ಕೇಸರಿ ಬಿಳಿ ಹಸುರಿನ ತಿರಂಗ ಧ್ವಜವಿದು
ಬಾನಲ್ಲಿ ಹಾರುತ ಮಿನುಗುವ ಪಠವಿದು
ಶೌರ್ಯ ಸಾಹಸದ ನೆನಪುಗಳು
ಸತ್ಯ ಶಾಂತಿ ಅಹಿಂಸೆ ಬಿಂಬಿಸುವ ಪ್ರತೀಕಗಳು ॥

ಧ್ವಜದ ನಡುವಲಿಹುದು ಧರ್ಮ ಚಕ್ರವು
ನೀಲಿಯ ರಂಗಲಿ ರಾರಾಜಿಸುವುದು ನಿತ್ಯವು
ತೋರುತಿಹುದು ಅಭಿವೃದ್ಧಿಯು ನಿತ್ಯ ನಿರಂತರ
ಸೃಜಿಸುವುದು ದೇಶದಲಿ ಹೊಸ ಮನ್ವಂತರ॥

ಭವ್ಯ ಭಾರತದ ರಾಷ್ಟ್ರೀಯ ಚಿಹ್ನೆಯಿದು
ಭಾರತೀಯರ ನರ ನಾಡಿಗಳ ಮಿಡಿತವಿದು
ರಾಷ್ಟ್ರಪ್ರೇಮ ರಾಷ್ಟ್ಭಭಕ್ತಿಯ ಕುರುಹಿದು
ವಿವಿಧತೆಯಲ್ಲಿ ಏಕತೆ ಮೂಡಿಸಿದ ಸಾಮರಸ್ಯವಿದು ॥

ಏರುತಿಹುದು ಹಾರುತಿಹುದು ಸದಾ ನಮ್ಮ ಬಾವುಟ
ಜನಗಣಮನ ಹಾಡುತ ಜೈಕಾರ ಹಾಕೋಣ
ಹೆಮ್ಮೆಯ ಚಿನ್ಹೆಯಿದು ತಲೆಯೆತ್ತಿ ನಮಿಸೋಣ
ಬೋಲೋ ಭಾರತ್ ಮಾತಾ ಘೋಷಣೆ ಮಾಡೋಣ ॥

✍️ಅನುಸೂಯ ಯತೀಶ್
ಮಾಗಡಿ,ಬೆಂಗಳೂರು