ದಿನಾಂಕ : ೧೮ -೯- ೨೦೨೨ ರ ಭಾನುವಾರ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ, ಕನ್ನಡ ಜನಶಕ್ತಿಕೇಂದ್ರ ಮತ್ತು ಡಾ.ನರಹಳ್ಳಿ ಪ್ರತಿಷ್ಠಾನ ಆಯೋಜಿಸಿದ್ದ ನರಹಳ್ಳಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ರಾದ ಶ್ರೀ ಜಿ. ಎನ್. ರಂಗನಾಥ ರಾವ್ ರವರು ಡಾ. ರಾಜ ಶೇಖರ ಹಳೆಮನೆ ಅವರಿಗೆ ನರಹಳ್ಳಿ ಪ್ರಶಸ್ತಿ ಪ್ರದಾನ ಮಾಡಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಬದುಕು ಬರಹದ ಬಗ್ಗೆ ಮಾತನಾಡಿದರು.

ಡಾ. ವೆಂಕಟಗಿರಿ ದಳವಾಯಿರವರು ಪ್ರಶಸ್ತಿ ಪುರಸ್ಕೃತರಾದ ಡಾ. ರಾಜಶೇಖರ ಹಳೆಮನೆ ಅವರ ಸಾಹಿತ್ಯ ಕೃಷಿಯನ್ನು ಕುರಿತು ಮಾತನಾ ಡಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಚ್. ಎಸ್. ವೆಂಕಟೇಶ್ ಮೂರ್ತಿರವರು ಅಧ್ಯಕ್ಷತೆ ವಹಿಸಿದ್ದರು.

ನಾನು ಪ್ರಾರಂಭದಲ್ಲಿ ಅತಿಥಿ ಮಹೋದಯ ರನ್ನು ಮತ್ತು ಆಹ್ವಾನಿತ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದೆ.

ಸಮಾರಂಭದಲ್ಲಿ ಕನ್ನಡ ಜನಶಕ್ತಿ ಕೇಂದ್ರದ ಪದಾಧಿಕಾರಿಗಳಾದ ಶ್ರೀ ಲಕ್ಷ್ಮೀ ನರಸಿಂಹ, ಶ್ರೀ ಸಿ.ಪುಟ್ಟರಾಜು, ಶ್ರೀ ಸಿ.ಕೆ.ದಾಸಪ್ಪ, ಡಾ.ನಂಜುಂಡಪ್ಪ, ಶ್ರೀ ತಿಮ್ಮೇಗೌಡ, ಶ್ರೀ ಟಿ. ಎನ್. ನಂಜಪ್ಪ ಶ್ರೀ ಕೋದಂಡರಾಮು, ಶ್ರೀ ವಿ.ಆರ್. ಗೋಪಾಲ್ ಶ್ರೀ ಶಿವಸ್ವಾಮಿ ಹಾಗೂ ಡಾ.ನರಹಳ್ಳಿ ಪ್ರತಿಷ್ಠಾನದ ಪದಾಧಿಕಾರಿ ಗಳಾದ ಶ್ರೀ ಆನಂದರಾಮ್ ಉಪಾಧ್ಯ, ಶ್ರೀ ಬಿ. ಆರ್. ಲಕ್ಷ್ಮಣರಾವ್, ಶ್ರೀಮತಿ ರಜನಿ ನರಹಳ್ಳಿ ಮತ್ತು ಶ್ರೀ ನ.ರವಿಕುಮಾರ್ ಅವರುಗಳು ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
✍️ಶ್ರೀಸಿ.ಕೆ.ರಾಮೇಗೌಡ
ಅಧ್ಯಕ್ಷರು ಜನಶಕ್ತಿ ಕೇಂದ್ರ
ಬೆಂಗಳೂರು