ಅಮ್ಮಾ ಜಗದಂಬೆ
ಜಗವೇ ನೀನೆಂಬೆ

ನಾನು ಕಣ್ಣು
ಮುಚ್ಚಿದರು ಅಮ್ಮಾ
ಕಣ್ತೆರೆದು ನೀ
ನೋಡು ತಿರು ಆಮ್ಮಾ

ನಾನು ಎಷ್ಟು
ಮೂಕನಾದರು ಅಮ್ಮಾ
ನೀ ನುಡಿಯುತ
ನುಡಿಸುತಿರು ಅಮ್ಮಾ

ನಾನು ಹೆಜ್ಜೆಯನು
ನಡೆಯದಾದರು ಅಮ್ಮಾ
ನಿನ್ನಿಚ್ಛೆಯಂತೆ ನಿನ್ನೆಡೆಗೆ
ನನ್ನ ನಡೆಸು ಅಮ್ಮಾ

ನಾನು ನಿನ್ನ ತಿಳಿಯ
ಅರಿಯದಾದರು ಅಮ್ಮಾ
ನೀನು ನನ್ನ ತಿಳಿಯ
ತಿಳಿಯಾಗಿಸು ಅಮ್ಮಾ

ಪ್ರತಿ ಗಳಿಗೆ ನೀನೆನೆ ನನ್ನ
ಪ್ರಾರ್ಥನೆಯು ಅಮ್ಮಾ
ಸ್ಮೃತಿ ಗುಳಿಗೆ ನೀನೆನೆ ನನ್ನ
ಸ್ವೀಕರಿಸಿ ಹರಿಸು ಅಮ್ಮಾ

ಅಳೆದು ಎನ್ನ ಎಳೆದು ಎನ್ನ
ಕಳೆದು ಎನ್ನ ಹೇಳದೆ ಎನ್ನ
ಬಾರದ ಎನ್ನ ಆರದ ಎನ್ನ
ಮಾಡು ನಿನ್ನ ಪಾದಧೂಳಿ ಎನ್ನ

ಅಮ್ಮಾ ಜಗದಂಬೆ
ಜಗವೇ ನೀನೆಂಬೆ

✍️ಕಾವ್ಯಸುತ
(ಷಣ್ಮುಖಂ ವಿವೇಕಾನಂದ)