1) ನನ್ನ ಪ್ರಾರ್ಥನೆ ಕಂಡು
ದೇವರೂ ಮುನಿಸಿಕೊಂಡಿದ್ದಾನೆ,
ಎದೆ ಬಗೆದು ನೋಡಿದವನಿಗೆ
ನನ್ನ ಪ್ರೀತಿಯ ಭಾವಚಿತ್ರ ಕಂಡಿತ್ತು.

2) ಆಸೆಗಳು ಚಿಟ್ಟೆಗಳಿದ್ದಂತೆ
ಹಿಡಿಯಲು ಹೊರಟರೆ
ಹಾರಿಬಿಡುತ್ತವೆ.

3) ಬಿಡುಗಡೆಯಾದರೂ ಹಾರಲಾಗಲಿಲ್ಲ ,
ನಿನ್ನಲ್ಲಿ ಬಂಧಿಯಾದಾಗಲೇ
ರೆಕ್ಕೆಗಳು ಕತ್ತರಿಸಿಕೊಂಡಿದ್ದೆ.

✍️ಕವಿತಾ ಸಾಲಿಮಠ.
ಬಾಗಲಕೋಟೆ