ಕ್ರೂರತೆಯ ಒಂದಿರುಳಲಿ
ಕನಸೊಂದು ಮನದಲಿ ಮೂಡಿರಲು
ಕಾಲಚಕ್ರವು ಭೂತದೊಳಗೆ ಎಳೆತರಲು
ಹರೆಯದ ಚೈತ್ರವನದೊಳಗೆ ನೆನಪು ಹೊರಳಲು //

ಹುಡುಕ್ಕುತ್ತಿದೆ, ಬೆದಕುತ್ತಿದೆ ಸರಿಸುತ್ತದೆ
ಗಡಿಯಾರದ ಮುಳ್ಳು ಸರಸರನೇ ಸಾಗುತ್ತಿದೆ
ಕೈಬೆರಳು ಬೆದಕುತ್ತಿದೆ ಕಳೆದುಹೋದ
ಮಾಸಿದ ಹಾಳೆಯ ತುಣುಕು, ನೆನಪಿಸುತ್ತಿದೆ.//

ಬರೆದ ಹೊಸತನದ ಕವಿತೆಯಲ್ಲಿ
ಒಲವಿನ ಹುಸಿತನದ ಮಾತಲ್ಲಿ
ಬೇಡಿದ ಪ್ರೇಮಭಿಕ್ಷೆಯ ಪರಿಯನ್ನ
ತೊರೆದ ವೇದನೆಯ ಪರಿಸ್ಥಿತಿಯನ್ನ//

ಪರಿತಪಿಸುತ್ತ, ಚಡಪಡಿಸುತ್ತ ಹೊರಳಿದೆ
ಮಗ್ಗಲಲಿ ಮಲಗಿದಾಕೆಯ ಸ್ಪರ್ಶಿಸಿದೆ
ಕನಸ್ಸು! ಕಳೆದುಹೋದ ಕಥೆ ಒಳಗೊಳಗಿದೆ
ವಾಸ್ತವ ಪಕ್ಕದಲಿ ಹಾಯಾಗಿ ಮಲಗಿದೆ.//

✍️ಡಾ.ನವೀನಕುಮಾರ ಎ.ಜಿ.
ಶಿಕ್ಷಕರು,ಯಲ್ಲಾಪೂರ