ಸ್ವಾತಂತ್ರೋತ್ಸವ ನಮ್ಮ ಅಮೃತ ಮಹೋತ್ಸವ
ಭಾರತಮಾತೆಯ ಹಿರಿಮೆ ಗರಿಮೆಯ ಸ್ವಾತಂತ್ರೋತ್ಸವ ನಮ್ಮ ಅಮೃತ ಮಹೋತ್ಸವ

ಸತ್ಯ ಶಾಂತಿಯನು ಮೆರೆದ
ರಾಷ್ಟ್ರಪಿತನೆಂದು ಖ್ಯಾತಿಯಾದ ಮಹಾತ್ಮ ಗಾಂಧಿಯ ನೆನಪಿಸುವಂತಹ ಸ್ವಾತಂತ್ರೋತ್ಸವ ನಮ್ಮ ಅಮೃತ ಮಹೋತ್ಸವ
॥ಸ್ವಾತಂತ್ರ್ಯ॥

ಸ್ವರಾಜ್ಯ ಗಳಿಕೆಯ ಕನಸನು ಕಂಡ ಸಾವಿರ ಸಾವಿರ ವೀರ ಯೋಧರಿಗೆ ನಿಮ್ಮ-ನಿಮ್ಮೆಲ್ಲರ ಪುಷ್ಪ ಮಹೋತ್ಸವ ಸ್ವಾತಂತ್ರೋತ್ಸವ ನಮ್ಮ ಅಮೃತ ಮಹೋತ್ಸವ
॥ಸ್ವಾತಂತ್ರ್ಯ॥

ವಿವಿಧ ಕ್ಷೇತ್ರದಿ ಸಾಧನೆಗೈದ
ದೇಶದ ಪ್ರಗತಿಗೆ ದೀವಿಗೆಯಾದ ಭಾರತರತ್ನರ ನೆನಪಿಸುವಂತಹ ಸ್ವಾತಂತ್ರ್ಯೋತ್ಸವ ನಮ್ಮ ಅಮೃತ ಮಹೋತ್ಸವ
॥ಸ್ವಾತಂತ್ರ್ಯ॥

ಭಾರತಮಾತೆಯ ಕಾಯುತಲಿರುವ ಕ್ಷಣಕ್ಷಣಕ್ಕೂ ರಕ್ಷಿಸುತಿರುವ
ವೀರ ಯೋಧರಿಗೆ ನಮನ ತೋರುವ ಸ್ವಾತಂತ್ರೋತ್ಸವ ನಮ್ಮ ಅಮೃತ ಮಹೋತ್ಸವ
॥ಸ್ವಾತಂತ್ರ್ಯ॥

ದೇಶದ ಜನರಿಗೆ ಅನ್ನ ನೀಡುವ ಆರ್ಥಿಕತೆಯ ಜಿಡಿಪಿ ಪೊರೆವ ಅನ್ನದಾತರ ನೆನಪಿಸುವಂತಹ ಸ್ವಾತಂತ್ರ್ಯೋತ್ಸವ ನಮ್ಮ ಅಮೃತ ಮಹೋತ್ಸವ
॥ಸ್ವಾತಂತ್ರ್ಯ॥

ಪಾತಮುತ್ತಕಪಲ್ಲಿ ಎಂ.ಚಲಪತಿಗೌಡ ಚಿಕ್ಕಬಳ್ಳಾಪುರ