ನಮಸ್ಕಾರ ನಮ್ಮ ಕರ್ನಾಟಕ ಕಾರ್ಯಕ್ರಮದ ಅತಿಥಿಯಾದ ಡಾ.ಬೇಲೂರು ರಘುನಂದನ್
ಅವರ ಮನದಾಳದ ನುಡಿಗಳು.

“ಏನಾದರೂ ಆಗು ಮೊದಲು ಮಾನವ ನಾಗು” ಎಂಬ ಸಂದೇಶವನ್ನು ನಾಡಿಗೆ ನೀಡಿದ ನಮ್ಮ ಹೆಮ್ಮೆಯ ಕವಿ ಸಿದ್ದಯ್ಯ ಪುರಾಣಿಕರ ಮಾತಿಗೆ ಪುಷ್ಟಿ ತುಂಬುವಂತೆ ಪ್ರಾಧ್ಯಾಪಕ, ಸಾಹಿತಿ, ನಾಟಕಕಾರ, ಕಲಾವಿದ, ನಿರ್ದೇಶಕ ಏನೇ ಆಗಿರಲಿ ಅದಕ್ಕಿಂತ ಮೊದಲು ನಾವು ಮನುಷ್ಯ ರಾಗಬೇಕು. ಜೀವಪರ ನಿಲುವು, ಸಮಾಜದ ಸಂಕಷ್ಟಗಳಿಗೆ ತುಡಿಯುವ ಮನ ಅಭದ್ರತೆಯಲ್ಲಿ ಅರಳುವ ಸೃಜನಶೀಲ ಗುಣ ಇದ್ದಾಗ ಮಾತ್ರ ಒಬ್ಬ ವ್ಯಕ್ತಿ ಸಂಪೂರ್ಣನಾಗ ಬಲ್ಲ. ಪರಿಪೂರ್ಣತೆಯನ್ನು ಸಾಧಿಸಬಲ್ಲ ಎಂಬ ಸಮಾಜಮುಖಿ ನುಡಿಗಳೊಂದಿಗೆ ಚಂದನ ವಾಹಿನಿಯ”ನಮಸ್ಕಾರ ನಮ್ಮ ಕರ್ನಾಟಕ” ಕಾರ್ಯಕ್ರಮದ ಅತಿಥಿಗಳಾಗಿ ಪ್ರೇಕ್ಷಕರಿಗೆ ಎದು ರಾದವರು ಡಾ.ಬೇಲೂರು ರಘುನಂದನ್ ಅವರು.“ಉತ್ತಮ ಗುರು ತನ್ನ ಶಿಷ್ಯರಿಂದ ಗುರುತಿಸಲ್ಪಡುತ್ತಾನೆ. ಯಾವ ಶಿಷ್ಯ ಗುರುವಿ ಗಿಂತ ಮುಂದೆ ಹೋಗುತ್ತಾ ನೋ ಅವನೇ ಉತ್ತಮ ಗುರು” ಎಂಬ ವಿನೋಬಾ ಭಾವೆ ಯವರ ಸ್ಮರಣೆಯೊಂದಿ ಗೆ ಅವರನ್ನು ಸಂದರ್ಶಿ ಸಲು ಎದುರಾದವರು ಅದ್ಭುತ ವಾಗ್ಮಿಗಳು ಹಾಗೂ ಯುವ ಪ್ರತಿಭೆ ಯಾದಂತಹ ರಾಜಶೇಖರ್ ರವರು.

ಬೆಂಗಳೂರಿನ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ರಾಗಿರುವ ಡಾ. ಬೇಲೂರು ರಘುನಂದನ್ ಅವರದು ಬಹುಮುಖ ಪ್ರತಿಭೆ. ಲೇಖಕರಾಗಿ, ಕವಿಗಳಾಗಿ, ಅಂಕಣಕಾರರಾಗಿ, ವಿಮರ್ಶಕ ರಾಗಿ, ನಾಟಕಕಾರರಾಗಿ, ನಿರ್ದೇಶಕ ರಾಗಿ, ರಂಗ ಕಲಾವಿದರಾಗಿ, ಸಾವಿರಾರು ವಿದ್ಯಾರ್ಥಿಗಳ ಅಚ್ಚು-ಮೆಚ್ಚಿನ ಗುರುಗಳಾಗಿ ಖ್ಯಾತನಾಮರಾದ ಡಾ.ಬೇಲೂರು ರಘುನಂದ ನ್ ನಾಡಿನ ಜನತೆಗೆ ಚಿರಪರಿಚಿತರು. ೬ ನೇ ಜೂನ್ 2022 ರಂದು ಚಂದನ ವಾಹಿನಿಯ ನಮಸ್ತೆ ನಮ್ಮ ಕರ್ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯ, ಅಧ್ಯಾಪನ, ರಂಗಭೂಮಿ ಚಟುವಟಿಕೆಗಳನ್ನು ಕುರಿತು ತಮ್ಮ ಮನದಾಳದ ಭಾವನೆಗಳನ್ನು, ವಿಚಾರ ಧಾರೆಗಳನ್ನು ವೀಕ್ಷಕರ ಮುಂದೆ ಬಿಚ್ಚಿಟ್ಟ ರು. ಅವರ ಸುದೀರ್ಘ ಮಾತುಗಳನ್ನು ಕೇಳಿದ ನನಗೆ ಆ ಕಾರ್ಯಕ್ರಮದ ಬಗ್ಗೆ ಒಂದೆರಡು ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೆನಿಸಿತು. ಹಾಗಾಗಿ ಆ ಕಾರ್ಯಕ್ರಮದ ಒಂದು ಪುಟ್ಟ ವರದಿ ನಿಮ್ಮ ಮುಂದಿರಿಸುತ್ತಿದ್ದೇನೆ.
ಬೇಲೂರು ಎನ್ನುತ್ತಿದ್ದಂತೆ ಜನಮಾನಸದಲ್ಲಿ ಅಲ್ಲಿನ ಶಿಲ್ಪ ಕಲೆಯ ವೈಭವ, ಮನ ಮೋಹಕ ದೇವಾಲಯಗಳು ನಮ್ಮ ಸ್ಮೃತಿ ಪಟಲದ ಮೇಲೆ ಸುಳಿದಾಡಿ ತನು ಮನಗಳು ಪುಳಕಗೊ ಳ್ಳುತ್ತವೆ. ಅಂತ ಅದ್ಭುತ ಜಗತ್ಪ್ರಸಿದ್ಧ ಊರಲ್ಲಿ ಜನಿಸಿದ ಡಾ.ಬೇಲೂರು ರಘುನಂದನವರ ಬಾಲ್ಯದ ಸವಿ ನೆನಪುಗಳು ಆ ಎಲ್ಲಾ ವಾಸ್ತು ಶಿಲ್ಪಗಳನ್ನು ಮೀರಿ, ಅಲ್ಲಿನ ಪ್ರಕೃತಿಯ ಮಡಿಲು ಎಂಬ ವಿಚಾರವು ಅಚ್ಚರಿಯನ್ನು ಮೂಡಿಸಿತು. ಬೇಲೂರಿನಲ್ಲಿ ಇವರನ್ನು ಬಹುವಾಗಿ ಕಾಡಿದ್ದು ಅಲ್ಲಿನ ಹೊಲ-ಗದ್ದೆಗಳು, ಅಲ್ಲಿನ ಯಗಚಿ ನದಿ, ವಿದ್ಯಾರ್ಥಿಗಳು, ಅಲ್ಲಿದ್ದಂತಹ ಸಂಕಷ್ಟಗಳು, ಜೀವನ ಕಲಿಸುವ ಅನುಭವ ಪಾಠದ ಮುಂದೆ ವಿಶ್ವ ವಿದ್ಯಾನಿಲ ಯಗಳ ಪದವಿಗಳು ಸಪ್ಪೆ ಎನಿಸುತ್ತವೆ ಎಂಬ ಧೋರಣೆಗೆ ಜೀವ ತುಂಬು ವಂತಹ ಬದುಕು ಇವರದು. ಕಷ್ಟಗಳು, ಅಸಹಾ ಯಕತೆ, ಬಡತನ, ಅವಮಾನ ಮುಂತಾದವು ಗಳು ಅವರಲ್ಲಿ ಸ್ವಾಭಿಮಾನ ಹುಟ್ಟುಹಾಕಿ ಜೀವನ ವನ್ನು ಧೈರ್ಯವಾಗಿ ಎದುರಿಸುವ ಆತ್ಮ ವಿಶ್ವಾಸ ಹಾಗೂ ತನ್ನ ಬಳಿ ಇಲ್ಲದವುಗಳ ಹುಡುಕಾಟಕ್ಕೆ ದಾರಿಯಾಯಿತು ಎನ್ನಬಹು ದು. ಅದರ ಫಲ ಶ್ರುತಿಯೆ ಅವರ ಅಕ್ಷರ, ಕಲೆ ಹಾಗೂ ಸಾಹಿತ್ಯ ರಚನೆ ಎಂಬುದು ಪ್ರೇಕ್ಷಕರಿಗೆ ಒಂದಷ್ಟು ಸ್ಪೂರ್ತಿಯ ನುಡಿಗಳಾದವು.

ಪ್ರತಿಯೊಬ್ಬರ ಭಾವಕೋಶ ತುಂಬಿ ತುಳುಕುತ್ತಿ ರುವಾಗ ಆ ಭಾವಗಳಿಗೆ ಮಿಡಿಯುವ ಹೃದಯ ವೊಂದನು ಬಯಸುವುದು ಸಹಜ. ಅಂತಹು ದೇ ದಾರಿ ಡಾ.ಬೇಲೂರು ರಘುನಂದನ್ ಅವರದು. ಅವರ ಭಾವನೆಗಳಿಗೆ ಸ್ಪಂದಿಸುವ, ಅಗತ್ಯಗಳನ್ನು ಪೂರೈಸುವ ಜೀವವೊಂದು ದೊರೆಯದಿದ್ದಾಗ ಅವರಲ್ಲಿರುವ ಅವರ ದುಃಖ ದುಮ್ಮಾನಗಳನ್ನು ಕೇಳುವ, ಸಾಂತ್ವನ ನೀಡು ವಂತಹ ಜೀವ ದೊರೆಯದಿದ್ದಾಗ ಅವರ ಊರಲ್ಲಿದ್ದ ಕಳಸಿನ ಕೆರೆ ಇವರಿಗೆ ತಾಯ ಮಡಿಲಾಗಿ ಅವರ ಜೀವ ಕೋಶದ ಕಣಕಣ ದಲ್ಲೂ ಅವಿಸ್ಮರಣೀಯವಾದ ನೆನಪುಗಳನ್ನು ಹುಟ್ಟು ಹಾಕಿದ್ದು ಮಾತ್ರ ಅದ್ಭುತವೇ ಸರಿ.
ಇವರು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸುತ್ತಾ ಅವರ ಅಜ್ಜಿ ಸರೋಜಮ್ಮನವರು ಹೇಳುತ್ತಿದ್ದ “ಆಗದವರಿಗೂ ಹಾಲು ಅನ್ನ ಇಕ್ಕು” ಎಂಬ ಮಾತು ಅವರ ಮೇಲೆ ತುಂಬಾ ಪ್ರಭಾವ ಬೀರಿತ್ತು. ಇಂತಹ ಜ್ಞಾನವನ್ನು, ಮೌಲ್ಯವನ್ನು ಯಾವ ಯೂನಿವರ್ಸಿಟಿಗಳು ಕೂಡ ಕಲಿಸಲು ಸಾಧ್ಯವಿಲ್ಲವೆಂದು ಭಾವ ಅವರೊಬ್ಬರದಲ್ಲ ಎನ್ನಬಹುದು.

ಇವರು ಹುಟ್ಟು ಪ್ರತಿಭಾವಂತರು ಎಂಬುದಕ್ಕೆ ಸಾಕ್ಷಿ ಇವರು ಬಾಲ್ಯದಲ್ಲಿ ಕಲಿಯುವ ವಯಸ್ಸಿ ನಲ್ಲಿಯೇ ಇತರ ಮಕ್ಕಳಿಗೆ ಕಳಿಸುತ್ತಾ ಮನೆ ಪಾಠ ಮಾಡುತ್ತಿದ್ದದ್ದು ಹೆಮ್ಮೆಯ ಸಂಗತಿ. ಅದನ್ನು ಮೀರಿದ ವಿಚಾರವೆಂದರೆ ಇವರು ೧೦ ನೇ ತರಗತಿ ಓದುವಾಗ ಶಿಕ್ಷಕರು ಇವರಿಗೆ ಸಂಬಳ ಕೊಟ್ಟು ೬ ಮತ್ತು ೭ ನೇ ತರಗತಿ ಮಕ್ಕಳಿಗೆ ಪಾಠ ಹೇಳಿಸುತ್ತಿದ್ದರೆಂಬುದು ಇವರಿಗೆ ಜೀವನ ನಿರ್ವಹಣೆಗೆ ಸ್ವಲ್ಪ ಸಹಕಾರಿ ಯಾದರೂ, ಬಹಳ ಕಷ್ಟದಿಂದ ಬದುಕು ರೂಪಿಸಿಕೊಳ್ಳಲು ವಿವಿಧ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ನಾಟಕ ಗಳನ್ನು ಕಲಿಸುತ್ತಾ ಕಲೆ ಯಲ್ಲಿ ತಮ್ಮನ್ನು ತೊಡಗಿ ಸಿಕೊಂಡಿದ್ದರು ಇದು ಅವರಿಗೆ ಆರ್ಥಿಕ ಸಹಾಯ ಒದಗಿಸಿತು ಎನ್ನುವುದಕ್ಕಿಂತ ಮಿಗಿಲಾಗಿ ಅವರನ್ನು ಒಬ್ಬ ಕಲಾವಿದನಾಗಿ ಮಾಡುವಲ್ಲಿ ಹೆಚ್ಚಿನ ಪಾತ್ರ ವಹಿಸಿತು. ಬಾಲ್ಯದಲ್ಲಿಯೇ ಇವರು ಗುರುವಾಗಿ ಗುರುತರ ಜವಾಬ್ದಾರಿ ನಿರ್ವಹಿಸಿ ಮೂಲಕ ತಮಗರಿವಿಲ್ಲದಂತೆ ತಮ್ಮೊಳಗಿರುವ ಸೃಜನ ಶೀಲತೆಯೆಂಬ ಗಿಡಕ್ಕೆ ನೀರೆಲೆಯುತ್ತಾ ಹೋದರು. ಅದರಿಂದಲೇ ಅವರೊಳಗೆ ಹುದುಗಿದ್ದ ಕಲೆಯಿಂದು ಹೆಮ್ಮರ ವಾಗಿ ಬೆಳೆದು ಹಲವರಿಗೆ ನೆರಳು ನೀಡುತ್ತಿದೆ. ಇದಕ್ಕೆ ಸಾಕ್ಷಿ ಇವರು ಹೊಂದಿರುವ ಅಪಾರ ಶಿಷ್ಯ ವರ್ಗ ಹಾಗೂ ಅಭಿಮಾನಿಗಳು.

ಪ್ರತಿಭೆ ಅರಳುವುದು ಗುಡಿಸಲಿನಲ್ಲಿ ಎಂಬ ಅನುಭಾವಿಕ ನುಡಿಯೊಂದು ಡಾ.ಬೇಲೂರು ರಘುನಂದನ್ ಅವರಿಗೆ ತುಂಬಾ ಚೆನ್ನಾಗಿ ಹೊಂದುತ್ತದೆ. ಅವರನ್ನು ಬಹುವಾಗಿ ಕಾಡಿದ ಬಡತನವೇ ಅವರ ಏಳಿಗೆಗೆ, ಅವರ ಗುರಿ ಸಾಧನೆಗೆ ದಾರಿದೀವಿಗೆಯಾಗಿದೆ ಎನ್ನುವುದು ಉತ್ಪ್ರೇಕ್ಷೆ ಆಗಲಾರದು. ಇವರು ಕೇವಲ ಪ್ರಾಧ್ಯಾಪಕರಾಗಿ ಮಾತ್ರ ಉಳಿಯದೆ ನಮ್ಮ ನಾಡಿನ ಸಾಂಸ್ಕೃತಿಕ ರಾಯಭಾರಿಯಂತೆ ನಾಡಿನೆಲ್ಲೆಡೆ ಪ್ರವಾಸ ಮಾಡುತ್ತಾ, ರಂಗಭೂ ಮಿ ಚಟುವಟಿಕೆಗಳನ್ನು ನಿರ್ವಹಿಸುತ್ತಾ, ಹಲವಾರು ನಾಟಕಗಳನ್ನು ರಚಿಸಿ ನಿರ್ದೇಶಿಸಿ ಅಭಿನಯಿ ಸುತ್ತಾ ರಂಗಕರ್ಮಿಯಾಗಿ ಒಂದಿ ಲ್ಲೊಂದು ಸಂದೇಶವನ್ನು ಜನತೆಗೆ ರವಾನಿಸು ವ ಇವರ ಧ್ಯೇಯ ಉನ್ನತವಾದುದು.

ಬಾಲ್ಯದಿಂದಲೂ ತನ್ನೊಳಗೆ ಹುಟ್ಟುವ ಕಲೆಗೆ ಜೀವ ತುಂಬುತ್ತ ನಾಟಕ ಪ್ರದರ್ಶನ ಮಾಡಿಸು ತ್ತಾ ಸಾಗಿದ್ದರ ಪರಿಣಾಮವೇ ಈಗ ತಾನೊಬ್ಬ ರಂಗಭೂಮಿ ನಿರ್ದೇಶಕನಾಗಿ, ಕಲಾವಿದನಾಗಿ, ರೂಪುಗೊಳ್ಳಲು ಕಾರಣವಾಯಿತು.ಅದರ ಹೊರತಾಗಿ ಯಾವುದೇ ರಂಗ ಶಿಕ್ಷಣವನ್ನು ವ್ಯವಸ್ಥಿತವಾಗಿ ಪಡೆದಿದ್ದರಿಂದ ಬಂದ ಕೊಡುಗೆ ಯಲ್ಲ ಎನ್ನುವ ಇವರ ಎದೆಯ ದನಿಯೂ ಅವರ ಪ್ರತಿಭೆಯ ಅನಾವರಣ ಮಾಡುತ್ತದೆ. ಬೇಲೂರಿನ ಸುತ್ತಮುತ್ತಲಿನ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ನಾಟಕವನ್ನು ಮಾಡಿದ್ದನ್ನು ನೆನೆದು ಸಂಭ್ರಮಿಸಿದರು. ಬರಹವೆಂಬುದು ತನ್ನ ಮತ್ತು ಸಮಾಜದ ನೋವು, ಲೋಕದ ಸಂಕಟ ಗಳನ್ನು ನೋಡಿ ಅನುಭವದಿಂದ ಜನ್ಮತಾಳಿದ್ದು ಎನ್ನುವ ಅವರ ಮಾತು ಅವರ ಬರಹಗಳ ಶಕ್ತಿಯಾಗಿದೆ ಎಂದು ಕೇಳಿದಾಗ ಒಬ್ಬ ಬರಹ ಗಾರನಿಗಿರುವ ಜವಾಬ್ದಾರಿಯ ಅರಿವು ಅವರಿ ಗಿರುವುದು ಗೋಚರಿಸುತ್ತದೆ.

ಸಮಾಜದ ಸಂಕಟಗಳಿಗೆ ಮಿಡಿಯುವ ಹೃದಯ ತನ್ನ ಗುರುಗಳನ್ನು ನೋಡಿ ನೋವು ಸಂಕಟ ಗಳಿಗೆ ಮಿಡಿಯುವುದನ್ನು ಶಾಲಾ ಕೊಠಡಿಗ ಳಲ್ಲಿ ಕಲಿತೆ ಎನ್ನುವ ಬೇಲೂರು ರಘುನಂದನ್ ಅವರು ನನ್ನ ಗುರುಗಳಾದ ಸಿ.ಕೆ.ವಾಸುಕಿ, ಎ.ಎಸ್.ಕಾಳೆಗೌಡ, ಪ್ರಕಾಶ್ ಹಾಗೂ ವನ ಮಾಲರನ್ನು ಸ್ಮರಿಸಿಕೊಂಡು ಅವರೆಲ್ಲರ ಪ್ರೋತ್ಸಾಹ ಮಾರ್ಗದರ್ಶನ ಸ್ಪೂರ್ತಿಯೇ ನನ್ನನ್ನು ಇಂದು ಒಬ್ಬ ಶಿಕ್ಷಕನಾಗಿ, ಕಲಾವಿದನಾಗಿ ರೂಪಿಸಿದೆ ಎಂದು ಹೆಮ್ಮೆ-ಯಿಂದ ತನ್ನ ಗುರುಗಳ ಬಗ್ಗೆ ಹೇಳಿಕೊಂಡಿದ್ದ ನ್ನು ನೋಡಿ ದಾಗ ನಿಜವಾಗಿ ಒಬ್ಬ ಗುರು ತನ್ನ ಶಿಷ್ಯರಿಂದ ಇದಕ್ಕಿಂತ ಹೆಚ್ಚೇನು ಬಯಸಲಾರ. ಒಬ್ಬ ಗುರುವಾಗಿ ನನಗೂ ಇದು ಬಹಳ ಮೆಚ್ಚುಗೆ ಯಾಯಿತು. ತನ್ನ ತರಗತಿ ಕೊಠಡಿಗಳಲ್ಲಿ ಬಹಳಷ್ಟು ಮೌಲ್ಯಗಳನ್ನು, ಸಮಾಜದ ಕ್ರಿಯೆಗಳಿಗೆ ಪ್ರತಿಕ್ರಿಯಿಸುವುದನ್ನು ಕರಗತ ಮಾಡಿಕೊಂಡೆ ಎಂದು ಹೆಮ್ಮೆಪಡು ತ್ತಾರೆ. ಇವರು ಕೇವಲ ಶಾಲೆಯಲ್ಲಿ ಕಲಿಸಿ ದವರನ್ನು ಮಾತ್ರ ಗುರುಗಳೆಂದು ಪರಿಗಣಿಸದೆ, ನನ್ನಲ್ಲಿ ಸದ್ಗುಣಗಳನ್ನು ತುಂಬಿದ ಸಾಹಿತ್ಯಕವಾಗಿ ಇವರ ಬೆಳವಣಿಗೆಗೆ ಕಾರಣಕರ್ತರಾದ ತಾಯಿ, ತಂಗಿ, ಅಜ್ಜಿಯನ್ನು ನೆನೆಸುತ್ತಾರೆ. ಇವಿಷ್ಟು ಮಾತ್ರ ಗುರುಗಳೆಂದು ಪರಿಗಣಿಸದೇ ತನಗೆ ಅವಮಾನ ಮಾಡಿದ ವರು, ಅನ್ಯಾಯವೆಸಗಿದವರು, ಶೋಷಿಸಿದ ವರು, ನಿಂದಿಸಿದವರು, ತುಚ್ಚವಾಗಿ ಕಂಡವರು, ಹಿಂಸಿಸಿದವರನ್ನು ಕೂಡ ಅವರ ಗುರುಗಳೆಂದು ಭಾವಿಸಿ ಜೀವನವನ್ನು ಅರ್ಥ ಮಾಡಿಸಿದ್ದಕ್ಕಾಗಿ ಅವರಿಗೆ ಕೃತಜ್ಞತೆ ಹೇಳುವ ಮೂಲಕ ಅವರು ನೀಡಿದ ಆ ಯಾತನೆಗಳೇ ತನ್ನನ್ನು ಅವರ ಮುಂದೆ ದೃಢವಾಗಿ ನಿಲ್ಲಲು ಒಬ್ಬ ಸದೃಢ ವ್ಯಕ್ತಿಯಾಗಿ ರೂಪುಗೊಳ್ಳಲು ದಾರಿಯಾ ದವೆಂಬ ಅವರ ಮಾತು ನಿಜಕ್ಕೂ ಇವರಂತಹ ಪರಿಸ್ಥಿತಿ ಎದುರಿಸುವ ಬಹುತೇಕರಿಗೆ ಸ್ಪೂರ್ತಿ ಯಾಗುತ್ತದೆ.

ಇವರೊಬ್ಬ ಅಧ್ಯಾಪಕನಾಗಿ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಪಠ್ಯದಲ್ಲಿ ಬಂದ ವಿಚಾರಗಳನ್ನು ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಿಗೆ ತಲುಪಿಸುವ ಮಹತ್ಕಾ ರ್ಯ ಗುರುವಿನ ಜವಾಬ್ದಾರಿ ಎನ್ನುವ ಇವರು ಹೊರಗೆ ಚಾಚಿಕೊಂಡ ಚಟುವಟಿಕೆಗಳ ಫಲಶ್ರುತಿಯಾಗಿ ಇಂದು ಹಲವಾರು ಶಿಷ್ಯರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತನ್ನ ವಿದ್ಯಾರ್ಥಿ ಗಳ ಬಗ್ಗೆ ಹೆಮ್ಮೆಪಡುತ್ತಾರೆ.

ಜೀವನದ ಅಭದ್ರತೆ ವ್ಯಕ್ತಿಯೋರ್ವನನ್ನು ಸೃಜನ ಶೀಲ ಕಾರ್ಯಗಳಿಗೆ ಸೆಳೆಯುತ್ತದೆ. ನಮ್ಮಲ್ಲಿ ರುವ ನೋವು ಸಂಕಟಗಳು ತಪ್ಪುದಾರಿಗೆ ಎಳೆಯುವ ಸಾಧ್ಯತೆಗಳು ಬಹಳಷ್ಟಿರುತ್ತವೆ. ಅದು ನಮ್ಮ ಜೀವನದ ಮಹತ್ವದ ತಿರುವು ಅಂತಹ ಸನ್ನಿವೇಶವನ್ನು ನಾವು ಸಕಾರತ್ಮಕವಾಗಿ ಎದುರಿಸಿದಾಗ ಸಂಕಟಗಳಿಂದ ನಮ್ಮ ಬದುಕು ಸುಂದರವಾಗಿ ಅರಳಿ ಅಭಿವೃದ್ಧಿಯಾಗುತ್ತದೆ ಎನ್ನುವ ಮಾತುಗಳು ಇಂತಹ ಪರಿಸ್ಥಿತಿಯನ್ನು ಎದುರಿಸುವ ಪ್ರತಿಯೊಬ್ಬರಿಗೂ ಮಾರ್ಗದರ್ಶ ನದಂತೆ ಭಾಸವಾಗುತ್ತವೆ.

ಈ ಜನತೆ, ಸಮಾಜ ಮತ್ತು ವ್ಯವಸ್ಥೆ ಯಾವುದ ನ್ನು ಅಮುಖ್ಯ, ಅಪ್ರಿಯ, ಪ್ರಯೋಜಕ ಎಂದು ಮೂಲೆ ಗುಂಪಾಗಿಸುತ್ತದೆಯೋ ಅದು ಬೇಲೂರು ರಘುನಂದನವರನ್ನು ಕಾಡುತ್ತದೆ. ಅಂತಹುದನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಮನಸು ತುಡಿಯುತ್ತದೆ. ಇದರ ಫಲ ಶೃತಿಯನ್ನು ನಾವು ಇವರ ರಂಗ ಪ್ರದರ್ಶನಗಳ ಲ್ಲಿ ಗುರುತಿಸಬಹುದು. ಇವರು ಒಬ್ಬ ನಾಟಕ ಕಾರರಾಗಿ ವೈಭವೋಪೇತ ಅರಮನೆಗಳ ಬಗ್ಗೆ ನಾಟಕ ರಚಿಸಿದ್ದು ಅಪರೂಪವೆನ್ನುವ ರಘು ನಂದನ್ ಅವರು ಮೋಹನತರಂಗಿಣಿಯನ್ನು ಹೊರತುಪಡಿಸಿ ಉಳಿದೆಲ್ಲ ನಾಟಕಗಳಾದ ರಕ್ತವರ್ಣೆ, ಸಾಲುಮರಗಳ ತಾಯಿ, ರೂಪ ರೂಪ ರೂಪಗಳನು ದಾಟಿ, ತಿಪ್ಪೇರುದ್ರ, ಬೆಳಕಿನ ಅಂಗಡಿ, ರೂಬಿಕ್ಸ್ ಕ್ಯೂಬ್, ತೊರೆದು ಜೀವಿಸಬಹುದೆ, ಆಯಾಮ, ನಗರ ಪೂಜೆ, ಅಕ್ಕಯ್ ಮತ್ತು ಚಿಟ್ಟೆ ಈ ನಾಟಕಗಳೆಲ್ಲವೂ ಸಮಾಜದ ನೋವು, ಸಂಕಟ, ಯಾತನೆ ,ನಿರ್ಲಕ್ಷ, ಸಮಾನತೆ, ಸಾಮಾಜಿಕ ಕಳಕಳಿ ಹಾಗೂ ಹೊಣೆಗಾರಿಕೆಯ ಪ್ರತಿಫಲವಾಗಿ ಜೀವತಾಳಿದವೆಂದು ತಮ್ಮ ರಂಗ ಚಟುವಟಿಕೆ ಗಳನ್ನು ವೀಕ್ಷಕರ ಮುಂದೆ ತೆರೆದಿಟ್ಟರು.

ಇವರ ಈ ಒಂದು ಸಾಮಾಜಿಕ ತುಡಿತದ ಫಲವೇ “ಅಕ್ಕಯ್” ನಾಟಕ ಎನ್ನಬಹುದು. ತೃತೀಯ ಲಿಂಗಿ, ಹೋರಾಟಗಾರ್ತಿಯಾದ ಅಕ್ಕ ಪದ್ಮ ಶಾಲಿಯವರ ಜೀವನಗಾಥೆಯನ್ನು ರಂಗಪ್ರ ಯೋಗಕ್ಕಿಳಿಸುವ ಮೂಲಕ ಮಂಗಳಮುಖಿ ಯರ ಬದುಕಿನ ದಾರುಣ ಚಿತ್ರಣವನ್ನು ನಮ್ಮ ಸಮಾಜದ ಕ್ರೂರ ಮನಸ್ಸುಗಳ ಮುಂದೆ ತೆರೆದಿಡುವ ಮೂಲಕ ಸಮಾಜದ ಮನಸ್ಥಿತಿ ಬದಲಾವಣೆಗೆ ಪ್ರಯತ್ನಿಸುವ ಇವರ ಕಾರ್ಯ ಶ್ಲಾಘನೀಯ ಎನ್ನಬಹುದು. ತಾನು ಮಾಡದ ತಪ್ಪಿಗಾಗಿ ಅವರು ಅನುಭವಿಸುವ ರೋಧನೆ ಮನಕಲಕುತ್ತದೆ. ಅಂತಹ ಜನರಿಗೆ ನ್ಯಾಯ ಒದಗಿಸುವುದು, ಜನತೆಯಲ್ಲಿ ಲೈಂಗಿಕ ಅಲ್ಪ ಸಂಖ್ಯಾತರ ಬಗ್ಗೆ ಇರುವ ಪೂರ್ವಗ್ರಹವನ್ನು ತೊಡೆದುಹಾಕಿ ಅರಿವು ಮೂಡಿಸುವ ದೆಸೆಯಲ್ಲಿ ಕೈಗೊಂಡ ನಾಟಕವಿದು. ಈ ನಾಟಕದ ವಿಶೇಷ ತೆಯೆಂದರೆ ಈ ಮಂಗಳ ಮುಖಿ ಪಾತ್ರವನ್ನು ನಮ್ಮ ಸಮಾಜದ ನಯನ ಸೂಡ ಎಂಬ ಹೆಣ್ಣು ಮಗಳೊಬ್ಬಳು ಮಾಡಿದ್ದು, ಸಮಾಜ ಮತ್ತು ಜನತೆ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದು ನಮ್ಮ ಜನರು ಬದಲಾವಣೆಯತ್ತಾ ಆಲೋಚಿ ಸುತ್ತಿದ್ದಾರೆ ಎಂಬುದಕ್ಕೆ ನಿದರ್ಶನವಾಗಿದೆ ಎಂದು ಸಂತಸಪಟ್ಟರು.

ಇಂತಹದೇ ಮತ್ತೊಂದು ನಾಟಕ “ಕ್ಲೀನ್ ಅಂಡ್ ಕ್ಲಿಯರ್ ಪಾಯಕಾನೆ” ಇದು ಪೌರ ಕಾರ್ಮಿಕರ ಬದುಕು ಬವಣೆ ಕುರಿತ ನಾಟಕ. ಇದು ಕೂಡ ಸಾಮಾಜಿಕ ಜವಾಬ್ದಾರಿಯ ತತ್ವದಿಂದ ರೂಪ ಪಡೆದಿದ್ದು ಇಡೀ ಜಗತ್ತಿಗೆ ಸಫಾಯಿ ಕರ್ಮಚಾರಿ ಗಳ ಮಹತ್ವವನ್ನು ಸಾರಿ ಹೇಳುತ್ತದೆ. ಒಂದು ದಿನ ಒಂದೇ ಒಂದು ದಿನ ಪೌರಕಾರ್ಮಿಕರು ಮುಷ್ಕರ ನಡೆಸಿ ದೇಶದ ಎಲ್ಲ ಶೌಚಾಲಯಗಳಿಗೆ ಬೀಗ ಜಡಿದರೆ ಮನುಷ್ಯರ ಪಾಡೇನು ಎಂಬುದನ್ನು ಕಲ್ಪಿಸಿಕೊಳ್ಳಲೂ ಆಗದು. ಅಂತಹ ಜಾಡನ್ನು ಹಿಡಿದು ಹೊರಟ ಇವರ ಬರಹಗಳು ಸಮಾಜದ ನೋವಿಗೆ ಸ್ಪಂದಿಸುತ್ತವೆ. ಬೇಲೂರು ರಘುನಂದ ನ್ ಅವರ ಬಹುತೇಕ ನಾಟಕಗಳು ಮಹಿಳಾ ಪ್ರಧಾನವಾಗಿ ಮೂಡಿ ಬಂದಿರುವುದು ವಿಶೇಷ.

ಇವುಗಳ ಜೊತೆಗೆ ಮತ್ತೊಂದು ಗರಿ ಮೂಡು ವಂತಹ ಪ್ರದರ್ಶನ ಚಿಟ್ಟೆ ಏಕವ್ಯಕ್ತಿ ನಾಟಕವಾ ಗಿದ್ದು ಗೋಕುಲ ಸಹೃದಯ ಎಂಬ ಹತ್ತು ವರ್ಷ ದ ಕಲಾವಿದ ಅಭಿನಯಿಸಿ ರಾಜ್ಯಾದ್ಯಂತ ಹಲವಾರು ಪ್ರದರ್ಶನಗಳನ್ನು ಈ ನಾಟಕ ಕಂಡಿದ್ದು ಒಂದು ಅಭಿಮಾನದ ಸಂಗತಿ ಎನಿಸಿ ದರೂ ಈ ನಾಟಕವು ಕೆರೆಯ ನ್ನೇ ಕಥಾವಸ್ತುವ ನ್ನಾಗಿ ಇಟ್ಟುಕೊಂಡಿದ್ದು ಮತ್ತೊಂದು ವಿಶೇಷತೆ. ಇಲ್ಲಿ ಅಚ್ಚರಿಪಡಬ ಹುದಾದ ಸಂಗತಿಯೆಂದರೆ ಕಳಸಿನ ಕೆರೆ ಬೇಲೂರು ರಘುನಂದನ್ ಅವರ ಕಥೆಗಳನ್ನು ಕೇಳುತ್ತಿತ್ತು. ಅದೇ ಕಥಾ ವಸ್ತುವನ್ನು ನಾವು ಈ ನಾಟಕದಲ್ಲಿ ನೋಡ ಬಹುದು.

ಬದುಕಿನ ಸಂಘರ್ಷಗಳನ್ನು ಎದುರಿಸುತ್ತಾ ಗಟ್ಟಿಯಾಗುತ್ತಾ ಸಾಗಿದ್ದರ ಪರಿಣಾಮವೇ ಈ ಸುಂದರ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ ವಾಯಿತು ಎನ್ನುವುದು ಅವರ ಮನೋಗತ. ಕಲೆಯನ್ನು ಉದ್ಯೋಗಕ್ಕಾಗಿ ತಾನು ಆಯ್ಕೆ ಮಾಡಿಕೊಳ್ಳದೆ ತನ್ನನ್ನು ತಾನು ತಿಳಿಗೊಳಿಸಿ ಕೊಳ್ಳಲು, ತನ್ನ ನೋವನ್ನು ಆಲಿಸುವ ಸಂಗಾತಿ ಯಾಗಲು ಕಲೆಯನ್ನು ತನ್ನೊಳಗೆ ಅಂತರ್ಗತ ವಾಗಿಸಿಕೊಂಡೆ ಎನ್ನುವ ಅವರ ಮಾತು ಕಲೆಯು ವ್ಯಕ್ತಿಯ ಮತ್ತು ಸಮಾಜದ ಸಂಕಟಗಳನ್ನು ಮರೆಯಲು ವೇದಿಕೆಯನ್ನು ಕಲ್ಪಿಸುತ್ತದೆ ಎಂಬ ಅರಿವನ್ನು ಮೂಡಿಸುವ ಮೂಲಕ ಕಲೆಗೆ ಚಿಕಿತ್ಸಕ ಗುಣವಿದೆ ಎಂಬುದನ್ನು ಸಾಬೀತು ಪಡಿಸುತ್ತದೆ.

ಬಾಲ್ಯದಿಂದಲೂ ಮಕ್ಕಳ ಬಗ್ಗೆ ಅಪಾರ ಒಲವನ್ನು ಹೊಂದಿರುವ, ಹಾಗೂ ಅವರೊಂದಿಗೆ ಸಖ್ಯ ಒಡನಾಟವನ್ನು ನಿರಂತರವಾಗಿ ಕಾಯ್ದು ಕೊಂಡಿದ್ದರ ಫಲವಾಗಿ ಶಿಶು ಸಾಹಿತ್ಯ ರಚನೆಗೆ ಹೆಚ್ಚಿನ ಆದ್ಯತೆ ನೀಡಿದರು. ಚಿನ್ನಾರಿಯ ಚಿತ್ರ, ನಿಸರ್ಗ ಮತ್ತು ಗುಬ್ಬಚ್ಚಿ, ಹಾರುವ ಆನೆ, ಬೊಂಬಾಯ್ ಮಿಠಾಯಿ ಹಾಗೂ ಚಿಟ್ಟೆ ಕೃತಿ ಗಳನ್ನು ಮಕ್ಕಳಿಗಾಗಿ ರಚಿಸಿರುವ ಇವರು
ಮಕ್ಕಳ ಗಮನ ಸೆಳೆಯುವಲ್ಲಿ ಇವು ಯಶಸ್ವಿ ಯಾಗಿದೆ ಎನ್ನುತ್ತಾರೆ. ಡಾ.ಬೇಲೂರು ರಘು ನಂದನ್ ಅವರು ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ ಬರಹಗಾರರು. ಪ್ರಕೃತಿಯನ್ನು ವಿಮುಖ ಮಾಡಿ ಆಧುನಿಕತೆಗೆ ಮಾರು ಹೋಗಿ ಸ್ವಾಭಾವಿಕತೆಯನ್ನು ಮೂಲೆ ಗುಂಪು ಮಾಡಿ ಕೃತಕವಾದ ಕಲ್ಪನೆಯನ್ನು ನಾವು ಮಕ್ಕಳಲ್ಲಿ ತುಂಬುತ್ತಿದ್ದೇವೆ ಎಂದು ಆತಂಕ ಪಡುತ್ತಾ ಮಕ್ಕಳಿಗಾಗಿ ಕೆಲಸ ಮಾಡಬೇಕು. ಮಕ್ಕಳಿಗಾಗಿ ಸಾಹಿತ್ಯ ಬರೆಯದ ಸಾಹಿತಿ ಸಾಹಿತಿಯೇ ಅಲ್ಲ ಎನ್ನುವ ಇವರು ಅಂಗನ ವಾಡಿ ಮಕ್ಕಳಿಗಾಗಿ ಹೊಸ ಪ್ರಯೋಗಕ್ಕಿಳಿದಿದ್ದು ಸಾಹಿತ್ಯ ರಚಿಸುತ್ತಿರುವ ವಿಚಾರಗಳನ್ನು ಹಂಚಿ ಕೊಂಡರು. ಮಕ್ಕಳು ತಮ್ಮ ಭಾವಕೋಶದ, ಜೀವಕೋಶದ ಅವಿಭಾಜ್ಯ ಭಾಗವೆಂದು ಹೆಮ್ಮೆ ಪಡುತ್ತಾರೆ ಸಾಮಾನ್ಯವಾಗಿ ಮಕ್ಕಳು ಎಂದರೆ ಮುಗ್ಧರು ಎನ್ನುತ್ತೇವೆ ಆದರೆ ಇದರ ಬಗ್ಗೆ ಬೇಲೂರು ರಘುನಂದನ್ ಅವರು ಮಕ್ಕಳು ಮುಗ್ಧರು ಅಷ್ಟೇ ಅಲ್ಲ ಪ್ರಬುದ್ಧರು ಕೂಡ ಆಗಿದ್ದಾರೆ ಎನ್ನುವ ಭಾವ ತೋರುತ್ತಾರೆ.

ಸಾಹಿತ್ಯ ಹುಟ್ಟುವ ಬಗ್ಗೆ ಚರ್ಚಿಸಿದ ಇವರು ಕಾಲಕ್ಕೆ ತಕ್ಕಂತೆ ನಾವು ಪ್ರತಿಕ್ರಿಯಿಸಬೇಕೆ ವಿನಹ ಯೋಜನೆ ರೂಪಿಸಿ ಸಾಹಿತ್ಯ ರಚನೆ ಅಥವಾ ರಂಗ ಚಟುವಟಿಕೆಗಳನ್ನು ರೂಪಿಸಲು ಸಾಧ್ಯ ವಿಲ್ಲ. ಸಂದರ್ಭಕ್ಕೆ ತಕ್ಕಂತೆ ಕಾಲ ಮತ್ತು ಸಮಯ ಕ್ಕೆ ನಾವು ಸ್ಪಂದಿಸಿ ಪ್ರತಿಭೆ ದೂರದೃಷ್ಟಿ, ಲೋಕ ದೃಷ್ಟಿ ಇವೆಲ್ಲವನ್ನು ಮೇಳೈಸಿ ಬರೆಯಬೇಕು ಅದರ ಹೊರತಾಗಿ ವ್ಯಕ್ತಿ ತನ್ನೊಬ್ಬನ ಖುಷಿಗಾಗಿ ಬರೆದುಕೊಂಡರೆ ಇದರಿಂದ ಸಮಾಜಕ್ಕೆ ಅಂತಹ ಸಾಹಿತ್ಯದಿಂದ ಯಾವುದೇ ಲಾಭವಾಗುವುದಿಲ್ಲ. ಹಾಗಾಗಿ ವ್ಯಕ್ತಿ ಸಮಾಜದಲ್ಲಿ ಇರಬೇಕು ಸಮಾಜ ವ್ಯಕ್ತಿಯಲ್ಲಿ ನೆಲೆಸಬೇಕು ಆಗ ಸೃಜನಶೀಲ ಸಾಹಿತ್ಯ ಹುಟ್ಟುತ್ತದೆ ಎನ್ನುವ ಲೇಖಕ ಒಂದು ಸಮಾಜ ಸಮುದಾಯ ಆಗಬೇಕು ಸಾಹಿತ್ಯದ ಪ್ರತಿರೋಧದ ಮೂಲಕ ಸಮಾಜವನ್ನು ತಿದ್ದ ಬೇಕು ಎನ್ನುವ ಅರ್ಥಗರ್ಭಿತ ಚಿಂತನೆಗಳು ನಿಜಕ್ಕೂ ಬರಹಗಾರರಿಗೆ ಅಮೂಲ್ಯ ಸಂದೇಶ ವನ್ನು ಬಿತ್ತರಿಸಿದವು. ತನ್ನನ್ನು ತಾನು ಸಂತೈಸಿ ಕೊಳ್ಳಲು ಕವಿತೆಗಳು ಮತ್ತು ರಂಗಭೂಮಿ ಚಟು ವಟಿಕೆಗಳು ಸಹಕಾರಿಯಾಗುತ್ತವೆ ಎಂದು ಹೆಮ್ಮೆ ಪಡುತ್ತಾರೆ.

ಶ್ವೇತಪ್ರಿಯ,ಕನ್ನಡಿ ಮುಂದೆ ನಿಂತಾಗ, ಕವಿಶೈಲದ ಕವಿತೆಗಳು, ಹಸುರು, ಸೊನ್ನೆ ಯಾಗುವ ಕಾಯಿ, ಮಗ್ಗದ ಮನೆ ಕವನ ಸಂಕಲನಗಳನ್ನು ರಚಿಸಿ ರುವ ಇವರು ಬಹಳ ಮುಖ್ಯವಾಗಿ ನೂರೊಂದು ವಚನಗಳು, ಹರಿವು ತೊರೆ, ಬೆತ್ತಲು, ಅಮ್ಮ ಎಂಬ ಕಟ್ಟು ಪದಗಳನ್ನು ಕಟ್ಟುವ ಮೂಲಕ ಸಮಾಜದ ಅಂಕುಡೊಂಕು ಗಳನ್ನು, ಓರೆಕೋರೆ ಗಳನ್ನು ತಿದ್ದುವ ವಚನ ಗಳನ್ನು ರಚಿಸಿದ್ದಾರೆ. ಕುಟುಂಬ ಮತ್ತು ಸಾಹಿತ್ಯ ಎರಡಕ್ಕೂ ಪ್ರಾಧಾ ನ್ಯತೆ ನೀಡುವ ಇವರು ತಂಗಿ ಶ್ವೇತಳ ಮೇಲಿನ ಪ್ರೀತಿ ಹಾಗೂ ತನ್ನ ಗುರು ವೆಂದು ಭಾವಿಸಿದ ಕುವೆಂಪುರವರ ಪ್ರಭಾವಕ್ಕೆ ಒಳಗಾಗಿ ಶ್ವೇತ ಪ್ರಿಯಗುರು ಎಂಬ ಅಂಕಿತ ನಾಮವನ್ನು ಇಟ್ಟು ಕೊಂಡು ವಚನಗಳನ್ನು ಬರೆದಿದ್ದಾರೆ. ಜೊತೆಗೆ ಕ್ರಿಯೆ ಪ್ರತಿಕ್ರಿಯೆ ಎಂಬ ವಿಮರ್ಶಾ ಸಂಕಲನ, ರಾಗರಂಗ ಎಂಬ ರಂಗ ಗೀತೆಗಳ ಕೃತಿ ರಚಿಸಿ ಕನ್ನಡ ಸಾರಸ್ವತ ಲೋಕ ವನ್ನು ಶ್ರೀಮಂತಗೊಳಿಸಿದ್ದಾರೆ.

ನಾಡಿನ ಹಲವಾರು ಕವಿಗಳು, ಸಾಹಿತಿಗಳು, ಚಿಂತಕರು, ಕಲಾವಿದರು, ರಂಗಕರ್ಮಿಗಳು, ಸಿನಿಮಾ ಕ್ಷೇತ್ರದವರು ಮುಂತಾದ ಭಿನ್ನ ಆಯಾ ಮಗಳಲ್ಲಿನ ಯುವ ತಲೆಮಾರಿ ನವರು, ಹಿರಿಯ ರೊಂದಿಗೆ ಒಂದೆಡೆ ಸೇರಿ ಚರ್ಚಿಸುವ ಸಾಹಿತ್ಯ ವೇದಿಕೆಯೆ ಕಾಜಾಣ. ಇದು ಸುಮಾರು 10 ವರ್ಷಗಳಿಂದ ಕ್ರಿಯಾಶೀಲ ಚಟುವಟಿಕೆ ಗಳನ್ನು ನಡೆಸಿಕೊಂಡು ಬರುತ್ತಿರುವುದಕ್ಕೆ ಸಾಕ್ಷಿಯಾಗಿ ಕುವೆಂಪುರವರ ಕುಪ್ಪಳ್ಳಿಯಲ್ಲಿ ಮೂರು ದಿನ ಸೇರಿ ವಾದ, ಸಂವಾದ, ಚರ್ಚೆ, ವಾಗ್ವಾದಗಳು, ಪ್ರಾಚೀನದಿಂದ ನಿರ್ವಾಚೀನದವರೆಗೂ, ನಿರ್ವಾ ಚೀನದಿಂದ ಇಲ್ಲಿಯತನಕ ಸಮಕಾಲೀನ ಸಂದರ್ಭದ ಬಗ್ಗೆ ಸಾಹಿತ್ಯದ ಬಗ್ಗೆ ಚರ್ಚೆ ನಡೆಸು ತ್ತಾರೆ. ಆಮೂಲಕ ಸಾಂಸ್ಕೃತಿಕ ಕೊಡುಗೆಯ ಜೊತೆಗೆ ಹೊಸ ತಲೆಮಾರಿಗೆ ಅದ್ಭುತವಾದ ವೇದಿಕೆಯನ್ನು ಸೃಷ್ಟಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಇವುಗಳ ಜೊತೆಗೆ ಇವರು ಚರ್ಚಿಸಿದ ಮತ್ತೊಂದು ವಿಚಾರ ಪ್ರವಾಸಕಥನ. ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಸಿಕ್ಕಿಂಗೆ ಭೇಟಿ ಕೊಟ್ಟು ಪ್ರವಾಸ ಕಥನವನ್ನು ರಚಿಸಿ ದ್ದಾರೆ. ಅಲ್ಲಿನ ಸಂದರ್ಭವೊಂದನ್ನು ವಿವರಿ ಸುತ್ತಾ ಕುವೆಂಪು ಹಾಗೂ ಗಾಂಧಿಯವರ ವಿಶ್ವಮಾನವ ಸಂದೇಶಕ್ಕೆ ಕರೆ ಕೊಡುತ್ತಾರೆ. ಭಾರತ ಮತ್ತು ಚೀನಾ ಗಡಿಯ ನಾತುಲಾ ಪಾಸ್ ಎಂಬಲ್ಲಿ ಚೀನಿ ಸೈನಿಕನೊಬ್ಬನನ್ನು ಕಂಡ ಇವರ ಮಗ ಸೈನಿಕ ನಿಗೆ ಶೇಕ್ ಹ್ಯಾಂಡ್ ಕೊಟ್ಟು ಈ ಕಡೆಗೆ ಎಳೆದ ರೂ ಬಾರದಿದ್ದಾಗ ಗಾಳಿ ಈ ಕಡೆಗೆ ಬೀಸುತ್ತಿದೆ ಆದರೆ ಸೈನಿಕ ಮಾತ್ರ ಈ ಕಡೆಗೆ ಬರುತ್ತಿಲ್ಲ ಎಂದು ಮುಗ್ಧವಾಗಿ ಕೇಳಿದರೂ ಅದರ ಹಿಂದಿನ ವಾಸ್ತವ ಚಿಂತನಾಶೀಲವಾ ದಂತಹ ಪ್ರಶ್ನೆಯನ್ನು ಮನುಷ್ಯರಲ್ಲಿ ಹುಟ್ಟು ಹಾಕುತ್ತದೆ. ಆ ಮಗುವಿಗೆ ಇರುವಷ್ಟು ಆಲೋ ಚನೆಯೂ ನಮ್ಮಲ್ಲಿ ಇಲ್ಲವಲ್ಲ, ನಾವು ಮನುಷ್ಯ ರಾಗಿ ಎಷ್ಟು ಕುಬ್ಜವಾಗಿ ಯೋಚಿಸುತ್ತೇವೆ ಎಂದೆ ನೆಸಿತು ಎನ್ನುವ ಇವರು ಮಾತು ಹೌದಲ್ವಾ ಎನಿಸಿತು.

ಪ್ರಶಸ್ತಿಗಳು ಮನುಷ್ಯನನ್ನು ಮತ್ತಷ್ಟು ಮಗದಷ್ಟು ಆಸೆಬುರುಕನನ್ನಾಗಿ ಮಾಡುತ್ತವೆ. ಅಂತಹ ಪ್ರಶಸ್ತಿಗಳಿಗಿಂತ ತರಗತಿಯಲ್ಲಿ ಮಕ್ಕಳು ಬೀರುವ ಒಂದು ಕಿರುನಗೆ, ರಂಗಚಟುವಟಿಕೆಗಳಲ್ಲಿ ಜನ ಕಟ್ಟುವ ಚಪ್ಪಾಳೆಗಳು ಹೆಚ್ಚು ಖುಷಿ ನೀಡುತ್ತವೆ. ಆದರೂ ಪ್ರಶಸ್ತಿಗಳು ಅವರವರ ಸೇವೆಯನ್ನು ಪ್ರಮಾಣಿಕವಾಗಿ ಗುರುತಿಸಲು ನೀಡಬೇಕು. ಆದರೆ ಪೂರ್ವಗ್ರಹಪೀಡಿತರಾಗಿ ದೊರೆಯಬಾ ರದು ಎನ್ನುವ ವಿಷಯದಲ್ಲಿ ನಂಬಿಕೆಯಿಟ್ಟಿ ರುವ ಇವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಅನೇಕ. ಇದನ್ನೆಲ್ಲ ವಿನಯಪೂರ್ವಕವಾಗಿ ಸ್ವೀಕರಿಸುವೆ ಎನ್ನುತ್ತಾರೆ.

ಒಟ್ಟಾರೆ ಬೇಲೂರು ರಘುನಂದನ್ ಅವರು ಒಬ್ಬ ಅನನ್ಯ ಸಾಮಾಜಿಕ ಕಳಕಳಿಯುಳ್ಳ ರಂಗ ಕರ್ಮಿಯಾಗಿ, ಅಂತಃಕರಣವುಳ್ಳ ಸಾಹಿತಿಯಾ ಗಿ, ವಿದ್ಯಾರ್ಥಿಗಳ ನೆಚ್ಚಿನ ಗುರು-ಗಳಾಗಿ ಅವರ ಕಾರ್ಯ ಮೆಚ್ಚುವಂತದ್ದು. ಕೊನೆಯದಾಗಿ ಇವರು ನೀಡಿದ ಸಂದೇಶ ವೊಂದು ಗಮನ ಸೆಳೆಯುತ್ತದೆ. “ಅಮುಖ್ಯವಾದುದನ್ನು ಮುಖ್ಯ ವಾಗಿಸುತ್ತಾ, ಮುಖ್ಯ ಎನ್ನುವುದನ್ನು ಪರಿಶೀಲಿ ಸುತ್ತಾ, ಅದರಲ್ಲಿ ಸರಿ ಎನಿಸಿದ್ದನ್ನು ಪಾಲಿಸುತ್ತಾ, ಮುಖ್ಯ ಅಮುಖ್ಯಗಳಿಗೆ ತಮ್ಮ ಬರಹದ ಮೂಲಕ ಕ್ರಿಯಾಶೀಲವಾಗಿ, ಸೃಜನಶೀಲ ಚಟುವಟಿಕೆಗಳ ಮೂಲಕ ಪ್ರತಿಕ್ರಿಯಿಸ ಬೇಕು” ಎಂಬ ಸಂದೇಶವನ್ನು ಯುವ ಪೀಳಿಗೆಗೆ ರವಾನಿ ಸಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ.

ನಮಸ್ಕಾರ ನಮ್ಮ ಕರ್ನಾಟಕ ಕಾರ್ಯಕ್ರಮದ ಮೂಲಕ ಇಂತಹ ಅದ್ಭುತ ಪ್ರತಿಭಾವಂತರನ್ನು ನಾಡಿಗೆ ಪರಿಚಯಿಸಿ ಮತ್ತಷ್ಟು ಜನರಿಗೆ ಸಾಧನೆ ಯ ಸ್ಪೂರ್ತಿ ನೀಡುತ್ತಿರುವ ಚಂದನ ವಾಹಿನಿಗೆ ಧನ್ಯವಾದಗಳನ್ನು ಹೇಳಲೇಬೇಕು. ಜೊತೆಗೆ ಈ ಕಾರ್ಯಕ್ರಮವನ್ನು ತುಂಬಾ ಸೊಗಸಾಗಿ ಸಂದ ರ್ಭೋಚಿತವಾದ ಪ್ರಶ್ನೆಗಳ ಮೂಲಕ ನಡೆಸಿ ಕೊಟ್ಟು ಹೆಚ್ಚಿನ ಮಾಹಿತಿ ವೀಕ್ಷಕರಿಗೆ ದೊರೆಯ ಲು ಕಾರಣಿಕರ್ತರಾದ ರಾಜಶೇಖರ್ ಅವರಿಗೂ ಹಾಗೂ ಡಾ.ಬೇಲೂರು ರಘುನಂದನ್ ಅವರಿಗೂ ಅಭಿನಂದನೆಗಳನ್ನು ಹೇಳಲು ಆಶಿಸುವೆ.

✍️ಅನುಸೂಯ ಯತೀಶ್
ಮಾಗಡಿ,ಬೆಂಗಳೂರು