ವಿಶ್ವವೇ ಮೆರದ
ವಿಶ್ವವೇ ಮರೆಯದ
ಅಧ್ಭುತ ತಂತ್ರಜ್ಞ
ಸರ್. ವಿಶ್ವೇಶ್ವರಯ್ಯ

ತಾಯಿ ಭಾರತೀ ಮಡಿಲ
ಕನ್ನಡಾಂಬೆಯ ಕಂದ
ಜ್ಞಾನಸಿರಿಯಲಿ
ವಿಶೇಷರು ಇವರಯ್ಯ

ಕನ್ನಂಬಾಡಿಯ ಬೆರಗು
ಮೈಸೂರಿನ ಮೆರಗು
ತಾಂತ್ರಿಕತೆಯ ಸೊಬಗು
ಕಾಯಕದ ಮಾಂತ್ರಿಕರಯ್ಯ

ಜಗವೇ ಅರಿಯದು
ಜಗಕ್ಕೆ ಅರಿಯಲಾಗದು
ಇವರ ಕೊಡುಗೆಯ
ತಂತ್ರಜ್ಞಾನಸಾರವಯ್ಯ

ವಿಶ್ವ ವಿಶೇಷ ಜ್ಞಾನದ
ಈಶ್ವರ ಎನಿಸಿಕೊಂಡರು
ಭಾರತರತ್ನ ಹೆಮ್ಮೆಯ
ಶತಾಯುಷಿ ಇವರಯ್ಯ

ಇಂದಿನ ತಾಂತ್ರಿಕರಿಗೆ
ಜ್ಞಾನ ಸ್ಫೂರ್ತಿ ಸೆಲೆ
ಇವರ ಹಿಡಿ ಮೆದುಳಿಗೆ
ಕಟ್ಟಲಾಗದು ಬೆಲೆ

ಸಾಕ್ಷಾತ್ ದೇವರ ವರವಯ್ಯ
ನಮ್ಮ ಸರ್. ವಿಶ್ವೇಶ್ವರಯ್ಯ
ನನ್ನ ಪದಗಳಲ್ಲಿ ವಂದನೆಗಳ
ನಿಮಗೆ ಅರ್ಪಿಸುವೆನಯ್ಯ

✍️ ಕಾವ್ಯಸುತ
ಷಣ್ಮುಗಂ ವಿವೇಕಾನಂದ
ಧಾರವಾಡ