ಮುಸುಕು ಧರಿಸದೇ ಹೊರ ಬರಬೇಡ ಜಗತ್ತು ಕೆಟ್ಟಿದೆ
ಅದರಲ್ಲೂ ಯೌವ್ವನ ತೋರಿಸಬೇಡ ಜಗತ್ತು ಕೆಟ್ಟಿದೆ

ನನಗೆಲ್ಲಾ ಗೊತ್ತಿದೆಯೆಂದು ಉಪದೇಶ ಕೊಡಬೇಡಿ
ನಾನು ಕೆಡುತ್ತೇನೆಂದು ಹೇಳಬೇಡ ಜಗತ್ತು ಕೆಟ್ಟಿದೆ

ಕುಡಿಯುವ ಮನಸಿದ್ದರೆ ಅವಳ ಕಣ್ಣಿನಿಂದ ಕುಡಿ
ಮದಿರೆ ಕುಡಿದು ಹಾಳಾಗಬೇಡ ಜಗತ್ತು ಕೆಟ್ಟಿದೆ

ಕೊನೆಗೂ ಮೋಸಕ್ಕೆ ಒಳಗಾಗಿಬಿಟ್ಟೆಯಾ ರಶೀದ್
ಜನಾಬ್… ಹೇಳುತ್ತಲೇ ಇರಬೇಡ ಜಗತ್ತು ಕೆಟ್ಟಿದೆ.

निकलो ना बे नकाब जमाना खराब है
और उस पे ए शबाब जमाना खराब है

सब कुछ हमें खबर है नसीहत ना कीजिए
क्या होंगे हम खराब जमाना खराब है

पीने का दिल है जो चाहे उन आंखों से पीजिए
मत पीजिए शराब जमाना खराब है

राशिद तुम आ गए हो ना आखिर फरेब में
कहते ना ते जनाब जमाना खराब है||

✍️ಉರ್ದು:ನೂನ್ ಮೀಮ್‌ ರಾಶೀದ್
ಅನುವಾದ: ಕವಿತಾ ಸಾಲಿಮಠ
ಬಾಗಲಕೋಟೆ