ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮ ಬದುಕನ್ನೆ ಅರ್ಪಿಸಿಕೊಂಡ ಕೆಚ್ಚೆದೆಯ ಕ್ರಾಂತಿಕಾರಿ ಮಹಿಳಾ ರತ್ನಗಳು ಭಾರತೀಯ ಮಹಿಳೆ ಗಂಡ ಮತ್ತು ಮಕ್ಕಳ ಪಾಲನೆ-ಪೋಷಣೆಗೆ ಮಾತ್ರ ಸಿಮೀತ ಎಂಬ ಮನುವಾದ ದ ಎದೆ ಸೀಳಿ ತಾವು ಕೂಡ ಪುರುಷರಿಗೆ ಸರಿಸಮಾನರಾಗಿ ದೈರ್ಯ ಸ್ಥೈರ್ಯ ತೋರಬಲ್ಲರು, ದೇಶ ಸೇವೆ ಮಾಡ ಬಲ್ಲರು, ನಾಡ ರಕ್ಷಿಸಬಲ್ಲರು ಎಂಬುದಕ್ಕೆ ಇತಿಹಾಸ ಸಾಕ್ಷಿ ಯಾಗಿದೆ. ಹೆಣ್ಣು ತಾನು ಅಬಲೆ ಅಲ್ಲ; ಸಶಕ್ತ ಕ್ರಾಂತಿ ಕಿಡಿ ಅನ್ನುವುದು ನಮಗೆ ವೇಧ್ಯವಾಗಲು ನಾವು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚಳು ವಳಿಯನ್ನು ಅಧ್ಯಯನ ಮಾಡಿದಾಗ ರುಜುವಾ ತಾಗುತ್ತದೆ. ಆ ದಿಸೆಯಲ್ಲಿ ಭಾರತ ಆಜಾದಿಕಾ ಅಮೃತ ಮಹೋತ್ಸವದ ನಿಮಿತ್ತ ಆ ಕ್ರಾಂತಿಕಾರಿ ಧೀರ ಮಹಿಳೆಯರ ಸ್ವಾಭಿಮಾನ, ಪರಾಕ್ರಮ, ಯೋಗದಾನದ ಕುರಿತು ಚಿಂತಿಸೋಣ.
ಕರಾವಳಿ ಕೇಸರಿ ರಾಣಿ ಅಬ್ಬಕ್ಕದೇವಿ (1525-157೦)

ಗೋವಾವನ್ನು ಆಕ್ರಮಿಸಿಕೊಂಡ ಬ್ರಿಟಿಷರು ಕರ್ನಾಟಕದ ದಕ್ಷಿಣ ಕರಾವಳಿಯನ್ನು ವಶಪಡಿಸಿ ಕೊಳ್ಳಲು ಮುಂದಾದಾಗ ದಿಟ್ಟತನದಿಂದ ಹೋರಾಡಿ ಸತತ 4೦ ವರ್ಷ ಗಳ ಕಾಲ ಬ್ರಿಟೀ ಷರಿಗೆ ಚಳ್ಳೆಹಣ್ಣು ತಿನ್ನಿಸಿದ ವೀರ ಮಹಿಳೆ. ಬೆಂಕಿ ಕಾರುವ ಬಾಣಗಳಿಂದ ಆಂಗ್ಲರ ಬಲಿಷ್ಠ ಹಡಗು ಗಳನ್ನು ನಾಶಮಾಡಿ ಅವರ ಎದೆಯಲ್ಲಿ ನಡುಕ ಹುಟ್ಟಿಸಿದ ಸ್ವಾಭಿಮಾನದ ರಾಣಿ ಅಬ್ಬಕ್ಕ ದೇವಿ ಸ್ವಾತಂತ್ರ್ಯ ಯೋಧರಿಗೆ ಸ್ಪೂರ್ತಿಯಾದರು. “ದೇಶ ನನ್ನದೆನ್ನದೆದೆ ಸುಡುಗಾಡು” ಎಂಬ ರಾಣಿ ಅಬ್ಬಕ ದೇವಿಯ ಮಾತು ರಾಷ್ಟ್ರ ಪ್ರೇಮ ದ ಹೆಗ್ಗುರುತಾಗಿದೆ.
ರಾಣಿ ವೇಲು ನಾಚಿಯಾರ್ (1730-1776)

ವಸಾಹತುಶಾಹಿ ಬ್ರಿಟಿಷರು ಶಿವಗಂಗೆಯ ಮೇಲೆ ದಾಳಿ ಮಾಡಿ ತನ್ನ ಪತಿಯನ್ನು ಕೊಂದಿ ದ್ದರಿಂದ ಪಲಾಯನವಾದ ರಾಣಿ ವೇಲು, ಅಂಜದೆ – ಅಳುಕದೆ ಅಂಗ್ರೇಜಿಗರ ವಿರುದ್ದ ಶಕ್ತಿ ಯುತ ಸೈನ್ಯವನ್ನು ನಿರ್ಮಿಸಿ ಅವರ ಶಸ್ತ್ರಾಸ್ತ್ರ ಗಳ ಕೊಠಡಿಗಳನ್ನು ಸೇನಾನಿ ಕೊಯಿಲಿಯ ಆತ್ಮಾಹುತಿ ಮೂಲಕ ಧ್ವಂಸ ಮಾಡಿ; ಬ್ರಿಟೀಷ ರನ್ನು ಸೋಲಿಸಿ ರಾಜ್ಯಭಾರ ವನ್ನು ನಡೆಸಿದ ಪರಾಕ್ರಮಶಾಲಿಯೇ ರಾಣಿ ನಾಚಿಯಾರ್.
ಝಲ್ಕರಿಬಾಯಿ(1830-1858)

ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯಂತೆ ಕಾಣು ತ್ತಿದ್ದ ದಲಿತ ಪರಿವಾರದ ಝಲ್ಕರಿಬಾಯಿ ಕಾಡಿ ನಲ್ಲಿ ದಾಳಿ ಮಾಡಿದ ಚಿರತೆಯನ್ನು ದನ ಮೇಯಿ ಸುವ ಕೋಲಿನಿಂದ ಕೊಂದ ಧೀರೆ. ರಾಣಿಯ ಆಪ್ತ ಸಲಹೆಗಾರ್ತಿಯಾಗಿ ಸೇವೆ ಮಾಡುತ್ತಿದ್ದಳು. ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂದು ನೆಪವೊಡ್ಡಿ ಯುದ್ದಕ್ಕೆ ಬಂದ ಅಂಗ್ರೇಜಿ ಗರೊಂದಿಗೆ ವೀರಾ ವೇಶದಿಂದ ಹೋರಾಡಿ ರಾಣಿ ಮತ್ತು ಆತನ ಮಗ ದಾಮೋದರ ಭೂಗತವಾಗಲು ಸಹಾಯ ಮಾಡಿದ ಛಲವಂತೆ. ಆದರೆ ಬ್ರಿಟಿಷರು ಯುದ್ಧ ದ ಕೊನೆಯವರೆಗೂ ಇವಳನ್ನೇ ರಾಣಿಯೆಂದು ಭಾವಿಸಿದ್ದರು.
ರಾಜಕುಮಾರಿ ಅಮೃತ್‌ಕೌರ್ (1839 – 1964)

ಸ್ವಾತಂತ್ರ ಸಂಗ್ರಾಮದಲ್ಲಿ ಮಹಾತ್ಮ ಗಾಂಧಿಯ ವರ ಸಹಭಾಗಿತ್ವದಲ್ಲಿ ಚಳುವಳಿಗೆ ಇಳಿದ ದಿಟ್ಟೆ. 1927ರಲ್ಲಿ ಅಖಿಲ ಭಾರತ ಮಹಿಳಾ ಅಧಿವೇಶ ನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಸ್ವತಂತ್ರ ಭಾರತದ ಪ್ರಥಮ ಮಹಿಳಾ ಆರೋಗ್ಯ ಮಂತ್ರಿಯಾಗಿದ್ದ ಇವರು ದೆಹಲಿ ಯಲ್ಲಿ ಅಖಿಲ ಭಾರತ ಆರೋಗ್ಯ ವಿಜ್ಞಾನ ಸಂಸ್ಥೆ ಯನ್ನು ಆರಂಭಿಸಿದ್ದರು.
ಮೇಡಂ ಭೀಕಾಜಿ ಕಾಮಾ (1861-1936)

“ಮಹನೀಯರೇ ಏಳಿ, ಈ ಧ್ವಜಕ್ಕೆ ವಂದಿಸಲು ಹೇಳುತ್ತ ಧ್ವಜದೊಡನೆ ಭಾರತದ ಸ್ವಾತಂತ್ರ್ಯ ಕ್ಕಾಗಿ ಸಹಕರಿಸಿ” ಎಂದು ಜರ್ಮನಿಯ ಸ್ಟುವರ್ಟ್ ನಲ್ಲಿ 1907ರಲ್ಲಿ ನಡೆದ ಸಮಾಜ ವಾದಿ ಅಧಿ ವೇಶನದಲ್ಲಿ ಪ್ರಥಮಬಾರಿಗೆ ಧ್ವಜಾ ರೋಹಣ ಮಾಡಿದ ಸ್ವಾತಂತ್ರ್ಯ ಹೋರಾಟದ ಇತಿಹಾಸ ದಲ್ಲಿ ‘ಧ್ರುವತಾರೆ’ ಎನಿಸಿದ್ದಾರೆ.
ಮಾತಂಗಿ ಹಜ್ರಾ(1870-1942)

ಪಶ್ಚಿಮ ಬಂಗಾಳದ ಮಿಡ್ನಾಪುರಿನವರಾದ ಮಾತಂಗಿಯವರು 72ರ ಇಳಿ ವಯಸ್ಸಿನಲ್ಲಿ ‘ಕ್ವಿಟ್ ಇಂಡಿಯಾ ಚಳುವಳಿ’ ಮತ್ತು ‘ಅಸಹಕಾರ ಚಳುವಳಿ’ಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿ ದ್ದರು. ಇವರನ್ನು ‘ಮಹಿಳಾ ಗಾಂಧಿ’ ಎಂದು ಕರೆಯುತ್ತಿದ್ದರು. ತಿರಂಗ ಧ್ವಜ ಹಿಡಿದು 1942 ಸೆಪ್ಟೆಂಬರ್ 29 ರಂದು ತಮ್ಲುಕ್ ಪೋಲೀಸ್ ಠಾಣೆ ವಶಪಡಿಸಿಕೊಳ್ಳ ಲು ಬೆಂಬಲಿಗರೊಂದಿಗೆ ಮೆರವಣಿಗೆ ಯಲ್ಲಿ ಹೋಗುತ್ತಿರುವಾಗ ಅವರ ಕೈ ಮತ್ತು ಹಣೆಗೆ ಗುಂಡೇಟು ತಗುಲಿತು. ಆದರೂ ಧ್ವಜವನ್ನು ಕೈಯಲ್ಲಿಯೇ ಹಿಡಿದುಕೊಂಡು ‘ವಂದೇ ಮಾತರಂ’ ಎಂದು ಕೂಗುತ್ತಾ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಧೀಮಂತ ಮಹಿಳೆ ಮಾತಂಗಿ ಹಜ್ರಾ.
ಸರೋಜಿನಿ ನಾಯ್ಡು(1897-1949)

‘ಭಾರತದ ಕೋಗಿಲೆ’ ಬಿರಿದಾಂಕಿತ ಕವಿಯತ್ರಿ, ದಿಟ್ಟ ಧೀಮಂತ ಮಹಿಳೆ. ಗುರು ಗೋಪಾಲಕೃಷ್ಣ ಗೋಖಲೆಯವರೊಂದಿಗೆ ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದರು. 1925 ರಲ್ಲಿ ಕಾನ್ಪುರದಲ್ಲಿ ನಡೆದ ಭಾರತೀಯ ಮಹಿಳಾ ಅಧಿವೇಶನದ ಅಧ್ಯಕ್ಷೆಯಾಗಿದ್ದ ಪ್ರಥಮ ಭಾರತೀಯ ಮಹಿಳೆ ಎಂದು ಪ್ರಖ್ಯಾತರಾದ ಇವರು ಬಹುಭಾಷಾ ಪ್ರವೀಣ ರಾಗಿದ್ದರು.
ಉಮಾದೇವಿ ಕುಂದಾಪುರ. (1892-1992)

‘ಸ್ವಾತಂತ್ರ್ಯ ನನ್ನ ಆಜನ್ಮ ಹಕ್ಕು’ ಎಂದು ಹೋರಾ ಡುತ್ತಾ ಪ್ರಾಣ ತೆತ್ತ ಬಾಲ್ ಗಂಗಾಧರ ತಿಲಕರ ಮೃತದೇಹದ ಮೆರವಣಿಗೆಯಿಂದ ಉತ್ತೇಜಿತ ರಾದ ಉಮಾದೇವಿಯವರು ಆಜಾದಿ ಚಳುವಳಿ ಯಲ್ಲಿ ಧುಮುಕಿದರು. ಗುಲಾಮಗಿರಿಯ ವಿರುದ್ಧ ಹೋರಾಡಲು ವಿಧವೆಯರನ್ನು ಒಗ್ಗೂಡಿಸಿದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಭೂಗತರಾಗಿದ್ದ ಸೇನಾನಿ ಗಳಿಗೆ ಬ್ರಿಟಿಷ್ ರ ಕಣ್ಣು ತಪ್ಪಸಿ ಆಹಾರ, ವಸತಿ ಕಲ್ಪಿಸುವ ಪುಣ್ಯದ ಕೆಲಸಕ್ಕೆ ಕೈ ಹಾಕಿದ ಉಮಾದೇವಿ ಕುಂದಾಪುರ ಅಪ್ರತಿಮ ಹೋರಾಟಗಾರರಾಗಿದ್ದರು.
ರಾಜಕುಮಾರಿ ಗುಪ್ತ(19೦2-1944)

“ಮೈ ಆಜಾದ್ ಹು ಆಜಾದ ಹೀ ರಹುಂಗಾ”‘ ಎಂದು ಗುಡುಗಿದ ಚಂದ್ರಶೇಖರ್ ಆಜಾದ್ ಮತ್ತು ಗಾಂಧೀಜಿಯವರ ನಿಕಟ ಸಂಪರ್ಕದಲ್ಲಿ ದ್ದರು. ಗುಪ್ತಾರವರು ತನ್ನ ಗಂಡ ಮತ್ತು ಅತ್ತೆಗೆ ತಿಳಿಯದ ಹಾಗೆ ರಹಸ್ಯವಾಗಿ ತನ್ನ ಮೂರು ವರ್ಷದ ಮಗನೊಂದಿಗೆ ಸಾಮಾನ್ಯ ಮಹಿಳೆ ಯಂತೆ ನಟಿಸುತ್ತ ಕ್ರಾಂತಿಕಾರಿಗಳಿಗೆ ಶಸ್ತ್ರಾಸ್ತ್ರ ಗಳನ್ನು ತಲುಪಿಸುತ್ತಿದ್ದಳು. ಒಂದು ದಿನ ಬ್ರಿಟಿಷ್ ಕೆಂಗಣ್ಣಿಗೆ ಗುರಿಯಾಗಿ ಜೈಲುವಾಸ ಅನುಭವಿ ಸಿದಳು. ನೀವು ಗಾಂಧಿವಾದಿಗಳು ನಿಮಗೇಕೆ ಬಂದೂಕು ಬೇಕು? ಎಂದು ಕೇಳಿದಾಗ ಇವರು “ಹಮ್ ಉಪರ ಸೇ ಗಾಂಧಿವಾದಿ ಹೈ ಔರ್ ಅಂದರ್ ಸೇ ಕ್ರಾಂತಿವಾದಿ ಹೈ” ಎಂದು ದಿಟ್ಟ ಉತ್ತರ ಕೊಟ್ಟ ಇವರ ಈ ಕಾರ್ಯದಿಂದ ಅತ್ತೆ ಇವರನ್ನು ಮನೆಗೆ ಸೇರಿಸದ ಕಾರಣ ಏಕಾಂಗಿ ಯಾಗಿ ಪೂರ್ಣ ಬದುಕನ್ನು ಸ್ವಾತಂತ್ರ್ಯಕ್ಕಾಗಿ ಮುಡುಪಾಗಿಟ್ಟವರು.
ಕಮಲಾಬಾಯಿ ಚಟ್ಟೋಪಾಧ್ಯಾಯ
(1903-1988)

ಭಾರತದ ಸಂಸ್ಕೃತಿಯ ರಾಣಿ (ಮಂಗಳೂರಿ ನಲ್ಲಿ ಜನನ) ಗಾಂಧಿಜಿಯವರ ‘ಉಪ್ಪಿನ ಸತ್ಯಾ ಗ್ರಹ’ದ ಮೆರವಣಿಗೆಯಲ್ಲಿ ಭಾಗವಹಿಸಿ ‘ಸೇವಾದಳ‘ ಸೇರಿ ಸ್ವಾತಂತ್ರ್ಯಕ್ಕಾಗಿ ಮಹಿಳಾ ಕಾರ್ಯಕರ್ತರಿಗೆ ತರಬೇತಿ ನೀಡಿದ್ದಕ್ಕಾಗಿ ಜೈಲು ಪಾಲಾದರು. ಸ್ವಾತಂತ್ರ್ಯಬಂದು ದೇಶ ವಿಭಜನೆ ನಂತರ ಪಾಕಿ ಸ್ತಾನದಿಂದ ಬಂದ ಸುಮಾರು ೫೦ ಸಾವಿರ ಜನರಿಗೆ ಪುನರ್ವಸತಿ ಮತ್ತು ಉದ್ಯೋಗ ನೀಡಿದ ಸಮಾಜ ಸೇವಕಿಯಿವರು.
ಸುಚೇತ ಕೃಪಲಾನಿ (1904-1974)

ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಇವರು ಪ್ರಥಮ ಮಹಿಳಾ ಮುಖ್ಯಮಂತ್ರಿಯಾಗಿ ಉತ್ತರ ಪ್ರದೇಶದ ಆಳ್ವಿಕೆಯನ್ನು 1963 ರಿಂದ 1967ರವರೆಗೆ ಯಶಸ್ವಿಯಾಗಿ ನಿಭಾಯಿಸಿದ ಪರಾಕ್ರಮಶಾಲಿ.
ದುರ್ಗಾಬಾಯಿ ದೇಶಮುಖ್ (1909 -1981)

12ನೇ ವಯಸ್ಸಿನಲ್ಲಿ ಇಂಗ್ಲೀಷರ ವಿರುದ್ದ ಸಿಡಿ ದೆದ್ದು ವಿದ್ಯಾಭ್ಯಾಸ ಮೊಟಕುಗೊಳಿಸಿದರು. ಮಹಾತ್ಮಗಾಂಧಿಯವರ ಅನುಯಾಯಿಯಾ ಗಿದ್ದ ದುರ್ಗಾಬಾಯಿ ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಬಾರಿ ಜೈಲುವಾಸ ಅನುಭವಿಸಿದರು. ಇವರೂ ಎಂದಿಗೂ ಚಿನ್ನಾಭರಣ ಧರಿಸದೆ, ದೇಶವನ್ನು ಚಿನ್ನದಂತೆ ಪ್ರೀತಿಸಿದ ದಿಟ್ಟ ಮಹಿಳೆ ದುರ್ಗಾಬಾಯಿ.
ಅರುಣ ಅಸಫ್ ಅಲಿ (1909-1996)

ಗಾಂಧೀಜಿಯವರು ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಪ್ರಾರಂಬಿಸಿ ಬ್ರಿಟಿಷರಿಂದ ಸೆರೆಯಾಗಿ ಸೆರೆಮನೆಯಲ್ಲಿ ಇದ್ದರು. ಆಗ ನಾಯಕರಿಲ್ಲದೆ ಪರದಾಡುತ್ತಿದ್ದ ಜನರ ಮುಂದೆ ಧೈರ್ಯದಿಂದ ನುಗ್ಗಿ ಬ್ರಿಟಿಷ್ ವಿರುದ್ಧ ತ್ರಿವರ್ಣ ಧ್ವಜ ಹಾರಿಸು ತ್ತ ಸ್ವಾತಂತ್ರ್ಯ ಕಾರ್ಯಕರ್ತರಿಗೆ ಆತ್ಮ ಸ್ಥೈರ್ಯ ತುಂಬಿದರು. ಆಂಗ್ಲರು ಬಂಧಿಸಲು ಮುಂದಾದಾ ಗ ಭೂಗತರಾಗಿ ಕ್ರಾಂತಿಗೆ ಸೇರುವಂತೆ ಯುವಕ ರಿಗೆ ಕರೆ ನೀಡಿದರು. ಆಂಗ್ಲರು ಇವರ ಆಸ್ತಿ ಯನ್ನು ಹರಾಜು ಹಾಕಿದರೂ ಇವರು ಧೃತಿಗೆಡ ಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಸಮಾಜ ಸೇವೆ ಮಾಡುತ್ತ 1958ರಲ್ಲಿ ದೆಹಲಿ ಯ ಮೊದಲ ಮಹಿಳಾ ಮೇಯರ್ ಆಗಿ ‘ಪದ್ಮ ಭೂಷಣ‘ ಮತ್ತು ‘ಭಾರತ ರತ್ನ’ ಪುರಸ್ಕೃತ ಸೇವಾಧುರಿಣೆಯೇ “ಅರುಣ ಅಸಫ್ ಅಲಿಯವರು.”
ಪ್ರೀತಿಲತಾ ವಡ್ಡೆದಾರ. (1911-1932)

ನಾಯಿಗಳನ್ನು ಮತ್ತು ಭಾರತೀಯರನ್ನು ಒಳಗಡೆ ಬಿಡುವುದಿಲ್ಲ ಎಂಬ ನಾಮ ಫಲಕ ಹೊಂದಿದ್ದ ಬ್ರಿಟಿಷ್ ಕ್ಲಬ್ ವಿರುದ್ದ ಸಿಡಿದೆದ್ದು; ಕ್ರಾಂತಿಕಾರಿ ಸಶಸ್ತ್ರ ಗುಂಪಿನೊಂದಿಗೆ ಬ್ರಿಟಿಷ್ ಕ್ಲಬ್ ನ್ನು ಸುಟ್ಟು ಹಾಕಿ ಭಸ್ಮ ಮಾಡಿದಳು. ಆದರೆ ಗುಂಡಿನ ಚಕಮಕಿಯಲ್ಲಿ ಗುಂಡು ತಾಗಿ ಗಾಯಗೊಂಡಳು ಮತ್ತು ಕಾರ್ಯಕರ್ತರಿಗೆ ತಪ್ಪಿಸಿಕೊಳ್ಳಲು ಹೇಳಿ ಅಂಗ್ಲರಿಂದ ಹೀನಾಯ ಸಾವನ್ನು ಕಾಣವು ಬದಲು ತನ್ನಲ್ಲಿದ್ದ ಸೈನೆಡ್ ಸೇವಿಸಿ ವೀರ ಮರಣವನ್ನಪಿದಳು.
ರಾಣಿ ಗೈಡನ್ಲಿಯು(ಗೈದಿನ್ಲು) (1915 – 1993)

ಮಣಿಪುರದ ಬುಡಕಟ್ಟು ಜನಾಂಗದವರಾದ ಇವರು 13 ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಆಂದೋಲನಕ್ಕೆ ಧುಮುಕಿ ನಾಗಾ ಸಾಧುಗಳ ಉಳುವಿಗಾಗಿ 16 ನೇ ವಯಸ್ಸಿಗೆ ಸೆರೆ ಸಿಕ್ಕು, ಜೀವಾವಧಿ ಶಿಕ್ಷೆಗೆ ಗುರಿಯಾಗಿ ಭಾರತದ ಆಜಾದಿ ನಂತರ ಬಿಡುಗಡೆಯಾಗಿ ‘ಬೆಟ್ಟದ ರಾಣಿ’ ಎಂಬ ಅಭಿದಾನ ಪಡೆದರು.
ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ (1914-2೦12)

ನೇತಾಜಿ ಸುಭಾಷ್ ಚಂದ್ರ ಬೋಸ್ ರವರೊಂ ದಿಗೆ ‘ಭಾರತೀಯ ರಾಷ್ಟ್ರೀಯ ಸೇನೆ’ಯ ಮಹಿಳಾ ವಿಭಾಗದಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ ಧೀರೋತ್ತಮ ಮಹಿಳೆ. ವೃತ್ತಿಯಿಂದ ವೈದ್ಯರಾದ ಇವರು ಬಾಲ್ಯ ವಿವಾಹ, ವರದಕ್ಷಿಣೆ ಅನಿಷ್ಟ ಪದ್ದತಿ ನಾಶನಕ್ಕಾಗಿ ಹೋರಾಡಿದವರು. ದೇಶ ವಿಭಜನೆಯ ವೇಳೆಯಲ್ಲಿ ನಿರಾಶ್ರಿತ ಸಂತ್ರಸ್ತರಿಗೆ ವೈದ್ಯಕೀಯ ಚಿಕಿತ್ಸೆ ನೇರವು ನೀಡಿದರು. 1998ರಲ್ಲಿ ‘ಪದ್ಮ ವಿಭೂಷಣ‘ ದಿಂದ ಸ್ವಾತಂತ್ರ್ಯ ಯೋಧೆ ಲಕ್ಷ್ಮೀಯವರನ್ನು ಸನ್ಮಾನಿಸಲಾಗಿದೆ.

ಭಾರತ ಮಾತೆಯನ್ನು ದಾಸ್ಯದಿಂದ ಮುಕ್ತಗೊ ಳಿಸಲು ಹೋರಾಡಿದ ಈ ಮೇಲೆ ಉಲ್ಲೇಖಿಸಿದ ವರಷ್ಟೆ ಅಲ್ಲದೆ ಇನ್ನೂ ಸಹಸ್ರಾರು ಮಾತೆಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ದೇಶ ಕ್ಕಾಗಿ ತಮ್ಮ ತ್ಯಾಗ, ದಿಟ್ಟತನ ದಿಂದ ಹುತಾತ್ಮರಾ ದವರೆಂದರೆ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಕೇಳದಿ ಚನ್ನಮ್ಮ, ಚಾಂದ ಬೀಬೀ, ರಜಿಯಾ ಸುಲ್ತಾನ, ಅಹಲ್ಯಾಬಾಯಿ ಹೋಳ್ಕರ್, ಸಾವಿತ್ರಿ ಬಾಯಿ ಫುಲೆ, ಬೇಗಲತಾಫಿಯಾ ಅಬ್ದುಲ್ ವಾಜಿದ್, ಜ್ಯೋತಿಮಯಿ ಗಂಗೂಲಿ, ಕಸ್ತೂರಬಾ ಗಾಂಧಿ, ವಿಜಯಲಕ್ಷ್ಮಿ ಪಂಡಿತ್, ಕಮಲಾ ನೆಹರೂ, ರಿಹಾನತ್ಯಾಯ ಬೇಡಾ, ಕಲ್ಪನಾದತೈ ನೋನಿ ಬಾಲದೇವಿ, ‘ಬೇಗಂ ಹಜರತ್‌ಮಹಲ್, ಲಕ್ಷ್ಮೀ ಸ್ವಾಮಿನಾಥನ್, ಅಕ್ಕಮ್ಮ ಚರಿಯನ್, ಕೇರಳದ ಕುಟ್ಟಮ್ಮಾಳಮ್ಮ, …..ಮುಂತಾದ ಕೆಚ್ಚದೆಯ ಪರಾಕ್ರಮಶಾಲಿ ರತ್ನಖಚಿತ ಮಹಿಳೆಯರ ಯೋಗದಾನವನ್ನು ಎಂದಿಗೂ ಮರೆಯಲಾಗದು.

ಇಂದು ನಾವು 2೦22ರ ಅಗಸ್ಟ್ 13 ರಿಂದ 15 ರ ವರೆಗೆ ಹರ್ ಘರ್ ತಿರಂಗಾ ಧ್ವಜಾರೋಹಣ ದ ಸಡಗರ ಸಂಭ್ರಮಕ್ಕೆ, ಭಾರತ ಆಜಾದಿ ಕಾ ಅಮೃತ ಮಹೋತ್ಸವದ ವರ್ಷಪೂರ್ತಿ ಕಾರ್ಯಕ್ರಮಕ್ಕೆ ನಮ್ಮ ಪೂರ್ವಜರಾದ ಸಾವಿರಾರು ಧೀರ ಪುರುಷರ ಮತ್ತು ಮಾತೆಯರ ಪರಿಶ್ರಮ, ತ್ಯಾಗ, ಬಲಿದಾನದ ಹಿರಿಮೆ-ಗರಿಮೆ ಯ ಆದರ್ಶ ಮೌಲ್ಯಗಳು ಅಡಿಪಾಯವಾಗಿವೆ. ನಾವೆಲ್ಲರೂ ಅವರ ಧ್ಯೇಯೋದ್ಯೇಶಗಳನ್ನು ಮೈಗೂಡಿಸಿ ಕೊಂಡು ಪ್ರಜಾಪ್ರಭುತ್ವದ ಸಂವಿಧಾನದ ಸದಾ ಶಯದಂತೆ ಐಕ್ಯ ಮನೋ ಭಾವನೆಯೊಂದಿಗೆ ಬದುಕು ಸಾಗಿಸಬೇಕು.

ಈಗಲೂ ಸಹ ನಮ್ಮ ಭಾರತ ದೇಶ ಮತ್ತು ನಮ್ಮನ್ನು ರಕ್ಷಿಸುತ್ತಿರುವ, ಶತೃಗಳಿಂದ ನಮ್ಮೆಲ್ಲ ರನ್ನು ಕಾಪಾಡುತ್ತಿರುವ ನಮ್ಮ ವೀರ ಯೋಧರ ಯೋಗದಾನ, ದೇಶದೊಳಗಿನ ಅಪರಾಧಗ ಳನ್ನು ಸದೆ ಬಡೆಯುತ್ತಿರುವ ಆರಕ್ಷಕರ ಸೇವೆಯ ಘನತೆಯನ್ನು ನಾವು ಸದಾ ಗೌರವ ಯುತವಾಗಿ ನೋಡುತ್ತಾ ಭಾವೈಕ್ಯದಿಂದ ಬದುಕಿದಾಗ ಮಾತ್ರ ಸ್ವಾತಂತ್ರ್ಯ, ಸಮಾನತೆ, ಭಾತೃತ್ವಕ್ಕೆ ಮೌಲ್ಯ ಬರುತ್ತದೆ.

ಶ್ರೀ ಸುಭಾಷ್ ಹೇ. ಚವ್ಹಾಣ,
ಶಿಕ್ಷಕ ಸಾಹಿತಿಗಳು,
ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ನಂ.೦೧ ಶಾಲೆ, ಹಳೇ ಹುಬ್ಬಳ್ಳಿ, ಜಿ:ಧಾರವಾಡ