ಗುರು ಈ ಮನಜಗದ ದೈವ
ಗುರು ಜಗಮನದ ಸುದೈವ
ಜ್ಞಾನಕೋಟಿಯ ಚಿಲುಮೆ
ಬದುಕ ಬೆಳಗುವ ಕುಲುಮೆ

ಗುರುವು ತಾಯಿ ಗುರುವು ತಂದೆ
ಅರ್ಪಣೆ ವಂದನೆ ಗುರುವಿಗೆಂದೆ
ಶಿರಬಾಗಿ ನಮಿಪೆ ಗುರು ರೂಪಕೆ
ಸಮರ್ಪಿಸುವೆನು ಶ್ರೀ ಸ್ವರೂಪಕೆ

ನಾನು ಕಣ ಕಾಯದ ಕರುವು
ಅರಿಯೆ ನಾ ಕಾಲನ ತಿರುವು
ಕೈಹಿಡಿದು ನಡೆಸಲು ಗುರುವು
ಅಜ್ಞಾತ ಅಜ್ಞಾನವೇ ಮರುವು

ತಿಳಿದಿರುವೆ ಗುರುವೆಂದರೆ ಅರಿವು
ಜ್ಞಾನಸುಜ್ಞಾನ ತರಂಗಗಳ ಹರಿವು
ಬೇಡುವೆ ಗುರುಸೇವೆಯ ವರವನು
ಶ್ರೀಗುರು ಚರಣಕೆ ಉಸಿರ ಶರಣನು

✍️ಕಾವ್ಯಸುತ
(ಷಣ್ಮುಖಂ ವಿವೇಕಾನಂದ)