ಪಂಚಮಿ ಪಂಚ್--1
ಹಲ್ಲುಕಿತ್ತ ಹಾವಿಗೂ
ವಿವಾಹಿತ ಗಂಡಿಗೂ
ವಾಸ್ತವದಿ ಅಂಥಹ
ವ್ಯತ್ಯಾಸವೇನಿಲ್ಲ…
ಇಬ್ಬರಿಗೂ ಸುಮ್ಮನೆ
ಬುಸುಗುಡುವುದು
ಬಿಟ್ಟರೆ ಮತ್ತೇನೂ
ಮಾಡಲಾಗುವುದಿಲ್ಲ.!
ಪಂಚಮಿ ಪಂಚ್--2
ಅದೆಂತಹ
ಘಟಸರ್ಪವಾದರೂ
ಪುಂಗಿಯ ನಾದಕೆ
ಹೆಡೆಯಾಡಿಸಲೇಬೇಕು..
ಅದೆಂತಹ
ಗರ್ವಿಷ್ಟನಾದರೂ
ಅರ್ಧಾಂಗಿ ಕೂಗಿಗೆ
ತಲೆಬಾಗಿಸಲೇಬೇಕು..!
ಪಂಚಮಿ ಪಂಚ್--3
ವರ್ಷಕ್ಕೊಮ್ಮೆ ಮಡಿಯುಟ್ಟು
ಭಕ್ತಿಯಲಿ ಹುತ್ತದ
ಬಾಯಿಗೆ ಹಾಲೆರೆದರೆ
ಆದಿನ ನಾಗಪಂಚಮಿ.!
ಮಡದಿಯೇ ಪ್ರತಿದಿನ
ಪ್ರೀತಿಯಲಿ ಮುದದಿ
ಪತಿಯ ಬಾಯಿಗೆ
ಆಲ್ಕೋಹಾಲೆರೆದರೆ
ನಿತ್ಯವೂ ರಂಗಪಂಚಮಿ.!
ಪಂಚಮಿ ಪಂಚ್--4
ಈ ಬಾರಿ ಪಂಚಮಿಗೆ
ಬರಲಿಲ್ಲ ಅಣ್ಣ ಯಾಕ
ಈ ತಂಗೀನ ಕರೆಯಾಕ..?
ಕರೋನ ಪ್ರಭಾವ..??
ಅಲ್ಲ ಅದು ಅತ್ತಿಗೆಯ
ಕಹೋನಾ ಪ್ರಭಾವ..!
ಅಣ್ಣನಿಗೂ ಕೂರೋನ
ಸೋಂಕಿನ ಭಯ..?
ಅಲ್ಲಲ್ಲ ಅದು ಅತ್ತಿಗೆಯ
ಕೊಂಕಿನಾ ಭಯ..!!
ಪಂಚಮಿ ಪಂಚ್--5
ನಾಗರಪಂಚಮಿಯೆಂದರೆ
ಅನುದಿನ ಅನುಕ್ಷಣವೂ
ಪರಸ್ಪರ ಬುಸುಗುಡುವ
ಮನೆ ನಾಗ-ನಾಗಿಣಿಗಳು
ವರ್ಷಕ್ಕೊಂದು ದಿನ
ಒಟ್ಟಾಗಿ ಹೋಗಿ ಹುತ್ತಕ್ಕೆ
ಹಾಲೆರೆದು ಬರುವ ಹಬ್ಬ.!
✍️ಎ.ಎನ್.ರಮೇಶ್, ಗುಬ್ಬಿ.