ಸನ್ಮನಸಿಗೆ ಸೀಮೆಯೆಲ್ಲಿ
ಸಣ್ಬುದ್ದಿಗೆ ಜಾಗವಿರ್ದಿರಲಿ
ಭಾನು-ಭುವಿಯೊಂದೇ
ಭಾವಕ್ಕಿರಬೇಕೆ ಎಲ್ಲೆ

ನನ್ನ ಹಾಡು ಎಲ್ಲರಿಗೂ
ನೋವಿಗೇಕೆ ಜಾಗವು
ಸವಿಸಿಹಿ ಹಂಚೋಣ
ಜೋರಾಗಿ ನಕ್ಕು ಬಿಡೋಣ

ಬದುಕೊಂದು ಜೋಕು
ಯಾರದೋ ಒಂದು ಆಟವು
ಜೋಕಿಗೆ ಅಳ್ತಾ ಕೂರ್ತಾರೇನು
ಮೈದಾನದಲಿ ಆಟವಾಡ್ಬೇಕು

ನೋಡಿ…ಯಾರೋ ಬಂದರು
ಬರಲಿ…ತೆರೀರಿ ಪೂರ್ತಿ ಬಾಗಿಲು
ಕಿಟಕಿಯೆಲ್ಲಾ ತೆರೆದುಬಿಡಿರಿ
ನನ್ನೊಡಲ ಗೀತೆ ಕೇಳಿಬಿಡಲಿ

ಇದು ಹೀಗೆ ಇರಬೇಕು ಎಲ್ಲೆಡೆ
ಗಡಿಗಳ ಗಡಿಬಿಡಿ ಇನ್ನೇತಕೆ
ಅಲ್ಲಿಯವರು ಇಲ್ಲಿಯವರೇ
ಇಲ್ಲಿರೋರು ಅಲ್ಲಿದ್ದೋರೆ

ಬದುಕಿನೊಂದೇ ಸತ್ಯ-“ಸಾವು”
ಜೀವಕ್ಕೊಂದದೇ ಸಹಜ-ಠಾವು
ಈಗಲೇ ಮಂಡಿಸಿರಿ ಠರಾವು
ಸಾಯೋ-ಮುನ್ನ ಎಂದೂ ಸಾಯೆವು

✍️ ಶ್ರೇಯಸ್ ಪರಿಚರಣ್