ಯಲ್ಲಾಪುರ ಪ್ರತಿಭೆಗಳಿಗೆ ಮುಕ್ತ ಅವಕಾಶ ಕಲ್ಪಿಸುವ ತಾಣ. ದೇಶ ವಿದೇಶಗಳಲ್ಲಿ ಯಲ್ಲಾ ಪುರದ ಕೀರ್ತಿಯನ್ನು ಹಬ್ಬಿಸಿ ಎಲ್ಲರೂ ಈ ಪುಟ್ಟ ತಾಲೂಕಿನತ್ತ ಚಿತ್ತಹರಿಸುವಂತೆ ಮಾಡಿರುವುದು ವಿಶೇಷ ಕಲೆಯ ಮೂಲಕ. ಅದರ ಬೇರು ಜೀವಾಳ ಎಲ್ಲವೂ ಯಲ್ಲಾಪುರ ವೆಂದರೆ ಹೆಮ್ಮೆಯೆನಗೆ. ಹೌದು ಅದು ಕಲೆಯ ವರದಾನ ದೈವ ನೀಡಿದ ಕೊಡುಗೆ ಅದುವೆ “ಗುಡಿಗಾರಿಕೆ”. ಗುಡಿಗಾರ ಮನೆತನದ ಇತಿಹಾಸದ ಪುಟ ತಿರುವಿ ದಂತೆ ಕಲೆಯ ಮೇಲಿನ ಆಸಕ್ತಿ ಹಾಗೂ ಅದು ಜೀವನೋಪಾ ಯವಾಗಿ ಪರಿವರ್ತಸಿಕೊಂಡು ಬದುಕು ಕಟ್ಟಿಕೊಳ್ಳುವುದರ ಮೂಲಕ ಇತರರಿ ಗೂ ಉದ್ಯೋಗ ಅವಕಾಶ ಕಲ್ಪಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ನನ್ನೂರಲಿ ಅದಮ್ಯ ಚೇತನ ಹಾಗೂ ಅದರ ಪರಿಚಯ ಸಮಸ್ತ ಓದುಗರಿಗೆ ತಲುಪಿದರೆ ಕಲೆಯನ್ನು ಉಳಿಸಲು, ಬೆಳೆಸಲು, ಪ್ರೋತ್ಸಾಹ ನೀಡಲು ಅನುಕೂಲವಾಗುತ್ತದೆಂಬ ಸದುದ್ದೇಶದ ಅಳಿಲು ಸೇವೆ. ಬಡತನದ ಹೊಂಗೆ ನೆರಳಲ್ಲಿ ಚಿಗುರೊಡೆದ ಕಲಾ ಪ್ರತಿಭೆಯನ್ನು ನಿಮಗೆ ಪರಿಚಯಿಸುವ ಉತ್ಸಾಹ… (ಆದಿತ್ಯ ಗುಡಿಗಾರ -8762520972 ) ಉಳ್ಳವರು ಇವರನ್ನು ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸ ಬಹುದು.

ಗುಡಿಗಾರ ಎಂಬುದು ಒಂದು ಜಾತಿ ಅನ್ನುವು ದಕ್ಕಿಂತ ಅದು ಒಂದು ಜೀವನ ಶೈಲಿಯೆಂದರೆ ಹೆಚ್ಚು ಸೂಕ್ತ. ನಂಬಿಕೆ ಆಚರಣೆಗಳಿಗೆ ಬದ್ದ ಕಲಾ ಪ್ರವೀಣರು. ಮೂಡುಗೇಡು ಹಿರಿಯ- ಣ್ಣಪ್ಪ ನವರು ಗುಡಿಗಾರ ಜನಾಂಗದಲ್ಲಿಯೇ ಅಲ್ಲದೇ ಕರಕುಶಲ ಕಲಾ ಪ್ರಪಂಚದಲ್ಲಿಯೇ ಒಂದು ಅಸಾಧಾರಣಪ್ರತಿಭೆ. “ಆಚಾರ್ಯ ಪುರುಷ- ಶತಮಾನದ ಮಹಾನ್ ಕಲಾವಿದ” ಎಂಬ ಜೀವಮಾನ ಸಾಧನೆಯ ರಾಷ್ಟ್ರಪ್ರಶಸ್ತಿ ಪುರಸ್ಕೃತರು.

ಕಲೆಯ ನಾನಾ ಪ್ರಕಾರಗಳ ಆರಾಧಕರಲ್ಲಿ ಗುಡಿಗಾರರು ಮತ್ತು ಶ್ರೀಗಂಧದ ನಂಟು ಇಂದು ನಿನ್ನೆಯದಲ್ಲ. ಒಂದೇ ನಾಣ್ಯದ ಎರಡು ಮುಖ ವಿದ್ದಂತೆ.ಕಲೆಯೇ ವೃತ್ತಿದಾಯಕ ಅರ್ಹ ಬಳುವಳಿ. ಉತ್ತರ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ವಾಸಿಸುತ್ತಿದ್ದು ಕರಕುಶಲ ಕಲೆ ಅಥವಾ ಶ್ರೀಗಂಧದ ಬಹು ಉಪಯೋಗದ ಬಗ್ಗೆ ತಿಳಿಪಡಿಸಿದವರು. ಶ್ರೀಗಂಧದಲ್ಲಿ ತೈಲದ ಅಂಶ ವಿದೆ ಎಂಬುದನ್ನು ಪ್ರಥಮವಾಗಿ ಬಹಿರಂಗಪಡಿ ಸಿದವರು. ಶ್ರೀಗಂಧದಿಂದ ದೇವತಾ ವಿಗ್ರಹಗಳ ನ್ನು ಗೃಹೋಪಯೋಗಿ ವಸ್ತು, ಕಲಾಕೃತಿಗಳನ್ನು ಸಿದ್ದಪಡಿಸಿದವರು. ೧೮ನೇ ಶತಮಾನದ ಮೊದ ಲಿನಿಂದಲೂ ವಿಜಯನಗರ, ಮೈಸೂರು,ಇಕ್ಕೇರಿ ನಗರ ಇತ್ಯಾದಿಗಳಲ್ಲಿ ರಾಜಾಶ್ರಯದಲ್ಲಿದ್ದು ದೇವಸ್ಥಾನ ನಿರ್ಮಾಣ ಮತ್ತು ಶಿಲ್ಪಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.

ಕರಕುಶಲ ಕಲೆ,ಗ್ರಾಮೀಣ ಬದುಕಿಗೆ ಅವಶ್ಯ ಕತೆಗೆ ಬೇಕಾದ ಕಲಾಕೃತಿಗಳನ್ನು ಮಾಡುವುದ ರಿಂದ ಹಿಡಿದು ಮದುವೆಯ ಬಾಸಿಂಗ್ ಮಾಡು ವುದರ ಜೊತೆಗೆ ಮಾರಮ್ಮ, ಚೌಡಮ್ಮ, ದುರ್ಗಮ್ಮ ಇತ್ಯಾದಿ ಗ್ರಾಮದೇವತೆಗಳನ್ನು ಸಿದ್ದಪಡಿಸುವುದರಲ್ಲಿ ನಿಸ್ಸಿಮರು. ಬೆಂಡಿನ ಕರಕುಶಲಕಲೆಗಳು ಬೆಂಡಿನಲ್ಲಿ ಜೀವತುಂಬಿ, ಬಾಸಿಂಗ್,ಹಾರ,ಮಾಲೆ,ಹೂವು, ಅಲಂಕಾರಿಕ ವಸ್ತು.ಗಂಧದ ಹಾರಗಳು, “ಬಾಸಿಂಗ್ ಗಂಡು- ಹೆಣ್ಣಿನ ಬಂಧನದ ಪ್ರತೀಕಗಳು” ಗುಡಿಗಾರ ರು ಬಾಸಿಂಗಗಳನ್ನು ಎತ್ತಿಕೊಡು ವಾಗ ಸಂತಾನ ಸಾವಿರವಾಗಲಿ ಎಂದು ಹರಸಿ ಕೊಡುವ ಪವಿತ್ರ ಸಾಧನ.

ಮಣ್ಣಿನ ಶಿಲ್ಪಗಳು ಗುಡಿಗಾರರು ಒಂದೇ ಕಸುಬಿ ಗೆ ಅಂದರೆ ಕಲೆಗೆ ಸೀಮಿತವಾಗದೇ ಮಣ್ಣಿನಲ್ಲಿ ಕಲೆಯನ್ನು ಅರಳಿಸಲು ಪ್ರಾರಂಭಿ ಸಿದರು. ಮಲೆನಾಡಿನಲ್ಲಿ ಒಂದೊಂದು ಮನೆಯವರು ಒಂದೊಂದು ಧಾರ್ಮಿಕ ಸಂಪ್ರದಾಯ ಕಟ್ಟಳೆಗೆ ಅನುಗುಣವಾಗಿ ವಿಗ್ರಹವನ್ನು ಶ್ರದ್ದಾ, ಭಕ್ತಿಯಿಂದ ಮಾಡಿಕೊಡು ವ ಆರಾಧಕರು. ವಿಘ್ನೇಶ್ವರನನ್ನು ಕೆಂಪು, ಹಳದಿ, ಬಿಳಿ, ಹಸಿರು, ತಿಳಿಗೆಂಪು, ಶ್ರೀಕೃಷ್ಣ, ಹತ್ತು ಹಲವಾರೂ ರೂಪ ಗಳಲ್ಲಿ ಸಿದ್ದಪಡಿಸಿ ನೀಡುವುದು, ಮಣ್ಣು, ಕಲ್ಲು, ಲೋಹ, ಬೆಂಡು ಇವುಗಳನ್ನು ಸರಿಯಾದ ಕ್ರಮ ದಲ್ಲಿ ನೋಡುಗರ ಕಣ್ಮನ ಸೆಳೆಯುಂತೆ ಮಾಡುವ ಕೈಚಳಕ ಇವರದು.

ಕಲೆಯಲ್ಲಿಯೇ ಅತೀ ಕಠಿಣಕಲೆ ಶಿಲ್ಪಕಲೆ. ನಮ್ಮ ರಾಜ್ಯವಷ್ಟೇ ಅಲ್ಲ ಹೊರರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ಪೂನಾ, ಗುಜರಾತ ಗಳಲ್ಲಿ ಇವರು ಸಿದ್ದಪಡಿಸಿದ ಶಿಲ್ಪ ಕಲಾಕೃತಿ ಗಳು ಯಲ್ಲಾಪುರದ ಪಟ್ಟಣದ ಕೀರ್ತಿಯನ್ನು ಹೆಚ್ಚಿಸಿವೆ. ಶ್ರೀಚನ್ನಕೇಶ್ವರ ಮಹಿಷಮರ್ಧಿನಿ, ಆಂಜನೇಯ, ಇಡಗುಂಜಿ ಗಣಪತಿ ಶಿಲ್ಪ, ಶಿವಲಿಂಗ, ನಂದಿ, ನಾಗದೇವತೆ, ಆದಿಶಕ್ತಿ, ನವಗ್ರಹ, ಕದಂಬ, ಸಿಂಹ ಇತ್ಯಾದಿ ಇವುಗಳ ಕೆತ್ತನೆ ತುಂಬಾ ಸೂಕ್ಷ್ಮ ವಾದವುಗಳು.

ಇಂತಹ ಮಲೆನಾಡಿನಲ್ಲಿ ಕಲಾಕಾರ ಕುಟುಂಬ ನೆಲೆಸಿದ್ದು ಶ್ರೀ ಬಿಕ್ಕು ಭೀಮರಾವ್ ಗುಡಿಗಾರ ರು. ಬಿಕ್ಕುರವರ ತಂದೆ ಭೀಮರಾವ್ ಕಲೆಯ ಆರಾಧಕರು. ಆ ಕಲೆಯನ್ನು ಜೀವನದ ಆಧಾರ ವಾಗಿ ಮುಂದುವರಿಸಿಕೊಂಡು ಬಂದವರು ಭಿಕ್ಕು ಗುಡಿಗಾರ ಕಲೆಯನ್ನೆ ಕಸುಬನ್ನಾಗಿಸಿ ಕೊಂಡು “ಕಲಾಕಾರನ ಕಣ್ಣಿಗೆ ಕಂಡದ್ದೆಲ್ಲ ಕೆತ್ತನೆ ಯಾಗಿ ಕಂಗೊಳಿಸುತ್ತದೆ” ಎಂಬುದಕ್ಕೆ ಈ ಕುಟುಂಬ ಸಾಕ್ಷಿ. ಭಿಕ್ಕು ಗುಡಿಗಾರರ ಮೂವರು ಮಕ್ಕಳು ಅಪ್ರತಿಮ ಕಲಾ‌ ಆರಾಧಕರು. ಅಣ್ಣಪ್ಪ, ಅರುಣ, ಸಂತೋಷ ಗುಡಿಗಾರರು ಕರಕುಶಲ ಕಲಾಕೃತಿ ಗಳನ್ನು ನಿರ್ಮಿಸುವುದರಲ್ಲಿ ಪರಿಶ್ರಮ ಪಟ್ಟವರು ಹಾಗೂ ಗುಡಿಕೈಗಾರಿಕೆ ನಶಿಸದಂತೆ ಕಷ್ಟ, ನಷ್ಟ ಆರ್ಥಿಕ ಮುಗ್ಗಟ್ಟು ಎಲ್ಲವನ್ನೂ ತಾಳ್ಮೆ ಯಿಂದ ಸಹಿಸಿಕೊಳ್ಳುತ್ತ ಗುಡಿಗಾರರಿಗೆ ಒಲಿದ ದೈವಿಕೃಪೆಯ ಮೇಲೆ ನಂಬಿಕೆಯಿಟ್ಟು ಕಲೆಗಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಇಲ್ಲಿ ದೇವರ ಮಂಟಪದಿಂದ ಹಿಡಿದು ಎಲ್ಲ ರೀತಿಯ ಕಲಾಕೃತಿ ಗಳು ಲಭ್ಯವಿದೆ.

ಸಂತೋಷ ಗುಡಿಗಾರರು ಅಂತರ್ರಾಷ್ಟ್ರೀಯ ಮಟ್ಟದ ಅಮೇರಿಕಾ ದೇಶದ ಲೀಸ್ ಬರ್ಗ ಕ್ಲಾಸ್ ಬ್ರೋಗ್ ರೋಟರಿ ಘಟಕದವರು ಜಗತ್ತಿನ ೧೫ ದೇಶಗಳಿಂದ ವಿಶಿಷ್ಟ ಕಲಾಕೃತಿಗೆ ಆಹ್ವಾನ ನೀಡಿದ್ದಕ್ಕೆ ನಮ್ಮ ಜಿಲ್ಲೆಯ ಹೆಮ್ಮೆಯ ಸೊಗಡು ಜಾನಪದ ಕಲೆ ಯಕ್ಷಗಾನ ಕಿರೀಟ ಸಿದ್ದಪಡಿಸಿ ಕಳಿಸಿದ್ದು, ಆ ಕಿರೀಟ ಮೆಚ್ಚುಗೆ ಗಳಿಸಿದ್ದು ನಮ್ಮೂರ ಹೆಮ್ಮೆ. ಸಾಸಿವೆ ಮೇಲೆ ಓಂ ಗಣೇಶ, ಅಕ್ಕಿಮೇಲೆ ಹಕ್ಕಿ, ವೀಣೆ, ಶಿವಾಜಿ, ಅಡಿಕೆ ಹಾಳೆಯ ಮೇಲೆ ವಿವೇಕಾನಂದರ ಚಿತ್ರ ಚಿತ್ರಿಸಿದ್ದಾರೆ.

ಅರುಣ ಗುಡಿಗಾರ, ಸಂತೋಷ ಗುಡಿಗಾರ ಸಹೋದರರು ೨೦೦೨ ರಲ್ಲಿ ಗುಜರಾತದ ಬರೋಡಾ ಜಿಲ್ಲೆಯ ಸೂಕಡಾದಲ್ಲಿ ಸ್ವಾಮಿ ನಾರಾಯಣ ದೇವಸ್ಥಾನದ “ಮಹಾದ್ವಾರ” ನಿರ್ಮಾಣ. ಪೂನಾ ನಗರದಲ್ಲಿರುವ ಇಸ್ಕಾನ್ ದೇವಾಲಯದ ಮಹಾದ್ವಾರ ಮಹಾಮಂಟಪ, ಸ್ತಂಭ ನಿರ್ಮಾಣ, ಪಾವಗಡದ ಶ್ರೀ ಚನ್ನಕೇಶವನಿಗೆ ಬ್ರಹ್ಮರಥ, ಅಮೇರಿಕಾ ನ್ಯೂಜರ್ಸಿಗೆ ದೊಡ್ಡ ಮಂಟಪ ಶ್ರೀ ನಾರಾಯಣ ಸ್ವಾಮಿ ಮಂದಿರ ನಿರ್ಮಿಸಿದ್ದಾರೆ.

ಕಲೆಯೆನ್ನುವುದು ತಪಸ್ಸು, ದೈವಿಕಳೆಹೊತ್ತ ವಿಗ್ರಹಗಳನ್ನು ನಿರ್ಮಿಸಲು ಮನಸ್ಸು ಅಷ್ಟೇ ಪ್ರಾಂಜಲವಾಗಿ ರುವುದು ಬಹುಮುಖ್ಯ.

ಕುಟುಂಬದ ಎಲ್ಲ ಸದಸ್ಯರು ಕರಕುಶಲ ಕಲೆಗೆ ಮುಡಿಪಾಗಿರುವುದು ವಿಶೇಷ.ಆದಿತ್ಯ ಅರುಣ ಗುಡಿಗಾರ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲ ಯ ಧಾರವಾಡದಲ್ಲಿ ಬಿ.ಎಫ್.ಎ, ಸ್ನಾತಕೋ ತ್ತರ ಪದವಿ ಪಡೆದು ಗುಡಿಗಾರ ಕಲೆಗೆ ಹೊಸ ಭಾಷ್ಯೆ ಬರೆಯುವಲ್ಲಿ ಮುನ್ನಡೆಯುತ್ತಿರುವುದು ಹಮ್ಮೆ. ರೋಹಿತ ಅರುಣ ಗುಡಿಗಾರ ಕಲೆಗೆ ಸಮ್ಮಿಳಿತ ವಾಗುತ್ತಿರುವುದು ವಿಶೇಷ ಗುಡಿಗಾರ ರ ಗರಡಿಯಲ್ಲಿ ೨೦ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿರುವುದರ ಜೊತೆಗೆ ಕಲಿಯಲು ಆಸಕ್ತಿ ಇರುವವರಿಗೆ ಪ್ರೋತ್ಸಾಹ ಧನ ನೀಡಿ ಕಲಿಯಲು ಅವಕಾಶ ನೀಡುತ್ತಿರು ವುದು ಕಲೆಯ ಉಳಿವಿಗೆ ಎಂದರೆ ತಪ್ಪಾಗಲಾರದು.

ಯಲ್ಲಾಪುರದಲ್ಲಿ “ದೇವಿ ಹ್ಯಾಂಡಿಕ್ರಾಪ್ಟ್ಸ” ಹೆಸರಿನಿಂದ ಪ್ರಾರಂಭವಾದ ಅಂಗಡಿ “ಶ್ರೀ ಭಿಕ್ಕು ಗುಡಿಗಾರ ಕಲಾ ಕೇಂದ್ರ” ಹೆಸರಿನಿಂದ ಪ್ರಸಿದ್ದವಾಗಿದೆ. ನಮ್ಮೂರ ಕಲೆ ವಿಶ್ವದಾದ್ಯಂತ ಪ್ರಸಿದ್ದಿ ಪಡೆದಿದೆಯೆಂಬುದೇ ಯಲ್ಲಾಪುರ ವೆಂಬ ಮಲೆನಾಡಿನ ಸೊಬಗಿ ಗೊಂದು ಕಳೆ ಬಂದಂತೆ..ಸವಿಯೋಣ ಕಣ್ಮನ ತುಂಬಿ ಕೊಳ್ಳೋಣ ಕಲೆಯತ್ತ‌ ಎಲ್ಲರನೂ ಕೈಬೀಸಿ ಕರೆಯೋಣ….

(ಸಶೇಷ)

✍️ ಶ್ರೀಮತಿ ಶಿವಲೀಲಾ ಹುಣಸಗಿ
ಶಿಕ್ಷಕರು,ಯಲ್ಲಾಪೂರ