ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಇಲಾಖೆ ಯಲ್ಲಿ ಕರ್ನಾಟಕ ರಾಜ್ಯಕ್ಕೆ ಬಹು ಮಾದರಿಯಾ ಗಬಲ್ಲ ಡಿಜಿಟಲ್ ಸಮೂಹ ಸಂಪನ್ಮೂಲ ಕೇಂದ್ರ ನಿರ್ಮಾಣ ಮಾಡಿದ ಧಾರವಾಡ ಜಿಲ್ಲೆ ಹುಬ್ಬಳ್ಳಿ ಶಹರ ವಲಯದ ಘಂಟಿಕೇರಿ ಕ್ಲಸ್ಟರಿನ ಕ್ರಿಯಾ ಶೀಲ ಸಿ.ಆರ್.ಪಿ ಗಳಾದ ಶ್ರೀ ಮಹಾದೇವ ಕೆ. ಕೆಂಗಾನೂರು ಇವರಿಗೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನ, ಟಿ.ಎಲ್.ಎಂ ಮೇಳ, ದೈಹಿಕ, ಮಾನಸಿಕ ಅಗತ್ಯವುಳ್ಳ ಮಕ್ಕಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಸಹಿತ ಗುರುಚೇತನ ತರಬೇತಿ ಗಳಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾಗಿ ವಿಶಿಷ್ಟ ಕಾರ್ಯಮಾಡಿರುವ ಕಲಘಟಗಿ ಶಹರ ಕ್ಲಸ್ಟರಿ ನ ಸಿ.ಆರ್.ಪಿ ಶ್ರೀ ಬಸಯ್ಯ ಚ. ಹಿರೇಮಠ ರವರು ಮತ್ತು ಕಲೋತ್ಸವ, ಕ್ರೀಡಾ ಕೂಟ, ಶಿಕ್ಷಣ ತರಬೇತಿಗಳನ್ನು ವ್ಯವಸ್ಥಿತವಾಗಿ ಸಂಘಟಿ ಸಿರುವುದಲ್ಲದೆ ಕೋವಿಡ್ ಸಂದರ್ಭ ದಲ್ಲಿ ಕರೋನಾ ವಾರಿಯರ್ ಆಗಿ ಜನಮುಖಿ ಕಾರ್ಯ ಗಳನ್ನು ಮಾಡಿರುವ ನವಲಗುಂದ ತಾಲ್ಲೂಕ ಜಾವುರ ಕ್ಲಸ್ಟರಿನ ಬಹುಮುಖ ಪ್ರತಿಭಾವಂತ ಸಿ.ಆರ್.ಪಿ ಶ್ರೀ ಗಣೇಶ ಹೊಳೆಯಣ್ಣವರ ಈ ಮೂವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ) ಇವರು ಕೊಡ ಮಾಡುವ ರಾಜ್ಯ ಮಟ್ಟದ “ಶಿಕ್ಷಣ ಸಾರಥಿ ಪ್ರಶಸ್ತಿ” ಲಭಿಸಿದೆ.

ಶ್ರೀ ಎಂ.ಕೆ. ಕೆಂಗಾನೂರ ಸಿ.ಆರ್. ಪಿ ರವರ ಸಾಧನೆ

ರಾಜ್ಯದಲ್ಲಿಯೇ ಮಾದರಿ ಗುಚ್ಛ ಸಂಪನ್ಮೂಲ ಕೇಂದ್ರ ನಿರ್ಮಿಸಿ (ಕಟ್ಟಿ)ದ ಹುಬ್ಬಳ್ಳಿ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ವ್ಯಾಪ್ತಿ ಯ ಘಂಟಿಕೇರಿ ಕ್ಲಸ್ಟರಿನ ಕ್ರಿಯಾಶೀಲ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಹಾದೇವ ಕೆ. ಕೆಂಗಾನೂರ ರವರಿಗೆ ಶಿಕ್ಷಣ ಸಾರಥಿ ಪ್ರಶಸ್ತಿ ಒಲಿದು ಬಂದಿದೆ. ಸಿ.ಆರ್.ಪಿ ಗಳಾದ ಎಂ.ಕೆ. ಕೆಂಗಾನೂರರವರು ಕರ್ನಾಟಕ ಸರ್ಕಾರ, ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಶ್ರೀಶೈಲ ಕರಿಕಟ್ಟಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಗಳಾದ ಎಂ.ಎಸ್.ಶಿವಳ್ಳಿ ಮಠರವರ ಮಾರ್ಗದರ್ಶನ, ಸಹಕಾರ ಹಾಗೂ ಸಂಘ ಸಂಸ್ಥೆಗಳ ಸಹಾಯ, ಸಹಯೋಗದೊಂ ದಿಗೆ ವಿನೂತವು ವಿಶಿಷ್ಠವು ರಾಜ್ಯಕ್ಕೆ ಮಾದರಿ ಆಗಿರುವ ಗುಚ್ಛ ಸಂಪನ್ಮೂಲ ಕೇಂದ್ರವನ್ನು ಕಟ್ಟಿರುವುದು ಶ್ಲಾಘನೀಯವಾಗಿದೆ.

ಸುಭದ್ರವಾದ ಸಿ.ಆರ್.ಸಿ ಕಟ್ಟಡದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅಧ್ಯಯನಕ್ಕೆ ಸುಸಜ್ಜಿತ ವಾದ ಗ್ರಂಥಾಲಯ, ವಿದ್ಯಾವಾಹಿನಿ ಚಾನಲ್ ಸಹಿತ ಟೆಲಿಕಾನ್ಫರೆನ್ಸಗೆ ವ್ಯವಸ್ಥೆ, ಗುಣಮಟ್ಟದ ಪ್ರೊಜೆಕ್ಟರ್, ಕಲಿಕೋಪಕರಣಗಳು ವ ಪೀಠೋಪಕರಗಳು, ಶಿಕ್ಷಣದ ಮಹತ್ವಸಾರುವ ಧ್ಯೇಯ ವಾಕ್ಯಗಳ ಗೋಡೆ ಬರಹಗಳು, 2020 ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮಹತ್ವ ಸಾರುವ ಚಿತ್ರಾವಳಿ, ಘಂಟಿಕೇರಿ ಸಿ.ಆರ್.ಸಿ ವ್ಯಾಪ್ತಿಯ ಎಲ್ಲಾ ಶಾಲೆಗಳ ವರ್ಣರಂಜಿತ ಪೋಟೋಗಳು, ಕ್ರೀಡೆ ಮತ್ತು ಯೋಗಾಸನಗಳ ಚಿತ್ರ ಸರಣಿ, ಧೀಮಂತ ರಾಷ್ಟ್ರ ನಾಯಕ ಮತ್ತು ಸಾಹಿತಿಗಳ ಬೃಹತ್ತ ಆಕಾರದ ೩೦ ಪೋಟೋ ಗಳು, ೬೦ ಶಿಕ್ಷಕರಿಗೆ ತರಬೇತಿಗೆ ಸೂಕ್ತವಾದ ಕೊಠಡಿ ಮುಂತಾದ ಮೂಲಭೂತ ಸೌಲಭ್ಯಗ ಳಿಂದ ತನ್ನೆಡೆಗೆ ಸೆಳೆಯುತ್ತಿರುವ ಸಿ.ಆರ್.ಸಿ ಕೇಂದ್ರವು ಕೆಂಗಾನೂರರ ಅಭೂತಪೂರ್ವ ಸಾಧನೆಗೆ ಸಾಕ್ಷಿ ಭೂತವಾಗಿದೆ.

ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು (ರಿ) ಇವರು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಆಯೋಜಿಸಿದ್ದ ರಾಜ್ಯ ಶೈಕ್ಷಣಿಕ ಸಮ್ಮೇಳನದಲ್ಲಿ ಧಾರವಾಡದ ಜಿಲ್ಲೆಯ ಕ್ಲಸ್ಟರ್ ರಿಸೋರ್ಸ್ ಪರ್ಸನ್ ಗಳಾದ (ಸಿ.ಆರ್.ಪಿ) ಮಹಾದೇವ, ಬಸಯ್ಯ ಹಾಗೂ ಗಣೇಶ ಇವರಿಗೆ ಸಿದ್ದಗಂಗಾ ಮಠದ ಪರಮಪೂಜ್ಯ ಸಿದ್ದಲಿಂಗ ಮಹಾಸ್ವಾಮಿ ಗಳು ಗಣ್ಯಾತಿ ಗಣ್ಯರ ಸಮ್ಮುಖ ದಲ್ಲಿ ಜುಲೈ ೨೪ರ ರವಿವಾರದಂದು ೨೦೨೨ ನೇ ಸಾಲಿನ ರಾಜ್ಯ ಮಟ್ಟದ ಶಿಕ್ಷಣ ಸಾರಥಿ ಪ್ರಶಸ್ತಿ ಯನ್ನು ಪ್ರದಾನ ಮಾಡಿ ಆಶೀರ್ವದಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಯ ೧೬೦ ಸಿಆರ್ಪಿಗಳಿಗೆ ಶಿಕ್ಷಣ ಸಾರಥಿ ಪ್ರಶಸ್ತಿಯನ್ನು ಕೊಡಮಾಡಿದ್ದು; ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಶಹರ, ಕಲಘಟಗಿ ಹಾಗೂ ನವಲಗುಂದ ತಾಲ್ಲೂಕಿನ ಕ್ರಿಯಾಶೀಲ ಸಿಆರ್ಪಿಗಳನ್ನು ಆಯ್ಕೆಮಾಡು ವಲ್ಲಿ ಧಾರವಾಡ ಜಿಲ್ಲಾ ಮುಖ್ಯಸ್ಥರಾಗಿ ಪ್ರಮಾಣಿಕ ಕಾರ್ಯ ಮಾಡಿದ ಶಿಕ್ಷಕ ಸಾಹಿತಿ ಗಳಾದ ಸುಭಾಷ್ ಹೇ. ಚವ್ಹಾಣ, ಸುಮಾ ಗಾಜರೆ ಮತ್ತು ಸಂಯೋಜ ಕರಾಗಿ ಕಾರ್ಯಮಾಡಿದ ವಿ.ಜಿ.ಅಗ್ರಹಾರ, ಲೀಲಾಧರ ಮೊಗೇರ ಇವರನ್ನು ವ ಪ್ರಶಸ್ತಿ ವಿಜೇತರನ್ನು ಕ.ರಾ.ಶಿ.ಪ್ರ.ಪರಿಷತ್ತಿನ ರಾಜ್ಯಾಧ್ಯಕ್ಷರಾದ ಪಿ. ಮಹೇಶ, ಕಾರ್ಯದರ್ಶಿ ಗಳಾದ ಸಂತೋಷ ಬಂಡೆ, ಉಮದೇವಿ ಗುಡ್ಡದ ಹಾಗೂ ಸಮಸ್ತ ಪದಾಧಿಕಾರಿಗಳು ಅಭಿನಂದಿಸಿ ದ್ದಾರೆ. ಈ ಇದು ಸುಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಕಾರ್ಯವನ್ನು ಸಮರ್ಪಕವಾಗಿ ನೇರವೆರಿಸಿ ಪ್ರಶಸ್ತಿಗೆ ಭಾಜನರಾದ ಶ್ರೀಯುತ ರನ್ನು ಹಾಗೂ ಕರಾಶಿಪ್ರಪ ಮತ್ತು ಸಂಘಟಕರಿಗೆ ಮೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಶಿಕ್ಷಣಾಧಿಕಾರಿಗಳು, ಸಮನ್ವಯಾ ಧಿಕಾರಿಗಳು, ಬಿ.ಆರ್.ಪಿ ಮತ್ತು ಬಿ.ಐ.ಇ.ಆರ್.ಟಿ ಬಳಗದವರು ವಿಶೇಷ ಅಭಿನಂದನೆಗಳು ಅರ್ಪಿಸಿದ್ದಾರೆ.

✍️ಸುಹೇಚ ಪರಮವಾಡಿ
ಶಿಕ್ಷಕ ಸಾಹಿತಿಗಳು, ಹುಬ್ಬಳ್ಳಿ ಶಹರ