ಯಲ್ಲಾಪುರದ ಶಕ್ತಿ ಹಾಗೂ ಭದ್ರ ಬುನಾದಿ ಎಂದರೆ ಯಲ್ಲಾಪುರ ಶ್ರೀ ಗ್ರಾಮದೇವಿಯ ಜಾತ್ರೆ. ಇದು ಕರ್ನಾಟಕದಲ್ಲಿ ಅತೀ ವಿಜೃಂಭಣೆ ಯಿಂದ ಆಚರಿಸಲ್ಪಡುತ್ತದೆ. ಗ್ರಾಮದೇವಿ ಜಾತ್ರೆ ಎಂದಾಗ ನಮ್ಮೂರಿನವರಿಗಷ್ಟೆ ಅಲ್ಲ, ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕೇರಳ ಹಾಗೂ ಆಂಧ್ರದ ಕಡೆಯಿಂದ ಭಕ್ತರು ಬಂದು ತಾಯಿಯ ಸೇವೆ ಮಾಡುತ್ತಾ, ಶ್ರೀಗ್ರಾಮದೇವಿ ಕ್ಷೇತ್ರದ ದರ್ಶನದಿಂದ ಪುನೀತ ರಾಗುತ್ತಾರೆ.

ಉತ್ತರ ಕನ್ನಡ ಜಿಲ್ಲೆ ಕರಾವಳಿಯ ನಾಡಾಗಿದ್ದು, ಕಾರವಾರ, ಕುಮಟಾ, ಹೊನ್ನಾವರ, ಅಂಕೋಲ ಹಳಿಯಾಳ, ಮುಂಡಗೋಡ ಭಾಗದ ಭಕ್ತರು ಹೆಚ್ಚಾಗಿ ಸೇವೆಗೆ ಧಾವಿಸು ತ್ತಾರೆ. ಘಟ್ಟದ ಮೇಲಿನ ಅತೀ ದೊಡ್ಡ ಜಾತ್ರೆಯಿದು. ಅರಬೈಲ್ ಘಟ್ಟವೇ ಸಾಕ್ಷಿ. ಶಿರಸಿಯಲ್ಲಿ ನೆಲಸಿರುವ ದೇವಿ ಯ ಭಕ್ತರು, ಶ್ರೀ ಗ್ರಾಮದೇವಿಗೆ ಶ್ರೀಮಾರಿಕಾಂಬಾ ದೇವಿಯ ತಂಗಿ ಎಂದು ಕರೆಯುತ್ತಾರೆ.

ನಮ್ಮೂರ ಗ್ರಾಮದೇವತೆಯ ಇತಿಹಾಸ 08 ಶತಮಾನಗಳನ್ನು ಹೊಂದಿದೆಯೆಂಬುದು ಇನ್ನೂ ಕುತೂಹಲ ಹಾಗೂ ಹೆಮ್ಮೆಯನ್ನು ಮೂಡಿಸು ತ್ತದೆ. ಮಲೆನಾಡ ಸೊಬಗಿನಲ್ಲಿ ಅರಳಿ ನಿಂತ ನಯನ ಮನೋಹರ ತಾಲ್ಲೂಕು ನಮ್ಮದು. ಈ ಜಿಲ್ಲೆಯಂತೆ ಅರೆಮಲೆನಾಡು, ಬಯಲು ಸೀಮೆ, ಕರಾವಳಿ, ಪರ್ವತ ಶ್ರೇಣಿಗಳ ನ್ನು ಹೊಂದಿದ ಜಿಲ್ಲೆ ಬೇರೆಲ್ಲೂ ಕಾಣಸಿಗದು. ಯಲ್ಲಾಪುರ ತಾಲೂಕು ನೂರಾರು ವರ್ಷಗಳ ಹಿಂದೆ ಇದನ್ನು ಮೇಲುಗೈ ಯಲ್ಲಾಪುರ ಎಂಬ ನಾಮಧೇಯ ಪಡೆದಿತ್ತೆಂದು ನಮ್ಮ ತಂದೆಯವರು ಆಗಾಗ ಹೇಳುತ್ತಿದ್ದ ನೆನಪು. ಇಂತಹ ಗ್ರಾಮದೇವಿ ದೇವಸ್ಥಾನದ ಅಭಿವೃದ್ಧಿ ಪರ್ವ ದೈವೀ ಪ್ರೇರಣೆ ಯೋ ಎಂಬಂತೆ ಪ್ರಾರಂಭಗೊಂಡು ಇಂದು ಎಲ್ಲರ ಮನದಂಗ ಳದಲ್ಲಿ ಮನೆಮಾಡಿದೆ.

ಸರಿ ಸುಮಾರು ೬೦೦ ವರ್ಷಗಳ ಹಿಂದೆ ಯಲ್ಲಾ ಪುರ ತಾಲೂಕಿನ ಹಿಂದುಳಿದ ಗ್ರಾಮ ವಾದ ‘ನಾರಾಯಣಗೆರೆ’ ಎನ್ನುವಲ್ಲಿ ಒಬ್ಬ ಶೂದ್ರನಿಗೆ ಹೊಲದ ಕೆಲಸವನ್ನು ಮಾಡುತ್ತಿರು ವಾಗ ಸವಕಲು ಪ್ರತಿಮೆಗಳು ಸಿಕ್ಕಿದ್ದವು. ಅದನ್ನು ನವೀಕರಿಸಿ ‘ಶಿವಣಿ’ ಕಟ್ಟಿಗೆಯಿಂದ ಎರಡು ಮರದ ಪ್ರತಿಮೆಗಳನ್ನು ಹೊಸದಾಗಿ ಮಾಡಲ್ಪ ಟ್ಟಿತು. ಆಕಾಶಬಣ್ಣದ ಪ್ರತಿಮೆ ‘ಕಾಳಮ್ಮ’, ಅದರ ವಾಹನ ‘ಕೋಣ’! ಕೆಂಪು ಬಣ್ಣದ ಪ್ರತಿಮೆ ‘ದುರ್ಗಮ್ಮ’, ಅದರ ವಾಹನ ‘ಸಿಂಹ’.

ಜೋಡಿ ಪ್ರತಿಮೆಗಳೊಂದಿಗೆ ದೇವಾಲಯವ ನ್ನು ಕಟ್ಟಲಾಯಿತು. ಇಲ್ಲಿ ದೇವಿಯರ ಪೂಜೆ ಯನ್ನು ಮಾಡುವವರು ಬ್ರಾಹ್ಮಣರಲ್ಲ! ದೇವಿಯರ ಮುಂದೆ ಯಾವುದೆ ಜಾತಿಭೇದ ವಿಲ್ಲದೆಯೇ ಭಕ್ತರು ತಮ್ಮ ಸಂಕಷ್ಟ ಗಳನ್ನು ನೀಗಿಸಿಕೊಳ್ಳುವ ರು. ಐತಿಹಾಸಿಕ ಹಿನ್ನೆಲೆಯ ನ್ನೂ ಹೊಂದಿರುವ ಯಲ್ಲಾಪುರದ ಪ್ರಮುಖ ಧಾರ್ಮಿಕ ಕ್ಷೇತ್ರ ಗ್ರಾಮದೇವಿ ದೇವಸ್ಥಾನ. ಇಲ್ಲಿನ ಆಚರಣೆಗ ಳೂ ವಿಶಿಷ್ಟ. ಪ್ರತಿ ೦೩ ವರ್ಷಕ್ಕೊಮ್ಮೆ ವಿಜೃಂಭ ಣೆಯಿಂದ ಜರುಗುವ ಅತಿ ದೊಡ್ಡ ಜಾತ್ರೆಗಳಲ್ಲಿ ಗ್ರಾಮದೇವಿ ಜಾತ್ರೆಯೂ ಒಂದು.

ಜಾತ್ರೆ ನಿಮಿತ್ತ ನಡೆಯುವ ಹೊರ ಮಂಗಳ ವಾರ, ಹಾಗೆ ಅಂಕಿ ಹಾಕುವ ಶಾಸ್ತ್ರ, ದೇವಿ ಕಲ್ಯಾಣ ಶಾಸ್ತ್ರ ಮತ್ತು ಅನೇಕ ಶಾಸ್ತ್ರ ನಡೆಯು ತ್ತದೆ. ದೇವಿಯರ ಲಗ್ನ, ಅನ್ನಬಲಿಯ ಬೇಲಿ, ಕಾಳ ರಾತ್ರಿಯಲ್ಲಿ ಉತ್ಸವದ ವಿಸರ್ಜನೆ ಮೊದ ಲಾದ ವಿಶಿಷ್ಟ ಆಚರಣೆಗಳು ಕುತೂಹಲ ಕೆರಳಿ ಸುತ್ತವೆ. ಹೊರ ಮಂಗಳವಾರ ಜಾತ್ರೆಯ ಪೂರ್ವ ತಯಾರಿಯ ಒಂದು ಭಾಗವೆಂದೆ ಹೇಳ ಬೇಕು. ಇಡೀ ಊರಿನ ಮನೆ, ಮನಗಳು ಶುಭ್ರತೆ ಯ ತಾಣಗಳಾಗಿ ಹೊರಹೊಮ್ಮು ವವು. ಅಂದು ಇಡೀ ಪಟ್ಟಣದ ಜನ ಬೆಳಿಗ್ಗೆ ಯಿಂದ ಸಂಜೆಯ ವರೆಗೆ ಮನೆಯ ಬಾಗಿಲು ಗಳನ್ನು ಮುಚ್ಚಿ ಊರ ಹೊರಗೆ ವಾಸ್ತವ್ಯ ಮಾಡುತ್ತಾರೆ. ಮನೆಯಲ್ಲಿ ದೇವರ ಮುಂದೆ ದೀಪ ಹಚ್ಚಿ, ನೈವೇದ್ಯ ಇಟ್ಟು, ಬುತ್ತಿಯನ್ನು ಕಟ್ಟಿಕೊಂಡು ಊರಾಚೆ ಬಂದು ಕಾಲ ಕಳೆಯು ತ್ತಾರೆ.

ಇಂಥ ಭಕ್ತರ ಮನೆಗೆ ಗ್ರಾಮದೇವಿ ಬಂದು ಹೋಗುತ್ತಾಳೆ ಎನ್ನುವ ನಂಬಿಕೆಯಿದೆ. ಎಲ್ಲರೂ ಇದರಲ್ಲಿ ಪಾಲ್ಗೊಳ್ಳುವುದರಿಂದ ಅಘೋಷಿತ ಬಂದ್‌ನ ವಾತಾವರಣ ಇರುತ್ತದೆ. ಸುದೀರ್ಘ ಇತಿಹಾಸವುಳ್ಳ ಈ ದೇವಸ್ಥಾನ ಪ್ರಸಿದ್ಧಿಗೊಳ್ಳದೆ, ಹೇಳುವಂತಹ ಯಾವುದೇ ಸೌಲಭ್ಯವನ್ನು ಪಡೆದುಕೊಳ್ಳದೆ ಇದ್ದುದು ಆ ತಾಯಿಯ ಸಂಕಲ್ಪ. ನನಗೆ ತಿಳು ವಳಿಕೆ ಬಂದಾಗಿನಿಂದ   ಹಳೆಯ ಗುಡಿಯನ್ನು ನೋಡಿದ ಹಾಗೂ ಪುಟ್ಟ ಗುಡಿಯಾದರೂ ಕೀರ್ತನೆಗಳನ್ನು ಕೇಳಲು ಮುಂಚೂಣಿಯಲ್ಲಿ ಕುಳಿತು ಭಕ್ತಿ ಪರವಶವಾದ ಗಳಿಗೆಗಳನ್ನು ಮೆಲುಕುಹಾಕುವ ಸುಸಂದರ್ಭ.

ಜಾತ್ರೆಯ ಸಮಯದಲ್ಲಿ ನೆರೆಯ ರಾಜ್ಯ ಹಾಗೂ ನೆರೆಯ ಜಿಲ್ಲೆಯ ಸಹಸ್ರಾರು ಜನರು ಬರುತ್ತಾರೆ ಹಾಗೆ ತಾಯಿಗೆ ಹೊನ್ನಾಟದ ಸಮಯದಲ್ಲಿ ಜಾತಿ ಧರ್ಮದ ಬೇಧವಿಲ್ಲದೆ ತಮ್ಮ ಶಿರದ ಮೇಲೆ ಹೊತ್ತು ಹೊನ್ನಾಟ ನಡೆಸುತ್ತಾರೆ.

ಸಾಮಾನ್ಯ ಗುಡಿಯೊಂದನ್ನು 1997-98ರಲ್ಲಿ ನಿರ್ಮಿಸಲಾಯಿತು. ನಂತರ ಸಾಕಷ್ಟು ಹಣವಿದ್ದ ರೂ ದೇವಸ್ಥಾನದ ಅಭಿವೃದ್ಧಿ ಕೆಲಸ ಕುಂಟುತ್ತ ಸಾಗಿತ್ತು. ಆ ಸಂದರ್ಭದಲ್ಲಿ ಶ್ರೀರಾಜೇಂದ್ರ ಪ್ರಸಾದ ಭಟ್ಟರ ನೇತೃತ್ವದಲ್ಲಿ ಈದೇವಸ್ಥಾನದ ಅಭ್ಯುದಯಕ್ಕೆ ನಾಂದಿಯಾ ಯಿತು. ದೇವಸ್ಥಾನ ದ ವ್ಯವಸ್ಥೆ ಇದೀಗ ವಿಶೇಷತೆಯನ್ನು ಹೊಂದಿದೆ. ಧಾರ್ಮಿಕ ವಿಧಿ-ವಿಧಾನ ನಿರ್ವಹಿಸುವ ವ್ಯವಸ್ಥಾ ಪಕ ಕುಟುಂಬದವರಿಗೆ ಆಯಾಗಾರರು ಎನ್ನಲಾ ಗುತ್ತಿದೆ. ಮನೋಹರ ಹೆಗಡೆಯವರಲ್ಲಿ ಇರುವ ದಾಖಲೆಯಂತೆ ಈ ದೇವಾಲಯ 350 ವರ್ಷ ಕ್ಕಿಂತಲೂ ಹಿಂದಿನದೆಂಬ ದಾಖಲೆ ದೊರೆಯು ತ್ತದೆ.

ಈ ದೇವಾಲಯಕ್ಕೆ ಹಿಂದೂಗಳಲ್ಲದೆ ಎಲ್ಲ ವರ್ಗ ದವರೂ ಶ್ರದ್ಧಾಭಕ್ತಿಗಳಿಂದ ಪೂಜೆ ಸಲ್ಲಿಸುವ ಸಂಪ್ರದಾಯ ಬೆಳೆದುಬಂದಿದೆ. ಜೊತೆಯಲ್ಲಿ ಮುಸ್ಲಿಂ, ಕ್ರೈಸ್ತ ಸಮಾಜದವರೂ ಪೂಜೆ ಸಲ್ಲಿ ಸುವ ಪರಿಪಾಠ ಉಲ್ಲೇಖನೀಯ. ಸುಂದರವಾದ ವ್ಯವಸ್ಥಿತವಾದ ಬಯಲು ರಂಗ ಮಂಟಪವನ್ನು 8 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾ ಗಿದ್ದು, 20 ಲಕ್ಷ ವೆಚ್ಚದಲ್ಲಿ ನಾಗರ ದೇವರ ಗುಡಿ ಮತ್ತು ಆಂಜನೇಯ ಗುಡಿಗಳನ್ನು ನಿರ್ಮಿಸ ಲಾಗಿದೆ.10 ಲಕ್ಷ ವೆಚ್ಚದಲ್ಲಿ ಮಹಾದ್ವಾರ ನಿರ್ಮಿಸಲಾಗಿದೆ.

ಈ ಮಹಾದ್ವಾರದ ಶಿಖರದ ಮೇಲೆ ನವರಂಗದ ಮುಖಮಂಟಪ, ತಾಮ್ರದ ಹೊದಿಕೆ, ಮತ್ತು ನಾಗದೇವರ, ಆಂಜನೇಯ ಗುಡಿಗಳೆರಡರ ಮೇಲ್ಛಾವಣಿಗೂ ತಾಮ್ರದ ಹೊದಿಕೆ ಹಾಸಲಾ ಗಿದೆ. ಶತಚಂಡಿಯಾಗ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳನ್ನು ಏರ್ಪಡಿಸಲು ವಿಶಾಲವಾದಂತಹ ಯಾಗಶಾಲೆ ಮತ್ತು ಸುಮಾರು 10,000 ಜನ ಕುಳಿತುಕೊಳ್ಳಬಹು ದಾದ ವ್ಯವಸ್ಥಿತವಾದ ಚಪ್ಪರ ನಿರ್ಮಿಸಲಾಗಿದೆ.

ಒಂದು ಊರು ಇದ್ದ ಮೇಲೆ ಆ ಊರಿನ ಜನತೆ ಯ ವಿಶ್ವಾಸ, ನಂಬಿಕೆಯನ್ನು ಉಳಿಸಿ ಕೊಂಡು ಊರಿನ ಅಭ್ಯುದಯಕ್ಕೆ ಅವರಿಟ್ಟ ನಂಬಿಕೆ ಬಲವಾಗಿ ಬದುಕಿಗೆ ಹೊಸ ಮಾರ್ಗ ಸೂಚಿಸಿದ್ದು ದೈವಿ ಪ್ರೇರಣೆ. ನಮ್ಮೂರ ಗ್ರಾಮ ದೇವಿಯ ಆರಾಧನೆಯೊಂದಿಗೆ ಫಲಾಫಲಗಳು ಅವರವರ ಭಕ್ತಿಗೆ…ಸಮರ್ಪಣೆ. ಪ್ರಸಾದಗಳು, ಭಕ್ತರ ಮಾನಸದಲ್ಲಿ ಭದ್ರಬುನಾದಿಯೆಂದರೆ ತಪ್ಪಾಗ ಲಾರದು‌‌‌…ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಬಂದು ಆಶೀರ್ವಾದ ಪಡೆದಷ್ಟು ಮನಕೆ ಆನಂದ ಕಣ್ಣಾರೆ ಕಂಡು ಅನುಭವಿಸಿ ಅನುಭೂತರಾಗಿ….

✍️ ಶ್ರೀಮತಿ ಶಿವಲೀಲಾ ಹುಣಸಗಿ 
ಶಿಕ್ಷಕಿ,ಯಲ್ಲಾಪೂರ