂತಿರುಗಿ ಅಲ್ಲಿ ವಕೀಲಿ ವೃತ್ತಿ ಯನ್ನು ಆರಂಭಿಸಿದರು. ಇವರು ಕಲಿತ ವಿದ್ಯೆ ಇವರಿಗೆ ಸುಖಜೀವನ ನಡೆಸುವಷ್ಟು ತಂದು ಕೊಡುತ್ತಿತ್ತು. ಯಾರ ಹಂಗೂ ಇಲ್ಲದೆ ಸುಖವಾದ ಸಿರಿವಂತಿಕೆಯ ಜೀವನವನ್ನು ನಡೆಸುವ ಸಾಧ್ಯತೆ ಯಿದ್ದರೂ ಸದಾಶಿವ ರಾಯರು ಅದನ್ನು ತೊರೆದು ಸಮಾಜದ ಏಳಿಗೆಯ ಕಡೆಗೆ ಲಕ್ಷ್ಯ ಕೊಟ್ಟರು.

ಬಾಲ್ಯದಿಂದಲೂ ಬಹಳ ಉದಾರವಾದ ಬುದ್ಧಿ ಯಿಂದಿದ್ದ ಇವರಿಗೆ ಕೆಲವೊಮ್ಮೆ ತಂದೆಯವರು ತಾಕೀತು ಮಾಡಿದ್ದರು. ತಮ್ಮ ಬಳಿಯಿದ್ದ ಪೆನ್, ಪೆನ್ಸಿಲ್, ಪುಸ್ತಕಗಳನ್ನು ತಮ್ಮ ಜೊತೆಯಲ್ಲಿ ಓದುತ್ತಿದ್ದ ಬಡಹುಡುಗರಿಗೆ ಹಂಚಿಬಂದು ತಂದೆ ಯವರಿಂದ ಬೈಗುಳ ತಿನ್ನುತ್ತಿದ್ದುದೂ ಉಂಟು. ಸದಾಶಿವರಾಯರು ತಮ್ಮ ವೃತ್ತಿ ಜೀವನದಲ್ಲಿ ಬಹಳ ಬೇಗ ಯಶಸ್ಸು ಗಳಿಸಿದರು. ಆದರೆ ಇವರ ಒಲವೆಲ್ಲ ದೇಶದ ಉನ್ನತಿಯ ಕಡೆಗಿತ್ತು. ಕ್ರಿಕೆಟ್ ಹಾಗೂ ಟೆನ್ನಿಸ್ ಆಟಗಾರನಾಗಿದ್ದರೂ ಅವುಗಳ ಕಡೆಗೆ ಗಮನ ಕೊಡದೆ ರೋಗ ಪೀಡಿತ ವಾಗಿದ್ದ ಸಮಾಜ ವನ್ನು ತಿದ್ದುವ ಸಾಹಸವನ್ನು ಮಾಡಿದರು. ೧೯೧೧ರಲ್ಲಿ ಇವರು ಸಕ್ರಿಯವಾಗಿ ಸಮಾಜ ಸುಧಾರಣೆಯ ಕೆಲಸಕ್ಕೆ ಕೈಹಾಕಿದರು.

ಸದಾಶಿವ ರಾಯರು. ಮಹಿಳೆಯರಿಗೆ ಸಮಾಜಿಕ ನ್ಯಾಯ ದೊರಕಿಸಿಕೊಡುವುದು ಇವರ ಮುಖ್ಯ ಉದ್ದೇಶವಾಯಿತು. ಪತ್ನಿ ಶಾಂತಾ ಬಾಯಿಯೂ ಇವರಿಗೆ ಅನುಕೂಲವಾ ಗಿದ್ದರು. ಆಕೆಯ ನೆರವಿ ನಿಂದ ಸ್ತ್ರೀಯರ ಪ್ರಗತಿಗಾಗಿ ‘ಮಹಿಳಾ ಸಭಾ’ ಎಂಬ ಸಂಸ್ಥೆ ಯೊಂದನ್ನು ಆರಂಭಿಸಿದರು. ಸ್ತ್ರೀಯರೂ ಅರ್ಥಿಕವಾಗಿ ಸ್ವತಂತ್ರರಾಗಲು, ಅವರಿಗೆ ಬುಟ್ಟಿ ಹೆಣೆಯುವುದು, ಹೊಲಿಗೆ ಮೊದಲಾದ ಹಲವಾರು ಉಪಯುಕ್ತ ಕಸುಬುಗ ಳನ್ನು ಹೆಂಡತಿಯೊಡಗೂಡಿ ಹೇಳಿಕೊಡುತ್ತಿದ್ದರು. ಇವರಿಂದ ನೆರವು ಪಡೆದ ಎಷ್ಟೋ ಜನ ಸ್ತ್ರೀಯ ರು ಉಪಾಧ್ಯಾಯಿನಿಯರೂ, ನರ್ಸ್ ಗಳೂ ಆಗಿ ಆರ್ಥಿಕ ಸ್ವಾತಂತ್ರವನ್ನು ಗಳಿಸಿಕೊ ಳ್ಳುವುದರ ಜೊತೆಗೆ ಸಮಾಜದ, ದೇಶದ ಸೇವೆಯಲ್ಲಿ ತೊಡ ಗಿದರು. ಸಮಾಜ ವಿಧಿಸಿದ್ದ ಕಟ್ಟು ಪಾಡುಗಳನ್ನು ಭೇದಿಸಿ ಈಸಂಸ್ಥೆಯನ್ನು ಸೇರಲು ವಿಧವೆಯರಿಗೆ ಕರೆ ಕೊಟ್ಟರು.

ಕುದ್ಮಲ್‌ ರಂಗರಾವ್

ತಮ್ಮ ಕಾಲದಲ್ಲಿ ಸಮಾಜ ಸುಧಾರಕರಾಗಿ ಕೆಲಸ ಮಾಡುತ್ತಿದ್ದ ‘ಕುದ್ಮಲ್ ರಂಗರಾವ್’ ಅವರೊ ಡನೆ ಕೈಜೋಡಿಸಿ ಸಮಾಜದ ದೊಡ್ಡ ಪಿಡುಗಾಗಿ ದ್ದ ಅಸ್ಪೃಶ್ಯತೆಯನ್ನು ಹೋಗಲಾಡಿ ಸಲು ದುಡಿದರು. ಗಾಂಧೀಜಿಯವರ ಅಸ್ಪೃಶ್ಯತಾ ನಿವಾರಣ ಚಳುವಳಿಯನ್ನು ತಾವಿದ್ದ ಊರಿ ನಲ್ಲಿ ತಮ್ಮ ದಾಗಿಸಿಕೊಂಡರು. ಮೇಲ್ಜಾತಿಯ ಜನರು ಅಸ್ಪೃಶ್ಯರನ್ನು ದೇವಸ್ಥಾನದೊಳಕ್ಕೆ ಬರಲು ನಿಯಂತ್ರಿಸಿದಾಗ, ಅವರಿಗಾಗಿ ದೇವಸ್ಥಾ ನದ ಹತ್ತಿರದಲ್ಲೇ ಊಟದ ಏರ್ಪಾಡು ಮಾಡಿ, ಅವರ ಜೊತೆ ತಾವೂ ಕುಳಿತು ಊಟ ಮಾಡಿ ಜಾತಿಗಳ ಸಮಾನತೆಯನ್ನು ಸಮಾಜಕ್ಕೆ ಎತ್ತಿ ಹಿಡಿದರು.

ಸದಾಶಿವರಾಯರು ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸುವುದರ ಜೊತೆ ಜೊತೆಗೆ ಆಗಿನ ಕಾಲಕ್ಕೆ ಹಿಂದೂ ಸಮಾಜದಲ್ಲಿದ್ದ ಜಾತೀಯತೆ, ಮಹಿಳೆಯರಲ್ಲಿ ತೋರುತ್ತಿದ್ದ ಅಸಮಾನತೆ, ಮೂಢನಂಬಿಕೆಗಳು, ಇವುಗಳನ್ನು ನೀಗಿಸಲು ಶ್ರಮಿಸಿದರು ಎಂಬುದನ್ನು ಈ ಮೊದಲೇ ತಿಳಿಸಿ ದ್ದೇನೆ. ದೇಶದಲ್ಲಿ ಸ್ವಾತಂತ್ರ ಸಂಗ್ರಾಮ ತೀವ್ರವಾ ದಾಗ ಯುವಕರಿಗೆ ರಾಷ್ಟ್ರೀಯ ಮನೋಭಾವ ವನ್ನು ಬೆಳೆಸುವತ್ತ ಇವರ ಗಮನ ಹರಿಯಿತು. ಪರಿಣಾಮವಾಗಿ “ತಿಲಕ್ ವಿದ್ಯಾಲಯ” ಎಂಬ ರಾಷ್ಟ್ರೀಯ ವಿದ್ಯಾಶಾಲೆ ಯನ್ನು ಆರಂಭಿಸಿ, ಆಗ ಚಾಲತಿಯಲ್ಲಿದ್ದ ಪಠ್ಯಕ್ರಮ ಬೋಧನೆಯ ಜೊತೆಗೆ ಹಿಂದಿ ಭಾಷಾಬೋಧನೆ, ನೂಲುವುದು, ನೇಯುವು ದು ಮೊದಲಾದ ಉಪಯುಕ್ತ ಕಸುಬುಗಳನ್ನೂ ಕಲಿಸುವ ಏರ್ಪಾಟು ಮಾಡಿ ದರು. ಮುಂದಕ್ಕೆ ಅಂತಹುದೆ ಹದಿನೆಂಟು ಶಾಲೆ ಗಳನ್ನು ತೆರೆದು ಎಲ್ಲ ವರ್ಗದ ಜನರೂ ಒಟ್ಟಾಗಿ ಕೂಡಿ ಕಲಿಯುವ ವ್ಯವಸ್ಥೆ ಮಾಡಿದರು. ತಮ್ಮಲ್ಲಿ ಯ ಪರಸ್ಪರ ಭೇದ ಭಾವದ ಹೋರಾಟವನ್ನು ಬಿಟ್ಟು ಒಗ್ಗಟ್ಟಿನಿಂದ ರಾಷ್ಟ್ರಕ್ಕಾಗಿ ಹೋರಾಡಲು ಪ್ರೇರೇಪಿಸಿದರು.

ಗಾಂಧೀಜಿಯವರು ೧೯೧೯ ರಲ್ಲಿ ‘ರೌಲೆಟ್ ಕಾಯ್ದೆ’ ಹಾಗೂ ‘ಜಲಿಯನ್ ವಾಲಾಬಾಗ್ ದುರಂತ’ ದ ವಿರುದ್ಧವಾಗಿ ಮೊಟ್ಟಮೊದಲ ಸತ್ಯಾಗ್ರಹ ವನ್ನು ಹೂಡಿದಾಗ, ಕಾರ್ನಾಡ್ ಸದಾಶಿವರಾಯ ರು ಕರ್ನಾಟಕದಿಂದ ಸತ್ಯಾ ಗ್ರಹವನ್ನು ಸೇರಿದ ಮೊಟ್ಟಮೊದಲ ಸ್ವಯಂ ಸೇವಕರಾಗಿದ್ದರು. ಅಲ್ಲದೆ ದಂಡಿ ಮಾರ್ಚ್ (ಉಪ್ಪಿನ ಸತ್ಯಾಗ್ರಹ) ನಡೆದಾಗಲೂ ಅವರು ಗಾಂಧೀಜಿಯವರ ಜೊತೆಯಲ್ಲಿ ಮುಂದಿನ ಸಾಲಿ ನಲ್ಲೇ ಇದ್ದು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಆಗೆಲ್ಲ ಅವರ ಮನೆಯೆ ಸ್ವಾತಂತ್ರ ಚಳವಳಿಯ ಕೇಂದ್ರವಾಗಿತ್ತು. ಹಾಗಾಗಿ ಮಹಾತ್ಮಾ ಗಾಂಧೀಜಿ, ಜವಹರಲಾಲ್ ನೆಹರೂ, ಸರೋಜಿನಿ ನಾಯಿಡು, ಸಿ.ಆರ್.ದಾಸ್ ಇವರೆಲ್ಲ ಅವರ ಮನೆಗೆ ಭೇಟಿ ಕೊಟ್ಟಿದ್ದರು.

೧೯೨೨ ರ ೯ ಹಾಗೂ ೧೦ರಂದು ಎರಡನೇ ಪ್ರಾದೇಶಿಕ ಸಮ್ಮೇಳನವನ್ನು ಕಾರ್ನಾಡು ಸದಾ ಶಿವರಾಯರು ಸರೋಜಿನಿ ನಾಯಿಡುರವರ ಉಪಸ್ಥಿತಿಯಲ್ಲಿ ಸಂಘಟಿಸಿದರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇವರ ಶ್ರಮದಿಂದ ಕಾಂಗ್ರೆಸ್ಸು ಬಲ ಗೊಂಡಿತು. ಇವರ ನ್ನು ಕಾಂಗ್ರೆಸ್ ಪಾರ್ಟಿಯ ಪ್ರಮುಖ ಸದಸ್ಯರಾಗಿ ಗಣಿಸಿದರು. ಇವರ ನೇತೃತ್ವದಲ್ಲಿ ಕರ್ನಾಟಕ ಕಾಂಗ್ರೆಸ್ ಬಲ ಗೊಂಡಿ ತು. ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಯ ಜೀವವೇ ಇವರಾಗಿ ದ್ದರು ಎಂದರೆ ಅತಿಶ ಯೋಕ್ತಿಯೇನಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಯುವ ಸ್ವಯಂ ಸೇವಕರನ್ನು ಹಳ್ಳಿಗಳಿಗೆ ಹೋಗಿ ಅಲ್ಲಿ ಯ ಜನತೆಯಲ್ಲಿ ರಾಷ್ಟ್ರೀಯ ಮನೋಭಾವವ ನ್ನು ಬೆಳೆಸಲು ಪ್ರೋತ್ಸಾಹಿಸಿ ದರು. ಹಲವಾರು ವರ್ಷಗಳ ಕಾಲ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾದೇಶಿಕ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದರಲ್ಲದೆ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ನಾಲ್ಕು ಬಾರಿ (೧೯೩೧ -೧೯೩೪) ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ನ ಅಧ್ಯಕ್ಷರಾಗಿ ಚುನಾಯಿ ತರಾದ ಸದಾಶಿವರಾಯರು ಐದು ವರ್ಷಗಳ ಅವಧಿಯಲ್ಲಿ ಮೂರು ಬಾರಿ ಜೈಲು ಕಂಡಿದ್ದರು.

ಸಾಬರಮತಿ ಆಶ್ರಮ

ರಾಜಕಾರಣದಲ್ಲಿ, ಭಾರತಕ್ಕಾಗಿ ಹೋರಾಟ ನಡೆಸುತ್ತಿದ್ದ ಸಮಯದಲ್ಲಿ ಅಂದರೆ ೧೯೨೧ ರಲ್ಲಿ ಮನೆಯಲ್ಲಿ ಅನಿರೀಕ್ಷಿತ ದುರಂತಗಳು ಒಂದಾದ ಮೇಲೊಂದರಂತೆ ಘಟಿಸಿದವು. ಅವರಿಗಿದ್ದ ಒಬ್ಬನೇ ಮಗ, ಮನೆಯಲ್ಲಿ ಎಲ್ಲರಿಗಿಂತ ಚಿಕ್ಕವ ಳಾಗಿದ್ದ ಮಗಳು, ನಂತರ ಹೆಂಡತಿ ಒಬ್ಬರಾದ ಮೇಲೊಬ್ಬರು ಮರಣ ಹೊಂದಿದರು. ಸದಾಶಿವ ರಾಯರಿಗೆ ಗಾಂಧೀಜಿಯವರ ಆಶ್ರಮದಲ್ಲಿ ಕೊಂಚ ಸಮಾಧಾನ ಸಿಗುತ್ತಿತ್ತು, ಹಾಗಾಗಿ ಅಲ್ಲಿಗೆ ಹೋದರು. ಆದರೆ ಅಲ್ಲೂ ಬಹಳ ದಿನಗಳ ಕಾಲ ನಿಲ್ಲಲಾಗಲಿಲ್ಲ. ಮಂಗಳೂರಿನಲ್ಲಿ ಪ್ರವಾಹ ಬಂದು ಜನ ಪೀಡಿತರಾದರು. ಅವರ ರಕ್ಷಣೆ ಗೆಂದು ಸದಾಶಿವರಾಯರು ಸಬರಮತಿ ಆಶ್ರಮ ವನ್ನು ಬಿಟ್ಟು ಮಂಗಳೂರಿಗೆ ಬಂದರು. ಪ್ರವಾಹ ದಿಂದ ಪೀಡಿತರಾದ ಜನಗಳಿಗಾಗಿ ತಮ್ಮ ಇತ್ತಾಪಾರವನ್ನೆಲ್ಲ ಮುಡಿಪಾಗಿಟ್ಟು ರಕ್ಷಣೆಯ ನ್ನೊದಗಿಸಿದರು. ತಮ್ಮ ಭವಿಷ್ಯದ ಬಗೆಗಾಗಲೀ, ತಮ್ಮ ಕುಟುಂಬದವರ ಕ್ಷೇಮವನ್ನಾಗಲೀ ಯೋಚಿಸುತ್ತ ಕೂರಲಿಲ್ಲ. ಇವರ ಖ್ಯಾತಿ ಅಖಿಲ ಭಾರತದ ಮಟ್ಟಕ್ಕೂ ಹರಡಿತು, ಹಾಗಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರೂ ಆಗಿ ನೇಮಕಗೊಂಡರು. ದೇಶ ರಕ್ಷಣೆಯ ಭಾರವನ್ನು ಹೊತ್ತ ಸದಾಶಿವ ರಾಯರು ತಮ್ಮ ಆರೋಗ್ಯದ ಕಡೆಗೂ ಗಮನಕೊಡಲಿಲ್ಲ. ತಮ್ಮೆಲ್ಲ ಸ್ವತ್ತನ್ನೂ ದೇಶಸೇವೆಗಾಗಿ, ಬಡವರ ಏಳಿಗೆಗಾಗಿ ದಾನ ಮಾಡಿದ ಸದಾಶಿವರಾಯ ರು ಸಾಯುವ ಕಾಲಕ್ಕೆ ಒಂದು ಗುಡಿಸಲಲ್ಲಿ ವಾಸಿಸುತ್ತಿದ್ದರು ಎಂಬುದು ದುರಂತದ ಸಂಗತಿ.

ಮಹಾರಾಷ್ಟ್ರದ ಫ಼ೈಜ಼್ ಪುರ್ ಪಟ್ಟಣದಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಕರೆಬಂದಾಗ, ಅತಿಹೆಚ್ಚಿನ ಜ್ವರದ ತಾಪದಿಂದ ಮೈ ಸುಡುತ್ತಿದ್ದರೂ ಲೆಕ್ಕಿಸದೆ ಮುಂಬೈಗೆ ಹೋಗಿ ಸಭೆಯಲ್ಲಿ ಭಾಗವಹಿಸುತ್ತಿ ರುವಾಗಲೇ ಮೃತ್ಯು ಅವರನ್ನು ಆಕ್ರಮಿಸಿತ್ತು. ತನ್ನೆಲ್ಲ ತನು, ಮನ, ಧನವನ್ನು ದೇಶಕ್ಕಾಗಿ ಮುಡುಪಿಟ್ಟ ಆ ವೀರ ಕನ್ನಡಿಗ ತನ್ನ ಕೆಲಸದ ಸಾರ್ಥ್ಯಕ್ಯವನ್ನು, ತನ್ನ ದೇಶ ಸ್ವತಂತ್ರವಾದುದನ್ನು ನೋಡುವುದಕ್ಕೆ ಮೊದಲೇ ಕಣ್ಣು ಮುಚ್ಚಿಕೊಂಡಿ ದ್ದರು. ಒಂದು ಕಾಸೂ ಕೈಲಿರದ ಭಿಕಾರಿಯಾಗಿ ಅತಿ ಬಡತನ ದಲ್ಲಿ ಸತ್ತ ಸದಾಶಿವರಾಯರ ಅಂತಿಮ ಕ್ರಿಯೆಗೂ ಸಹ ಹಣವಿರದಾಯಿತು. ಅವರು ಸತ್ತಮೇಲೆ ಈಗಾಗಲೇ ಅವರು ಮಾಡಿ ದ್ದ ಸಾಲಕ್ಕಾಗಿ ಜನ ಪೀಡಿಸತೊಡಗಿದಾಗ ಮನೆ ಯನ್ನು ಅವರ ವಶಕ್ಕೆ ಕೊಟ್ಟು, ಸದಾಶಿವ ರಾಯರ ಇಬ್ಬರು ಹೆಣ್ಣುಮಕ್ಕಳು ತಮ್ಮ ವಯಸ್ಸಾದ ಅಜ್ಜಿ ರಾಧಾಬಾಯಿಯೊಡನೆ (ರಾಯರ ತಾಯಿ) ಬಾಡಿಗೆಯ ಮನೆಗೆ ಹೋಗಿ ಇರಬೇಕಾಗಿ ಬಂದಿತು. ಹಲವಾರು ಸ್ವಾತಂತ್ರ ಸಂಗ್ರಾಮದ ಕೇಂದ್ರವಾಗಿದ್ದ ಅವರ ಮನೆ ಯಾರದೋ ಕೈ ಸೇರಿತು. ಹತ್ತು ಹಲವು ಬಡ ಬಗ್ಗರಿಗೆ ಆಶ್ರಯ ಕೊಡುತ್ತಿದ್ದ ಆ ಮನೆಯನ್ನು ಕೊಂಡು ಕೊಂಡವರು ನಿರ್ದಾಕ್ಷಿಣ್ಯವಾಗಿ ಹರಾಜು ಹಾಕಿ, ನಂತರ ಅದನ್ನು ಒಡೆದು ಅಲ್ಲಿ ಒಂದು ಸುಂದರವಾದ ಕಟ್ಟಡಗಳನ್ನು ಕಟ್ಟಿದರು. ಸದಾಶಿವರಾಯರ ಹೆಸರನ್ನು ಹೇಳಲು ಇದ್ದಿರ ಬಹುದಾಗಿದ್ದ ಆ ಮನೆಯೂ ಇಲ್ಲವಾಯಿತು. ಅವರ ಹೆಸರಿನಲ್ಲಿ ನಿರ್ಮಾಣವಾದ ಒಂದು ರಸ್ತೆ ಹಾಗೂ ಕೇಂದ್ರ ಗ್ರಂಥಾಲಯಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಬೆಂಗಳೂರಿನಲ್ಲೂ ಪ್ರಾಯಶಃ ಇವರ ಹೆಸರನ್ನು ಬಲ್ಲವರು ಬಹಳ ಜನವಿದ್ದಿರ ಲಾರರು. ನಿರ್ಗತಿಕರಾಗಿ ಸತ್ತ ಸದಾಶಿವರಾಯರ ಹೆಸರಿನಲ್ಲಿ ಸಿರಿವಂತರ ಬಡವಾಣೆಯಾದ ಸದಾಶಿವ ನಗರ ಬೆಳೆದು ಬಂದಿತೆಂದರೆ ಜನಕ್ಕೆ ಅಚ್ಚರಿಯಾಗಬಹುದು.

ಕನ್ನಡದ ಖ್ಯಾತ ಕಾದಂಬರಿಕಾರ, ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರು ಅವರನ್ನೆ ನಾಯಕನನ್ನಾ ಗಿಸಿ ‘ಔದಾರ್ಯದ ಉರುಳಲ್ಲಿ’ ಕಾದಂಬರಿಯನ್ನು ಬರೆದರು. ಇಷ್ಟಾದರೂ ದಕ್ಷಿಣದ ಗಾಂಧಿ ಎನಿಸಿದ್ದ, ದಾನಶೂರ ಕರ್ಣ ನಾದ, ಪರರಿಗಾಗಿ ಯೇ ಬದುಕಿದ ಬಾಳಿದ ಸದಾಶಿವರಾಯರ ನೆನಪು ಮಾಸಿಹೋಗಿದೆ. ಅವರ ಮಕ್ಕಳ ಬಗೆಗೆ ಯಾವ ವಿವರವೂ ದೊರೆಯದೆ ಇರುವುದು ಖೇದದ ಸಂಗತಿ. ಸ್ವಾತಂತ್ರ ಬಂದಮೇಲಾದ ರೂ ಅವರನ್ನೇ ಆಶ್ರಯಿಸಿದ್ದ ಮಕ್ಕಳ ಹಾಗೂ ತಾಯಿಯ ನೆರವಿಗೆ ಸರ್ಕಾರ ಬಂದಿತೆ? ಎನ್ನುವುದು ಪ್ರಶ್ನೆ ಯಾಗಿಯೇ ಉಳಿದಿದೆ.

ಇಂತಹ ಮಹಾ ವ್ಯಕ್ತಿ ಗಳು ಆಗೊಮ್ಮೆ ಈಗೊಮ್ಮೆ ಚರಿತ್ರೆಯಲ್ಲಿ ಕಾಣಿಸಿಕೊಳ್ಳ ಬಹುದು ಅಷ್ಟೆ. ದಾನಶೂರ ಕರ್ಣ ನಂತೆ ಪ್ರಸಿದ್ಧ ಕೊಡುಗೈ ದಾನಿಯಾಗಿದ್ದ ಸದಾಶಿವ ರಾಯರನ್ನು ನಾವು ಇನ್ನಾದರೂ ನೆನಪಿಸಿ ಕೊಳ್ಳಬೇಕು. ಅವರು ಸತ್ತ ಕೆಲವೇ ದಿನಗಳಲ್ಲಿ ಮಹಾತ್ಮಾ ಗಾಂಧಿಯವರು ಸದಾಶಿವರಾಯ ರ ತಾಯಿಯನ್ನು ಭೇಟಿಯಾ ಗಲು ಹೋಗಿದ್ದರು. ಆಗ ಅವರು ರಾಯರ ತಾಯಿ ರಾಧಾಬಯಿಯವರಿಗೆ ತಲೆಬಾಗಿ ನಮಸ್ಕರಿಸಿ, “ಇಂತಹ ಸುಪುತ್ರನನ್ನು ಹೆತ್ತ ನೀವು ಅದೃಷ್ಟಶಾಲಿಗಳು ತಾಯೀ” ಎಂದ ರಂತೆ. ೫೬ರ ನಡುವಯಸ್ಸಿನಲ್ಲಿಯೇ ಸದಾಶಿವ ರಾಯರನ್ನು ಕಳೆದುಕೊಂಡು ಕರ್ನಾಟಕವೇ ಏಕೆ ಇಡೀ ಭಾರತ ತಬ್ಬಲಿ ಯಾಯಿತು. ಇಂತಹ ವೀರರ, ದಾನಶೂರರ ಹೆಸರನ್ನು ಹೇಳಿದಾಗ ಪ್ರತಿಯೊಬ್ಬ ಭಾರತೀಯನ, ಕನ್ನಡಿಗನ ಮನ ಮಿಡಿಯುತ್ತದೆ.

✍️ಡಾ.ಸತ್ಯವತಿ ಮೂರ್ತಿ
ಮ್ಯಾಂಚೆಸ್ಟರ್,ಇಂಗ್ಲೆಂಡ್