ಏಕದಂತ ಬ್ರಹ್ಮನೊಬ್ಬನೇ ಈ ಜಗದಲಿ
ವಕ್ರತುಂಡ ಸರಿದಾರಿಯ ತೊರಿಸುವಾತ
ಗಜವಕ್ರ ಜ್ಞಾನದೀಪವಾ ಬೆಳಗಿಸುವಾತ
ಲಂಬೋದರ ಸುಖದುಃಖ ನಿವಾರಿಸುವಾತ…

ವಿಕಟದಿ ಮೋಕ್ಷವನ್ನು ನೀಡುತಾ ಬೆಳೆಸುವಾತ
ವಿಘ್ನೇಶ್ವರ ವಿಘ್ನೇವಾ ಸರಿಸಿ ಒಡೆಯನಾಗಿಸುವಾತ
ದೂಮ್ರವರ್ಣದಿ ಸುಗುಣದ ಬೆಳಕು ನೀಡುವಾತ
ಮಾತೃಗಳ ಹಣೆಲಿ ಬೆಳದಿಂಗಳ ಮೂಡಿಸುವಾತ…

ಗಣಗಳ ಅಧಿಪತ್ಯದ ದೈವಗಳ ದೇವಾನಿತಾ
ಮಂಗಳದಿ ಶಾಂತಿಯ ನೀಡುವ ದೂತನಿತಾ
ಸಕಲ ವಿದ್ಯೆಯ ಕರಗತ ಮಾಡಿಕೊಂಡತಾ
ವ್ರತಪತಿ ಸ್ತೋತ್ರ ಪ್ರಾಶಸ್ತ್ಯ ಹೇಳಿಕೊಡುವಾತ…

ಸ್ವಯಂಸಿದ್ಧಿಯ ಪರಿಪೂರ್ಣದಿ ತಿಳಿಸುವಾತ
ಸ್ಥೂಲತುಂಡದ ದಂತಗಳುಳ್ಳ ದೊಡ್ಡವನಿತಾ
ಶೂರ್ಪಕರ್ಣ ಶಕ್ತಿಯುತ ಚತುರ ನಿಪುಣಾನಿತಾ
ಪ್ರಮತ್ತದಿ ದೈತ್ಯಭಯವನು ಸಂಹರಿಸುವಾತ…

✍️ಚಂದ್ರಶೇಖರ ಮದ್ಲಾಪೂರ 
ಮಾನವಿ