ಬೆಂಗಳೂರಿಗೆ ಮಳೆ
ಹೊಸದೇನಲ್ಲ ಬಿಡಿ
ಸುರಿದಷ್ಟೂ ಇಂಗಲು
ವ್ಯವಸ್ಥೆ ಇದ್ದಿದ್ದರೆ /
ಬರುತ್ತಿತ್ತೆ ಈ ಸ್ಥಿತಿ
ಕೆರೆ -ಕಾಲುವೆ ನುಂಗಿ
ಬಂತು ಈಗ ಈ ಗತಿ
ಬರಬಹುದೆ ಮತಿ/
ಹಳ್ಳಿ -ಗ್ರಾಮಗಳೆಲ್ಲ
ಸೇರಿ ನಗರಗಳ
ಹೊಟ್ಟೆಯು ಉಬ್ಬರಿಸಿ
ಕೊಳೆ ಮಳಮಳಿಸಿ/
ಮಾಲಿನ್ಯ ಪಸರಿಸಿ
ತಾನು ಮಾಡಿದ್ದನ್ನೆಲ್ಲ
ತಾನು ಉಣ್ಣುವಂತೆಯೆ
ಮಾಡುತ್ತಿದೆ ಪ್ರಕೃತಿ/
✍️ಶ್ರೀಮತಿ ರೇಖಾ ನಾಡಿಗೇರ
ಹುಬ್ಬಳ್ಳಿ