ಎರಗಿದ ಸಂಕಟ ಸಮಯದಲ್ಲಿ ನೂಲೆಳೆಯಲ್ಲಿ ಬಂಧಿಸಿ ಸಹೋದರತ್ವ ಬಯಸಿದ ವಿಶೇಷ ದಿನ

ಜನಿವಾರ ಸಂಪ್ರದಾಯಕರು ಹಿರಿಯರಿಗೆ ತಪ೯ಣ ಅಪಿ೯ಸಿ ಜನಿವಾರ ಬದಲಿಸುವ ದಿನ

ಆಗ ಯುದ್ಧ ಸಮಯದಲ್ಲಿ ಸೆರೆ ಸಿಕ್ಕ ಸ್ತ್ರೀಯರು ಶತ್ರು ಪಡೆಯವರಿಗೆ ನೂಲೆಳೆಯ ಕಟ್ಟಿ ಭ್ರಾತೃತ್ವ ಬೆಳೆಸಿ ರಕ್ಷಣೆಯ ಕೋರಿದ ದಿನ

ಭಾರತೀಯ ಹಬ್ಬಗಳೆಲ್ಲ ತೋರಿಕೆಯದಾಗುತ್ತಿವೆ
ಆಂಗಡಿಗಳೆಲ್ಲ ರಾಖೀಗಳಿಂದ ತುಳುಕಾಡುತ್ತಿವೆ*

ನೂಲಿಗೆ ಹವಳ ಮುತ್ತು,ಮಣಿ ಅಲಂಕಾರ ಸೇರಿ ಹುಚ್ಚು ಪೈಪೋಟಿ ಬೆಳೆಯುತ್ತಿದೆ*

ನೂಲು ಸರಿದು ಬಂಗಾರ ಬೆಳ್ಳಿಯವರೆಗೂ ಸಾಗಿದೆ
ಸಹೋದರತ್ವದ ವಾತ್ಸಲ್ಯ ಮಾರುಕಟ್ಟೆಯ ಸರಕಾಗುತ್ತಿದೆ

ಮಧ್ಯಮರು ಹುಚ್ಚಿಗೆ ಬಿದ್ದು ಎಟುಕಲಾರದ್ದ ಕೊಂಡು ನರಳುವಂತಾಗಿದೆ
ಹಬ್ಬ ಹುಬ್ಬೇರಿಸುವಂತೆ ಮಾಡುತ್ತಿದೆ*

ಮನದ ಭಾವವೇ ನೂಲೆಳೆಯಾಗಿ ನೀಡಲಿ ರಕ್ಷೆ
ನೂಲ ಹಂಗಿಲ್ಲದಿದ್ದರೂ ಪರಸ್ತ್ರೀಯರಿಗೆ ನೀಡಿರಿ ನಿಮ್ಮ ಅನುಜತ್ವದ ಭದ್ರ ಕಕ್ಷೆ

✍️ಶ್ರೀಮತಿ ರೇಖಾ ನಾಡಿಗೇರ 
ಹುಬ್ಬಳ್ಳಿ