ಪೋರ್ಚುಗೀಸರ ಕಾಲದಿಂದ ಪರಕೀಯರ ಆಡಳಿತಕ್ಕೆ ನಮ್ಮ ದೇಶ ಒಳಗಾಗಿದ್ದೂ, ನಂತರ ಸೂರ್ಯನೇ ಮುಳುಗದ ಸಾಮ್ರಾಜ್ಯವೆಂದು ಹೆಸರುಗಳಿಸಿದ ಬ್ರಿಟಿಷರ ಕೈಕೆಳಗೆ ೨೦೦ ವರ್ಷಗಳ ದಾಸ್ಯದಲ್ಲಿ ಸಿಕ್ಕು ನರಳಿದ್ದೂ ಭಾರತೀಯರಾದ ನಮಗೆಲ್ಲರಿಗೂ ಪರಿಚಿತವೆ. ಈ ದಾಸ್ಯ ದಿಂದ ಬಿಡಿಸಿಕೊಳ್ಳಲೆಂದು ಸತತ ಹೋರಾಟ ನಡೆಸಿ ಕೊನೆಗೆ ಮಹಾತ್ಮಾ ಗಾಂಧಿ ಯವರ ಅವಿರತ ಶ್ರಮದಿಂದ ಸ್ವಾತಂತ್ರ ಗಳಿಸಿದ್ದೂ ವಿದಿತವೇ. ಗಾಂಧೀಜಿಯವರ ಅನುಯಾಯಿಗಳಾಗಿ ಅವರೊಡನೆ ರಾಷ್ಟ್ರದ ಸ್ವಾತಂತ್ರ್ಯ ಕ್ಕಾಗಿ ಹೋರಾಟ ನಡೆಸಿದ ಹಿರಿಯ ಹೋರಾಟ ಗಾರರ ಹೆಸರುಗಳೂ ಮನದಟ್ಟಾ ಗಿವೆ. ಆದರೆ ಎಷ್ಟೆಷ್ಟೋ ಜನ ಹಿಂಬಾಲಕರ ನ್ನೊಳಗೊಂಡಿದ್ದರಿಂದಲೇ ಆ ಹಿರಿಯರ ಹೆಸರು ಇತಿಹಾಸದಲ್ಲಿ ಉಲ್ಲೇಖವಾದುದು.

ಸೈನ್ಯದ ಮುಂಚೂಣಿಯ ಲ್ಲಿರುವ ಪದಾತಿಗಳು ಬಲವಾಗಿ ಹೋರಾಡದೇ ಹೋದರೆ ಸೈನ್ಯ ಮುಗ್ಗರಿಸುತ್ತದೆ, ನಾಯಕ ತಡವರಿಸುತ್ತಾನೆ, ಯುದ್ಧದ ಗೆಲುವಿನ ಕಾರಣ ಮಸಕುಮಸಕಾ ಗುತ್ತದೆ. ಅಂದರೆ ಸೈನ್ಯಾಧಿಕಾರಿ, ಅಶ್ವಾರೋಹಿ ಗಳು ಎಷ್ಟು ಮುಖ್ಯವೋ ಅಷ್ಟೇ ಪದಾತಿಗಳೂ ಮುಖ್ಯ. ನಾನು ಹೀಗೇಕೆ ಹೇಳುತ್ತಿದ್ದೇನೆಂದರೆ, ನಮ್ಮ ದೇಶಕ್ಕೆ ಸ್ವಾತಂತ್ರಬರಲು ಗಾಂಧೀಜಿ, ಸುಭಾಷ್ ಚಂದ್ರಬೋಸ್, ವಲ್ಲಭ ಭಾಯಿ ಪಟೇಲರುಗಳಂತಹವರು ಎಷ್ಟು ಮುಖ್ಯವೋ ಕರ್ನಾಟಕದ ಯಾವುದೋ ಒಂದು ಕೋಣೆ ಯಲ್ಲಿ ಅಡಗಿ ಕುಳಿತಿದ್ದು, ತಮ್ಮ ಮನೆ ಮಠ, ಮಡದಿ, ಮಕ್ಕಳನ್ನು ತೊರೆದು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿ ಗೆಲುವಿನ ಮಾರ್ಗ ಕ್ಕೆ ಹಾದಿ ತೋಡಿಕೊಟ್ಟ, ತಮ್ಮದೇ ಪ್ರಾಂತ್ಯದಲ್ಲಿ ಸಾಕಷ್ಟು ನೆರವು ನೀಡಿದ ದೇಶದ ಪ್ರತಿಯೊಬ್ಬ ಪ್ರಜೆಯೂ ಚರಿತ್ರೆಯ ಪುಟಗ ಳಲ್ಲಿ ಸ್ಥಾನ ಗಿಟ್ಟಿಸಿ ಕೊಳ್ಳುವ ಅರ್ಹತೆಯನ್ನು ಪಡೆದಿರುತ್ತಾನೆ/ಳೆ.

ಇಡೀ ಕರ್ನಾಟಕವನ್ನು ಗಣನೆಗೆ ತೆಗೆದುಕೊಂಡ ರೆ ಟೀಪೂ ಸುಲ್ತಾನ್, ಹೈದರಾಲಿ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಇಂತಹವರ ಹೆಸರುಗಳು ಎಲ್ಲರ ಬಾಯಲ್ಲೂ ಎಲ್ಲರ ಮನ ದಲ್ಲೂ ಅಚ್ಚೊತ್ತಿದೆ. ಆದರೆ ತಗಡೂರು ರಾಮಚಂದ್ರ, ಅಬ್ಬಕ್ಕ ದೇವಿ, ಮೊದಲಾದ ವೀರರ ಹೆಸರು ಅಷ್ಟಾಗಿ ನೆನಪಿಗೆ ಬರುವು ದಿಲ್ಲ. ಇವರಂತಹವರು ಇಲ್ಲದೇ ಹೋಗಿದ್ದರೆ, ಸ್ವಾತಂತ್ರ ದ ಸವಿ, ಅದಕ್ಕಾಗಿ ನಾವು ಹೋರಾಡುವ ಪರಿಸ್ಥಿತಿ ಇವುಗಳ ಅರಿವೇ ಬರುತ್ತಿರಲಿಲ್ಲ. ನಮ್ಮಲ್ಲಿಯ ಸ್ವಾಭಿಮಾನವನ್ನು ಜಾಗ್ರತಗೊಳಿಸು ವಲ್ಲಿ , ಪರಕೀಯರ ವಿರುದ್ಧ ಹೋರಾಡುವ ದಾಳಿಯಲ್ಲಿ ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಮೊದಲಾದ ವೀರರಿಗೆ ತಮ್ಮೊಳಗಿನ ಪೌರುಷದ ಅರಿವೇ ಆಗುತ್ತಿರ ಲಿಲ್ಲ! ದೇಶದ ಪ್ರತಿ ರಾಜ್ಯದಲ್ಲೂ, ಪ್ರತಿ ಜಿಲ್ಲೆಯಲ್ಲೂ, ಪ್ರತಿ ತಾಲ್ಲೂಕಿನಲ್ಲೂ ಕಡೆಗೆ ಪ್ರತಿ ಊರು ಹಳ್ಳಿಗಳ ಲ್ಲೂ ಒಬ್ಬೊಬ್ಬ ರಾಜಗುರು, ಭಗತ್ ಸಿಂಗ್, ಸುಖದೇವರಂತಹ ದೇಶಭಕ್ತರ ಜನ್ಮವಾದುದ ರಿಂದಲೇ ಇಂದು ನಾವು ೭೫ ನೇ ವರ್ಷದ ಸ್ವಾತಂತ್ರೋತ್ಸವನ್ನು ಆಚರಿಸಲು ಸಾಧ್ಯವಾಗು ತ್ತಿದೆ.

“ಹನಿ ಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ”! ಬಳ್ಳವನ್ನು ತುಂಬಲು ಬೇಕಾದ ಒಂದೊಂದು ತೆನೆಯ, ತೆನೆಯ ಕಾಳುಗಳ ಕೊಡುಗೆಯನ್ನು ಗುರುತಿಸುವುದು ನಮ್ಮೆಲ್ಲರ ಕರ್ತವ್ಯ. ಎಲ್ಲ ಕಾಳುಗಳ ಕೊಡುಗೆಯನ್ನು ಪ್ರತ್ಯೇಕವಾಗಿ ಗುರುತಿಸಲು ನಮಗಿರುವ ಮಿತಿ ಯಲ್ಲಿ ಸಾಧ್ಯವಾಗದೆ ಇದ್ದರೂ ತೆನೆಗಳನ್ನು ಗುರುತಿಸುವ ಯತ್ನ ಮಾಡಬಹುದು ಎಂಬ ಅನಿಸಿಕೆ. ಹಾಗಾಗಿ ಇಂದಿನ ಈ ೭೫ನೇ ವರ್ಷದ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ನಮ್ಮದೇ ರಾಜ್ಯದ ಮೂಲೆ ಮೂಲೆಗಳಲ್ಲಿ ಹುಟ್ಟಿ ಅಂದಂದಿನ ಸಂದರ್ಭಕ್ಕೆ ತಕ್ಕಂತೆ ನಾಯಕತ್ವವ ನ್ನು ನಿರ್ವಹಿಸಿ ದೇಶದ ಸ್ವಾತಂತ್ರ ಕ್ಕೆ ಕಾರಣಿಭೂತರಾದ ಕೆಲವೊಂದು ಹಿರಿಯರ ನ್ನು ನೆನಪಿಸಿ ಕೊಳ್ಳುವ ಸಂಕಲ್ಪದಿಂದ ಇಂದಿನ ಈ ಉತ್ಸವ ವನ್ನು ಆಚರಿಸೋಣ.

ವಂದೇ ಮಾತರಂ! ಜೈ ಭುವನೇಶ್ವರಿ!

✍️ಡಾ.ಸತ್ಯವತಿ ಮೂರ್ತಿ
ಮ್ಯಾಂಚೆಸ್ಟರ್, ಇಂಗ್ಲೆಂಡ್