ಸಂಘಟನ ತಂಡ ಮತ್ತು ಸಂಸ್ಥೆಗಳ ನಡುವೆ ಇರುವ ಸಂಬಂಧಗಳು ಮುಂದೆ ಓದುವ ಮುನ್ನ, ಕೆಲವು ಅಂಶಗಳನ್ನ ಗಮನಿಸಬೇಕಾದ ಸಂಗತಿಗಳು:
1.ಯಾವ ತಂಡದ ಹೆಸರು ಇಲ್ಲಿ ತೆಗೆದುಕೊಳ್ಳು ವದಿಲ್ಲ. 2.ಸರ್ಕಾರದ ಅನುದಾನ ಪಡೆಯುವ, ಪಡೆಯ- ಲಾರದ ತಂಡಗಳು ಅಂತ ವಿಭಜನೆ ಮಾಡಬಹು ದಾಗಿದೆ.

3.ಜನ್ಮ ತಾಳಿದ ವರ್ಷದಿಂದ ಇಲ್ಲಿವರೆಗೆ ಕ್ರಿಯಾ ಶೀಲವಾಗಿ ಉಳಿದ ತಂಡಗಳಲ್ಲಿ ಕೋಮಾದಲ್ಲಿ ಇರುವ, ಸೋಮಾರಿಯಾಗಿ ರುವ, ಅನುದಾನ ಬಂದಾಗ ಮಾತ್ರ ನಾಟಕ ಮಾಡುವ, ವೈಚಾರಿಕ ಶ್ರೀಮಂತಿಕೆ ಯನ್ನ ಹಣದ ಶ್ರೀಮಂತಿಕೆ ಅಂತ ತಿಳಿದುಕೊಳ್ಳುವ ಹಾಗೆ ಇಮೇಜು ಇಟ್ಟುಕೊಂಡಿ ರುವ, ಹಣ ಎಲ್ಲಿಂದ ಬಂದ್ರು ಸಾಕು ಅನ್ನೋ ತಂಡ, ದಾಖಲೆ ನಿರ್ಮಾಣ ಮಾಡುವ ತಂಡ, ಧರ್ಮ, ಜಾತಿ ಭಾವನೆಗಳನ್ನು ಅಲಿಖಿತವಾಗಿ ಇಟ್ಟುಕೊಂಡಂತ ತಂಡಗಳು ಹೀಗೆ ಸಾಧಾರಣ ವಾಗಿ ನಮ್ಮ ಹುಬ್ಬಳ್ಳಿ ಧಾರವಾಡ ಮಹಾನಗರ ಗಮನಿಸಿ ಕೆಲವೊಂದು ಮಾತು ಹೇಳಬಹುದಾ ಗಿದೆ. ಈ ಹಿಂದೆ ಎರಡು ಮೂರು ಬಾರಿ ಎಲ್ಲ ತಂಡಗಳನ್ನು ಒತ್ತಟ್ಟಿಗೆ ತಂದು, ಒಕ್ಕೂಟ ಮಾಡುವ ಪ್ರಯತ್ನಗಳು ಆಗಿದ್ದರೂ ಯಶಸ್ವೀ ಆಗಿಲ್ಲಾ ಉಳಿದಿರಬಹುದಾದದ್ದು ಅಂದರೆ ಆಗ ಪ್ರಿಂಟ್ ಮಾಡಿದ ಲೆಟರ್ ಹೆಡ್ ಗಳು ಮಾತ್ರ.

4.ಸರ್ಕಾರ ಯಾವಾಗ ಅನುದಾನ ಪದ್ಧತಿ ಆರಂಭಿಸಿತೋ ಆಗ ಸರ್ಕಾರದ ವರ್ಗಿಕರಣ ಗಳು ಜಾತಿಗಳ ಹೊಸ ಸಂಶೋಧನೆಗಳು, ಕಾರಕೂನ ಶಾಹಿಯ ಪ್ರಭಾವಗಳು, ಆರಂಭ ವಾದವು. ಎಲ್ಲದರ ಪರಿಣಾಮ ಅಂದರೆ ಸರ್ಕಾರಿ ದಾಖಲೆ, ಅಕಾಡೆಮಿಗಳ ಸ್ಥಾನ ಗಿಟ್ಟಿಸಿಕೊಳ್ಳಲು ಬೇಕಾದ ಆತ್ಮರತಿಯ ಬೈಯೋ-ಡಾಟಾ ರೂಪಿಸಿ ಕೊಳ್ಳುವ, ಪ್ರಶಸ್ತಿ ಪಡೆಯುವುದಕ್ಕಾಗಿ ಸ್ನೇಹ ಮಾಡುವ ಸಂಬಂಧಗಳು ಹುಟ್ಟಿಕೊಳ್ಳುವದರ ಆರಂಭ ವಾಯಿತು.

5.ಸಹಕಾರ ಮನೋಭಾವ ದಿಂದ ಲಾಭ ಹಾನಿ ಇಲ್ಲದೆ ನಾಟಕೋತ್ಸವ ಮಾಡುವದು ಸಪ್ತ ಮಂಡಲ ನಾಟಕೋತ್ಸವದ ಎರಡನೇ ಆವೃತ್ತಿಗೆ ಮುಗಿದು ಹೋಯಿತು.
6.ಹೊಸ ಹೊಸ ತಂಡಗಳು ಅನುದಾನದ ಆಶೆ ಯಿಂದಲೋ, ಪ್ರತಿಷ್ಟತೆ ದೃಷ್ಟಿಯಿಂದಲೋ, ನೌಕರಿ ಮಾಡುವ ಇಲಾಖೆ ರಹಸ್ಯ ಗಳು ತಿಳಿದ ಪ್ರಯುಕ್ತವೋ, ಯಾವ ಯಾವದೋ ಪದ್ಧತಿ ಗಳಲ್ಲಿ ಮದುವೆಯಾಗಿರುವಂತೆ ಸಂಸಾರ ಆರಂಭ ಮಾಡಿದವು. ಎಲ್ಲವೂ ಒಂದು ರೀತಿ ಯಿಂದ ಲಿವಿಂಗ್ ಇನ್ ರಿಲೇಶನ್ಸ್ ಅನ್ನೋ ಹಾಗೆ ಬೇರೆ ಬೇರೆ ಫೌಂಡೇಶನ್, ಟ್ರಸ್ಟ್ ಗಳು ಹಣ ಕೊಡಲು ಆರಂಭಿಸಿದಾಗ ಬೇರೆಬೇರೆ ತಂಡದ ನಟ ನಟಿಯರನ್ನ ಬೇರೆ ಬೇರೆ ಆಶೆ ತೋರಿಸಿ ಎಳೆದುಕೊಳ್ಳುವದು ಆರಂಭವಾ ಯಿತು.

7. ರಿಹರ್ಸಲ್ ಗೇ ಕರಾರು, ಗೌರವಧನಕ್ಕಾಗಿ ಕರಾರುಗಳು, ಅಪಾರದರ್ಶಕತೆ ಆರಂಭವಾ ಯಿತು.
8.ಸ್ಪರ್ಧೆ ಸಕಾರತ್ಮಕತೆ ಇಲ್ಲದೇ ನಕಾರತ್ಮಕತೆ ಬರುವದರ ಆರಂಭ ತಮ್ಮ ತಮ್ಮ ಇಸ್ಪೀಟು ಎಲೆಗಳನ್ನ ಎದೆಗವಚಿಕೊಂಡು ಆಡುವದರ ಆರಂಭ.

9.ಹೆಚ್ಚು ಹೆಚ್ಚು ಪ್ರಯೋಗಗಳು ಕಲಾವಿದರ ಕಪ್ಪೆ ಜಿಗಿತದ ಪ್ರಭಾವದಿಂದಾಗಿ ಕಡಿಮೆ ಆಗುತ್ತಾ ಬಂದು ತಂಡಗಳ ಸುಸ್ಥಿರತೆ ಕಡಿಮೆ ಆತು.
10.ವಾರಾಂತ್ಯದ ನಾಟಕಗಳಿಗೆ ಕೊಡುವ ದುಡ್ಡಿಗೆ ನಾಟಕ ಹೊಸೆಯುವ ಪ್ರವೃತ್ತಿ ಗುಣ- ಮಟ್ಟತೆಯ ಸಂಶಯ ಹುಟ್ಟಿಸಿದಾಗ ಇಷ್ಟಾದ ರೂ ನಡೆದಾವಲ್ಲ ಅನ್ನೋ ಮೆಡಿಯೋ ಕಾರ್ ಸಮಾಧಾನ ಪಡುವದಾಯಿತು.
✍️ಅರವಿಂದ ಕುಲಕರ್ಣಿ
ರಂಗಭೂಮಿ ಚಿಂತಕರು,ಧಾರವಾಡ