“ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರಹೊಮ್ಮಲು ಸಾಹಿತ್ಯ ಒಂದು ಪ್ರಖರ ಮಾಧ್ಯಮವಾಗಿದೆ : ಗುರುಸಿದ್ದಪ್ಪ ಅಭಿಮತ ” ದಿನಾಂಕ 29/8/22 ರಂದು ಸಾಯಂಕಾಲ ೬-೩೦ ಕ್ಕೆ ಸೋಮವಾರ ದಂದು ಹುಬ್ಬಳ್ಳಿಯ ಮಂಗಳವಾರ ಪೇಟೆಯ ಲ್ಲಿರುವ ರುದ್ರಾಕ್ಷಿ ಮಠದ ಪ್ರಾಂಗಣದಲ್ಲಿ ಕಸಾಪ ಹುಬ್ಬಳ್ಳಿ ನಗರ ಘಟಕದ ವತಿಯಿಂದ ಮಕ್ಕಳೊಂ ದಿಗೆ ಸಾಹಿತ್ಯಿಕ ಕಲರವ ಕಾರ್ಯಕ್ರಮ ಜರುಗಿತು.

ಶ್ರೀಮಠದ ಅಂಗಳದಲ್ಲಿ ಸಂಜೆ ಪಾಠಗಳ ತರಗತಿ ಗೆ ಆಗಮಿಸಿದ್ದ ವಿವಿಧ ಶಾಲಾ ಮಕ್ಕಳೊಂದಿಗೆ ಒಂದು ಚಿಕ್ಕ ಸಾಹಿತ್ಯಿಕ ಕಲರವ ಕಾರ್ಯಕ್ರಮ ದಲ್ಲಿ ನೆರೆದ ಮಕ್ಕಳಿಗೆ ಶಿಕ್ಷಣ ತಜ್ಞ ಪ್ರೊ.ಎಸ್.ಕೆ. ಆದಪ್ಪನವರ ಪ್ರೇರಣಾದಾಯಕ ನೀತಿ ಕಥೆ ಹೇಳುವ ಮೂಲಕ ಮಕ್ಕಳಲ್ಲಿ ಉಜ್ವಲ ಭವಿಷ್ಯ ವನ್ನು ಕಟ್ಟಿಕೊಳ್ಳಲು ಬೇಕಾಗುವ ಛಲ, ಗುರಿ ಹಾಗೂ ಆತ್ಮವಿಶ್ವಾಸ ತುಂಬಿದರು. ಕವಿ, ಶಿಕ್ಷಕ ಸುಭಾಷ ಚವ್ಹಾಣ ‘ಹೂವು ಕುಸುಮಿಸಲಿ‘ ವ ‘ಪರಿಸರ ಉಳಿಸು’ ಎಂಬ ಸ್ವರಚಿತ ಕವಿತೆಗಳ ನ್ನು ವಾಚಿಸಿ ಅದರ ಅರ್ಥ ಸಹಿತ ಪರಿಸರ ಸಂರಕ್ಷಣೆ ಯ ಕುರಿತು ಜಾಗೃತಿ ಮೂಡಿಸಿದರು. ಅಲ್ಲದೆ ಮಕ್ಕಳಲ್ಲಿ ಕನ್ನಡ ನಾಡು ನುಡಿ ಹಿರಿಮೆ- ಗರಿಮೆ ಯನ್ನು ಸಾರಿ ಸಾಹಿತ್ಯಿಕ ಕಲರವ ಸೃಷ್ಟಿಸಿ ಮಕ್ಕಳ ಮನಸ್ಸಿಗೆ ಮುದ ನೀಡಿದರು.ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀ ಗುರುಸಿದ್ದಪ್ಪ ಎಂ ಬಡಿಗೇರ ಮಾತನಾಡಿ ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ಸಾಹಿತ್ಯ ಒಂದು ಮಾಧ್ಯಮವಾಗಿದೆ ಎಂದರು. ಮಕ್ಕಳಿಗೆ ಅನೇಕ ಸ್ವಾರಸ್ಯಕರ ಸಂಗತಿ ಗಳನ್ನು ತಿಳಿಸಿ ಅವರ ಕಲಿಕಾಸಕ್ತಿಯನ್ನು ಶ್ಲಾಘಿಸುತ್ತ ಅವರು ಸಾಹಿತ್ಯ ಸಂವಾದಕ್ಕೆ ಅವಕಾಶ ಕಲ್ಪಿಸಿಕೊಟ್ಟ ಸಂಜೆ ಪಾಠಗಳ ತರಗತಿ ಶಿಕ್ಷಕ ಹಾಗೂ ಯುಪಿಎಸ್ಸಿ ಪರಿಕ್ಷಾರ್ಥಿ ಶಿವಕುಮಾರ ಹಿರೇಮಠ ಅವರು ಶ್ರೀಮಠ ವ ತಾಲ್ಲೂಕು ಕಸಾಪಕ್ಕೆ ವಂದಿಸಿ ಕೃತಜ್ಞತೆಗಳನ್ನು ಅರ್ಪಿಸಿದರು.